ಮಲಗಿದ್ದ ಮಗುವಿನ ಬಾಯಿಯೊಳಗೆ ಬಿದ್ದ ಹಲ್ಲಿ, ಕಂದಮ್ಮ ಸಾವು
ಮನೆ ಅಂದ್ರೆ ಹಲ್ಲಿ ಇರೋದು ಸಾಮಾನ್ಯ. ಆದ್ರೆ ಈ ಹಲ್ಲಿ ಮೈ ಮೇಲೆ ಬಿದ್ರೆ ಅಪಶಕುನ ಅಂತಾನೂ ಕೆಲವೊಬ್ಬರು ಹೇಳ್ತಾರೆ. ಆದ್ರೆ ಇಲ್ಲೊಂದೆಡೆ ಹಲ್ಲಿ ಪುಟ್ಟ ಕಂದಮ್ಮನ ಜೀವವೇ ತೆಗೆದಿದೆ. ಆದರೆ ಅಪಶಕುನದಿಂದಲ್ಲ.
ಛತ್ತೀಸ್‌ಘಡ್: ಮಲಗಿದ್ದ ಪುಟ್ಟ ಕಂದಮ್ಮನ ಬಾಯಿಗೆ ಹಲ್ಲಿ ಬಿದ್ದು ಮಗು ಮೃತಪಟ್ಟಿರುವ ದಾರುಣ ಘಟನೆ ಛತ್ತೀಸ್‌ಗಢದ ಕೋಬ್ರಾದಲ್ಲಿ ನಡೆದಿದೆ. ಮಗುವಿನ ಬಾಯಿಗೆ ಹಲ್ಲಿ ನುಗ್ಗಿ 3 ವರ್ಷದ ಮುಗ್ಧ ಮಗು ಮೃತಪಟ್ಟಿದೆ. ಮಲಗಿದ್ದ ಮೂರು ವರ್ಷದ ಬಾಲಕನ ಬಾಯಿಗೆ ಹಲ್ಲಿ ಬಿದ್ದಿದೆ. ಉಸಿರುಗಟ್ಟಿ ಮಗು ಸಾವನ್ನಪ್ಪಿದೆ. ರಾಜ್‌ಕುಮಾರ್ ಚಂಡೆ ಎಂಬವರ ಕುಟುಂಬವು ನಾಗಿನಬಂಡಾ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರ ಮೂರನೇ ಮಗ ಜಗದೀಶ್ ಮೃತ ದುರ್ದೈವಿ.
ಘಟನೆಯ ವೇಳೆ ಎರಡೂವರೆ ವರ್ಷದ ಜಗದೀಶ್ ಮಲಗಿದ್ದ ಎನ್ನಲಾಗಿದ್ದು, ಈ ವೇಳೆ ಆತನ ತಾಯಿ (Mother) ಮನೆಗೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ ಮಲಗಿದ್ದ ಜಗದೀಶ ಮಗನನ್ನು ನೋಡಿದಾಗ ಆತ ನಿಶ್ಚಲನಾಗಿ ಬಿದ್ದಿದ್ದ. ಕೂಡಲೇ ಅನುಮಾನಗೊಂಡ ತಾಯಿಯು ಬಾಲಕನ (Boy) ಹತ್ತಿರ ಬಂದಾಗ ಆತನ ಬಾಯಲ್ಲಿ ಹಲ್ಲಿ ಸತ್ತು ಬಿದ್ದಿರುವುದನ್ನು ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರು ಬಂದು ನೋಡಿದಾಗ ಮಗು ಅದಾಗಲೇ ಮೃತಪಟ್ಟಿರುವುದು (Death) ಕಂಡು ಬಂದಿದೆ.
ಐಐಎಂ ಕಲ್ಕತ್ತ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು.. ಅಲ್ಲಲ್ಲ.. ದೈತ್ಯ ಹಲ್ಲಿಗಳ ಕಾದಾಟ..! ವಿಡಿಯೋ ವೈರಲ್.
ಬಾಯಿಯೊಳಗೆ ಹಲ್ಲಿ ಬಿದ್ದು ಉಸಿರುಗಟ್ಟಿರುವ ಶಂಕೆ.
ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಲಕ ಹಲ್ಲಿ ನುಗ್ಗಿ ಸತ್ತಿದ್ದಾನೆಯೇ ಅಥವಾ ಉಸಿರುಕಟ್ಟುವಿಕೆಯಿಂದ ಮೃತಪಟ್ಟಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ (Enquiry) ನಡೆಸುತ್ತಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಆದರೆ, ಹಲ್ಲಿಯ ವಿಷದಿಂದ (Poison) ಬಾಲಕ ಸಾವನ್ನಪ್ಪಿರುವ ಸಾಧ್ಯತೆ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಹಲ್ಲಿ ಉಸಿರಾಟಕ್ಕೆ ಅಡ್ಡಿಯಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸತ್ಯ ಏನೆಂಬುದು ತಿಳಿದು ಬರಬೇಕಿದೆ.
ಪಾಕಿಸ್ತಾನದಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಳಕ್ಕೆ ಹಲ್ಲಿ ತೈಲಕ್ಕೆ ಭಾರೀ ಬೇಡಿಕೆ
ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿದ 49 ವಿದ್ಯಾರ್ಥಿಗಳು ಅಸ್ವಸ್ಥ
ರಾಯಚೂರಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 49 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ನಂತರ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ (Treatment) ನೀಡಲಾಗಿತ್ತು. ಘಟನೆಯಿಂದ ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿತ್ತು. ಸ್ಥಳಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಘಟನೆ ಮಾಹಿತಿ ಪಡೆದ ಸಚಿವ ಎನ್.ಎಸ್. ಬೋಸರಾಜು ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.
ಒಟ್ಟು 188 ವಿದ್ಯಾರ್ಥಿಗಳಿರುವ ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಶನಿವಾರ ಮಧ್ಯಾಹ್ನ ಬಿಸಿಯೂಟಕ್ಕೆ ಉಪ್ಪಿಟ್ಟು ಮಾಡಿದ್ದು, 1ನೇ ತರಗತಿಯಿಂದ 5ನೇ ತರಗತಿಯವರೆಗಿನ ಒಟ್ಟು 123 ವಿದ್ಯಾರ್ಥಿಗಳು ಉಪ್ಪಿಟ್ಟು ಸೇವನೆ ಮಾಡಿದ್ದರು. ಈ ವೇಳೆ ಮಕ್ಕಳಲ್ಲಿ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ರಾಯಚೂರು ನಗರದ ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ವೈದ್ಯರಿಗೆ ಆಹಾರದಲ್ಲಿ ಸಿಕ್ತು ಹಲ್ಲಿ: ಫೇಮಸ್ ಮಾಲ್‌ನ ರೆಸ್ಟೋರೆಂಟ್‌ನಲ್ಲಿ ಘಟನೆ