Asianet Suvarna News Asianet Suvarna News

ಮಲಗೋ ಭಂಗಿಯಲ್ಲೇ ಇದೆ ಆರೋಗ್ಯ, ನಿಮ್ಮ ಮಲಗೋ ಭಂಗಿ ಸರಿಯಾಯೋ, ತಪ್ಪಾ ಚೆಕ್ ಮಾಡ್ಕೊಳ್ಳಿ!

ನಾವು ಮಲಗುವ ಭಂಗಿಯು ನಮಗೇ ಅರಿವಿಲ್ಲದಂತೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಮಲಗೋ ಭಂಗಿ ಕರೆಕ್ಟಾಗಿದೆಯಾ? ಇಲ್ಲಾಂದ್ರೆ ಸರಿಪಡಿಸಿಕೊಳ್ಳಿ.

sleeping  position may leads to health issues bni
Author
First Published Dec 11, 2023, 12:22 PM IST

ನಾವು ಮಲಗೋ ಭಂಗಿಯೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ವ್ಯಕ್ತಿ ಆರೋಗ್ಯವಂತನಾಗಿರಬೇಕಾದರೆ ಮಲಗೋ ಅವಧಿ, ಮಲಗೋ ಮೊದಲು ತಿನ್ನೋ ಆಹಾರ, ಮಲಗು ವೇಳೆ ಮನಸ್ಸನ್ನು ಕಾಮ್ ಆಗಿಡೋದರ ಜೊತೆಗೆ ನಾವು ಮಲಗೋ ಭಂಗಿಯೂ ಮುಖ್ಯವಾಗುತ್ತೆ. ನಾವು ಎಚ್ಚರದಲ್ಲಿ ಹೇಗಿರುತ್ತೇವೆ, ಹೇಗೆ ಯೋಚನೆ ಮಾಡಬೇಕು ಅನ್ನೋದರ ಜೊತೆಗೆ ಮಲಗುವ ವೇಳೆಗೆ ಅನುಸರಿಸಬೇಕಾದ ಕೆಲವು ನಿಯಮಗಳೂ ಮುಖ್ಯವಾಗುತ್ತವೆ. ದಿನವಿಡೀ ದುಡಿದು ತುಂಬಾ ದಣಿದ ನಂತರ ಎಲ್ಲರೂ ಹಾಸಿಗೆಯಲ್ಲಿ ಮಲಗಿ ಆರಾಮವಾಗಿ ನಿದ್ರಿಸುತ್ತಾರೆ. ರಾತ್ರಿ ಎಲ್ಲರೂ ಒಂದೇ ಸಮನಾಗಿ ಅಥವಾ ಒಂದೇ ರೀತಿಯಲ್ಲಿ ಮಲಗುವುದಿಲ್ಲ. ಇದರರ್ಥ ಜನರು ವಿವಿಧ ಮಲಗುವ ಭಂಗಿಗಳಲ್ಲಿ ನಿದ್ರಿಸುತ್ತಾರೆ. ಕುಟುಂಬದಲ್ಲೇ ಅನೇಕರು ಒಂದೊಂದು ರೀತಿ ಮಲಗುತ್ತಾರೆ.

