ಮಗುವನ್ನು ಮುದ್ದಾಡದವರು ಬಹಳ ಕಡಿಮೆ. ಆದರೆ ನೀವು ಮಗುವಿನ ಈ ಭಾಗಕ್ಕೆ ನೀಡುವ ಒಂದು ಮುತ್ತು ಮಗುವನ್ನು ಶಾಶ್ವತವಾಗಿ ಅಂಗವೈಖಲ್ಯಕ್ಕೆ ತಳ್ಳಬಹುದು ಎಂಬ ವಿಚಾರ ನಿಮಗೆ ಗೊತ್ತಾ? ಈ  ಬಗ್ಗೆ ಇಲ್ಲಿದೆ ಮಾಹಿತಿ.

ಮಗುವನ್ನು ಮುದ್ದಾಡದವರಿಲ್ಲ, ಮಗುವಿನ ಇರುವಿಕೆ ಮನೆಯಲ್ಲಿ ಎಂಥಹಾ ಆನಂದವನ್ನು ನೀಡುತ್ತದೆ ಎಂಬುದನ್ನು ನಮ್ಮ ಹಿರಿಯರು ತಮ್ಮ ಜಾನಪದದಲ್ಲಿ ಹೀಗೆ ಬಣ್ಣಿಸಿದರೆ, ಕೂಸು ಇದ್ದ ಮನೆಗೆ ಬೀಸಣಿಕೆ ಯಾಕೆ ಕೂಸು ಕಂದಯ್ಯ ಒಳಗೆ ಹೊರಗೆ ಆಡಿದರೆ ಬೀಸಣಿಕೆ ಗಾಳಿ ಸುಳಿದಾವೋ, ಆಡಿ ಬಾ ನನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮಾರಿ ತೊಳೆದೇನ ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿ ಹುಬ್ಬು ಬೇವಿನ ಎಸಳಂಗ, ಕಣ್ಣೋಟ ಶಿವನ ಕೈಯಲಗು ಹೊಳೆದಂಗ್ಹ ಹೀಗೆ ಮಗು ಮನೆಯಲ್ಲಿದ್ದರೆ ಎಷ್ಟು ಖುಷಿ ಎಷ್ಟು ಚಂದ ಎಂಬುದನ್ನು ನಮ್ಮ ಜಾನಪದೀಯರು ಬಣ್ಣಿಸಿದ್ದಾರೆ.

ಹಾಲುಗಲ್ಲದ ಪುಟ್ಟ ಮಕ್ಕಳು ಯಾರಿಗೆ ಇಷ್ಟ ಇಲ್ಲ ಹೇಳಿ. ಎಂಥಾ ಕಟುಕರಾದರು ಪುಟ್ಟ ಮಕ್ಕಳನ್ನು ನೋಡಿದಾಗ ಮೊಗದಲ್ಲಿ ತುಸುವಾದರು ನಗು ಬಿರುತ್ತಾರೆ. ಜೊತೆಗೆ ಮಗುವನ್ನು ಮುದ್ದಾಡುವುದಕ್ಕೆ ಬರುತ್ತಾರೆ. ತೊದಲು ಮಾತನಾಡುವ ಅಂಬೆಗಾಲಿಡುವ ಮಗುವನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ ಹಾಗೂ ಮುದ್ದಾಡುತ್ತಾರೆ. ಹೀಗಿರುವಾಗ ನಿಮಗೊಂದು ವಿಚಾರ ಗೊತ್ತಾ? ಮಗುವಿಗೆ ನೀವು ಎಷ್ಟೇ ಮುತ್ತಿಟ್ಟರು, ಮುದ್ದು ಮಾಡಿದರು ಮಗುವಿನ ಈ ಒಂದು ಭಾಗಕ್ಕೆ ಮಾತ್ರ ಮುತ್ತಿಡಬಾರದು ಅದು ಯಾವ ಭಾಗ ಹಾಗೂ ಏಕೆ ಎಂಬುದು ನಿಮಗೆ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೌದು ಮಗುವಿನ ಕಿವಿಗೆ ಮುತ್ತಿಡಬಾರದು ಎಂದು ಹೇಳುತ್ತವೆ ಸಂಶೋಧನೆಗಳು. ಮಗುವಿನ ಕಿವಿಗೆ ಮುತ್ತಿಡುವುದರಿಂದ ಮಗುವಿಗೆ ತೊಂದರೆಯಾಗುತ್ತದೆ. ಹಾಗಾಗಿ ಇದನ್ನು ಮಾಡಲೇಬಾರದು ಎಂದು ಸಂಶೋಧನೆಯೊಂದು ಹೇಳಿದೆ. ಕಿವಿಯ ಸಮೀಪ ಅಥವಾ ಕಿವಿಯ ಮೇಲೆ ಮುತ್ತಿಡುವುದರಿಂದ ಮಗುವಿನ ಕಿವಿಯ ಕಾಲುವೆ ಹಾಗೂ ಕಿವಿತಮಟೆಗೆ ಹಾನಿಯಾಗುವುದಂತೆ. ಪರಿಣಾಮ ಇದು ಕಿವಿ ಕೆಳದಿರುವಂತಹ ಸಮಸ್ಯೆಗೆ ಕಾರಣವಾಗಬಹುದು. ಇದು ವಿಶೇಷವಾಗಿ ಮಗು ಹಾಗೂ ಪುಟ್ಟ ಮಕ್ಕಳ ಕಿವಿ ಕಾಲುವೆ ಸಣ್ಣದಾಗಿರುವುದರಿಂದ ನೀವು ನಿಮ್ಮ ಮಗುವಿನ ಪ್ರೀತಿಯಿಂದ ಕಿವಿಗೆ ನೀಡುವ ಮುತ್ತೊಂದು ಅವರಿಗೆ ಅಂಗವೈಖಲ್ಯವನ್ನು ತಂದೊಡ್ಡಬಹುದು.

