Asianet Suvarna News Asianet Suvarna News

ಚಳಿಗಾಲದಲ್ಲಿ ದಿಢೀರ್ ತೂಕ ಹೆಚ್ಚಾಗೋದೇಕೆ? ಕಾರಣ ಇಲ್ಲಿವೆ ನೋಡಿ

ಎಲ್ಲಾ ಋತುಗಳಿಗಿಂತಲೂ ಚಳಿಗಾಲವನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ಇಷ್ಟಪಡುವುದಿರಲಿ ಇಂದಿನ ಬಹುತೇಕ ಯುವಜನರು ಈ ಋತುವನ್ನು ಆನಂದಿಸುತ್ತಾರೆ. ಮೈ ಕೊರೆಯುವ ಚಳಿಯಿಂದಾಗಿ ನಮ್ಮ ಆರೋಗ್ಯದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೇವೆ. ಅದರಲ್ಲಿ ತೂಕ ಹೆಚ್ಚಾಗುವ(Weight Gain) ಸಮಸ್ಯೆಯನ್ನು ಬಹಳಷ್ಟು ಜನ ಎದುರಿಸಿರುತ್ತಾರೆ. ಚಳಿಗಾಲದಲ್ಲಿ(Winter) ದಿಢೀರ್ ಎಂದು ತೂಕ ಹೆಚ್ಚಾಗಲು ಕಾರಣವೇನು? ಈ ಬಗ್ಗೆ ಇಲ್ಲಿದೆ ಮಾಹಿತಿ. 

Reason behind Sudden Weight Gain During Winter
Author
First Published Nov 28, 2022, 10:31 AM IST

ಭಾರತದಲ್ಲಿ ಚಳಿಗಾಲವು ಡಿಸೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಪಮಾನದಲ್ಲಿನ ಭಾರೀ ಕುಸಿತದಿಂದಾಗಿ ನವೆಂಬರ್‌ನಲ್ಲೇ ವಿಪರೀತ ಚಳಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ತಾಪಮಾನದಲ್ಲಿನ ಈ ಕುಸಿತದ ಜೊತೆಗೆ ಫ್ಲಾಕಿ ಚರ್ಮ, ಒಣ ಕೂದಲು(Dry Hair), ಸುರಿಯುವ ಮೂಗು, ಹಾಗೂ ಚಳಿಗಾಲದಲ್ಲಿ ದಿಢೀರ್ ಎಂದು ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ.

ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಎಂದರೇನು?: ಚಳಿಗಾಲದಲ್ಲಿ ನಾವು ಎಂದಿನಂತೆ ಚಟುವಟಿಕೆಯಿಂದಿರುವುದಿಲ್ಲ. ನಮ್ಮ ದೈನಂದಿನ ಜೀವನ ಶೈಲಿಯೇ ಬದಲಾಗಿರುತ್ತದೆ. ಕಡಿಮೆ ಮಟ್ಟದ ಚಟುವಟಿಕೆ ಮತ್ತು ಕ್ಯಾಲೋರಿಗಳ(Calories) ಅತಿಯಾದ ಸೇವನೆಯಂತಹ ಅಂಶಗಳ ಪರಿಣಾಮವಾಗಿ ತೂಕ ಹೆಚ್ಚಾಗುತ್ತದೆ. ತೂಕದಲ್ಲಿ ಸಣ್ಣ ಏರಿಳಿತಗಳು ಕಳವಳಕ್ಕೆ ಕಾರಣವಾಗುವುದಲ್ಲದೆ, ಎಂದಿಗಿಂತ ಡಯೆಟ್ ಶೈಲಿ(Diet Style), ಜೀವನ ಶೈಲಿ, ತೂಕದಲ್ಲಿ ಗಣನೀಯ ಮೊತ್ತವನ್ನು ಪಡೆಯುವುದು, ಆರೋಗ್ಯ ಮತ್ತು ಜೀವನ ಗುಣಮಟ್ಟದ ಕೆಲವು ಅಂಶಗಳು ಋಣಾತ್ಮಕ(Negative) ಪರಿಣಾಮ ಬೀರಬಹುದು.

