ಮಲಗಿಕೊಂಡೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡ್ತೀರಾ ? ಎಷ್ಟು ಡೇಂಜರಸ್ ತಿಳ್ಕೊಳ್ಳಿ
ವರ್ಕ್ ಫ್ರಂ ಹೋಮ್ ಶುರುವಾದ ನಂತರ ಹೆಚ್ಚಿನವರು ಲ್ಯಾಪ್‌ಟಾಪ್ ಬಳಸುತ್ತಿದ್ದಾರೆ. ಅದರಲ್ಲಿ ನೀವು ಸಹ ಸೇರಿರಬಹುದು. ಆದ್ರೆ ನೀವು ಲ್ಯಾಪ್‌ಟಾಪ್‌ನ್ನು ಸರಿಯಾದ ರೀತಿಯಲ್ಲಿ ಬಳಸ್ತಿದ್ದೀರಾ ? ಇಲ್ಲಾಂದ್ರೆ ಆರೋಗ್ಯ ಸಮಸ್ಯೆ ಕಾಡ್ಬೋದು ಹುಷಾರ್.
ಒಂದು ಕಾಲದಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ತುಂಬಾ ಕಡಿಮೆಯಾಗಿತ್ತು. ಆದರೆ ಈಗ ಕೊರೋನಾ ಕಾಲಘಟ್ಟದ ನಂತರ ಪ್ರತಿ ಮನೆಯಲ್ಲೂ ಲ್ಯಾಪ್‌ಟಾಪ್ ಕಾಣಸಿಗುತ್ತದೆ. ಒಂದರ್ಥದಲ್ಲಿ, ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್‌ಗಳು ಸಹ ನಮ್ಮ ಜೀವನದ ಒಂದು ಭಾಗವಾಗಿದೆ. ಲ್ಯಾಪ್‌ಟಾಪ್‌ಗಳು ಕೇವಲ ಕಚೇರಿ ಕೆಲಸಗಳಿಗೆ (Office work) ಮಾತ್ರವಲ್ಲದೆ ಹಲವಾರು ರೀತಿಯ ಕೆಲಸಗಳಿಗೆ ಸಹ ಬಳಕೆಯಾಗುತ್ತಿದೆ. ಕೆಲವರು ಕಛೇರಿಯ ಕೆಲಸವನ್ನು ಮಾತ್ರ ಮೇಜಿನ ಮೇಲೆ ಇಟ್ಟು ಮಾಡುತ್ತಾರೆ. ಉಳಿದ ಸಮಯದಲ್ಲಿ ಸೋಫಾದಲ್ಲಿ, ಬೆಡ್‌ನಲ್ಲಿ ಕುಳಿತು ಲ್ಯಾಪ್‌ಟಾಪ್ ಬಳಸುತ್ತಾರೆ.
ಮೇಜಿನ ಮೇಲೆ ಲ್ಯಾಪ್‌ಟಾಪ್ ಬಳಸುವುದು ಆರೋಗ್ಯಕ್ಕೆ (Health) ಒಳ್ಳೆಯದು. ಆದರೆ ಹೆಚ್ಚಿನವರು ಹಾಗೆ ಮಾಡುತ್ತಿಲ್ಲ. ವರ್ಕ್ ಫ್ರಂ ಹೋಮ್ ಆಪ್ಶನ್ ಶುರುವಾದ ನಂತರ ಟೇಬಲ್ ಮೇಲೆ ಕೂರದೆ, ಎಲ್ಲೆಲ್ಲೂ ಕುಳಿತುಕೊಂಡು, ಬೆಡ್‌ನಲ್ಲಿ ಮಲಗಿಕೊಂಡು ಲ್ಯಾಪ್ ಟಾಪ್ ಬಳಸುತ್ತಿದ್ದಾರೆ. ಆದರೆ ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು ಅಂತಾರೆ ತಜ್ಞರು.