ಕಿವಿಗೆ ಮುತ್ತು ನೀಡುವುದರಿಂದ ಕಿವಿ ತಮಟೆಯನ್ನು ಎಳೆಯುವಂತಹ ನಿರ್ವಾತವನ್ನು ಸೃಷ್ಟಿಸಬಹುದು. ಇದು ಮಧ್ಯ ಮತ್ತು ಒಳಗಿನ ಕಿವಿಯ ಸೂಕ್ಷ್ಮ ರಚನೆಗಳಿಗೆ ಹಾನಿಯನ್ನುಂಟುಮಾಡಬಹುದು.

ಒಳಕಿವಿಗೆ ಹಾನಿ:

ಕಿವಿಯ ಮೇಲೆ ಮುತ್ತಿಡುವುದರಿಂದ ಉಂಟಾಗುವ ಬಲವು ಮಗುವಿನ ಒಳಕಿವಿಯಲ್ಲಿರು ದ್ರವದಲ್ಲಿ ಪ್ರಕ್ಷುಬ್ಧತೆ ಉಂಟು ಮಾಡಬಹುದು, ಇದು ಕಿವಿಯ ಶ್ರವಣ ಶಕ್ತಿಗೆ ಕಾರಣವಾದ ಸೂಕ್ಷ್ಮ ಕೂದಲಿನ ಕೋಶಗಳಿಗೆ ಹಾನಿ ಮಾಡುತ್ತದೆ.

ಹಾಲುಗಲ್ಲದ ಮಕ್ಕಳ ಮೇಲೆ ತೀವ್ರ ಪರಿಣಾಮ

ಒಂದು ಮುತ್ತಿನ ಪರಿಣಾಮ ಹಾಲುಗಲ್ಲದ ಕಂದಮ್ಮಗಳು ಹಾಗೂ ಚಿಕ್ಕ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಏಕೆಂದರೆ ಪುಟ್ಟ ಮಕ್ಕಳು ಪುಟ್ಟದಾದ ಕಿವಿ ಕಾಲುವೆಯನ್ನು ಹೊಂದಿದ್ದು ಮುತ್ತಿಡುವುದರಿಂದ ಋಣಾತ್ಮಕ ಪರಿಣಾಮಗಳಿಗೆ ಅವರು ಹೆಚ್ಚು ಒಳಗಾಗುತ್ತಾರೆ.

ಕಿವುಡುತನಕ್ಕೆ ಕಾರಣವಾಗಬಹುದು

ಈ ಹಾನಿಯು ಸಂವೇದನಾಶೀಲ ಶ್ರವಣ ನಷ್ಟ ಅಥವಾ ಶಾಶ್ವತ ಕಿವುಡುತನಕ್ಕೆ ಕಾರಣವಾಗಬಹುದು. ಈ ಸ್ಥಿತಿಯನ್ನು ರೀಟರ್ಸ್ ಇಯರ್ ಕಿಸ್ ಸಿಂಡ್ರೋಮ್ (REKS)ಎಂದು ಕರೆಯಲಾಗುತ್ತದೆ.

ಮಗುವನ್ನು ಮುದ್ದಾಡುವುದು ಮುತ್ತಿಡುವುದು ಪ್ರೀತಿಯನ್ನು ತೋರ್ಪಡಿಸುವ ಒಂದು ಪ್ರೀತಿಯ ನೈಸರ್ಗಿಕ ಅಭಿವ್ಯಕ್ತಿಯಾಗಿದ್ದರೂ, ಅದರಿಂದ ಅವರಿಗಾಗುವ ಅಪಾಯದ ಬಗ್ಗೆ ತಿಳಿದಿರುವುದು ಅಗತ್ಯ. ಇಲ್ಲದೇ ಹೋದರೆ ನಿಮ್ಮ ಪ್ರೀತಿಯ ಕಂದನಿಗೆ ನೀವು ನೀಡುವ ಮುತ್ತೆ ಮಾರಕವಾಗಬಹುದು.