ಮಲಗುವ ಭಂಗಿಯು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನನ್ನಾದರೂ ಹೇಳಬಹುದು. ನಿದ್ರೆಯ ಮನೋವಿಜ್ಞಾನಿಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಆರೋಗ್ಯವನ್ನು ಅವರು ಮಲಗುವ ಭಂಗಿಯನ್ನು ಆಧರಿಸಿ ನಿರ್ಣಯಿಸಬಹುದು ಎಂದು ಹೇಳುತ್ತಾರೆ. ಆದರೆ ನಾವು ಮಲಗುವ ಭಂಗಿಯು ನಮಗೇ ಅರಿವಿಲ್ಲದಂತೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವರು ಒಂದೇ ಭಂಗಿಯಲ್ಲಿ ಮಲಗಿದರೆ, ಇನ್ನೂ ಕೆಲವರು ರಾತ್ರಿಯಿಡಿ ಹೊರಳಾಡುವ ಮೂಲಕ ವಿವಿಧ ಭಂಗಿಯಲ್ಲಿ ಮಲಗುತ್ತಾರೆ. ಒಂದು ಬದಿಯಲ್ಲಿ ಮಲಗುವುದು, ಬೆನ್ನು ನೆಲಕ್ಕೆ ಆನಿಸಿ ಮಲಗುವುದು, ಹೊಟ್ಟೆ ನೆಲಕ್ಕೆ ಆನಿಸಿ ಮಲಗುವುದು ಹೀಗೆ ವಿವಿಧ ಭಂಗಿಯಲ್ಲಿ ಮಲಗುವುದು ದೇಹದ ಮೇಲೆ ಬೀರುವ ಪರಿಣಾಮಗಳು ಭಿನ್ನವಾಗಿರುತ್ತದೆ.

ಫಳಫಳ ಹೊಳೆಯುವ ತ್ವಚೆ- ಕೂದಲಿಗೆ ನ್ಯಾಚುಲರ್​ ಪೇಸ್ಟ್ ತಯಾರಿಕೆ ಹೇಗೆ? ಅದಿತಿ ಪ್ರಭುದೇವ ಟಿಪ್ಸ್​ ಕೇಳಿ

2003ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಯಾವುದೇ ರೀತಿಯ ಹೃದಯ ಸಮಸ್ಯೆ ಇರುವವರು ಎಡಭಾಗದಲ್ಲಿ ಮಲಗುವುದನ್ನು ತಪ್ಪಿಸಬೇಕು ಎಂದು ಹೇಳಿದೆ. ಎಡಭಾಗದಲ್ಲಿ ಮಲಗೋದ್ರಿಂದ ಹೃದಯ ಭಾಗಕ್ಕೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಹೃದಯ ಸಮಸ್ಯೆ ಹೆಚ್ಚಾಗಬಹುದು.

ನೀವು ಗ್ಯಾಸ್ಟ್ರಿಕ್‌, ಆಸಿಡಿಟಿ ಅಥವಾ ಎದೆಯುರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಹೊಟ್ಟೆಯ ಮೇಲೆ ಮಲಗುವುದು ಒಳ್ಳೆಯದಲ್ಲ. ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ನೀವು ದೀರ್ಘಕಾಲದ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಅದಕ್ಕೆ ನಿಮ್ಮ ಮಲಗುವ ವಿಧಾನವೇ ಕಾರಣವಾಗಿರಬಹುದು. ನೀವು ಒಂದು ಬದಿಯನ್ನು ನೆಲಕ್ಕೆ ಆನಿಸಿ ಮಲಗುವವರಾದರೆ ಕಾಲುಗಳ ಮಧ್ಯೆ ದಿಂಬು ಸಿಕ್ಕಿಸಿಕೊಂಡು ಮಲಗುವುದು ಉತ್ತಮ. ಬೆನ್ನು ನೆಲಕ್ಕೆ ಆನಿಸಿ ಮಲಗುವವರಾದರೆ ಮೊಣಕಾಲುಗಳ ಕೆಳಗೆ ದಿಂಬು ಇರಿಸಿಕೊಂಡು ಮಲಗಬಹುದು. ನೀವು ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣುತ್ತಿದ್ದೀರಿ ಅಂದರೆ ದಿಂಬಿಗೆ ಮುಖ ಒತ್ತಿ ಮಲಗುವುದು ಕಾರಣವಿರಬಹುದು. ಸಾಧ್ಯವಾದಷ್ಟು ಬೆನ್ನನ್ನು ನೆಲಕ್ಕೆ ಆನಿಸಿ, ನೇರವಾಗಿ ಮಲಗುವುದು ಮುಖ್ಯವಾಗುತ್ತದೆ.

