ವರ್ಷದಿಂದ ಉಸಿರಾಟಕ್ಕೆ ಕಷ್ಟ ಪಡುತ್ತಿದ್ದ ವ್ಯಕ್ತಿ... ಎಕ್ಸರೇ ಮಾಡಿದಾಗ ಮೂಗಿನೊಳಗಿದ್ದಿದೇನು ನೋಡಿ
- ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ
- ವೈದ್ಯಕೀಯ ತಪಾಸಣೆ ನಡೆಸಿದಾಗ ಆಘಾತ
- ಮೂಗಿನ ಬಲ ಹೊಳ್ಳೆಯಲ್ಲಿ ಬೆಳೆಯುತ್ತಿತ್ತು ಹಲ್ಲು
ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ವೈದ್ಯಕೀಯ ತಪಾಸಣೆ ನಡೆಸಿದಾಗ ಶಾಕ್ ಆಗಿದೆ. ಏಕೆಂದರೆ ತಪಾಸಣೆಯಲ್ಲಿ ಅವರಿಗೆ ತಮ್ಮ ಬಲ ಮೂಗಿನ ಹೊಳ್ಳೆಯಲ್ಲಿ ಹಲ್ಲು ಬೆಳೆಯುತ್ತಿರುವುದು ಕಂಡು ಬಂದಿದ್ದು ಆಘಾತಗೊಂಡಿದ್ದಾರೆ. 38 ವರ್ಷದ ವ್ಯಕ್ತಿಯೊಬ್ಬರು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ವೈದ್ಯರ ಬಳಿ ತಪಾಸಣೆಗೆ ಒಳಗಾಗಲು ಮುಂದಾಗಿದ್ದಾರೆ. ಇದಾದ ಬಳಿಕ ತಪಾಸಣೆ ನಡೆಸಿದ ವೈದ್ಯರು ಈ ಆಘಾತಕಾರಿ ವಿಚಾರವನ್ನು ಬಯಲು ಮಾಡಿದ್ದಾರೆ.
ಆರಂಭಿಕ ಪರೀಕ್ಷೆಗಳಲ್ಲಿ ವೈದ್ಯರಿಗೆ ಈ 38 ವರ್ಷದ ವ್ಯಕ್ತಿ ವಿಚಲನಗೊಂಡ ಸೆಪ್ಟಮ್ (septum) ಮತ್ತು ಕ್ಯಾಲ್ಸಿಫೈಡ್ ಸೆಪ್ಟಲ್ ಸ್ಪರ್ಸ್ (calcified septal spurs) ಅನ್ನು ಹೊಂದಿದ್ದಾರೆಂದು ಕಂಡುಹಿಡಿದರು. ಸೆಪ್ಟಮ್ ಎಂದರೆ ಮೂಗಿನ ಮಾರ್ಗಗಳ ನಡುವಿನ ತೆಳುವಾದ ಗೋಡೆಯಾಗಿದ್ದು, ಇದು ಒಂದು ಬದಿಗೆ ಸ್ಥಳಾಂತರಗೊಂಡಾಗ ವಿಚಲಿತ ಸೆಪ್ಟಮ್ ಎನಿಸುತ್ತದೆ.
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಹಸುಗೂಸು: ಚಿಕಿತ್ಸೆಗೆ ದುಡ್ಡಿಲ್ದೆ ಕಂಗಾಲಾದ ಬಡ ದಂಪತಿ
ಈ ವ್ಯಕ್ತಿ ಈ ಸಮಸ್ಯೆಯಿಂದ ತನಗೆ ಯಾವುದೇ ಮುಖದ ವಿಕಾರತೆ ಅಥವಾ ಸಹಜತೆ ಎದುರಾಗಿಲ್ಲ ಎಂದು ವೈದ್ಯರಿಗೆ ಹೇಳಿದ್ದಾರೆ. ಆದಾಗ್ಯೂ ರೈನೋಸ್ಕೋಪಿ (rhinoscopy) ನಡೆಸಿದಾಗ ಈ ವಿಚಿತ್ರ ಕಾಯಿಲೆ ಬಯಲಾಗಿದೆ. ರೈನೋಸ್ಕೋಪಿಯಿಂದಾಗಿ ವ್ಯಕ್ತಿಯ ಬಲ ಮೂಗಿನ ಹೊಳ್ಳೆಯಲ್ಲಿ ಅಸಹಜವಾದ ಹಲ್ಲು (ectopic tooth) ಬೆಳೆಯುತ್ತಿದೆ ಎಂದು ತಿಳಿದು ಬಂದಿದೆ.
ಎಕ್ಟೊಪಿಕ್ ಎಂದರೆ ಅಸಹಜ ಸ್ಥಾನದಲ್ಲಿ ಅಥವಾ ಅಸಾಮಾನ್ಯ ರೀತಿಯಲ್ಲಿ ಸಂಭವಿಸುವ ವಿಚಾರವಾಗಿದೆ. ಈ ಅಸಹಜ ವೈದ್ಯಕೀಯ ಸ್ಥಿತಿಯ ವಿವರಗಳನ್ನು ಈಗ ವೈದ್ಯರಾದ ಸಾಗರ್ ಖನ್ನಾ (Sagar Khanna) ಮತ್ತು ಮೈಕೆಲ್ ಟರ್ನರ್ ( Michael Turner) ಅವರು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ (The New England Journal of Medicine) ಹಂಚಿಕೊಂಡಿದ್ದಾರೆ.
