Asianet Suvarna News Asianet Suvarna News

Exercise ಮಾಡುವಾಗ ಗಾಯ ಆಗ್ಬಾರ್ದು ಅಂದ್ರೆ ಸೆಲೆಬ್ರಿಟೀಸ್ ಟಿಪ್ಸ್ ಫಾಲೋ ಮಾಡಿ

ಎಷ್ಟೋ ಬಾರಿ ಎಕ್ಸರ್‌ಸೈಸ್ ಮಾಡುವಾಗ ಗಾಯಗಳಾಗುತ್ತದೆ. ಹೆಚ್ಚು ಗಾಯವಾದರೆ ಅದೆಷ್ಟೋ ದಿನ ಮತ್ತೆ ವರ್ಕೌಟ್ ಮಾಡಲು ಸಾಧ್ಯವಾಗುವುದೇ ಇಲ್ಲ. ಹಾಗಿದ್ರೆ ವ್ಯಾಯಾಮ ಮಾಡುವಾಗ ಇಂಥಾ ಗಾಯವಾಗದಂತೆ ನೋಡಿಕೊಳ್ಳೋಉ ಹೇಗೆ ? ಇಲ್ಲಿದೆ ಸೆಲೆಬ್ರಿಟಿ ಟಿಪ್ಸ್‌.

Tips From A Celebrity Expert To Prevent Injuries While Exercising Vin
Author
First Published Dec 7, 2022, 3:31 PM IST

ವ್ಯಾಯಾಮ (Exercise) ಮಾಡುವುದು ಆರೋಗ್ಯಕ್ಕೆ (Health) ಉತ್ತಮವಾಗಿದ್ದರೂ ಇದನ್ನು ಮಾಡುವುದು ಅಷ್ಟು ಸುಲಭವಲ್ಲ. ಎಷ್ಟೋ ಬಾರಿ ಎಕ್ಸರ್‌ಸೈಸ್ ಮಾಡುವಾಗ ಉಂಟಾದ ಗಾಯ (Injury) ಬೇಗನೇ ಗುಣವಾಗುವುದಿಲ್ಲ. ವಿಶೇಷವಾಗಿ ಚಳಿಗಾಲದಲ್ಲಿ ಗಾಯಗಳ ಅಪಾಯ ಹೆಚ್ಚು. ಈ ಸಮಯದಲ್ಲಿ ನೀವು ವ್ಯಾಯಾಮ ಮಾಡಬಾರದು ಎಂಬ ಯಾವುದೇ ಷರತ್ತು ಇಲ್ಲದಿದ್ದರೂ, ದೇಹದ (Body) ಚಲನೆಗಳ ಕೊರತೆ ಮತ್ತು ಸ್ನಾಯುಗಳ ಬಿಗಿತದಿಂದಾಗಿ ಶೀತ ಹವಾಮಾನವು  ಗಾಯದ ಅಪಾಯವನ್ನು ಹೆಚ್ಚಿಸುತ್ತದೆ. ಸೆಲೆಬ್ರಿಟಿ ಪೌಷ್ಟಿಕತಜ್ಞೆ ಮತ್ತು ಫಿಟ್‌ನೆಸ್ ತಜ್ಞೆಯಾಗಿರುವ ರುಜುತಾ ದಿವೇಕರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವರ್ಕೌಟ್ ಗಾಯಗಳನ್ನು ತಪ್ಪಿಸುವುದು ಹೇಗೆ ಎಂಬ ಸಲಹೆಯನ್ನು ಹಂಚಿಕೊಂಡಿದ್ದಾರೆ.

ವ್ಯಾಯಾಮದ ಸಮಯದಲ್ಲಿ ಸರಿಯಾದ ಭಂಗಿಯು ಗಾಯಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ದೇಹ ಉತ್ತಮ ಆಕಾರವನ್ನು ಪಡೆಯುತ್ತದೆ. ಮಾತ್ರವಲ್ಲ ನಿಮ್ಮ ದೇಹದ ಯಾವುದೇ ಭಾಗಗಳಿಗೆ ಗಾಯವಾಗದಂತೆ ನೋಡಿಕೊಳ್ಳಬಹುದು. ಅದಕ್ಕೇನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ದಿಢೀರ್ ತೂಕ ಹೆಚ್ಚಾಗೋದೇಕೆ? ಕಾರಣ ಇಲ್ಲಿವೆ ನೋಡಿ

ವ್ಯಾಯಾಮ ಮಾಡುವಾಗ ಗಾಯಗಳನ್ನು ತಡೆಗಟ್ಟಲು ಟಿಪ್ಸ್‌

1. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಡಿ: ತಾಲೀಮಿಗೆ 15 ನಿಮಿಷಗಳ ಮೊದಲು ಹಣ್ಣುಗಳನ್ನು (Fruits) ತಿನ್ನುವ ಮೂಲಕ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ ಎಂದು ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಹೇಳುತ್ತಾರೆ. ಯಾವತ್ತೂ ಎಂದಿಗೂ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡದಂತೆ ನೋಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ನೀವು ಶಕ್ತಿಯನ್ನು (Energy) ಕಳೆದುಕೊಳ್ಳಬಹುದು ಅಥವಾ ತಲೆತಿರುಗುವಿಕೆ ಅಥವಾ ನಡುಗುವಿಕೆಯನ್ನು ಅನುಭವಿಸಬಹುದು. ದೀರ್ಘಾವಧಿಯಲ್ಲಿ, ಇದು ಒಳ್ಳೆಯದಲ್ಲ. ಏಕೆಂದರೆ ನಿಮ್ಮ ದೇಹವು (Body) ಶಕ್ತಿಗಾಗಿ ಕೊಬ್ಬನ್ನು ಕಾಯ್ದಿರಿಸಲು ಪ್ರಾರಂಭಿಸಬಹುದು.

