Cancer Treatment : ಪ್ರಾರಂಭಿಕ ಎಚ್ಚರದಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ

  • ಪ್ರಾರಂಭಿಕ ಎಚ್ಚರದಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ
  •  ಮಂಗಳೂರು ಎನಪೋಯ ಮೆಡಿಕಲ್‌ ಕಾಲೇಜಿನ ಡಾ. ಅಶ್ವಿನಿ ಅಭಿಮತ
     
Primary Awareness Cure Cancer  Says Dr Ashwini snr

ಹುಣಸೂರು(ಡಿ.19): ಕ್ಯಾನ್ಸರ್‌ನಂತಹ (Cancer ) ಮಾರಕ ರೋಗವನ್ನು ಪ್ರಾರಂಭಿಕ ಹಂತದಲ್ಲೇ ಎಚ್ಚರಿಕೆ ವಹಿಸಿದರೆ ಸಂಪೂರ್ಣವಾಗಿ ಗುಣಪಡಿಸಬಹುದೆಂದು ಮಂಗಳೂರು (Mangaluru) ಎನಪೋಯ ಮೆಡಿಕಲ್‌ ಕಾಲೇಜಿನ (Medical College) ಡಾ. ಅಶ್ವಿನಿ ಹೇಳಿದರು. ಹನಗೋಡು ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ಯಾನ್ಸರ್‌ (Cancer) ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್‌ ಎಂಬುದು ನಮ್ಮ ಜೀವ ಕೋಶದಲ್ಲಿ ಪ್ರಾರಂಭವಾಗುವ ರೋಗಗಳ ಒಂದು ಗುಂಪು. ಈ ಕಾಯಿಲೆಯು ಸಂಪೂರ್ಣವಾಗಿ ವಾಸಿಯಾಗಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಕ್ಯಾನ್ಸರ್‌ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ, ಮನುಷ್ಯನ ಶರೀರಕ್ಕೆ ಅಂಟಿಕೊಳ್ಳುವ ರೋಗವಲ್ಲ ಎಂದು ಅವರು ತಿಳಿಸಿದರು.

ಕ್ಯಾನ್ಸರ್‌  ಉಂಟು ಮಾಡುವ ಕಾರಕಗಳಾದ ವೈರಸ್‌ಗಳು (Virus) ನಾವುಗಳು ಉಪಯೋಗಿಸುವ ತಂಬಾಕು, ಬೀಡಿ  ಸಿಗರೇಟ್‌, ಗುಟ್ಕಾ, ಮದ್ಯ ಪಾನದಂತಹ (Liquor) ರಾಸಾಯನಿಕಗಳು ನಮ್ಮ ಶರೀರದಲ್ಲಿ ಸೇರಿ ಯಾವುದಾದರೂ ಅಂಗದ ಜೀವಕೋಶಗಳು ಅಥವಾ ಕಣಗಳು ಮಿತಿಮೀರಿ ಬೆಳೆದರೆ ಇದು ಅನಗತ್ಯ ಗಡ್ಡೆಯಾಗಿ ಬೆಳೆದು ಕ್ಯಾನ್ಸರ್‌ ಬೆಳವಣಿಗೆಯನ್ನು ಹೆಚ್ಚಿಸಿ ಮಾರಕ ರೋಗವಾಗುತ್ತದೆ ಎಂದು ತಿಳಿಸಿ ಸ್ತನ, ಬಾಯಿ ಹಾಗೂ ಗರ್ಭಕೋಶ ಕ್ಯಾನ್ಸರ್‌ ಬಗ್ಗೆ ಹಾಗೂ ಕ್ಯಾನ್ಸರ್‌ನ್ನು ಜಯಿಸಿ ಜೀವಿಸುತ್ತಿರುವ ಯುವರಾಜ್‌ ಸಿಂಗ್‌ (Yuvaraj Singh), ನಟಿ ಮೋನಿಷಾ ಕೊಯಿರಾಲಾ ಅವರ ಭಾವಚಿತ್ರ ಹಾಗೂ ಅವರ ಹೇಳಿಕೆಗಳನ್ನು ಪ್ರೊಜೆಕ್ಟರ್‌  ಮೂಲಕ ಪ್ರದರ್ಶಿಸಿ ರೋಗದಿಂದ ಹೇಗೆ ಮುಕ್ತರಾಗಬಹುದೆಂದು ಜಾಗೃತಿಯ ಅರಿವು ಮೂಡಿಸಿ ಯುವ ಜನತೆ ಎಚ್ಚೆತ್ತುಕೊಂಡು ಧೂಮ ಹಾಗೂ ಮಧ್ಯಪಾನದಂತಹ ದುಶ್ಚಟಗಳಿಂದ ದೂರವಿದ್ದು, ವ್ಯಸನಿಗಳಿಗೂ ಅರಿವು ಮೂಡಿಸುವುರೊಂದಿಗೆ ಕ್ಯಾನ್ಸರ್‌ ರೋಗ ಲಕ್ಷಣಗಳು ಕಂಡುಬಂದರೆ ಆರಂಭದಲ್ಲಿಯೇ ವೈದ್ಯರನ್ನು ಭೇಟಿಯಾಗಲು ಪ್ರೇರೇಪಿಸಬೇಕೆಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜು, ಎನ್‌ಎಸ್‌ಎಸ್‌ ಸಂಚಾಲಕ ಪ್ರೊ. ಪ್ರಕಾಶ್‌, ಡಾ. ಬಾಲರಾಜ್‌, ಪ್ರೊ. ದಿನೇಶ್‌ ಇದ್ದರು.

ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ :  ಯುವತಿಯರಲ್ಲಿಯೂ ಸ್ತನ ಕ್ಯಾನ್ಸರ್‌ (Breast Cancer) ಕಾಣಿಸಿಕೊಳ್ಳುತ್ತಿದ್ದು,ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಎಚ್‌ಸಿಜಿ ಭಾರತ್‌ ಆಸ್ಪತ್ರೆ (HCG Bharath Hospital) ಮತ್ತು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕೊಲಾಜಿಯ (Oncology) ಹಿರಿಯ ವಿಕಿರಣ ಆಂಕೋಲಾಜಿಸ್ಟ್‌ (Oncologist) ಡಾ.ವೈ.ಎಸ್‌. ಮಾಧವಿ ಹೇಳಿದರು.

ಸ್ತನ ಕ್ಯಾನ್ಸರ್‌ ಪೀಡಿತ ದೇಶಗಳ ಪೈಕಿ ಭಾರತ (India) ಮೊದಲ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರ್‌ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ (ladies) ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ 20 ರಿಂದ 25 ವರ್ಷ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮುಂದಿನ ದಶಕಗಳಲ್ಲಿ ಸ್ತನ ಕ್ಯಾನ್ಸರ್‌ ರೋಗಿಗಳ (Patients) ಸಂಖ್ಯೆ ಹೆಚ್ಚಾಗುತ್ತದೆ ಎಂದು ಮೈಸೂರಿನಲ್ಲಿ ಮಾತನಾಡಿದ ಆಂಕೋಲಾಜಿಸ್ಟ್‌ (Oncologist) ಡಾ.ವೈ.ಎಸ್‌. ಮಾಧವಿ  ತಿಳಿಸಿದರು.

ಹದಿಹರೆಯ (Teenage) ಮತ್ತು ಪ್ರೌಢಾವಸ್ಥೆಯಲ್ಲೇ ಉತ್ತಮ ಆರೋಗ್ಯಕರ (Good Health) ಆಹಾರ ಪದ್ಧತಿ (Food System) ಅನುಸರಿಸಬೇಕು. ಬಾಣಂತಿಯಾಗಿದ್ದಾಗ (MOther) ಮಕ್ಕಳಿಗೆ ಚೆನ್ನಾಗಿ ಹಾಲುಣಿಸಬೇಕು (Milk Feeding). ನಾವು ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ ಮತ್ತು ಹಣ್ಣಿನ (Vegetable And Friuts) ಪಾಲು ಹೆಚ್ಚಿರಬೇಕು. ಮದ್ಯಪಾನ (Drinking ), ಧೂಮಪಾನದಿಂದ (Smoking) ದೂರ ಇರಬೇಕು. ದೈನಂದಿನ ವ್ಯಾಯಾಮದ (Exercise) ಜೊತೆಗೆ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಆಸ್ಪತ್ರೆ ವೈದ್ಯಕೀಯ ವಿಭಾಗದ ಅಧೀಕ್ಷ ಡಾ.ಎಂ.ಎಸ್‌. ವಿಶ್ವೇಶ್ವರ (MS Vishwsharaiah) ಮಾತನಾಡಿ, ಸ್ತನ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆ (Hospital) ವತಿಯಿಂದ ನಗರದಾದ್ಯಂತ ಪ್ರಮುಖ ಉದ್ಯಾನಗಳಲ್ಲಿ ಶಿಬಿರ, ಉಚಿತ ಸ್ಕ್ರೀನಿಂಗ್‌ ಪರೀಕ್ಷೆ ಸೇರಿದಂತೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಮ್ಯಾಮೊಗ್ರಫಿ (Mamography) ಪರೀಕ್ಷೆಯಲ್ಲಿಯೂ ರಿಯಾಯಿತಿ ಒದಗಿಸಲಾಗಿದೆ. ಅಲ್ಲದೆ ಒಡಿಪಿ (ODP) ಮತ್ತು ಕುಟುಂಬ ಯೋಜನಾ ಕಚೇರಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಸ್ತನ ಕ್ಯಾನ್ಸರ್‌ ಕುರಿತು ಉಪನ್ಯಾಸ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios