ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ. ಆದರೆ ಆಕೆಯ ಗರ್ಭದಲ್ಲಿ ಇಬ್ಬರು ಮಕ್ಕಳು ಇರುವುದು ವೈದ್ಯರಿಗೇ ತಿಳಿದಿರಲಿಲ್ವಾ? ಶಕುಂತಲಾ ದೇವಿ ಒಂದು ಮಗು ಕಿಡ್ನಾಪ್ ಮಾಡ್ತಾಳಾ? ಏನಿದು ಅಮೃತಧಾರೆ ಟ್ವಿಸ್ಟ್?
ಅಮೃತಧಾರೆ ಸೀರಿಯಲ್ ಇದೀಗ ಕುತೂಹಲದ ಘಟ್ಟವನ್ನು ತಲುಪಿದೆ. ಭೂಮಿಕಾಳ ಮಗುವನ್ನು ಸಾಯಿಸಬೇಕು ಎನ್ನುವ ಉದ್ದೇಶದಿಂದ ಶಕುಂತಮಾ ಮತ್ತು ಜೈದೇವ ಮಾಡಿದ ಪ್ಲ್ಯಾನ್ಗಳೆಲ್ಲವೂ ಫ್ಲಾಪ್ ಆಗಿವೆ. ಕಾಡಿನಲ್ಲಿ ಭೂಮಿಕಾ ಮತ್ತು ಗೌತಮ್ ಅವರನ್ನು ಸಾಯಿಸಲು ವಿಲನ್ಗಳು ರೌಡಿಗಳನ್ನು ಬಿಟ್ಟಿದ್ದರೆ ಇವರ ರಕ್ಷಣೆಗೆ ಬೇರೆ ಬೇರೆ ಸೀರಿಯಲ್ಗಳ ನಾಯಕ-ನಾಯಕಿಯರು ಬಂದು ಬಚಾವ್ ಮಾಡಿದ್ದಾರೆ. ಅಣ್ಣಯ್ಯ ಸೀರಿಯಲ್ ಶಿವು ಮತ್ತು ಪಾರು ಹಾಗೂ ಕರ್ಣ ಸೀರಿಯಲ್ ಕರ್ಣ ಬಂದು ಭೂಮಿಕಾ, ಗೌತಮ್ ಮತ್ತು ಆನಂದ್ ಅವರನ್ನು ಬಚಾವ್ ಮಾಡಿದ್ದಾರೆ. ಇತ್ತ ಭೂಮಿಕಾ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಭೂಮಿಕಾಗೆ ಅವಳಿ ಮಕ್ಕಳು ಹುಟ್ಟಿದ್ದಾರೆ. ಒಂದು ಮಗು ಹುಟ್ಟುತ್ತಿದ್ದಂತೆಯೇ ಮತ್ತೆ ನೋವು ಕಾಣಿಸಿಕೊಂಡಿದೆ. ವೈದ್ಯರು ಪರೀಕ್ಷೆ ಮಾಡಿದಾಗ ಮತ್ತೊಂದು ಮಗು ಇರುವುದು ತಿಳಿದಿದೆ. ಒಟ್ಟಿನಲ್ಲಿ ಭೂಮಿಕಾಗೆ ಅವಳಿ ಮಕ್ಕಳು ಹುಟ್ಟಿದ್ದಾರೆ.
