ಉಗುರು ಕಚ್ಚೋ ಅಭ್ಯಾಸ ಹಲ್ಲನ್ನೂ ಹಾಳು ಮಾಡುತ್ತೆ
ಹಲವರಿಗೆ ಸುಮ್ಮನೆ ನಿಂತಿರುವಾಗ ಉಗುರು ಕಚ್ಚುವುದು (Nail Biting), ಬೆರಳಿನ ನೆಟಿಕೆ ತೆಗೆಯುವುದು ಮೊದಲಾದ ಅಭ್ಯಾಸ (Habit)ಗಳಿರುತ್ತವೆ. ಸಾಮಾನ್ಯ ವರ್ತನೆ ಎಂದೆನಿಸಿಕೊಳ್ಳೋ ಇಂಥಾ ವರ್ತನೆ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗೆ (Health problem) ಕಾರಣವಾಗುತ್ತೆ. ನಿಮಗೂ ಉಗುರು ಕಚ್ಚುವ ಅಬ್ಯಾಸವಿದೆಯಾ ?
ಮನುಷ್ಯನ ಕೈಯಲ್ಲಿರುವ ಬೆರಳುಗಳಿಗೆ ರಕ್ಷಣಾ ಕವಚದಂತಿರುವುದು ಉಗುರುಗಳು. ಪುಟ್ಟ ಮಕ್ಕಳಿಗೆ ಉಗುರನ್ನು ಕಚ್ಚುವ ಅಭ್ಯಾಸವಿರುತ್ತದೆ. ಕೆಲವೊಬ್ಬರಿಗೆ ದೊಡ್ಡವರಾದ ಮೇಲೂ ಈ ಅಭ್ಯಾಸ ಮುಂದುವರೆಯುತ್ತದೆ. ಅಧ್ಯಯನಗಳು ಹೇಳುವ ಹಾಗೆ ಶೇಕಡ 40ರಷ್ಟು ಮಂದಿ ಉಗುರು ಕಚ್ಚುವ ಅಭ್ಯಾಸ (Nail Biting)ವನ್ನು ಹೊಂದಿರುತ್ತಾರೆ. ಎಲ್ಲರೂ ಸಾಮಾನ್ಯ ಅಭ್ಯಾಸ (Habit)ವೆಂದು ಅಂದುಕೊಳ್ಳೋ ಈ ವರ್ತನೆಯಿಂದ ಆರೋಗ್ಯ (Health)ಕ್ಕೆಷ್ಟು ತೊಂದ್ರೆಯಿದೆ ಗೊತ್ತಾ ?
ಚರ್ಮ ಹಾನಿಗೊಳಗಾಗುತ್ತದೆ: ಉಗುರನ್ನು ಕಚ್ಚುವ ಅಭ್ಯಾಸದಿಂದ ಕೇವಲ ಉಗುರು ಮಾತ್ರವಲ್ಲ, ಉಗುರಿನ ಸುತ್ತಲಿರುವ ಚರ್ಮ ಸಹ ಹಾನಿಗೊಳಗಾಗುತ್ತದೆ. ಸತತವಾಗಿ ಉಗುರು ಕಚ್ಚುವ ಅಭ್ಯಾಸದಿಂದ ಉಗುರಿನ ತುದಿಯ ಅಕ್ಕಪಕ್ಕದಲ್ಲಿರುವ ಚರ್ಮ ಹಾಳಾಗುತ್ತದೆ. ಈ ರೀತಿ ರಕ್ಷಣಾ ಕವಚದಂತಿರುವ ಚರ್ಮ ಹಾಳಾಗುವುದರಿಂದ ಸೋಂಕಿನ ಅಪಾಯ ಹೆಚ್ಚುತ್ತದೆ