ತೂಕ ಹೆಚ್ಚಿಸಿಕೊಳ್ಳಬೇಕಾ? ಈ ಈಸಿಯಾಗಿ ಸಿಗೋ ಫುಡ್ ಸೇವಿಸಿ ಸಾಕು

ಚಳಿಗಾಲದಲ್ಲಿ ತೂಕ ಹೆಚ್ಚಾಗುವುದೇಕೆ?: ನಡುಕ ಹುಟ್ಟಿಸುವ ಇಂದಿನ ಚಳಿಯು ಆರೋಗ್ಯದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತವೆ. ಅಲ್ಲದೆ ನಮ್ಮ ದೈನಂದಿನ ಜೀವನ ಶೈಲಿ ಬದಲಾಗುವುದಲ್ಲದೆ, ಕಾರ್ಯ ಚಟುವಟಿಕೆಗಳು ಬುಡಮೇಲಾಗಿರುತ್ತದೆ. ಇದರಿಂದ ಹಲವು ತೊಂದರೆಗಳನ್ನು ಅನುಭವಿಸುತ್ತೇವೆ. ಅದರಲ್ಲೂ ಡಯೆಟ್‌ನಲ್ಲಿ(Diet) ಇರುವವರು ತೂಕದ ಮೇಲೆ ಕಾಳಜಿ ಇರುವವರಿಗೆ ಕಳವಳಕ್ಕೆ ಕಾರಣವಾಗುವುದು ತೂಕ ಹೆಚ್ಚಾಗುವ ಪ್ರಕ್ರಿಯೆ. ಚಳಿಗಾಲದಲ್ಲಿ ತೂಕ ಹೆಚ್ಚಾಗಲು ಹಲವು ಕಾರಣಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

1. ಹೆಚ್ಚಿದ ಕ್ಯಾಲೋರಿ(Increase in Calorie): ಚಳಿಗಾಲದಲ್ಲಿ ಸಾಮಾನ್ಯವಾಗಿ ಕ್ಯಾಲೋರಿ ಇರುವ ಆಹಾರ ಸೇವನೆಯು ಹೆಚ್ಚಾಗಿರುತ್ತದೆ. ಇದು ಸಿಹಿ ತಿಂಡಿ(Sweets), ಪಾರ್ಟಿಗಳಲ್ಲಿನ ಆಹಾರ ಸೇವನೆ, ಹೆಚ್ಚಿನ ಕೊಬ್ಬಿನ ಆಹಾರಗಳಂತಹ(Cholesterol Food) ಹೆಚ್ಚಿನ ಕ್ಯಾಲೋರಿ ಆಹಾರಗಳು ಮತ್ತು ಪಾನೀಯಗಳ ಬಳಕೆ ಹೆಚ್ಚಾಗಿರಬಹುದು. ಈ ರೀತಿಯ ಆಹಾರಗಳ ಸೇವನೆ ಹೆಚ್ಚಾದರೆ ಚಳಿಗಾಲದಲ್ಲಿ ತೂಕ ಹೆಚ್ಚಾಗುತ್ತದೆ.

2. ದೈಹಿಕ ಚಟುವಟಿಕೆಯಲ್ಲಿ ಬದಲಾವಣೆ(Body Activities): ಆರಂಭಿಕ ಚಳಿ ಅಥವಾ ಮೈ ಕೊರೆಯುವ ಚಳಿ ಆರಂಭವಾಗುತ್ತಿದ್ದAತೆ ಬಹುತೇಕ ಜನರು ತಮ್ಮ ದೈನಂದಿನ ಚಟುವಟೆಕೆಗಳು ಬದಲಾಗುತ್ತದೆ. ದಿನಂಪ್ರತಿ ಕಡಿಮೆ ಚಟುವಟಿಕೆಯನ್ನು ಹೊಂದಿರುತ್ತಾರೆ. ಆಲಸ್ಯ, ಸೋಮಾರಿತನದಿಂದ(Lazy) ಇರುತ್ತಾರೆ. ಇದರ ಪರಿಣಾಮವಾಗಿ ಪಪ್ರತಿದಿನ ಕಡಿಮೆ ಕ್ಯಾಲೋರಿಗಳನ್ನು ಸುಡಲಾಗುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. 

3. ಕಾಲೋಚಿತ ಅಸ್ವಸ್ಥತೆ(Seasonal Disorders): ಚಳಿಗಾಲದಲ್ಲಿ ಕಾಯಿಲೆ ಹರಡುವುದು, ಕಾಯಿಲೆ ಬೀಳುವುದು ಬಹಳ. ಚಳಿಗಾಲದಲ್ಲಿ ಸಂಭವಿಸುವ ಒಂದು ರೀತಿಯ ಖಿನ್ನತೆಯಾಗಿದೆ. ಇದು ಸೌಮ್ಯದಿಂದ ತೀವ್ರವಾಗಿರಬಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಕಾಲೋಚಿತ ಅಸ್ವಸ್ಥತೆಯಿಂದಾಗಿ ಹಗಲಿನ ನಷ್ಟದ ಪರಿಣಾಮವಾಗಿ ಹಾರ್ಮೋನ್‌ಗಳು(Harmone) ಮತ್ತು ನರಪ್ರೇಕ್ಷಕಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಇದರೊಂದಿಗೆ ನಿದ್ರೆಯ ಮಾದರಿಗಳಲ್ಲಿಯೂ ಬದಲಾವಣೆಯಾಗುವುದರಿಂದ ಹಸಿವು ಹೆಚ್ಚಿಸುತ್ತದೆ. ಅತಿಯಾದ ನಿದ್ರೆ(Over Sleep), ಕಡಿಮೆ ಚಟುವಟಿಕೆ, ಅಸ್ವಸ್ಥತೆಯಿಂದಾಗಿ ತೂಕ ಹೆಚ್ಚಾಗುತ್ತದೆ.