ಬದಿಯಲ್ಲಿ ಮಲಗುವುದರಿಂದ ಮೆದುಳಿನಲ್ಲಿನ ತ್ಯಾಜ್ಯಗಳು ಹೊರ ಹೋಗುತ್ತವೆ. ಇದು ಮೆದುಳಿನ ಅಸ್ವಸ್ಥತೆಗಳ ನಿವಾರಣೆಗೆ ಸಹಕಾರಿ. ಇದು ಅಲ್ಝೈಮರ್‌ನಂತಹ (Alzheimer's disease) ಅಪಾಯವನ್ನು ಕಡಿಮೆ ಮಾಡುತ್ತದೆ. ಈ ರೀತಿ ಮಲಗುವುದು ನಿದ್ದೆ (sleep) ಮಾಡುವಾಗ ಉತ್ತಮ ಉಸಿರಾಟಕ್ಕೂ ಅವಕಾಶ ಮಾಡಿಕೊಡುತ್ತದೆ. ಗೊರಕೆಯ ಸಮಸ್ಯೆ ನಿವಾರಣೆಗೂ ಇದು ಸಹಕಾರಿ.

ಎಡಭಾಗದಲ್ಲಿ ಮಲಗುವುದಕ್ಕಿಂತ ಬಲಭಾಗದಲ್ಲಿ ಮಲಗುವುದು ಉತ್ತಮ ಎನ್ನುತ್ತದೆ ಅಧ್ಯಯನ (study). ಇದು ಹೃದಯ (Health) ಹಾಗೂ ನರಮಂಡಲದ ಒತ್ತಡವನ್ನು (Stress on Nerve System) ಕಡಿಮೆ ಮಾಡುತ್ತದೆ. ಗರ್ಭಾವಸ್ಥೆಯಲ್ಲೂ (pregnancy) ಎಡಭಾಗಕ್ಕಿಂತ ಬಲಭಾಗದಲ್ಲಿ ಮಲಗುವುದು ಉತ್ತಮ.

ಬೇರೆಯವರು ಆಹಾರ ಜಗಿದ್ರೆ ಈಕೆಗಾಗಲ್ಲ; ಏನಿದು ವಿಚಿತ್ರ ಖಾಯಿಲೆ?

ಬೆನ್ನಿನ ಮೇಲೆ ಮಲಗುವುದು ಎಲ್ಲಕ್ಕಿಂತ ಉತ್ತಮ ವಿಧಾನ. ಇದು ನಿರ್ದಿಷ್ಟವಾಗಿ ದೇಹದ ಯಾವುದೇ ಭಾಗದ ಮೇಲೂ ಪರಿಣಾಮ ಬೀರುವುದಿಲ್ಲ. ನೇರವಾಗಿ ಬೆನ್ನು ಆನಿಸಿ ಮಲಗಿರುವಾಗ ಮೊಣಕಾಲಿನ ಕೆಳಗೆ ದಿಂಬು ಇರಿಸುವುದು ಮುಖ್ಯವಾಗುತ್ತದೆ. ಆದರೆ ಬೆನ್ನಿನ ಮೇಲೆ ಮಲಗುವಾಗ ಸರಿಯಾಗಿ ಹಾಸಿಗೆ ಬಳಸುವುದು ಮುಖ್ಯವಾಗುತ್ತದೆ. ಬೆನ್ನಿನ ಮೇಲೆ ಮಗಲುವುದು ನಿದ್ದೆಯ ಸಮಯದಲ್ಲಿ ಉಸಿರಾಟ ಸಮಸ್ಯೆ ನಿವಾರಣೆಗೆ ಸಹಾಯವಾಗುತ್ತದೆ. ಮೊಡವೆ (Pimples), ಸುಕ್ಕು (Skin Wrinkles), ಚರ್ಮದಲ್ಲಿ ಮೂಡುವ ರೇಖೆಗಳು ಇಂತಹ ತೊಂದರೆಗಳನ್ನೂ ದೂರ ಮಾಡುತ್ತದೆ. ಸೈನಸ್‌ ಕಡಿಮೆಯಾಗಲು ಇದು ಉತ್ತಮ.

Follow Us:
Download App:
  • android
  • ios