ಸೋಂಕಿನ ಅಪಾಯ ಹೆಚ್ಚು: ಬೆರಳುಗಳನ್ನು ಕಚ್ಚುವ ಅಭ್ಯಾಸ, ಬೆರಳುಗಳಿಂದ ನಿಮ್ಮ ಬಾಯಿಗೆ ಸೂಕ್ಷ್ಮಾಣುಗಳನ್ನು ಹರಡುವ ಮೂಲಕ ಶೀತಗಳು ಮತ್ತು ಇತರ ಸೋಂಕುಗಳ ಅಪಾಯವನ್ನು ಹೆಚ್ಚಿಸಬಹುದು. ಉಗುರುಸಂಧಿಯೇ ಬ್ಯಾಕ್ಟೀರಿಯಾಗಳು ವೃದ್ಧಿಯಾಗುವ ಸ್ಥಳ. ಹೀಗಾಗಿ ಉಗುರನ್ನು ಕಚ್ಚುವ ಸಂದರ್ಭ ಬ್ಯಾಕ್ಟಿರೀಯಾಗಳು ಹೊಟ್ಟೆಯೊಳಗೆ ಹೋಗುತ್ತವೆ. ಒಂದು ಸಮೀಕ್ಷೆಯ ಪ್ರಕಾರ ಅತಿಸಾರ, ವಾಂತಿ ಮತ್ತು ಅಜೀರ್ಣ ಮೊದಲಾದ ತೊಂದರೆಗೆ ಎಸ್ಚೆರಚಿಯಾ ಕೋಲ್ ಎಂಬ ಬ್ಯಾಕ್ಟೀರಿಯಾವೇ ಕಾರಣ ಎಂದು ತಿಳಿದುಬಂದಿದೆ. ಸಂಶೋಧನೆಗಳ ಪ್ರಕಾರ ಉಗುರು ಕಚ್ಚುವ ಅಭ್ಯಾಸವಿರುವ 76% ಜನರಿಗೆ ವಾಂತಿ ಬೇಧಿಯ ತೊಂದರೆ ಕಾಡುತ್ತದೆ.
ಉಗುರು, ಕೂದಲಿನಲ್ಲಿ ಈ ರೀತಿಯಾದ್ರೆ ಕ್ಯಾಲ್ಸಿಯಂ ಕೊರತೆ ಎಂದರ್ಥ
ಹಲ್ಲು ಹಾಳಾಗುವ ಸಾಧ್ಯತೆ ಹೆಚ್ಚು: ಗಟ್ಟಿಯಾದ ವಸ್ತುಗಳನ್ನು ಜಗಿಯುವುದರಿಂದ ಹಲ್ಲುಗಳ ಮೇಲೆ ಒತ್ತಡ ಬಿದ್ದು ಹಲ್ಲುಗಳು ಹಾಳಾಗುವ ಸಾಧ್ಯತೆ ಇರುತ್ತದೆ. ದಿನಕಳೆದಂತೆ ಹಲ್ಲುಗಳು ದುರ್ಬಲಗೊಂಡು ಮೆತ್ತಗಿರುವ ಆಹಾರ ಪದಾರ್ಥವನ್ನು ಜಿಗಿಯಲು ಕೂಡ ಸಾಧ್ಯವಾಗದೇ ಇರಬಹುದು. ಇಂತಹ ಅಭ್ಯಾಸದಿಂದ ದೂರವಾಗಬೇಕಾದರೆ ಶುಗರ್ ಫ್ರೀ ಚಿವಿಂಗ್ ಮಾಡುವುದು ಒಳ್ಳೆಯದು.
ಒಸಡು ಹಾನಿಗೊಳಗಾಗುತ್ತವೆ: ಉಗುರು ಕಚ್ಚುವ ಅಭ್ಯಾಸದಿಂದ ಕೇವಲ ಹಲ್ಲುಗಳು ಮಾತ್ರವಲ್ಲ ಒಸಡುಗಳು ಸಹ ತೊಂದರೆಗೆ ಒಳಗಾಗುತ್ತವೆ. ಉಗುರು ಸಂದಿಯಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ನೇರವಾಗಿ ಒಸಡುಗಳ ಒಳಗೇ ನುಗ್ಗಿ ಸೋಂಕನ್ನುಂಟು ಮಾಡುತ್ತವೆ. ಒಳಗಡೆ ಕೀವು ಉಂಟಾಗಿ ಹುಳಗಳು ಬೆಳೆಯುತ್ತವೆ.
