ಐಐಎಂ ಕಲ್ಕತ್ತ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು.. ಅಲ್ಲಲ್ಲ.. ದೈತ್ಯ ಹಲ್ಲಿಗಳ ಕಾದಾಟ..! ವಿಡಿಯೋ ವೈರಲ್..
ಈ ವಿಡಿಯೋಗೆ ಸಾವಿರಾರು ಕಮೆಂಟ್‌ಗಳು ಸಹ ಬಂದಿದ್ದು, ಐಐಎಂ ಕಲ್ಕತ್ತಾದ ಕೆಲವು ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೋಲ್ಕತ್ತ (ಮಾರ್ಚ್ 2, 2023): ಕಾಲೇಜು ಕ್ಯಾಂಪಸ್ ಅಂದ್ಮೇಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರದ್ದು ಸ್ವಲ್ಪವಾದ್ರೂ ಗಲಾಟೆ, ಜಗಳ, ಬಂಕ್ ಇಂತದ್ದೆಲ್ಲ ಮಾಮೂಲು ಬಿಡಿ. ಕಾಲೇಜು ಕ್ಯಾಂಪಸ್‌ನಲ್ಲಿ ಚಿಕ್ಕಪುಟ್ಟ ಗಲಾಟೆಗಳು ಸಾಮಾನ್ಯವಾದ ವಿಚಾರವೇ ಆದರೂ, ಪ್ರಾಣಿಗಳು ಕ್ಯಾಂಪಸ್‌ನಲ್ಲಿ ಜಗಳವಾಡಿದರೆ ಸುದ್ದಿಯಾಗುತ್ತಲ್ಲವೇ. ಪ್ರಾಣಿಗಳು ಅಂದ್ರೆ ನಾಯಿ, ಬೆಕ್ಕು ಅಲ್ಲ ಸ್ವಾಮಿ..
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute of Management), ಐಐಎಂ ಕಲ್ಕತ್ತವು (IIM Calcutta) ಅದರ ಉದ್ಯೋಗ, ಕೋರ್ಸ್‌ಗಳು ಮತ್ತು ಇತರ ಪಠ್ಯಕ್ರಮ ಚಟುವಟಿಕೆಗಳಿಗೆ ಜನಪ್ರಿಯವಾಗಿದೆ. ಆದರೆ ಈ ಬಾರಿ ಕಾಲೇಜು ಕ್ಯಾಂಪಸ್‌ನಲ್ಲಿ ‘’ಕಠಿಣ ಹೋರಾಟ" ಇಂಟರ್ನೆಟ್‌ನ (Internet) ಗಮನವನ್ನು ಸೆಳೆದಿದೆ. ಮೊದಲೇ ಹೇಳಿದ ಹಾಗೆ, ಈ ಹೋರಾಟ ವಿದ್ಯಾರ್ಥಿಗಳದ್ದಲ್ಲ.. ಎರಡು ವಯಸ್ಕ ಮಾನಿಟರ್ ಲಿಜರ್ಡ್ (Monitor Lizard) ಅಥವಾ ದೈತ್ಯ ಗಾತ್ರದ ಹಲ್ಲಿಗಳು ಕಾದಾಡುತ್ತಿರುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ. ಭಾರತೀಯ ಅರಣ್ಯ ಸೇವೆ, ಐಎಫ್‌ಎಸ್ ಅಧಿಕಾರಿ (IFS Officer) ಸುಶಾಂತ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ: JNU ಹೊಸ ರೂಲ್ಸ್: ಕ್ಯಾಂಪಸ್‌ನಲ್ಲಿ ಧರಣಿ ಮಾಡಿದ್ರೆ 20 ಸಾವಿರ ದಂಡ; ಹಿಂಸಾಚಾರಕ್ಕೆ ಪ್ರವೇಶ ರದ್ದು ಜತೆಗೆ ದಂಡ..!