ವ್ಯಕ್ತಿಯ ಮೂಗಿನ ದೈಹಿಕ ಪರೀಕ್ಷೆಯು ಸೆಪ್ಟಲ್ ವಿಚಲನ (septal deviation), ಕ್ಯಾಲ್ಸಿಫೈಡ್ ಸೆಪ್ಟಲ್ ಸ್ಪರ್ಸ್ (calcified septal spur) ಮತ್ತು ಹಿಂಭಾಗದ ಸೆಪ್ಟಮ್‌ಲ್ಲಿ 2-ಸೆಂಟಿ ಮೀಟರ್‌ನಷ್ಟು ರಂಧ್ರ ಇರುವುದನ್ನು ತೋರಿಸಿತ್ತು. ರೈನೋಸ್ಕೋಪಿಯಲ್ಲಿ, ಬಲ ಮೂಗಿನ ಹೊಳ್ಳೆಯ ಕೆಳಗೆ ಗಟ್ಟಿಯಾದ ಆದರೆ ಮೃದುವಲ್ಲದಬಿಳಿ ದ್ರವ್ಯರಾಶಿಯನ್ನು ಗಮನಿಸಲಾಯಿತು (ಪ್ಯಾನಲ್ ಎ )ಎಂದು ಈ ಜೋಡಿ ವೈದ್ಯರು ವೈದ್ಯಕೀಯ ಜರ್ನಲ್‌ನಲ್ಲಿ ಬರೆದಿದ್ದಾರೆ.
ಮಾರಣಾಂತಿಕ ಕಾಯಿಲೆಯಿಂದ ಮುಖ ವಿಕಾರ: Black Fungus ಸೋಂಕಿತರಿಗೆ ಕೃತಕ ಮೂಗು..!
'ಪರಾನಾಸಲ್ ಸೈನಸ್‌ಗಳ ಕಂಪ್ಯೂಟೆಡ್ ಟೊಮೊಗ್ರಫಿಯು(Computed tomography) ಮೂಗಿನ ಹೊಳ್ಳೆಯಲ್ಲಿ ತಲೆಕೆಳಗಾದ ಅಪಸ್ಥಾನೀಯ ಹಲ್ಲಿನೊಂದಿಗೆ ಸ್ಥಿರವಾದ ರೇಡಿಯೊಡೆನ್ಸ್ ದ್ರವ್ಯರಾಶಿಯನ್ನು ತೋರಿಸಿದೆ (ಪ್ಯಾನಲ್ ಬಿ, ಬಾಣ), ಇದು ಪ್ರತಿರೋಧಕ ಲಕ್ಷಣಗಳು ಮತ್ತು ಸೆಪ್ಟಲ್ ರಂಧ್ರವನ್ನು ವಿವರಿಸುತ್ತದೆ ಎಂದು ಭಾವಿಸಲಾಗಿದೆ" ಎಂದು ಅವರು ಬರೆದಿದ್ದಾರೆ.
ಈ ಬೇಡದ ಸ್ಥಳದಲ್ಲಿದ್ದ ವಿಚಿತ್ರ ಹಲ್ಲನ್ನು ಇಂಟ್ರಾನಾಸಲ್ ವಿಧಾನದ ಮೂಲಕ ಮೌಖಿಕ ಮತ್ತು ಓಟೋಲರಿಂಗೋಲಾಜಿಕ್ ಶಸ್ತ್ರಚಿಕಿತ್ಸೆಯ ( otolaryngologic surgery) ಮೂಲಕ ಹೊರ ತೆಗೆಯಲಾಯಿತು. ವೈದ್ಯರ ಪ್ರಕಾರ, ಇದು 14 ಮಿಮೀ ಉದ್ದವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಶಸ್ತ್ರಚಿಕಿತ್ಸೆಯ ಮೂರು ತಿಂಗಳ ನಂತರ ರೋಗಿಗೆ ಇದ್ದ ಮೂಗಿನ ಅಡಚಣೆಯ ಲಕ್ಷಣಗಳು ಪರಿಹರಿಸಲ್ಪಟ್ಟಿವೆ ಎಂದು ಜರ್ನಲ್‌ನಲ್ಲಿ ವಿವರಿಸಲಾಗಿದೆ.
ಭಾರತೀಯ ಸೇನೆ (Indian Military) ಬರೀ ಗಡಿ ಕಾಯುವ ಕಾಯಕವೊಂದೇ ಅಲ್ಲ.. ದೇಶದ ಜನರು, ಬಡ ವಿದ್ಯಾರ್ಥಿಗಳ ಹಿತ ರಕ್ಷಿಸುವ ಕೆಲಸಗಳನ್ನು ಮಾಡುತ್ತದೆ. ಹೌದು..ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ವೈದ್ಯಕೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಕಾಶ್ಮೀರದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ(Medical Education)ದ ಕನಸುಗಳನ್ನು ಈಡೇರಿಸಿಕೊಳ್ಳಲು ಸೇನೆಯು ಸಹಾಯ ಮಾಡುತ್ತದೆ. ಉತ್ತರ ಕಾಶ್ಮೀರ ಪ್ರದೇಶಗಳಲ್ಲಿ 'ಆರ್ಮಿ ಎಚ್‌ಪಿಸಿಎಲ್ ಕಾಶ್ಮೀರ್ ಸೂಪರ್ 50 ' (Army HPCL Kashmir Super 50) ಯೋಜನೆ ಅಡಿಯಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಉಚಿತವಾಗಿ ಸಿದ್ಧಗೊಳಿಸ್ತಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೇನೆಯು, ಶುಲ್ಕವನ್ನು ಪ್ರಾಯೋಜಿಸುವ ಮೂಲಕ ಹಣಕಾಸಿನ ನೆರವು ನೀಡುತ್ತಿದೆ.