Be Summer Ready: ಈಗ ಆಹಾರದಲ್ಲಿ ಬದಲಾವಣೆ ಮಾಡದಿದ್ರೆ ಹಾಸಿಗೆ ಹಿಡಿಯೋದು ಗ್ಯಾರಂಟಿ
ಋತು ಬದಲಾದಂತೆ ಆಹಾರ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಬೇಕು. ವಿಶೇಷವಾಗಿ ಬೇಸಿಗೆಯಲ್ಲಿ ಡಯಟ್ ಪ್ಲಾನ್ ಬದಲಾಗ್ಲೇಬೇಕು. ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಆಹಾರ, ನೀರು ಸಿಗದೆ ಹೋದ್ರೆ ಆಸ್ಪತ್ರೆ ಸೇರಬೇಕಾಗುತ್ತೆ.
ಬೇಸಿಗೆ (Summer)ಯ ಝಲಕ್ ಈಗ್ಲೇ ಸಿಗ್ತಿದೆ. ಚಳಿಗಾಲ (Winter)ದಿಂದ ಬೇಸಿಗೆಗೆ ಋತು ಬದಲಾಗುವ ಸಮಯವಿದು. ಇದಕ್ಕೆ ದೇಹ (body) ಹೊಂದಿಕೊಳ್ಳಬೇಕು. ಚಳಿ, ಬಿಸಿ, ಶಕೆ ಹೀಗೆ ಋತು ಬದಲಾದಂತೆ ನಮ್ಮ ದೇಹದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬೇಸಿಗೆ ಶುರುವಾಗ್ತಿದ್ದಂತೆ ಅನೇಕರು ಹಾಸಿಗೆ ಹಿಡಿಯುತ್ತಾರೆ. ಡಿಹೈಡ್ರೇಷನ್, ಸ್ಕಿನ್ ಬರ್ನ್, ಜ್ವರ ಮತ್ತು ಹೀಟ್ ಸ್ಟ್ರೋಕ್ ನಿಮ್ಮನ್ನು ಕಾಡುತ್ತದೆ. ಬೇಸಿಗೆ ಶುರುವಾಗ್ತಿದ್ದಂತೆ ನಾವು ಕೆಲವೊಂದು ವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು. ಊಟ, ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಇಂದು ಬೇಸಿಗೆಯಲ್ಲಿ ನಿಮ್ಮ ಡಯಟ್ ಹೇಗಿರಬೇಕು ಎಂಬುದನ್ನು ನಾವು ಹೇಳ್ತೇವೆ.
ತಜ್ಞರ ಪ್ರಕಾರ ಬೇಸಿಗೆಯಲ್ಲಿ ಋತುಮಾನದ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯ. ಈ ಋತುವಿನಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ನೀವು ಸೇವನೆ ಮಾಡಿ. ಆರೋಗ್ಯ ವೃದ್ಧಿಸುವ ಜೀವಸತ್ವಗಳು, ಖನಿಜಗಳು, ಕಿಣ್ವಗಳು ಇದ್ರಲ್ಲಿ ಕಂಡು ಬರುತ್ತವೆ. ಋತುಮಾನದ ಆಹಾರಗಳು ನೈಸರ್ಗಿಕವಾಗಿ ನಮ್ಮ ದೇಹವನ್ನು ಶುದ್ಧೀಕರಿಸುವ ಜೊತೆಗೆ ಅನಾರೋಗ್ಯದಿಂದ ನಮ್ಮನ್ನು ದೂರವಿಡುತ್ತವೆ.