ನಿಂತಲ್ಲೇ ಎರಡು ಮಾನಿಟರ್ ಹಲ್ಲಿಗಳು ಜಗಳವಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಶಿಷ್ಟ ವಿಡಿಯೋವನ್ನು ಕ್ಯಾಂಪಸ್‌ನೊಳಗೆ ಯಾರೋ ರೆಕಾರ್ಡ್ ಮಾಡಿದ್ದಾರೆ. ಈ ವೈರಲ್ ವಿಡಿಯೋ ಸುಮಾರು 1 ಲಕ್ಷ 87 ಸಾವಿರ ವೀಕ್ಷಣೆಗಳನ್ನು ಮತ್ತು 2 ಸಾವಿರಕ್ಕೂ ಹೆಚ್ಚು ಲೈಕ್ಸ್, 300ಕ್ಕೂ ಅಧಿಕ ರೀಟ್ವೀಟ್‌ಗಳನ್ನು ಪಡೆದುಕೊಂಡಿದೆ.
ಇನ್ನು, ಹಲವು ನೆಟ್ಟಿಗರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, ಮತ್ತು ಅದನ್ನು ಐಐಎಂಗಳಲ್ಲಿ ಕಲಿಸುವಂತೆ ಮ್ಯಾನೇಜ್‌ಮೆಂಟ್ ಪಾಠಕ್ಕೆ ಹೋಲಿಸಿದ್ದಾರೆ. "ಐಐಎಂ ಕಲ್ಕತ್ತದಿಂದ ಮುಂಜಾನೆಯ ದೃಶ್ಯ... (ವಾಟ್ಸಾಪ್‌ನಲ್ಲಿ ಸ್ವೀಕರಿಸಿದಂತೆ) ಸಂಘರ್ಷಗಳನ್ನು ನಿರ್ವಹಿಸಲು ಕಲಿಯುವುದು" ಎಂಬ ಶೀರ್ಷಿಕೆಯೊಂದಿಗೆ IFS ಅಧಿಕಾರಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋವನ್ನು ಕೆಳಗೆ ನೋಡಿ..
ಇನ್ನು, ಈ ವಿಡಿಯೋಗೆ ಸಾವಿರಾರು ಕಮೆಂಟ್‌ಗಳು ಸಹ ಬಂದಿದ್ದು, ಐಐಎಂ ಕಲ್ಕತ್ತಾದ ಕೆಲವು ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ, ಕೆಲವರು ಈ ಕಿತ್ತಾಟವನ್ನು ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಹೋಲಿಸಿದ್ದರೆ. "IIM ಕಲ್ಕತ್ತಾದಲ್ಲಿ ಒಂದು ಸಾಮಾನ್ಯ ದಿನ :) ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ನೇರವಾಗಿ ನಿಂತ ಹಾವು... ಅಪರೂಪದ ವಿಡಿಯೋ ವೈರಲ್
"OMG... ಅದು ತುಂಬಾ ಆಸಕ್ತಿದಾಯಕವಾಗಿದೆ... ಅವು ಏನು ಮಾಡುತ್ತಿವೆ..? ಬದುಕುಳಿಯುವ ಗಿಮಿಕ್‌ಗಳ ಅವರದೇ ಪ್ರಪಂಚ. ಅದ್ಭುತ ಸ್ವಭಾವ" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. "ಗಾರ್ಡನ್‌ನಲ್ಲಿ ಮ್ಯಾನೇಜ್‌ಮೆಂಟ್ ತರಗತಿಗಳು" ಎಂದು ಮತ್ತೊಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.
ಈ ವಿಡಿಯೋಗೆ ಅಂತರ್ಜಾಲದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಸಹ ಕೇಳಿಬಂದಿವೆ. ಈ ದೈತ್ಯ ಹಲ್ಲಿಗಳನ್ನು ಅಥವಾ ಮಾನಿಟರ್ ಲಿಜರ್ಡ್ ಅನ್ನು ಕೆಲವರು ಮೊಸಳೆ ಎಂದು ಕನ್ಫ್ಯೂಸ್ ಮಾಡಿಕೊಂಡಿದ್ದಾರೆ. ಆದರೆ, ಐಐಎಂ ಕಲ್ಕತ್ತ (IIM C ) ಹಳೆಯ ವಿದ್ಯಾರ್ಥಿಯೊಬ್ಬರು ಇವು ದೈತ್ಯ ಹಲ್ಲಿಗಳು ಮತ್ತು ಆ ಪ್ರದೇಶದಲ್ಲಿ ಸ್ವಲ್ಪ ಸಾಮಾನ್ಯ ಎಂದೂ ಸ್ಪಷ್ಟಪಡಿಸಿದ್ದಾರೆ.