ವೈದ್ಯರಿಗೆ ಆಹಾರದಲ್ಲಿ ಸಿಕ್ತು ಹಲ್ಲಿ: ಫೇಮಸ್‌ ಮಾಲ್‌ನ ರೆಸ್ಟೋರೆಂಟ್‌ನಲ್ಲಿ ಘಟನೆ

ಚಂಡೀಗಢದ ನೆಕ್ಸಸ್ ಎಲಾಂಟೆ ಮಾಲ್‌ನಲ್ಲಿ  ಆಹಾರದಲ್ಲಿ ಹಲ್ಲಿ ಸಿಕ್ಕಿದ ಘಟನೆ ನಡೆದಿದೆ. ಘಟನೆಯ ನಂತರ  ಚಂಡೀಗಢ ಆರೋಗ್ಯ ಇಲಾಖೆ ಅಧಿಕಾರಿಗಳು ಅದೇ ರಾತ್ರಿ ಮಾಲ್‌ಗೆ ಭೇಟಿ ನೀಡಿ ಅದೇ ರಾತ್ರಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

Lizard found in food at Nexus Elante Mall Chandigarh akb

ಚಂಢೀಗಡ: ಮಾಲ್‌ನ ರೆಸ್ಟೋರೆಂಟ್ ಅಂದ್ರೆ ತುಂಬಾ ಕ್ಲೀನ್ ಆಗಿರುತ್ತದೆ. ಅಲ್ಲಿ ಸ್ವಚ್ಛತೆಯನ್ನು ಚೆನ್ನಾಗಿ ನಿರ್ವಹಿಸುತ್ತಾರೆ ಅನ್ನೋದು ಹಣ ಇದ್ದ ಹಲವರ ನಂಬಿಕೆ. ಜೊತೆಗೆ ಮಾಲ್‌ನಲ್ಲಿ ತಿನ್ನೋದಂದ್ರೆ ಸ್ಟಾಂಡರ್ಡ್ ಅಂತಾನೂ ಹೈ ಕ್ಲಾಸ್ ಸೊಸೈಟಿಯ ಜನ ಮಾಲ್‌ಗಳಿಗೆ ಆಗಾಗ ಭೇಟಿ ನೀಡುತ್ತಾ ತಮಗಿಷ್ಟವಾದ ಆಹಾರ ಸೇವಿಸುತ್ತಾರೆ. ಆದರೆ ಅಂತಹ ಮಾಲೊಂದರಲ್ಲೇ  ಈಗ ಆಹಾರದಲ್ಲಿ ಹಲ್ಲಿ ಸಿಕ್ಕಿದೆ. ಅದೂ ವೈದ್ಯರೊಬ್ಬರಿಗೆ. ಚಂಡೀಗಢದ ನೆಕ್ಸಸ್ ಎಲಾಂಟೆ ಮಾಲ್‌ನಲ್ಲಿ (Nexus Elante Mall) ಈ ಘಟನೆ ನಡೆದಿದೆ. ಘಟನೆಯ ನಂತರ  ಚಂಡೀಗಢ ಆರೋಗ್ಯ ಇಲಾಖೆ ಅಧಿಕಾರಿಗಳು ಅದೇ ರಾತ್ರಿ ಮಾಲ್‌ಗೆ ಭೇಟಿ ನೀಡಿ ಅದೇ ರಾತ್ರಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. 

ಚಂಡೀಗಢದ ನೆಕ್ಸಸ್ ಎಲಾಂಟೆ ಮಾಲ್‌ ಒಳಗೆ ಇರುವ ಸಾಗರ್ ರತ್ನ ರೆಸ್ಟೋರೆಂಟ್‌ನಲ್ಲಿ ಚೋಲೆ ಭಟುರೆ (Chhole Bhature)ಯಲ್ಲಿ ಹಲ್ಲಿ ಪತ್ತೆಯಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ವೈದ್ಯರಿಗೆ  ನೀಡಿದ್ದ ‘ಚೋಲೆ ಭಟುರೆ’ ಪ್ಲೇಟ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ಕೂಡಲೇ ಗ್ರಾಹಕರು ಆರೋಗ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಗ್ರಾಹಕರು ಯಾವುದೇ ಲಿಖಿತ ದೂರು ಸಲ್ಲಿಸಿಲ್ಲ. ಮಾಹಿತಿ ಪಡೆದ ನಂತರ, ಆರೋಗ್ಯ ಇಲಾಖೆಯ ತಂಡವು ರೆಸ್ಟೋರೆಂಟ್‌ಗೆ ತೆರಳಿ ಆಹಾರದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

 

ಮಾದರಿಗಳನ್ನು ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು  ಮುಂದಿನ 15 ದಿನಗಳಲ್ಲಿ ವರದಿ ಬರಲಿದೆ. ನಂತರ, ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಎಲಾಂಟೆ ಮಾಲ್‌ನ (Elante Mall) ವಕ್ತಾರರು ನಂತರ ಹೇಳಿಕೆ ಬಿಡುಗಡೆ ಮಾಡಿದ್ದು, ನಮ್ಮ ಮಾಲ್‌ನ ಆವರಣದಲ್ಲಿ ನಡೆದ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಗ್ರಾಹಕರ ನೈರ್ಮಲ್ಯ ಮತ್ತು ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ರೀತಿಯ ಘಟನೆಗಳನ್ನು ತಪ್ಪಿಸಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಆಹಾರ ನ್ಯಾಯಾಲಯದಲ್ಲಿ ಸಂಪೂರ್ಣ ಆಹಾರ ಸುರಕ್ಷತಾ ಲೆಕ್ಕಪರಿಶೋಧನೆಯಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡುತ್ತೇವೆ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ತಿಳಿಸಿದೆ.

Viral Video: ಜೀವಂತ ಹಲ್ಲಿಯನ್ನು ತಿನ್ನಲು ಮುಂದಾದ ಮಗು. ಮುಂದೆ ಆಗಿದ್ದೇನು ?
 

ಕಳೆದ ತಿಂಗಳು ಮೇ ತಿಂಗಳಲ್ಲಿ, ಗ್ರಾಹಕರಿಗೆ ನೀಡಿದ ತಂಪು ಪಾನೀಯದ ಲೋಟದಲ್ಲಿ ಹಲ್ಲಿ ಪತ್ತೆಯಾದ ನಂತರ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್ ಅನ್ನು ಬಂದ್‌ ಮಾಡಿದ್ದ ಘಟನೆ ನಡೆದಿತ್ತು. ಕೂಲ್ ಡ್ರಿಂಕ್ಸ್ ನಲ್ಲಿ (Cool Drink) ಸತ್ತ ಹಲ್ಲಿ ತೇಲುತ್ತಿದ್ದ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಅಹಮದಾಬಾದ್ ಮಹಾನಗರ ಪಾಲಿಕೆ (Ahmedabad Municipal Corporation,), ಅಲ್ಲಿನ ಸೋಲಾ ಮಳಿಗೆಯಲ್ಲಿದ್ದ (Sola Outlet) ಮೆಕ್ ಡೊನಾಲ್ಡ್  ಮಳಿಗೆಯನ್ನು (mcdonalds Farnchise )  ಸೀಲ್ ಮಾಡಿತ್ತು. ಭಾರ್ಗವ್ ಜೋಶಿ ಎಂಬ ಗ್ರಾಹಕ ತನ್ನ ಸ್ನೇಹಿತನೊಂದಿಗೆ ಸೋಲಾದ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ಗೆ ಹೋಗಿ ಎರಡು ಬರ್ಗರ್ ಮತ್ತು ಎರಡು ಗ್ಲಾಸ್ ಕೋಕಾ-ಕೋಲಾ ಸಾಫ್ಟ್ ಡ್ರಿಂಕ್ ಅನ್ನು ಆರ್ಡರ್ ಮಾಡಿದ್ದರು. ಈ ವೇಳೆ ಮಳಿಗೆಯವರು ನೀಡಿದ್ದ ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು.

ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!
 

Latest Videos
Follow Us:
Download App:
  • android
  • ios