ಬಾಯಿಯ ಸ್ವಚ್ಛತೆಗೆ ಅದ್ಯತೆ ನೀಡಿ: ಹೆಚ್ಚು ಆರೋಗ್ಯವಾಗಿರಲು ಕೈ ಬೆರಳುಗಳನ್ನು ಕಚ್ಚುವ ಅಭ್ಯಾಸವನ್ನು ಬಿಟ್ಟು ಬಿಡುವುದು ಒಳ್ಳೆಯದು. ಬಾಯಿಯ ಸ್ವಚ್ಛತೆ ಮತ್ತು ಆರೋಗ್ಯ ಕೂಡ ಇಲ್ಲಿ ಮುಖ್ಯವಾಗುವುದರಿಂದ ಯಾವುದೇ ಸಮಯದಲ್ಲಿ ನಾವು ಬಾಯಿಗೆ ಬೆರಳು ಹಾಕಿಕೊಳ್ಳುವುದು ಅಥವಾ ಉಗುರು ಹಾಕಿಕೊಳ್ಳುವುದು ಮಾಡುವುದು ಒಳ್ಳೆಯದಲ್ಲ.
Kids Care : ಉಗುರು ಕಚ್ಚಿ ಮಕ್ಕಳು ಆರೋಗ್ಯ ಹಾಳ್ಮಾಡಿಕೊಂಡ್ರೆ ಹೀಗೆ ಮಾಡಿ
ಬಾಯಿಯಿಂದ ದುರ್ವಾಸನೆ ಬರುತ್ತದೆ: ಉಗುರು ಕಚ್ಚುವ ಅಭ್ಯಾಸದಿಂದ ಬಾಯಿಯಿಂದ ದುರ್ವಾಸನೆ ಬರಲು ಶುರುವಾಗುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳೂ ಬಾಯಿಯೊಳಗೆ ದಾಟಿಕೊಂಡು ನಾಲಿಗೆಯ ಹಿಂಭಾಗ, ನಾಲಿಗೆಯ ಹಿಂಭಾಗದ ಬದಿ, ಗಂಟಲ ಮೇಲ್ಭಾಗ, ಬಾಯಿಯ ಮೇಲ್ಭಾಗ (ಅಥವಾ ಛಾವಣಿ), ಕಿರುನಾಲಿಗೆಯ ಅಕ್ಕಪಕ್ಕದಲ್ಲೆಲ್ಲಾ ಅಂಟಿಕೊಳ್ಳುತ್ತವೆ. ಕಾಲಕ್ರಮೇಣ ಇವುಗಳ ಇರುವಿಕೆ ಬಾಯಿಯೊಳಗೆ ದುರ್ವಾಸನೆಗೆ ಕಾರಣವಾಗುತ್ತದೆ.
ಉಗುರನ್ನು ಕಚ್ಚಲು ಕಾರಣಗಳು
ಐರನ್ ಡಿಫಿಶಿಯೆನ್ಸಿ, ಥೈರಾಯ್ಡ್, ರೇನಾಡ್ಸ್ ಸಿಂಡ್ರೋಮ್ ಮೊದಲಾದ ಸಮಸ್ಯೆಗಳಿದ್ದಾಗ ಉಗುರು ಕಚ್ಚುವ ಅಭ್ಯಾಸ ರೂಢಿಗೊಳ್ಳುತ್ತದೆ. ಕೆಲವೊಬ್ಬರು ಒತ್ತಡ, ಆತಂಕವಾದಾಗ ಉಗುರು ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ.
ಉಗುರು ಕಚ್ಚುವ ಅಭ್ಯಾಸ ತಪ್ಪಿಸುವುದು ಹೇಗೆ ?
ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಪರ್ಯಾಯ ಕ್ರಮವನ್ನು ಅನುಸರಿಸುವುದು, ಉಗುರುಗಳನ್ನು ಯಾವಾಗಲೂ ಕತ್ತರಿಸಿ ಟ್ರಿಮ್ ಆಗಿಡುವುದು. ಉಗುರುಗಳಿಗೆ ಕಹಿ ರುಚಿಯ ಲ್ಯಾಕ್ಕರ್ ಅನ್ನು ಅನ್ವಯಿಸುವ ಮೂಲಕ ಯಾವಾಗಲೂ ಉಗುರು ಕಚ್ಚುವ ಅಭ್ಯಾಸವನ್ನು ತಪ್ಪಿಸಬಹುದು.