MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ರಕ್ತ ಹೀರುವ ಬೆಡ್ ಬಗ್ಸ್ ನಿಯಂತ್ರಿಸುವುದು ಹೇಗೆ?

ರಕ್ತ ಹೀರುವ ಬೆಡ್ ಬಗ್ಸ್ ನಿಯಂತ್ರಿಸುವುದು ಹೇಗೆ?

ತಿಗಣೆ ಕಾಟ ಹೆಚ್ಚು ಜನರನ್ನು ಕಾಡುವ ಒಂದು ಸಮಸ್ಯೆ. ಇದು ಅಂತಿಂತ ಸಮಸ್ಯೆ ಅಲ್ಲ, ತುಂಬಾ ಕಾಡುವ ಸಮಸ್ಯೆ. ತಿಗಣೆ ಮನುಷ್ಯರ ದೇಹದಿಂದ ರಕ್ತ ಹೀರುತ್ತವೆ, ಆದರೆ ಮಾನವರಿಗೆ ಯಾವುದೇ ರೋಗಗಳನ್ನು ಹರಡುತ್ತವೆ ಎಂದು ತಿಳಿದಿಲ್ಲ. ಕೆಲವರಿಗೆ ತಿಗಣೆ ಕಡಿತದಿಂದ ಅಲರ್ಜಿಯಾಗಬಹುದು. ಬೆಡ್ ಬಗ್ ಸೋಂಕನ್ನು ತೊಡೆದುಹಾಕುವುದು ಸುಲಭವಲ್ಲ. ನಿದ್ರೆಯನ್ನು ಕಸಿದುಕೊಂಡು, ಮನಸ್ಸಿಗೆ ಕಿರಿ ಕಿರಿಯನ್ನುಂಟು ಮಾಡು ಈ ತಿಗಣೆ ಆತ್ಮಹತ್ಯೆಗೂ ಎಡೆ ಮಾಡಿಕೊಟ್ಟಿದ್ದಿದೆ. ಆದರೆ ಸಮಸ್ಯೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳಿವೆ. ಬೆಡ್ ಬಗ್ ಮನೆಗೆ ಬಾರದಂತೆ ತಡೆಯಲು ಏನು ಮಾಡಬಹುದು ನೋಡೋಣ... 

2 Min read
Suvarna News | Asianet News
Published : Sep 13 2021, 06:33 PM IST
Share this Photo Gallery
  • FB
  • TW
  • Linkdin
  • Whatsapp
19

ಬೆಡ್ ಬಗ್ ಎಂದರೇನು?
ಬೆಡ್ ಬಗ್ ಗಳು ಸಣ್ಣ, ಚಪ್ಪಟೆ ರೆಕ್ಕೆ ರಹಿತ ಕೀಟಗಳಿವು. ಅವು ಕೆಂಪು-ಕಂದು ಬಣ್ಣದಲ್ಲಿರುತ್ತವೆ ಮತ್ತು ಸುಮಾರು ಕಾಲು ಇಂಚು ಉದ್ದ, ಸೇಬಿನ ಬೀಜದಂತೆ ಕಾಣುತ್ತದೆ. 
ಅವು ಹಗಲಿನಲ್ಲಿ ಹಾಸಿಗೆಗಳು (ಹಾಸಿಗೆ ಸೀಮ್‌ಗಳು, ಬಾಕ್ಸ್ ಸ್ಪ್ರಿಂಗ್‌ಗಳು, ಬೆಡ್ ಫ್ರೇಮ್‌ಗಳು, ಹೆಡ್ ಬೋರ್ಡ್‌ಗಳು) ಮತ್ತು ಗೋಡೆಗಳು, ಮಹಡಿಗಳು ಮತ್ತು ಪೀಠೋಪಕರಣಗಳ ಬಿರುಕುಗಳಲ್ಲಿ ಅಡಗಿಕೊಳ್ಳುತ್ತದೆ. ಜೊತೆಗೆ ರಾತ್ರಿಯಲ್ಲಿ ಹೊರಗೆ ಬಂದು ಸಿಕ್ಕ ಮನುಷ್ಯನಿಗೆ ಎಷ್ಟು ಕಾಟ ಕೊಡಲು ಸಾಧ್ಯವೋ ಅಷ್ಟು ಪ್ರಾಣ ಹಿಂಡುತ್ತೆ.
ಅವು ಹಾರುವುದಿಲ್ಲ ಅಥವಾ ಜಿಗಿಯುವುದಿಲ್ಲ, ಆದರೆ ಅವು ವೇಗವಾಗಿ ತೆವಳಬಹುದು.

