ರಾಜಸ್ಥಾನದ ವೈದ್ಯರು 25 ವರ್ಷ ಪ್ರಾಯದ ಯುವಕನ ಹೊಟ್ಟೆಯಿಂದ ಒಂದಲ್ಲ ಎರಡಲ್ಲ 56 ಬ್ಲೇಡ್‌ಗಳ್ನು ಹೊರತೆಗೆದಿದ್ದಾರೆ. ಯುವಕ ರಕ್ತವಾಂತಿ ಮಾಡಲು ಆರಂಭಿಸಿದ ನಂತರ ಯುವಕನ ಗೆಳೆಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜೈಪುರ: ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯ ಹೊಟ್ಟೆ ಸೇರಿದ ವೊಡ್ಕಾ ಬಾಟಲ್‌ನ್ನು ವೈದ್ಯರು ಹೊರತೆಗೆದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ರಾಜಸ್ಥಾನದ ವೈದ್ಯರು 25 ವರ್ಷ ಪ್ರಾಯದ ಯುವಕನ ಹೊಟ್ಟೆಯಿಂದ ಒಂದಲ್ಲ ಎರಡಲ್ಲ 56 ಬ್ಲೇಡ್‌ಗಳ್ನು ಹೊರತೆಗೆದಿದ್ದಾರೆ. ಯುವಕ ರಕ್ತವಾಂತಿ ಮಾಡಲು ಆರಂಭಿಸಿದ ನಂತರ ಯುವಕನ ಗೆಳೆಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆತನನ್ನು ತಪಾಸಣೆಗೆ ಒಳಪಡಿಸಿ ಸ್ಕ್ಯಾನಿಂಗ್ ಮಾಡಿದಾಗ ದೇಹದಲ್ಲಿ ಲೋಹದ ತುಣುಕುಗಳಿರುವುದು ಕಂಡು ಬಂದಿದೆ. ಆದರೆ ಬ್ಲೇಡ್‌ ತಿಂದಿದ್ದೇಕೆ ಎಂಬುದನ್ನು ಯುವಕ ಹೇಳಿಲ್ಲ.

ಕೆಲವು ವಿಲಕ್ಷಣ ಘಟನೆಗಳು ಆಗಾಗ ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ಕೆಲವು ರಹಸ್ಯದ ಜೊತೆ ಅತೀಯಾದ ಕುತೂಹಲಕ್ಕೆ ಕಾರಣವಾಗುತ್ತವೆ. ಅದೇ ರೀತಿ ರಾಜಸ್ಥಾನದಲ್ಲಿ (Rajasthan) ನಡೆದ ವಿಚಿತ್ರ ಪ್ರಕರಣವೊಂದರಲ್ಲಿ 25 ವರ್ಷದ ವ್ಯಕ್ತಿಯೊಬ್ಬ ಸುಮಾರು 56 ಬ್ಲೇಡ್‌ಗಳನ್ನು ನುಂಗಿ ನೀರು ಕುಡಿದಿದ್ದಾನೆ. ಇದಾದ ಬಳಿಕ ಈತನಿಗೆ ರಕ್ತವಾಂತಿಯಾಗಲು ಶುರುವಾಗಿದ್ದು, ಕೂಡಲೇ ಗೆಳೆಯರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನನ್ನು ತಪಾಸಣೆ ಮಾಡಿದ ವೈದ್ಯರಿಗೆ ಶಾಕ್ ಕಾದಿತ್ತು. ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರು ಆತನ ಹೊಟ್ಟೆಯಿಂದ 56 ಬ್ಲೇಡ್‌ಗಳ ತುಂಡುಗಳನ್ನು ಹೊರತೆಗೆದಿದ್ದಾರೆ. ಸಂಚೋರ್‌ನ ಡಾಟಾ ಗ್ರಾಮದ ಯಶಪಾಲ್ ಸಿಂಗ್ (Yashpal Singh) ಎಂಬಾತನೇ ಹೀಗೆ ಬ್ಲೇಡ್ ನುಂಗಿದ ಯುವಕ. ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಈತ ನಾಲ್ವರು ಸ್ನೇಹಿತರೊಂದಿಗೆ ವಾಸಿಸುತ್ತಿದ್ದ . ಘಟನೆ ನಡೆಯುವಾಗ ಆತ ಮನೆಯಲ್ಲಿ ಒಬ್ಬನೇ ಇದ್ದು, ಕೂಡಲೇ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. 