ಕುತ್ತಿಗೆ ನೋವು
ಲ್ಯಾಪ್‌ಟಾಪ್ ಬಳಸುವಾಗ, ಎಷ್ಟು ಸಮಯ ಕಳೆದಿದೆ ಎಂದು ನಮಗೆ ತಿಳಿದಿರುವುದಿಲ್ಲ. ಆದರೆ ಹೊಟ್ಟೆಯ ಮೇಲೆ ಮಲಗಿರುವಾಗ ಇದನ್ನು ಬಳಸುವುದರಿಂದ ಹೆಚ್ಚು ಕುತ್ತಿಗೆ ನೋವು (Neck pain) ಉಂಟಾಗುತ್ತದೆ. ಏಕೆಂದರೆ ಕುತ್ತಿಗೆಯನ್ನು ಒಂದೇ ಸ್ಥಾನದಲ್ಲಿ ಇರಿಸಿದಾಗ ಈ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ, ನೀವು ಗಂಟೆಗಳ ಕಾಲ ಮಲಗಿಕೊಂಡೇ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಬೆನ್ನು ನೋವು (Backpain) ಕೂಡ ಉಂಟಾಗುತ್ತದೆ. ಏಕೆಂದರೆ ಮಲಗಿ ಲ್ಯಾಪ್‌ಟಾಪ್ ಬಳಸುವುಉ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು (Pressure) ಉಂಟುಮಾಡುತ್ತದೆ. ಇದು ಸ್ವಲ್ಪ ಬೆನ್ನುನೋವಿಗೆ ಕಾರಣವಾಗುತ್ತದೆ. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ನೀವು ವರ್ಷಗಟ್ಟಲೆ ಈ ರೀತಿ ಲ್ಯಾಪ್ ಟಾಪ್ ಬಳಸುತ್ತಿದ್ದರೆ ಆಗ ನಿಮಗೆ ಗರ್ಭಾಶಯದ ನೋವು ಕೂಡ ಬರುತ್ತದೆ.
ಬೆನ್ನುಹುರಿಯ ಸಮಸ್ಯೆ
ಹೊಟ್ಟೆಯ ಮೇಲೆ ಮಲಗಿ ಲ್ಯಾಪ್‌ಟಾಪ್ ಅನ್ನು ದೀರ್ಘಕಾಲ ಬಳಸುವುದರಿಂದ ಬೆನ್ನುಹುರಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಮಲಗುವುದರಿಂದ ಬೆನ್ನಿನ ಸ್ನಾಯುಗಳು ಹಿಗ್ಗುತ್ತವೆ. ಮೂಳೆ ನೋವನ್ನು (Bone pain) ಸಹ ಉಂಟುಮಾಡುತ್ತದೆ. ನಿಮಗೆ ತಿಳಿದೋ ತಿಳಿಯದೆಯೋ, ಈ ಸಮಸ್ಯೆಯು ನಿಮ್ಮನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬಹುದು. ಆದ್ದರಿಂದ ಈ ರೀತಿ ಮಲಗಿ ಲ್ಯಾಪ್‌ಟಾಪ್ ಉಪಯೋಗಿಸುವುದು ನಿಲ್ಲಿಸಿ.
ಜೀರ್ಣಕಾರಿ ಸಮಸ್ಯೆ
ಹೊಟ್ಟೆಯ ಮೇಲೆ ಮಲಗಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಿಂದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಈ ಸ್ಥಾನದಲ್ಲಿ ಜೀರ್ಣಕ್ರಿಯೆಯು (Digestion) ಪರಿಣಾಮ ಬೀರುತ್ತದೆ. ಇದರಿಂದ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಹಸಿವು ಹೆಚ್ಚಾಗುವ ಸಾಧ್ಯತೆಯೂ ಇದೆ.
ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ
ಕಣ್ಣುಗಳು (Eyes) ಬಹಳ ಸೂಕ್ಷ್ಮವಾಗಿರುತ್ತವೆ. ಆದರೆ ಮಲಗುವ ಭಂಗಿಯಲ್ಲಿ ಲ್ಯಾಪ್‌ಟಾಪ್ ಉಪಯೋಗಿಸುವುದು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಈ ಸ್ಥಾನದಲ್ಲಿ ನಿಮ್ಮ ಕಣ್ಣುಗಳು ಮತ್ತು ಲ್ಯಾಪ್‌ಟಾಪ್ ನಡುವಿನ ಅಂತರವು ತುಂಬಾ ಕಡಿಮೆ ಇರುತ್ತದೆ. ಪರಿಣಾಮವಾಗಿ, ನೀಲಿ ಬೆಳಕು ನೇರವಾಗಿ ನಿಮ್ಮ ಕಣ್ಣುಗಳ ಮೇಲೆ ಬೀಳುತ್ತದೆ ಮತ್ತು ದೃಷ್ಟಿ ಕಡಿಮೆ ಮಾಡುತ್ತದೆ. ನೀವು ವರ್ಷಗಳಿಂದ ಮಲಗಿಕೊಂಡು ಲ್ಯಾಪ್‌ಟಾಪ್ ಬಳಸಿದರೆ, ನೀವು ಸಂಪೂರ್ಣವಾಗಿ ಕುರುಡರಾಗುವ ಸಾಧ್ಯತೆಯೂ ಇದೆ.