2.ವಾರ್ಮ್‌ ಅಪ್‌ ಸೆಷನ್ ತಪ್ಪಿಸಬೇಡಿ: ಪ್ರತಿ ಬಾರಿ ವ್ಯಾಯಾಮ ಮಾಡಲು ವಾರ್ಮ್ ಅಪ್‌ ಸೆಷನ್‌ ತಪ್ಪಿಸಬೇಡಿ ಎಂದು ರುಜುತಾ ದಿವೇಕರ್ ಸಲಹೆ ನೀಡುತ್ತಾರೆ. ಎಕ್ಸರ್‌ಸೈಸ್ ಮಾಡೋ ಮೊದಲು ದೇಹವನ್ನು ಹುರಿಗೊಳಿಸಿ. ಇದು ಗಾಯದ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕನಿಷ್ಠ 10 ರಿಂದ 12 ನಿಮಿಷಗಳ ಕಾಲ ವಾರ್ಮ್ ಅಪ್‌ ಸೆಷನ್ ಮಾಡಿ. ಇದು ನಿಮ್ಮ ಮೂಳೆಗಳು (Bones), ಸ್ನಾಯುರಜ್ಜುಗಳು, ಅಸ್ಥಿರಜ್ಜುಗಳು ಮತ್ತು ಕೀಲುಗಳನ್ನು ಬೆಚ್ಚಗೆ ಮಾಡುತ್ತದೆ.

3. ಯಾವಾಗಲೂ ಕಠಿಣ ವರ್ಕೌಟ್‌ಗಳನ್ನು ಮಾಡಬೇಡಿ: ಯಾವಾಗಲೂ ಒಂದು ರೀತಿಯ ವ್ಯಾಯಾಮದ ಮೇಲೆ ಕೇಂದ್ರೀಕರಿಸುವ ಬದಲು, ನಿಮ್ಮ ಫಿಟ್‌ನೆಸ್ ದಿನಚರಿಯಲ್ಲಿ ವಿಭಿನ್ನ ರೀತಿಯ ವ್ಯಾಯಾಮವನ್ನು ಸೇರಿಸಿ. ತೀವ್ರವಾದ ತರಬೇತಿಯ ಜೊತೆಗೆ ಯೋಗ, ಧ್ಯಾನ (Mediatation), ನಡಿಗೆ, ಈಜು ಅಥವಾ ಜಾಗಿಂಗ್‌ನಂತಹ ಕಡಿಮೆ ಪ್ರಭಾವದ ವ್ಯಾಯಾಮಗಳನ್ನು ಸೇರಿಸಿ ಎಂದು ರುಜುತಾ ದಿವೇಕರ್ ಹೇಳುತ್ತಾರೆ. 

ಒಂಟಿ ಕಾಲಲ್ಲಿ ನಿಂತು ಬ್ಯಾಲೆನ್ಸ್ ಮಾಡೋಕಾಗುತ್ತಾ ಟ್ರೈ ಮಾಡಿ, ಇಲ್ಲಾಂದ್ರೆ..

4. ಪ್ರತಿದಿನ ಒಂದೇ ರೀತಿಯ ವ್ಯಾಯಾಮ ಮಾಡಬೇಡಿ: ಯಾವಾಗಲೂ ಒಂದೇ ರೀತಿ ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಿಮ್ಮ ನರ-ಸ್ನಾಯು ಮಾರ್ಗಗಳಿಗೆ ವಿರಾಮ ನೀಡಿ. ಇವತ್ತು ಯೋಗ ಮಾಡಿದ್ರೆ ನಾಳೆ ವಾಕಿಂಗ್ ಹೋಗಿ. ನೀವು ಇಂದು ತೂಕ (Weight) ಎತ್ತುವುದು ಮಾಡಿದರೆ, ನಾಳೆ ಈಜುವುದು ಮಾಡಿ ಎಂದು ಸಲಹೆ ನೀಡುತ್ತಾರೆ. ಇದು ಸ್ನಾಯುಗಳ ಅತಿಯಾದ ಬಳಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹವು ವಿವಿಧ ಸ್ನಾಯು ಗುಂಪುಗಳನ್ನು ಬಳಸಲು ಅನುಮತಿಸುತ್ತದೆ. ಮಾತ್ರವಲ್ಲ ವಾರದ ಎಲ್ಲಾ ದಿನ ವ್ಯಾಯಾಮ ಮಾಡಬೇಡಿ. ನಿಮ್ಮ ದೇಹಕ್ಕೆ ಕನಿಷ್ಠ 1 ದಿನ ವಿರಾಮ ನೀಡಿ ಎಂದು ರುಜುತಾ ದಿವೇಕರ್ ಸಲಹೆ ನೀಡುತ್ತಾರೆ.

Follow Us:
Download App:
  • android
  • ios