ಸರ್ಜರಿ ಮಾಡಿದ ವೈದ್ಯರಿಗೆ ಅಚ್ಚರಿ, ಹೊಟ್ಟೆಯೊಳಗಿತ್ತು ವೋಡ್ಕಾ ಮದ್ಯದ ಬಾಟಲಿ!

ನಂತರ ಸ್ನೇಹಿತರು ಬಂದು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಸಂಚೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಆಗಮಿಸಿದ ಯಶ್‌ಪಾಲ್‌ಗೆ, ಅಲ್ಲಿ ವೈದ್ಯ, ಡಾ ನರಸಿ ರಾಮ್ ದೇವಸಿ (Narsi Ram Devasi) ಅವರು ಎಕ್ಸ್-ರೇ ಮಾಡಿದರು. ಈ ವೇಳೆ ದೇಹದಲ್ಲಿ ಲೋಹದ ತುಣುಕುಗಳಿರುವುದು ಕಂಡು ಬಂತು. ಏನಿರಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ವೈದ್ಯರು ನಂತರ ಸೋನೋಗ್ರಫಿ (sonography) ಮತ್ತು ಎಂಡೋಸ್ಕೋಪಿ (endoscopy) ನಡೆಸಿದರು. ಈ ವೇಳೆ ಅವರ ದೇಹದಲ್ಲಿ ಇರುವುದು ಬ್ಲೇಡ್‌ಗಳು ಎಂಬುದು ವೈದ್ಯರಿಗೆ ಸ್ಪಷ್ಟವಾಗಿತ್ತು. ಶೀಘ್ರದಲ್ಲೇ ಯುವಕನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ 56 ಬ್ಲೇಡ್‌ಗಳನ್ನು ಹೊರತೆಗೆದರು.

ಪ್ರಸ್ತುತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಆತ ಕವರ್ ಸಮೇತ ಬ್ಲೇಡ್ ತಿಂದಿದ್ದಾನೆ ಎಂದು ವೈದ್ಯರು ಹೇಳಿದರು. ಬ್ಲೇಡ್‌ನ ಕವರ್‌ನಿಂದಾಗಿ ಆತನಿಗೆ ಬ್ಲೇಡ್ ತಿನ್ನುವಾಗ ಯಾವುದೇ ನೋವಾಗಿಲ್ಲ. ರಕ್ತಸ್ರಾವವಾಗಿಲ್ಲ. ಆದರೆ ಹೊಟ್ಟೆಯಲ್ಲಿ ಪೇಪರ್ ಕರಗಿದಂತೆ ಆತನಿಗೆ ಅದು ಹಾನಿಯುಂಟುಮಾಡಲು ಆರಂಭಿಸಿದೆ. ಪರಿಣಾಮ ಗ್ಯಾಸ್ ಉತ್ಪಾದನೆಯಾಗಿದ್ದು, ಆತನಿಗೆ ವಾಕರಿಕೆ ಬರಲು ಶುರು ಆಯ್ತು. ಅಲ್ಲದೇ ಯುವಕ ಬ್ಲೇಡ್ ತಿನ್ನುವ ಮೊದಲು ಅದನ್ನು ಎರಡು ಭಾಗಗಳಾಗಿ ತುಂಡು ಮಾಡಿದ್ದ ಎಂದು ವೈದ್ಯರು ಹೇಳಿದ್ದಾರೆ. 

ವೋಡ್ಕಾ ಬಾಟಲ್‌ನಲ್ಲಿ ದೀಪದೆಣ್ಣೆ ತುಂಬಿದ ಅಮ್ಮ, ಪೂಜೆಯಲ್ಲಿ ಮಗನ ಮಾನ ಹರಾಜು!

ವ್ಯಕ್ತಿಯ ಸಂಬಂಧಿಕರನ್ನು ಈ ಬಗ್ಗೆ ಕೇಳಿದಾಗ ಆತ ಮಾನಸಿಕವಾಗಿ ಸ್ಥಿರವಾಗಿದ್ದು (Mental stable), ಇದರ ಹಿಂದಿನ ಕಾರಣ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಯುವಕನು ಕೂಡ ಬ್ಲೇಡ್ ತಿಂದಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾನೆ.