Asianet Suvarna News Asianet Suvarna News

ಟಾಯ್ಲೆಟ್‌ನಲ್ಲಿರೋದಕ್ಕಿಂತ ಹೆಚ್ಚು ಬ್ಯಾಕ್ಟಿರೀಯಾ ಬೆಡ್‌ಶೀಟ್‌ನಲ್ಲಿರುತ್ತಂತೆ !

ನಾವೆಲ್ಲರೂ ಸಾಮಾನ್ಯವಾಗಿ ಟಾಯ್ಲೆಟ್‌ ಸೀಟಿನಲ್ಲಿ ಹೆಚ್ಚು ಬ್ಯಾಕ್ಟಿರೀಯಾ ಇರುತ್ತೆ ಎಂದು ಅಂದುಕೊಂಡಿದ್ದೇವೆ. ಆದ್ರೆ ನೀವು ವಾರಗಟ್ಟಲೆ ತೊಳೆಯದಿದ್ದರೆ ಟಾಯ್ಲೆಟ್ ಸೀಟ್‌ಗಿಂತ ಹೆಚ್ಚು ಬ್ಯಾಕ್ಟೀರಿಯಾ ಬೆಡ್‌ಶೀಟ್‌ನಲ್ಲಿ ಇರುತ್ತಂತೆ. ಮಾತ್ರವಲ್ಲ ಇದರಿಂದ ಮಾರಕ ಕಾಯಿಲೆಯೂ ಬರಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

There Are More Bacteria On The Bedsheet Than On The Toilet Seat Vin
Author
First Published Nov 25, 2022, 11:46 AM IST

ದಿನನಿತ್ಯದ ಜೀವನದಲ್ಲಿ ಸ್ವಚ್ಛತೆ (Clean) ತುಂಬಾ ಮುಖ್ಯ. ಇಲ್ಲದಿದ್ದರೆ ಇದು ಹಲವು ಆರೋಗ್ಯ ಸಮಸ್ಯೆಗೆ (Health problem) ಕಾರಣವಾಗಬಹುದು. ಕ್ಲೀನ್ ಬೆಡ್‌ಶೀಟ್‌ಗಳು ವೈಯಕ್ತಿಕ ನೈರ್ಮಲ್ಯದ ಒಂದು ಭಾಗವಾಗಿದೆ. ಕೆಲವು ದಿನಗಳಿಗೊಮ್ಮೆ ಬೆಡ್‌ಶೀಟ್‌ಗಳನ್ನು ಬದಲಾಯಿಸಬೇಕು ಅಥವಾ ತೊಳೆಯಬೇಕು ಎಂದು ತಜ್ಞರು ಸೂಚಿಸುತ್ತಾರೆ. ಕೊಳಕು ಬೆಡ್‌ಶೀಟ್‌ಗಳು ನಿಮ್ಮ ಟಾಯ್ಲೆಟ್ ಸೀಟಿಗಿಂತ ಹೆಚ್ಚಿನ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಇದು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ (Disease) ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ.

ಆರೋಗ್ಯವಾಗಿರಲು, ಆಹಾರ (Food) ಮತ್ತು ಪಾನೀಯದ (Drinks) ಜೊತೆಗೆ ನಿಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಇದರಲ್ಲಿ ನಿಮ್ಮ ಮಲಗುವ ಕೋಣೆ ಮತ್ತು ಸ್ನಾನಗೃಹದ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಹೆಚ್ಚಿನವರು ಈ ಬಗ್ಗೆ ಗಮನ ಹರಿಸುವುದೇ ಇಲ್ಲ. ಬೆಡ್‌ಶೀಟ್ ಕೊಳಕು ಕಾಣುವವರೆಗೆ ಅದನ್ನು ತೊಳೆಯಲು ಜನರು ಇಷ್ಟಪಡುವುದಿಲ್ಲ. ನಿಮ್ಮ ಜೀವನದ ಮೂರನೇ ಒಂದು ಭಾಗವನ್ನು ನೀವು ಹಾಸಿಗೆಯಲ್ಲಿ ಕಳೆಯುತ್ತೀರಿ. ಈ ಸಮಯದಲ್ಲಿ, ಲಾಲಾರಸ, ಬೆವರು, ತಲೆಹೊಟ್ಟು ಮೊದಲಾದವು ಬೆಡ್‌ಶೀಟ್‌ಗ ವರ್ಗಾವಣೆಯಾಗುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಬೆಡ್‌ಶೀಟ್‌ನ್ನು ವಾರಕ್ಕೊಮ್ಮೆ ಬದಲಾಯಿಸಬೇಕು ಅಥವಾ ಬಿಸಿ ನೀರಿನಲ್ಲಿ ತೊಳೆಯಬೇಕು.

ಬೆಡ್‌ಶೀಟ್‌ ಬದಲಾಯಿಸ್ತೀರಾ ನಿಜ, ತಲೆದಿಂಬು ಚೇಂಜ್‌ ಮಾಡಿದ್ದೀರಾ ?

ಬೆಡ್‌ಶೀಟ್‌ ಬೆವರು, ಲಾಲಾರಸ ಮತ್ತು ಇತರ ದೇಹದ ದ್ರವಗಳು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸ್ನೇಹಿ ವಾತಾವರಣವನ್ನು ಒದಗಿಸುತ್ತವೆ. ಮಣ್ಣಾದ ಬೆಡ್‌ಶೀಟ್‌ಗಳ ಮೇಲೆ ಪ್ರಯೋಗಾಲಯ ಪರೀಕ್ಷೆಗಳು ಒಂದು ವಾರದವರೆಗೆ ತೊಳೆಯದ ದಿಂಬಿನ ಕವರ್ ಸ್ವ್ಯಾಬ್‌ಗಳು ಟಾಯ್ಲೆಟ್ ಸೀಟ್‌ಗಳಿಂದ ತೆಗೆದ ಮಾದರಿಗಳಿಗಿಂತ 17,000 ಪಟ್ಟು ಹೆಚ್ಚು ಬ್ಯಾಕ್ಟೀರಿಯಾದ ವಾಸಸ್ಥಳವನ್ನು ಒಳಗೊಂಡಿವೆ ಎಂದು ಕಂಡುಹಿಡಿದಿದೆ. ಇದರಿಂದ ಯಾವೆಲ್ಲಾ ಕಾಯಿಲೆ ಬರುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ನ್ಯುಮೋನಿಯಾ: ಅಧ್ಯಯನದ ಪ್ರಕಾರ, ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯಾವು ಕೊಳಕು ಬೆಡ್‌ಶೀಟ್‌ಗಳಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ನಮ್ಮದೇ ಸತ್ತ ಚರ್ಮದ ಕೋಶಗಳಿಂದ ಮಾಡಲ್ಪಟ್ಟಿದೆ. ಈ ಬ್ಯಾಕ್ಟೀರಿಯಾಗಳು ಹಾನಿಯನ್ನುಂಟು ಮಾಡದಿದ್ದರೂ, ಅವು ದೇಹ (Body)ದಲ್ಲಿನ ಯಾವುದೇ ಗಾಯ ಅಥವಾ ರಂಧ್ರದ ಮೂಲಕ ಮತ್ತೆ ತಲುಪಿದರೆ, ಅವು ನ್ಯುಮೋನಿಯಾದಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ನ್ಯುಮೋನಿಯಾದಲ್ಲಿ, ಶ್ವಾಸಕೋಶದ (Lungs) ವಾಯುಮಾರ್ಗಗಳು ಉರಿಯುತ್ತವೆ ಮತ್ತು ಕೀವು ತುಂಬುತ್ತದೆ. ಇದರಿಂದಾಗಿ ರೋಗಿಗೆ ಲೋಳೆಯೊಂದಿಗೆ ಕೆಮ್ಮು ಇರುತ್ತದೆ. ಈ ರೋಗವನ್ನು ಗುಣಪಡಿಸಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ.