29

ಬೆಡ್ ಬಗ್ ಮನೆಯನ್ನು ಹೇಗೆ ಪ್ರವೇಶಿಸುತ್ತವೆ?
ಅವು ಇತರ ಸೋಂಕಿತ ಪ್ರದೇಶಗಳಿಂದ ಅಥವಾ ಬಳಸಿದ ಪೀಠೋಪಕರಣಗಳಿಂದ ಬರಬಹುದು. ಲಗೇಜ್, ಪರ್ಸ್‌ಗಳು, ಬ್ಯಾಕ್ ಪ್ಯಾಕ್‌ಗಳು ಅಥವಾ ಮೃದುವಾದ ಅಥವಾ ಉಪ್ಪರಿಗೆಯ ಮೇಲ್ಮೈಗಳ ಮೇಲೆ ಇರಿಸಲಾದ ಇತರ ವಸ್ತುಗಳಲ್ಲಿ ಬೆಡ್ ಬಗ್ ಬಂದು ಸೇರಿಕೊಳ್ಳುತ್ತದೆ. .
ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಹೋಟೆಲ್ ಗಳಂತಹ ಬಹು-ಘಟಕ ಕಟ್ಟಡಗಳಲ್ಲಿನ ಕೋಣೆಗಳಲ್ಲೂ ಅವು ಸೇರುತ್ತವೆ. 

39

ಬೆಡ್ ಬಗ್ ಕಾಟವನ್ನು ತಪ್ಪಿಸೋದು ಹೇಗೆ? 
ಹೋಟೆಲಿನಲ್ಲಿ ಉಳಿಯುವಾಗ, ನಿಮ್ಮ ಬ್ಯಾಗ್ ಅನ್ನು ಹಾಸಿಗೆ ಅಥವಾ ನೆಲದ ಮೇಲೆ ಇಡುವ ಬದಲು ಸೂಟ್ ಕೇಸ್ ಸ್ಟ್ಯಾಂಡ್ ಮೇಲೆ ಇರಿಸಿ. ಗೋಡೆಗಳು ಅಥವಾ ಪೀಠೋಪಕರಣಗಳಿಂದ rack ಅನ್ನು ದೂರವಿಡಿ. ಮನೆಗೆ ಹಿಂದಿರುಗುವಾಗ, ಪ್ರವಾಸದಿಂದ ತಂದ ಬಟ್ಟೆಗಳನ್ನು ತೊಳೆಯಿರಿ ಮತ್ತು ಅವುಗಳನ್ನು ಬಿಸಿ ಡ್ರೈಯರಿನಲ್ಲಿ ಹಾಕಿ.ಹೊಸ ಮತ್ತು ಬಳಸಿದ ಪೀಠೋಪಕರಣಗಳನ್ನು ಒಳಗೆ ತರುವ ಮೊದಲು ಪರಿಶೀಲಿಸಿ. 