ಅದೇ ಇನ್ನೊಂದೆಡೆ, ಮಗುವನ್ನು ಅಪಹರಣ ಮಾಡಲು ಶಕುಂತಲಾ ಮತ್ತು ಜೈದೇವ ಪ್ಲ್ಯಾನ್ ಮಾಡಿದ್ದಾರೆ. ಹೆರಿಗೆ ಸಮಯದಲ್ಲಿ ಕರೆಂಟ್ ತೆಗೆಯಲಾಗಿದೆ. ಆದರೂ ಕರ್ಣ ಮತ್ತು ಶಿವು ಬಂದು ಸಹಾಯ ಮಾಡಿ ಹೆರಿಗೆಗೆ ಸಹಾಯ ಮಾಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಸಕತ್ ಕನ್ಫ್ಯೂಸ್ ಆಗಿದ್ದಾರೆ. ಇದಕ್ಕೆ ಕಾರಣ, ಅಮ್ಮನ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇರುವುದು ಗರ್ಭಿಣಿ ಇರುವಾಗಲೇ ತಿಳಿಯುತ್ತದೆ. ಗರ್ಭ ಧರಿಸಿದ ಮೊದಲ ಕೆಲವೇ ತಿಂಗಳಿನಲ್ಲಿಯೇ ಈ ಬಗ್ಗೆ ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಆಗರ್ಭ ಶ್ರೀಮಂತರಾಗಿರುವ ಗೌತಮ್ ದಿವಾನ್ ಭೂಮಿಕಾಳನ್ನು ಪರೀಕ್ಷೆ ಮಾಡಿಸಲು ದೊಡ್ಡ ವೈದ್ಯರ ಬಳಿಗೇ ಹೋಗುತ್ತಿರುತ್ತಾನೆ. ಹೀಗಿದ್ದರೂ ಭೂಮಿಕಾಳಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದು ಮೊದಲೇ ಗೊತ್ತಾಗಲಿಲ್ಲವೆ? ಇದೇನಿದು ತಮಾಷೆ ಎಂದು ಪ್ರಶ್ನಿಸುತ್ತಿದ್ದಾರೆ! ಅಂದ್ರೆ ಅವಳಿ ಮಕ್ಕಳು ಹುಟ್ಟೋದು ಅಂಥ ದೊಡ್ಡ ವೈದ್ಯರಿಗೆ ಗೊತ್ತಾ ಆಗಿಲ್ವಾ? ಅವರಿಗೆ ಅವಾರ್ಡ್ ಕೊಡಬೇಕು ಎನ್ನುತ್ತಿದ್ದಾರೆ.
ಇದೀಗ ಅವಳಿ ಮಕ್ಕಳು ಹುಟ್ಟಿದ್ದಾರೆ. ಗೌತಮ್ ಒಂದೇ ಮಗುವನ್ನು ನೋಡಿರುತ್ತಾನೆ. ಅವಳಿ ಮಕ್ಕಳು ಹುಟ್ಟಿರೋದು ಗೊತ್ತೇ ಇರಲ್ಲ. ಆ ಬಳಿಕ ಇನ್ನೊಂದು ಮಗುವನ್ನು ಶಕುಂತಲಾ ಕಿಡ್ನಾಪ್ ಮಾಡಿಕೊಂಡು ಹೋಗ್ತಾಳೆ. ಅವಳಿಗೂ ಇನ್ನೊಂದು ಮಗು ಇರುವುದು ತಿಳಿಯುವುದಿಲ್ಲ. ಬಹುಶಃ ಹೀಗೇ ಸೀರಿಯಲ್ ಸಾಗಿ ಇನ್ನೊಂದ್ ನಾಲ್ಕೈದು ವರ್ಷ ಎಳೆಯಬಹುದು ಎನ್ನುತ್ತಿದ್ದಾರೆ ಕಮೆಂಟಿಗರು.
ಒಟ್ಟಿನಲ್ಲಿ ಅವಳಿ ಮಕ್ಕಳು ಹುಟ್ಟಿದ್ದು ನೋಡುತ್ತಲೇ ನೆಟ್ಟಿಗರೇ ನಿರ್ದೇಶಕರಾಗಿಬಿಟ್ಟಿದ್ದಾರೆ. ಬಹುತೇಕ ಸೀರಿಯಲ್ಗಳಲ್ಲಿನ ಕಥೆಗಳು ಒಂದೇ ರೀತಿ ಆಗಿರುವ ಕಾರಣ, ಆರಂಭದಲ್ಲಿ ತುಂಬಾ ಚೆನ್ನಾಗಿ ಮೂಡಿ ಬರುವ ಸೀರಿಯಲ್ಗಳು ಟಿಆರ್ಪಿಗಾಗಿ ಎಳೆದು ಎಳೆದು ಮತ್ತದೇ ಹಳೆಯ ಕಥೆಯನ್ನು ತುರುಕುವುದು ಹೊಸತೇನಲ್ಲ. ಅಮೃತಧಾರೆ ಮಾತ್ರ ಹಾಗಾಗದಿರಲಿ ಎನ್ನುವುದು ವೀಕ್ಷಕರ ಆಸೆ.