ಅಪೆಂಡಿಕ್ಸ್: ಕೊಳಕು ಬೆಡ್ ಶೀಟ್‌ಗಳು  ಅಪೆಂಡಿಕ್ಸ್ ಅಪಾಯವನ್ನು ಹೆಚ್ಚಿಸುತ್ತವೆ. ಇಲ್ಲಿ ಬೆಳೆಯುವ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಕರುಳುವಾಳಕ್ಕೆ ಕಾರಣವಾಗುತ್ತವೆ. ನಿಮ್ಮ ಹೊಟ್ಟೆಯ ಕೆಳಗಿನ ಬಲಭಾಗದಲ್ಲಿರುವ ಕೊಲೊನ್‌ನಿಂದ ವಿಸ್ತರಿಸುತ್ತದೆ.

ರಕ್ತ ಹೀರುವ ಬೆಡ್ ಬಗ್ಸ್ ನಿಯಂತ್ರಿಸುವುದು ಹೇಗೆ?

ಗೊನೊರಿಯಾ: ಕೊಳಕು ಬೆಡ್‌ಶೀಟ್‌ಗಳ ಮೂಲಕ ಗೊನೊರಿಯಾ ಹರಡುತ್ತದೆ. ಗೊನೊರಿಯಾವು ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು. ಇದು ಪುರುಷರು (Men) ಮತ್ತು ಮಹಿಳೆಯರಿಬ್ಬರಿಗೂ ಸೋಂಕು ತರುತ್ತದೆ. ಗೊನೊರಿಯಾ ಹೆಚ್ಚಾಗಿ ಮೂತ್ರನಾಳ, ಗುದನಾಳ ಅಥವಾ ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಈ ಬ್ಯಾಕ್ಟೀರಿಯಾವು ಗರ್ಭಕಂಠವನ್ನು ಸಹ ಸೋಂಕು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೈಹಿಕ ಸಂಬಂಧವನ್ನು ಹೊಂದಿದ ತಕ್ಷಣ ಬೆಡ್‌ಶೀಟ್‌ನ್ನು ತೊಳೆಯಲು ತಜ್ಞರು ಶಿಫಾರಸು ಮಾಡುತ್ತಾರೆ.

ಚರ್ಮದ ಅಲರ್ಜಿ: ನಮ್ಮ ದೇಹವು ಪ್ರತಿ ರಾತ್ರಿ ನಿದ್ರೆಯ (Sleep) ಸಮಯದಲ್ಲಿ ದ್ರವಗಳು ಮತ್ತು ತೈಲಗಳನ್ನು ಬೆಡ್‌ಶೀಟ್‌ಗೆ ವರ್ಗಾಯಿಸುತ್ತದೆ. ಇದು ಧೂಳಿನ ಹುಳಗಳನ್ನು ಆಕರ್ಷಿಸುತ್ತದೆ. ಇದರಲ್ಲಿ ಹುಟ್ಟಿಕೊಳ್ಳುವ ಬ್ಯಾಕ್ಟಿರೀಯಾಗಳು ಅಲರ್ಜಿಗಳು, ಅಸ್ತಮಾ, ರಿನಿಟಿಸ್ ಮತ್ತು ಎಸ್ಜಿಮಾದ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಕೆಲವೊಮ್ಮೆ ಇವು ಮೂತ್ರನಾಳದ ಸೋಂಕನ್ನು ಸಹ ಉಂಟು ಮಾಡುತ್ತವೆ. ಹೀಗಾಗಿ ನಿಯಮಿತವಾಗಿ ಟಾಯ್ಲೆಟ್ ಕ್ಲೀನ್ ಮಾಡುವಂತೆಯೇ ಬೆಡ್‌ಶೀಟ್‌ಗಳನ್ನು ಕ್ಲೀನ್ ಮಾಡುವತ್ತ ಗಮನವಿರಲಿ.

Follow Us:
Download App:
  • android
  • ios