49

ಬೆಡ್ ಬಗ್ ಸಮಸ್ಯೆ ಇದ್ದರೆ  ಹೇಗೆ ತಿಳಿಯುತ್ತದೆ?
ತಿಗಣೆಗಳು ಇದ್ದರೆ ಬೆಡ್‌ನಲ್ಲಿ ಅವುಗಳ ಚರ್ಮ ಉದುರಿರುತ್ತವೆ, ಹಾಸಿಗೆಯಲ್ಲಿ ಅವುಗಳ ಹಿಕ್ಕೆಗಳು ಮತ್ತು ಮಲಗುವ ಕೋಣೆಯಲ್ಲಿ ಇತರೆ ವಸ್ತುಗಳ ಮೇಲೂ ನೋಡಬಹುದು.
ಹಾಳೆಗಳ ಮೇಲೆ ರಕ್ತದ ಕಲೆಗಳೂ ಇರಬಹುದು. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಆದಷ್ಟು ಬೇಗನೆ ಬೆಡ್ ಅಥವಾ ಮನೆಯ ವಸ್ತುಗಳನ್ನು ಕ್ಲೀನ್ ಮಾಡಿ. 

59

ಮನೆಯಲ್ಲಿ ಬೆಡ್ ಬಗ್ ಸಮಸ್ಯೆಯನ್ನು  ಹೇಗೆ ನಿಯಂತ್ರಿಸುವುದು?
ಬೆಡ್ ಬಗ್ ಸಮಸ್ಯೆ ನಿರ್ವಹಣೆಗೆ ಹಲವು ವಿಧಾನಗಳಿವೆ. ಇದರ ಸರಿಯಾದ ನಿರ್ವಹಣೆಗೆ ಸಾಮಾನ್ಯವಾಗಿ 'ಸಮಗ್ರ ಕೀಟ ನಿರ್ವಹಣೆ' (ಐಪಿಎಂ) ವಿಧಾನ ಎಂದು ಕರೆಯಲ್ಪಡುವ ವಿಧಾನದ ಅಗತ್ಯವಿದೆ. ಇದು  ಆರೋಗ್ಯ ಮತ್ತು ಪರಿಸರಕ್ಕೆ ಕಡಿಮೆ ಅಪಾಯವನ್ನು ಉಂಟು ಮಾಡುವ ತಂತ್ರಗಳನ್ನು ಸಂಯೋಜಿಸುತ್ತದೆ. ಈ ತಂತ್ರಗಳನ್ನು ಪ್ರಯತ್ನಿಸಿ:

69

ವಿಶೇಷವಾಗಿ  ಮಲಗುವ ಕೋಣೆಯನ್ನು,  ಸ್ವಚ್ಛಗೊಳಿಸಿ ಮತ್ತು ಬೇಡವಾದುದು ಹೊರ ಹಾಕಿ 
ವ್ಯಾಕ್ಯೂಮ್ ಮೋಲ್ಡಿಂಗ್, ಕಿಟಕಿಗಳು ಮತ್ತು ನೆಲವನ್ನು ಪ್ರತಿದಿನ ಕ್ಲೀನ್ ಮಾಡಿ. ಹಾಸಿಗೆಗಳು, ಪೆಟ್ಟಿಗೆ ಮತ್ತು ಬಳಕೆ ಮಾಡದೆ ಇರುವ ವಸ್ತು, ಪೀಠೋಪಕರಣಗಳನ್ನು, ಬ್ಯಾಗ್ ಮೊದಲಾದ ವಸ್ತುಗಳನ್ನು ಹೊರಗೆ ವಿಲೇವಾರಿ ಮಾಡಿ. ಅದನ್ನು ಮನೆಯಲ್ಲಿ ಇಟ್ಟಷ್ಟು ಹೆಚ್ಚು ಬೆಡ್ ಬಗ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚುತ್ತೆ. 

79

ಹಾಳೆಗಳು, ದಿಂಬಿನ ಕವರುಗಳು, ಬ್ಲಾಂಕೆಟ್ಸ್ ಮತ್ತು ಬೆಡ್ ಕವರ್ಸ್ ತೊಳೆಯುತ್ತಿರಿ ಮತ್ತು ಅವುಗಳನ್ನು ಕನಿಷ್ಠ 30 ನಿಮಿಷಗಳ ಕಾಲ ಬಿಸಿ ಡ್ರೈಯರಿಗೆ ಹಾಕಿ. ಹಾಸಿಗೆ ಮತ್ತು ಬಾಕ್ಸ್ ಸ್ಪ್ರಿಂಗ್ ಕವರ್ಸ್ ಅನ್ನು ಬಳಸುವಾಗ ಹುಷಾರು.  ಬಿರುಕುಗಳನ್ನು ಬೇಗನೆ ಮುಚ್ಚಿ. ಎಲ್ಲೂ ತೆರೆದಿರದಂತೆ ಕಾಪಾಡಿ. 

89

ಕೀಟನಾಶಕಗಳನ್ನು ಸಹ ಪ್ರಯತ್ನಿಸಬೇಕೆ?
ಕೀಟನಾಶಕಗಳು ಪರಿಣಾಮಕಾರಿಯಾಗಿರದಿರಬಹುದು ಮತ್ತು ಅನುಚಿತವಾಗಿ ಬಳಸಿದರೆ ಅಪಾಯಕಾರಿಯಾಗಬಹುದು. ಕೀಟ ನಾಶಕಗಳನ್ನು ಬಳಸಲು ನಿರ್ಧರಿಸಿದರೆ, ಈ ನಿಯಮಗಳನ್ನು ಅನುಸರಿಸಿ:
ಯು.ಎಸ್. ಪರಿಸರ ಸಂರಕ್ಷಣಾ ಏಜೆನ್ಸಿಯಿಂದ ನೋಂದಾಯಿಸಲ್ಪಟ್ಟ ಕೀಟನಾಶಕಗಳನ್ನು ಮಾತ್ರ ಬಳಸಿ (ಲೇಬಲ್‌ನಲ್ಲಿ ಯು.ಎಸ್. ಇಪಿಎ ನೋಂದಣಿ ಸಂಖ್ಯೆ ನೋಡಿ) ಮತ್ತು ಬೆಡ್ ಬಗ್‌ಗಳನ್ನು ನಿಯಂತ್ರಿಸಲು ಆ ಔಷಧಿಗಳು ಬರುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. 
ಕೀಟನಾಶಕಗಳನ್ನು ನೇರವಾಗಿ ದೇಹಕ್ಕೆ ಅನ್ವಯಿಸಬೇಡಿ (ಮಾನವ ದೇಹದ ಮೇಲೆ ಬಳಸಬಹುದಾದ ಬೆಡ್ ಬಗ್ ಗಳನ್ನು ನಿಯಂತ್ರಿಸಲು ಇಲ್ಲಿವರೆಗೆ ಯಾವುದೇ ನಿವಾರಕಗಳನ್ನು ಕಂಡು  ಹಿಡಿದಿಲ್ಲ).

99

ಹೊರಾಂಗಣ ಕೀಟನಾಶಕಗಳನ್ನು ಒಳಾಂಗಣದಲ್ಲಿ ಬಳಸಬೇಡಿ.
ಕೀಟ ನಿಯಂತ್ರಣ ಕಂಪನಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದರೆ, ಅವರಿಗೆ ಬೆಡ್  ಬಗ್ ನಿಭಾಯಿಸಿದ ಅನುಭವವಿದೆ ಎಂದು ಖಚಿತಪಡಿಸಿಕೊಳ್ಳಿ.
ನೋಂದಾಯಿತ ಮತ್ತು ಪರವಾನಗಿ ಪಡೆದ ಅಪ್ಲಿಕೇಟರ್ಸ್ ನೇಮಿಸಿಕೊಳ್ಳುವ ಕಂಪನಿಯನ್ನು ಬಳಸಿ. ಪರಿಸರ ಸಂರಕ್ಷಣಾ ಇಲಾಖೆಯು ನೋಂದಾಯಿತ ಕಂಪನಿಗಳ ಪಟ್ಟಿಯನ್ನು ಹೊಂದಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved