Asianet Suvarna News Asianet Suvarna News

CPR Procedure: ಮನುಷ್ಯನ ಜೀವ ಉಳಿಸಬಲ್ಲ ಸಿಪಿಆರ್ ಚಿಕಿತ್ಸೆ ಬಗ್ಗೆ ತಿಳಿದಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ. ಮನುಷ್ಯನ ಹೃದಯ ಬಡಿತ ನಿಲ್ಲುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗ್ತಾರೆ. ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಆದ್ರೆ ತಕ್ಷಣ ಸಿಪಿಆರ್ ಮಾಡಿದ್ರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

Things you should know about CPR
Author
Bangalore, First Published Dec 20, 2021, 10:47 AM IST

ಜೀವ (Life) ಅಮೂಲ್ಯವಾದದ್ದು. ಜೀವ ಉಳಿಸಿದವರನ್ನು ದೇವರಿ (God)ಗೆ ಹೋಲಿಕೆ ಮಾಡಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ವೈದ್ಯರು (Doctor) ಮಾತ್ರವಲ್ಲ ಪೊಲೀಸ್ ಸಿಬ್ಬಂದಿ ಕೂಡ ಜನರ ಪ್ರಾಣ ಉಳಿಸಿರುತ್ತಾರೆ. ಸಿಪಿಆರ್ (CPR )ಮೂಲಕ ಪ್ರಾಣ ಉಳಿತು ಎಂಬ ಮಾತನ್ನು ನಾವು ಕೇಳಿರುತ್ತೇವೆ. ಆದ್ರೆ ಕೆಲವರಿಗೆ ಸಿಪಿಆರ್ ಎಂದರೇನು ಎಂಬ ಬಗ್ಗೆ ಗೊತ್ತಿಲ್ಲ. ಅದು ಹೇಗೆ ಜೀವ ಉಳಿಸಬಲ್ಲದು ಎಂಬುದು ತಿಳಿದಿಲ್ಲ. ಅದ್ರ ಬಗ್ಗೆ ಇಂದು ಹೇಳ್ತೆವೆ.  

ಸಿಪಿಆರ್ ಎಂದರೇನು? (What is CPR?) : ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (Cardiopulmonary Resuscitation )ನನ್ನು ಸಿಪಿಆರ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು (Breathe) ನೆರವಾಗುತ್ತದೆ. ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿ(Brain )ನಲ್ಲಿ ರಕ್ತ (Blood) ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು.  

ಜೀವ ಉಳಿಸುವ ಸಿಪಿಆರ್ ( CPR Saves Lives.) : ಸಾಮಾನ್ಯವಾಗಿ ಆಸ್ಪತ್ರೆ ಹೊರಗೆ ಕಾರ್ಡಿಯೋ ಅರೆಸ್ಟ್ (Cardiac Arrest) ಆಗಿ 10ರಲ್ಲಿ 9 ಮಂದಿ ಸಾಯುತ್ತಾರೆ. ಆದ್ರೆ ಸಿಪಿಆರ್,ಜೀವ ಉಳಿಸಲು ನೆರವಾಗುತ್ತದೆ. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ ಡಬಲ್,ತ್ರಿಬಲ್ ಪಟ್ಟು ಹೆಚ್ಚಿರುತ್ತದೆ. ಮಹಿಳೆಯರು ಸೇರಿದಂತೆ ಅನೇಕರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಈ ಚಿಕಿತ್ಸೆ ಸಿಗುವುದಿಲ್ಲ. ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್  ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಿಪಿಆರ್ ತರಬೇತಿ ನೀಡಲಾಗುತ್ತದೆ. 

ಪ್ರತಿ ವರ್ಷ ಸುಮಾರು 350,000 ಕಾರ್ಡಿಯೋ ಅರೆಸ್ಟ್ ಆಸ್ಪತ್ರೆ (Hospital)ಗಳ ಹೊರಗೆ ಸಂಭವಿಸುತ್ತವೆ. 10 ರಲ್ಲಿ 7 ಪ್ರಕರಣಗಳು ಮನೆಯಲ್ಲಿ ನಡೆಯತ್ತವೆ.  ದುರದೃಷ್ಟವಶಾತ್, ಮನೆಯಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಕುಟುಂಬಸ್ಥರು ಆಂಬ್ಯುಲೆನ್ಸ್ (Ambulance) ಗೆ ಕಾಯ್ತಾರೆಯೇ ಹೊರತು ಸಿಪಿಆರ್ ಬಗ್ಗೆ ಗಮನ ನೀಡುವುದಿಲ್ಲ.  ಕಾರ್ಡಿಯೋ ಅರೆಸ್ಟ್ ಆದಾಗ ನೀಡುವ ಸಿಪಿಆರ್ ಚಿಕಿತ್ಸೆಗೆ ಸರ್ಟಿಫಿಕೆಟ್ ಆಗ್ಲಿ ವಿಶೇಷ ತರಬೇತಿ ಅಗತ್ಯವಿಲ್ಲ. ಆದರೆ ಅದ್ರ ಬಗ್ಗೆ ಶಿಕ್ಷಣ  ಅಗತ್ಯವಿದೆ. ಅಕ್ಕಪಕ್ಕದವರಿಗೆ ಕಾರ್ಡಿಯೋ ಅರೆಸ್ಟ್ ಆದಾಗ ಭಯಪಡಬಾರದು. ಧೈರ್ಯ ತೆಗೆದುಕೊಂಡು ಸಿಪಿಆರ್ ಹಂತವನ್ನು ಪಾಲನೆ ಮಾಡಬೇಕಾಗುತ್ತದೆ. ಸಿಪಿಆರ್ ನಲ್ಲಿ ಎರಡು ವಿಧಾನಗಳಿವೆ. ಇವೆರಡೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. 

Weight Loss Tips 2022: ಹೊಸ ವರ್ಷ ತೂಕ ಇಳಿಸಿಕೊಳ್ಳುವ ಭರದಲ್ಲಿ ಈ ತಪ್ಪನ್ನು ಮಾಡದಿರಿ

1.ಒಬ್ಬ ವ್ಯಕ್ತಿಯಿಂದ ರೋಗಿಗೆ ನೀಡುವ ಚಿಕಿತ್ಸೆ.

2. ವೈದ್ಯಕೀಯ ಸಲಕರಣೆಗಳ ಸಹಾಯದಿಂದ ಚಿಕಿತ್ಸೆ.

ಇದನ್ನು ವಯಸ್ಸಿಗೆ ತಕ್ಕಂತೆ ನೀಡಬೇಕು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಿಪಿಆರ್ ನೀಡುವಾಗ ವಯಸ್ಸನ್ನು ಗಮನಿಸಬೇಕಾಗುತ್ತದೆ. 

ಸಿಪಿಆರ್ ನೀಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಯಾವುವು? : 

ಸಿಪಿಆರ್ ನೀಡುವಾಗ ಮೊಣಕೈಗಳನ್ನು ನೇರವಾಗಿ ಇರಿಸಿ ಮತ್ತು ಎರಡೂ ಕೈಗಳನ್ನು ನೇರವಾಗಿ ಇರಿಸಿ.
ಸಿಪಿಆರ್ ನೀಡುವಾಗ ರೋಗಿಯನ್ನು ನೆಲದ ಮೇಲೆ ಬೆನ್ನಿನ ಮೇಲೆ ಮಲಗಿಸಿ.
ರೋಗಿಯ ದೇಹ (Body )ನೇರವಾಗಿರಲಿ. ತೋಳುಗಳು ಅಥವಾ ಕಾಲುಗಳು ಬಾಗದಂತೆ ನೋಡಿಕೊಳ್ಳಿ. 

Cancer Treatment : ಪ್ರಾರಂಭಿಕ ಎಚ್ಚರದಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ

ಯಾವುದೇ ಪ್ರಯೋಗಕ್ಕೆ ಇಳಿಯುವುದು ಒಳ್ಳೆಯದಲ್ಲ. ಮೊದಲೇ ಹೇಳಿದಂತೆ ಸಿಪಿಆರ್ ಬಗ್ಗೆ ಜ್ಞಾನ ಅಗತ್ಯ. ತಪ್ಪಾಗಿ ಮಾಡಿದ ಚಿಕಿತ್ಸೆ ರೋಗಿ ಜೀವ ತೆಗೆಯಬಹುದು. ಭಯ(Fear)ಪಡದೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ.  

Follow Us:
Download App:
  • android
  • ios