Asianet Suvarna News Asianet Suvarna News

ಟಿವಿ, ಲ್ಯಾಪ್‌ಟಾಪ್ ಆನ್ ಮಾಡಿ ಮಲಗ್ತೀರಾ? ಕ್ಯಾನ್ಸರ್ ಕಾಡುತ್ತೆ ಹುಷಾರ್ !

ಇವತ್ತಿನ ದಿನಗಳಲ್ಲಿ ಮಲಗೋ ಮೊದಲು ಮೊಬೈಲ್‌ ಬಳಸೋದು ಎಲ್ಲರ ಅಭ್ಯಾಸ. ಆದ್ರೆ ಇನ್ನು ಕೆಲವರು ಮಲಗೋ ಮೊದಲು ಟಿವಿ, ಲ್ಯಾಪ್‌ಟಾಪ್ ನೋಡುತ್ತಿರುತ್ತಾರೆ. ನಂತರ ಅದನ್ನು ಆಫ್‌ ಮಾಡದೆ ಹಾಗೆಯೇ ಮಲಗಿಬಿಡುತ್ತಾರೆ. ಇದೊಂದು ಸಾಮಾನ್ಯ ವಿಷ್ಯ ಅನಿಸಬಹುದು. ಆದ್ರೆ ಹೀಗೆ ಮಾಡೋದ್ರಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ನಿಮ್ಗೊತ್ತಾ ?

Sleeping Leaving TV, Laptop On, These Deadly Diseases Are Coming Closer Vin
Author
First Published Nov 29, 2022, 11:36 AM IST

ಮಲಗುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಾಗೆಯೇ ಪ್ರತಿಯೊಬ್ಬರಿಗೂ ಮಲಗಲು ವಿವಿಧ ರೀತಿಯ ವಾತಾವರಣ ಬೇಕು. ಕೆಲವರು ಲೈಟ್ ಆಫ್ ಮಾಡಿದ ನಂತರ ನಿದ್ದೆ ಮಾಡುತ್ತಾರೆ, ಇನ್ನು ಕೆಲವರು ಲೈಟ್ ಆನ್ ಮಾಡಿದ ನಂತರವೇ ಮಲಗುತ್ತಾರೆ. ಕೆಲವರಿಗೆ ಚಳಿಗಾಲದಲ್ಲೂ ಫ್ಯಾನ್ ಹಾಕಿಕೊಂಡು ಮಲಗಲು ಇಷ್ಟವಾದರೆ, ಇನ್ನು ಕೆಲವರು ಬೇಸಿಗೆಯಲ್ಲಿ (Summer) ಬೆಚ್ಚಗೆ ಹೊದ್ದುಕೊಂಡು ಮಲಗಲು ಇಷ್ಟಪಡುತ್ತಾರೆ. ಕೆಲವರಿಗೆ ತುಂಬಾ ಪ್ರಶಾಂತ ವಾತಾವರಣದಲ್ಲಿ ಮಲಗುವ ಅಭ್ಯಾಸ (Habit)ವಿದ್ದರೆ, ಇನ್ನು ಕೆಲವರು ಸಂಗೀತವನ್ನು ಕೇಳುವ ಮೂಲಕ ಅಥವಾ ಟಿವಿ ಆನ್ ಮಾಡಿದರೆ ಮಾತ್ರ ಮಲಗುತ್ತಾರೆ. ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, 61 ಪ್ರತಿಶತ ಅಮೆರಿಕನ್ನರು ರಾತ್ರಿ ಹೊತ್ತು ಟಿವಿ ಆನ್‌ ಇಟ್ಟು ಮಲಗಲು ಸಮರ್ಥರಾಗಿದ್ದಾರೆ. ಅದೇ ಸಮಯದಲ್ಲಿ, ನ್ಯಾಷನಲ್ ಸ್ಲೀಪ್ ಫೌಂಡೇಶನ್ ಮತ್ತು ಜರ್ನಲ್ ಆಫ್ ಕ್ಲಿನಿಕಲ್ ಮೆಡಿಸಿನ್‌ನ ಸಂಯೋಜಿತ ಅಧ್ಯಯನದ ಪ್ರಕಾರ, ಪ್ರತಿ 9 ಜನರಲ್ಲಿ 1 ಜನರು ಮಲಗುವ ಮೊದಲು ಕೆಲವು ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುತ್ತಾರೆ.

ತುಂಬಾ ಜನರು ಟಿವಿ ಅಥವಾ ಲ್ಯಾಪ್‌ಟಾಪ್‌ನ್ನು ಆನ್ ಮಾಡಿ ಮಲಗುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಮಲಗುವ ಸಂದರ್ಭದಲ್ಲಿ ಬಳಸುವ ಈ ಎಲೆಕ್ಟ್ರಾನಿಕ್ ಉಪಕರಣಗಳು ನಿಮ್ಮ ಜೀವಕ್ಕೇ ಮಾರಕವಾಗಬಹುದು. ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ ? ಹೌದು, ಟಿವಿ ಆನ್ ಮಾಡಿಟ್ಟು ಮಲಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳು (Health problem) ಕಾಡುತ್ತವೆ. ಅವು ಯಾವುವು ತಿಳ್ಕೊಳ್ಳೋಣ.

ಮಲಗಿಕೊಂಡೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡ್ತೀರಾ ? ಎಷ್ಟು ಡೇಂಜರಸ್ ತಿಳ್ಕೊಳ್ಳಿ

ಬೊಜ್ಜು ಉಂಟಾಗುತ್ತದೆ: ಜಾಮಾ ಇಂಟರ್‌ನಲ್‌ ಮೆಡಿಸಿನ್‌ನಲ್ಲಿ ಪ್ರಕಟವಾದ 2019ರ ಅಧ್ಯಯನದ ಪ್ರಕಾರ, ಮಲಗುವ ಕೋಣೆಯಲ್ಲಿ ಟಿವಿ ಆನ್‌ ಮಾಡಿಟ್ಟು ಮಲಗುವುದು ತೂಕ ಹೆಚ್ಚಾಗುವುದು ಮತ್ತು ಸ್ಥೂಲಕಾಯತೆಗೆ (Obesity) ಸಂಬಂಧಿಸಿದೆ. ಅದರ ಅಧ್ಯಯನಕ್ಕಾಗಿ, ಸಂಶೋಧಕರು 43,000 ಕ್ಕೂ ಹೆಚ್ಚು ಮಹಿಳೆಯರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಟಿವಿಯಿಂದ ಹೊರಬರುವ ನೀಲಿ ಕಿರಣಗಳು ಆರೋಗ್ಯಕ್ಕೆ (Health) ಅಪಾಯವನ್ನುಂಟು ಮಾಡಬಹುದು ಎಂದು ತಿಳಿದುಬಂದಿದೆ.

ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ: ಟಿವಿ, ಲ್ಯಾಪ್‌ಟಾಪ್‌ನಿಂದ ಹೊರಸೂಸುವ ಹೆಚ್ಚಿನ ಶಕ್ತಿಯ ಬ್ಲೂ ರೇ ರೆಟಿನಾವನ್ನು ಹಾನಿಗೊಳಿಸುತ್ತದೆ. ಅಷ್ಟೇ ಅಲ್ಲ, ಈ ಬೆಳಕಿನಲ್ಲಿ ದೀರ್ಘಕಾಲಕ್ಕೆ ಒಡ್ಡಿಕೊಳ್ಳುವುದರಿಂದ ಕಣ್ಣಿನ ದೃಷ್ಟಿಗೆ (Vision) ಹಾನಿಯಾಗಬಹುದು. 

ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ: ಟಿವಿ, ಲ್ಯಾಪ್‌ಟಾಪ್‌ನ ನೀಲಿ ಬೆಳಕು ಅಪಾಯಕಾರಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ರಾತ್ರಿಯಲ್ಲಿ ಟಿವಿ ಅಥವಾ ಲ್ಯಾಪ್‌ಟಾಪ್ ಬಳಸುವವರು ಅಥವಾ ಅದರೊಂದಿಗೆ ಮಲಗುವವರು ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಮಗು ಜೊತೆಯಲ್ಲಿರುವಾಗ ಗ್ಯಾಡೆಜ್ಟ್‌ ಬಳಸ್ತೀರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ಜೋಕೆ

ಮಾನಸಿಕ ಆರೋಗ್ಯ ಹದಗೆಡುತ್ತದೆ: ರಾತ್ರಿಯಲ್ಲಿ ಹೆಚ್ಚು ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಳಸುವ ಜನರು ಉಳಿದ ಜನರಿಗಿಂತ ಖಿನ್ನತೆಯ ಅಪಾಯ (Danger)ವನ್ನು ಹೊಂದಿರುತ್ತಾರೆ. ಏಕೆಂದರೆ ಸಾಧನದಿಂದ ಹೊರಹೊಮ್ಮುವ ಬೆಳಕು ಮಲಗಿದ ನಂತರವೂ ನಿಮ್ಮ ಮೆದುಳನ್ನು ಅಲರ್ಟ್ ಮೋಡ್‌ನಲ್ಲಿ ಇರಿಸುತ್ತದೆ. ಈ ಕಾರಣದಿಂದಾಗಿ, ಮೆದುಳಿಗೆ (Brain) ಸಾಕಷ್ಟು ವಿಶ್ರಾಂತಿ ಸಿಗುವುದಿಲ್ಲ ಮತ್ತು ಅತಿಯಾದ ಆಯಾಸದಿಂದಾಗಿ, ಅದು ಒತ್ತಡಕ್ಕೆ (Pressure) ಒಳಗಾಗುತ್ತದೆ.

ನೀಲಿ ಬೆಳಕಿನಿಂದ ಚರ್ಮಕ್ಕೆ ಹಾನಿ: ಹೆಚ್ಚಿನ ಶಕ್ತಿಯ ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ DNA ಹಾನಿಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದರೊಂದಿಗೆ, ಜೀವಕೋಶಗಳು ಮತ್ತು ಅಂಗಾಂಶಗಳ ನಾಶವನ್ನು ಹೊರತುಪಡಿಸಿ, ಚರ್ಮದ (Skin) ಹಾನಿಯ ಅಪಾಯವಿದೆ. ಹೀಗಾಗಿ ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಟಿವಿ, ಲ್ಯಾಪ್‌ಟಾಪ್‌ ಆನ್ ಮಾಡಿ ಮಲಗೋ ಅಭ್ಯಾಸ ಒಳ್ಳೆಯದಲ್ಲ.

Follow Us:
Download App:
  • android
  • ios