ಆರೋಗ್ಯ ಹಾಳು ಮಾಡುತ್ತೆ ರಣ ಬಿಸಿಲು : ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಮಕ್ಕಳು, ವೃದ್ಧರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇವರ ದೇಹದಲ್ಲಿ ನೀರು ಹಾಗೂ ಉಪ್ಪಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಡಿಹೈಡ್ರೇಷನ್, ನೋವು, ಕಡಿಮೆ ರಕ್ತದೊತ್ತಡ, ಸುಸ್ತು ಹೆಚ್ಚಾಗುವ ಅಪಾಯವಿದೆ. ಹಾಗಾಗಿ ನೀವು ಮನೆಯಲ್ಲಿಯೇ ಇರುವಾಗ ದೇಹವನ್ನು ಹೈಡ್ರೇಟ್ ಆಗಿ ಇಡುವುದು ಮುಖ್ಯವಾಗಿದೆ. ಮಧ್ಯಾಹ್ನದಿಂದ ಸಂಜೆಯವರೆಗೆ ಅಂದ್ರೆ ಮಧ್ಯಾಹ್ನ 2 ಗಂಟೆಯಿಂದ ನಾಲ್ಕುಗಂಟೆಯವರೆಗೆ ಆದಷ್ಟು ಮನೆಯಲ್ಲಿರಿ. ಇದು ಕಿರಿಕಿರಿ, ಚಂಚಲತೆ, ನಿದ್ರಾಹೀನತೆ, ಚರ್ಮದ ಸಮಸ್ಯೆ ಮತ್ತು ವಿಟಮಿನ್-ಖನಿಜ ಕೊರತೆಯನ್ನು ಕಡಿಮೆ ಮಾಡುತ್ತದೆ.
ವರ್ಷದಿಂದ ಉಸಿರಾಟಕ್ಕೆ ಕಷ್ಟ ಪಡುತ್ತಿದ್ದ ವ್ಯಕ್ತಿ... ಎಕ್ಸರೇ ಮಾಡಿದಾಗ ಮೂಗಿನೊಳಗಿದ್ದಿದೇನು ನೋಡಿ
ದೇಹಕ್ಕೆ ನೀಡಿ ಅಗತ್ಯ ನೀರು : ದೇಹಕ್ಕೆ ನೀರು ಅತ್ಯಗತ್ಯ. ಬೇಸಿಗೆಯಲ್ಲಿ ಹೆಚ್ಚು ನೀರಿನ ಸೇವನೆ ಮಾಡಬೇಕು. ಬರೀ ನೀರು ಮಾತ್ರವಲ್ಲ ನೀರಿನ ಪ್ರಮಾಣ ಹೆಚ್ಚಿರುವ ಹಾಗೂ ಎಲೆಕ್ಟ್ರೋಲೈಟ್‌ನಲ್ಲಿ ಸಮೃದ್ಧವಾಗಿರುವ ಆಹಾರವನ್ನು ನೀವು ಸೇವಿಸಬೇಕು. ಇಡೀ ದಿನ ನಿಮ್ಮ ದೇಹಕ್ಕೆ ಶಕ್ತಿ ನೀಡುವ ಆಹಾರವನ್ನು ನೀವು ಬೆಳಿಗ್ಗೆ ಸೇವನೆ ಮಾಡಲು ಆದ್ಯತೆ ನೀಡಿ. ಪಾಲಕ್,ಸೌತೆಕಾಯಿ,ಸಲಾಡ್ ಸೇವನೆಯನ್ನು ನೀವು ಮಾಡಬಹುದು. ಬೇಸಿಗೆಯ ತಾಪವನ್ನು ನೀವು ಹೈಡ್ರೇಷನ್ ಮೂಲಕ ನಿಯಂತ್ರಿಸಬಹುದು. ಹಾಗಾಗಿ ಆಗಾಗ ನೀರಿನ ಸೇವನೆ ಮಾಡ್ತಿರಿ.
Food Tips: ಗೋಲ್‌ಗಪ್ಪಾ ತಿಂದ್ರೆ ತೂಕ ಕಡಿಮೆಯಾಗುತ್ತಾ ?