4.ಬಯಕೆಗಳು: ಚಳಿಗಾಲದಲ್ಲಿ ಹಸಿವು ಹೆಚ್ಚು ಹಾಗೂ ತಿನ್ನುವ ಬಯಕೆಯೂ ಹೆಚ್ಚು. ಕೊರೆಯುವ ಚಳಿಗೆ ಬಿಸಿಬಿಸಿ ಆಹಾರ ಬೇಕೆನಿಸುವುದು, ಸಕ್ಕರೆ(Sugar) ಅಥವಾ ಸಿಹಿ ತಿಂಡಿಗಳ ಸೇವನೆ, ಕಾರ್ಬೋಹೈಡ್ರೇಟ್(Carbohydrate) ಭರಿತ ಆಹಾರಗಳ ಕಡುಬಯಕೆಗಳನ್ನು ಹೆಚ್ಚಿಸಬಹುದು. ಇದು ತೂಕ ಹೆಚ್ಚಾಗುವಂತೆ ಮಾಡುತ್ತದೆ.

5. ವ್ಯಾಯಾಮದ ಕೊರತೆ (Exercise): ಬೇಸಿಗೆ(Summer) ಹಾಗೂ ಮಳೆಗಾಲದಲ್ಲಿ ನಾವು ವ್ಯಾಯಾಮ ಮಾಡಿದಷ್ಟು ಚಳಿಗಾಲದಲ್ಲಿ ಮಾಡುವುದಿಲ್ಲ. ಚಳಿಗಾಲದಲ್ಲಿ ಒಂದು ಸ್ವೆಟರ್(Sweater) ಇಲ್ಲದೆ ಇರೋದಕ್ಕೆ ಆಗುವುದಿಲ್ಲ. ದೇಹವನ್ನು ಸಾಮಾನ್ಯವಾಗಿ ಬೆಚ್ಚಗಿಡಲು ಪ್ರಯತ್ನಿಸುತ್ತೇವೆ. ಹೊರಗೆ ವ್ಯಾಯಾಮಕ್ಕೆ ಹೋಗುವ ಬದಲಾಗಿ ಫುಲ್ ಕವರ್ ಆಗಿ ಮನೆಯೊಳಗೆ ವ್ಯಾಯಾಮ ಮಾಡುತ್ತೇವೆ. ವ್ಯಾಯಾಮ ಮಾಡುವಾಗ ಧರಿಸುವ ಬಟ್ಟೆಯಿಂದ ಹಿಡಿದು ದೇಹವು ಫ್ರೀ ಆಗಿರಬೇಕು. ಇದೆಲ್ಲಾ ಚಳಿಗಾಲದಲ್ಲಿ ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಬಂದುಬಿಟ್ಟಿದ್ದೇವೆ. ಹಾಗಾಗಿ ಬೆಚ್ಚಗಿನ ಬಟ್ಟೆಯಲ್ಲಿ ನಿಮ್ಮನ್ನು ಓಡಲಾಗುವುದಿಲ್ಲ. ಶೀತ(Cold) ಮತ್ತು ಗಾಳಿಯ ಹೊರಾಂಗಣದಲ್ಲಿ ಕೆಲಸ ಮಾಡಲು ತುಂಬಾ ಅನುಕೂಲಕರವಾಗಿರುವುದಿಲ್ಲ. ಎಲ್ಲಾ ಉತ್ತಮ ಆಹಾರ ಮತ್ತು ಹೆಚ್ಚಿನ ವ್ಯಾಯಾಮವು ನಿಮ್ಮ ತೂಕ ಹೆಚ್ಚಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಚಳೀಲಿ ಮಲಬದ್ಧತೆ ಕಾಡೋದು ಕಾಮನ್, ಬಾಳೆ ಹಣ್ಣು ತಿಂದು ಆರೋಗ್ಯ ನೋಡ್ಕಳ್ಳಿ

ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಗಂಭೀರ ಆರೋಗ್ಯ ಕಾಳಜಿಯೇ?:  ನಿಜವಾಗಿಯೂ ಅಲ್ಲ. ಅದಾಗ್ಯೂ, ಚಳಿಗಾಲದಲ್ಲಿ ತೂಕ ಹೆಚ್ಚಾಗುವುದು ಕಾಲಾನಂತರದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಗಮನಾರ್ಹವಾದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕೆಲವು ಪೌಂಡ್‌ಗಳನ್ನು ಪಡೆಯುವುದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಸ್ಥಿರವಾದ ತೂಕ ಹೆಚ್ಚಾಗುವುದು, ಪ್ರತಿ ವರ್ಷ ಕೆಲವು ಪೌಂಡ್‌ಗಳು ಸಹ ನಿಮ್ಮ ಹೃದಯರಕ್ತನಾಳದ ಕಾಯಿಲೆ (Heart Blood Vessels) ಮತ್ತು Type 2 Diabetes ಅಪಾಯವನ್ನು ಹೆಚ್ಚಿಸಬಹುದು. ಪರಿಣಾಮವಾಗಿ, ವರ್ಷವಿಡೀ ಆರೋಗ್ಯಕರ ಅಥವಾ ಮಧ್ಯಮ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

Follow Us:
Download App:
  • android
  • ios