ಬೇಸಿಗೆಯಲ್ಲಿ ಏನು ತಿನ್ನಬೇಕು? ಏನು ತಿನ್ನಬಾರದು? : ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಹೊರಗೆ ಬರಲು ಕೆಲವೊಂದು ಆಹಾರದಿಂದ ದೂರವಿರಬೇಕು. ಹೆಚ್ಚು ಕೆಫೆನ್ ಇರುವ ಆಹಾರ, ಟೀ, ಕಾಫಿ ಹಾಗೂ ಮದ್ಯವನ್ನು ಸೇವನೆ ಮಾಡ್ಬೇಡಿ. ಇದಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಆಹಾರದಿಂದ ದೂರವಿರಿ. ಹೆಚ್ಚು ಸಕ್ಕರೆಯಂಶವಿರುವ ಜ್ಯೂಸ್ ಸೇವನೆ ಮಾಡ್ಬೇಡಿ. ಉಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ಬೇಡಿ. ಮಸಾಲೆಯುಕ್ತ, ಆಮ್ಲೀಯ, ಎಣ್ಣೆಯುಕ್ತ ಮತ್ತು ಹೆಚ್ಚಿನ ಕ್ಯಾಲೋರಿಯಿರುವ ಆಹಾರ ಸೇವನೆ ಮಾಡ್ಬೇಡಿ. ಬೇಸಿಗೆಯಲ್ಲಿ ಆಹಾರ ಬಹಳ ಬೇಗ ಹಾಳಾಗುತ್ತದೆ. ನಿಮಗೆ ಗೊತ್ತಿಲ್ಲದೆ ಅಂತ ಆಹಾರ ಸೇವನೆ ಮಾಡಿದ್ರೆ ಆಹಾರ ವಿಷವಾಗಿ ಅನಾರೋಗ್ಯ ಕಾಡುತ್ತದೆ. ಹೆಚ್ಚು ಪ್ರೋಟೀನ್ ಇರುವ ಆಹಾರದಿಂದಲೂ ದೂರವಿರಿ.
ಮೊದಲೇ ಹೇಳಿದಂತೆ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡಿ. ಖಾಲಿ ನೀರಿನ ಸೇವನೆ ಅಸಾಧ್ಯ ಎನ್ನುವವರು ಅದಕ್ಕೆ ನಿಂಬು ರಸ ಅಥವಾ ಪುದೀನಾ ಎಲೆ ಹಾಕಿ ಕುಡಿಯಬಹುದು. ಬೇಸಿಗೆಯಲ್ಲಿ ಹೆಚ್ಚು ಎಳನೀರಿನ ಸೇವನೆ ಮಾಡಿ. ನೀರಿನಂಶವಿರುವ ಹಣ್ಣು ಹಾಗೂ ಹಸಿತರಕಾರಿಗಳ ಸೇವನೆ ಸೂಕ್ತ. ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ, ಎಲೆಕೋಸು, ಟೊಮ್ಯಾಟೊ, ಕ್ಯಾರೆಟ್, ಹಸಿರು ಎಲೆಗಳ ತರಕಾರಿಗಳು, ಸ್ಟ್ರಾಬೆರಿ ಸೇವನೆ ಮಾಡಬಹುದು. ಇದನ್ನು ಹಾಗೆಯೇ ಸೇವನೆ ಮಾಡಬಹುದು. ಇಲ್ಲವೆ ಜ್ಯೂಸ್,ಸಲಾಡ್ ರೀತಿಯಲ್ಲಿ ತಿನ್ನಬಹುದು. ತುಳಸಿ ನೀರು ಹಾಗೂ ಮಜ್ಜಿಗೆ,ಗ್ರೀನ್ ಟೀ,ನಿಂಬೆ ಹಣ್ಣಿನ ಜ್ಯೂಸ್ ಕೂಡ ನೀವು ಸೇವನೆ ಮಾಡುವುದು ಆರೋಗ್ಯ ವೃದ್ಧಿಸುತ್ತದೆ.