Health Tips: ಸುಸ್ತಾಯ್ತು ಅಂತಾ ಸೋಫಾ ಮೇಲೆ ಹೀಗೆ ಕುಳಿತ್ರೆ ಜೀವವೇ ಹೋಗ್ಬಹುದು..

ಸೋಫಾದ ಮೇಲೆ ನಾವು ಹೇಗೆ ಕುಳಿತುಕೊಳ್ತೇವೆ ಎಂಬುದು ಬಹಳ ಮುಖ್ಯ. ಯಾಕೆಂದ್ರೆ ನಾವು ಕುಳಿತುಕೊಳ್ಳುವ ಭಂಗಿ ನಮ್ಮ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ಮಾತ್ರವಲ್ಲ ಹೀಗೆ ಸೋಫಾ ಮೇಲೆ ಕುಳಿತ್ರೂ ನಿಮ್ಮನ್ನು ಅನಾರೋಗ್ಯ ಕಾಡುತ್ತದೆ. 
 

Sitting On Sofa In The Wrong Way Is Fatal It Could Increase Risk Of Forming Blood Clots

ಹೊರಗಿನಿಂದ ಮನೆಗೆ ಬಂದಾಗ ಅಥವಾ ಮನೆ ಕೆಲಸ ಮಾಡಿ ಸುಸ್ತಾದಾಗ ವಿಶ್ರಾಂತಿಗಾಗಿ ನಾವು ಹೋಗೋದು ಸೋಫಾ ಮೇಲೆ. ಶಾಲೆಯಿಂದ ಬಂದ ಮಕ್ಕಳಿಂದ ಹಿಡಿದು, ಕಚೇರಿಗೆ ಹೋಗಿ ಬಂದ ಹಿರಿಯರವರೆಗೆ ಬಹುತೇಕ ಎಲ್ಲರೂ ಮನೆಗೆ ಬಂದ ತಕ್ಷಣ ಸೋಫಾ ಏರ್ತಾರೆ. ಅಲ್ಲಿ ದಣಿವಾರಿಸಿಕೊಂಡೇ ಮುಂದಿನ ಕೆಲಸಕ್ಕೆ ಹೋಗ್ತಾರೆ. ಸೋಫಾ ನಿಮಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ನೀವು ಸೋಫಾದಲ್ಲಿ ಕುಳಿತುಕೊಳ್ಳುವ ವಿಧಾನ, ಆ ಕ್ಷಣ ನಿಮಗೆ ಹಿತವೆನ್ನಿಸಿದ್ರೂ ದೀರ್ಘಕಾಲದಲ್ಲಿ ನಿಮ್ಮನ್ನು ಸಾವಿನಂಚಿಗೆ ನೂಕುವ ಸಾಧ್ಯತೆಯಿರುತ್ತದೆ. ಹೌದು. ತಪ್ಪಾದ ರೀತಿಯಲ್ಲಿ ನೀವು ಸೋಫಾ ಮೇಲೆ ಕುಳಿತುಕೊಳ್ಳುವುದ್ರಿಂದ ನಮ್ಮ ಆರೋಗ್ಯ ಹದಗೆಡುತ್ತದೆ ಎಂದು ಕೆಲ ಸಂಶೋಧನೆಗಳು ಹೇಳಿವೆ. ನಾವಿಂದು ಯಾವ ಭಂಗಿಯಲ್ಲಿ ಕುಳಿತುಕೊಂಡ್ರೆ ಅಪಾಯ ಎಂಬುದನ್ನು ನಿಮಗೆ ಹೇಳ್ತೇವೆ. 

ಜುಲೈ 2020 ರಲ್ಲಿ ನಡೆದ ಅಧ್ಯಯನ (Study) ಒಂದರ ಪ್ರಕಾರ, ಸೋಫಾ (Sofa) ದ ಮೇಲೆ ಕುಳಿತುಕೊಳ್ಳುವ ಸಾಮಾನ್ಯ ವಿಧಾನವು ಮಾರಣಾಂತಿಕ (Deadly) ವೆಂದು ಸಾಬೀತುಪಡಿಸುವ ಎಚ್ಚರಿಕೆಯನ್ನು ಸಂಶೋಧಕರು ನೀಡಿದ್ದಾರೆ. ಅನೇಕ ಜನರು ಸೋಫಾ ಮೇಲೆ ಚಕ್ಕಲಪಟ್ಟೆ ಹಾಕಿ ಕುಳಿತುಕೊಳ್ತಾರೆ. ಸೋಫಾದ ಮೇಲೆ ಚಕ್ಕಲಪಟ್ಟೆ ಹಾಕಿಕೊಂಡು ಕುಳಿತುಕೊಳ್ಳುವುದು ಸೊಂಟದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.  
ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಅನ್ಯಾಟಮಿ ಲರ್ನಿಂಗ್ ಸೆಂಟರ್‌ನ ತಜ್ಞ (Expert) ರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೀವು ಸೋಫಾ ಮೇಲೆ ಚಕ್ಕಲಪಟ್ಟೆ ಹಾಕಿ ಕುಳಿತ್ರೆ ಇದು ನಾಳಗಳ ಮೂಲಕ ರಕ್ತ ಚಲಿಸುವ ವೇಗವನ್ನು ಬದಲಾಯಿಸುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ನಿಮ್ಮನ್ನು ಕಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ದಿಢೀರ್ ಹೃದಯಾಘಾತವಾಗುತ್ತೆ ಅನ್ನೋ ಭಯಾನ? ಪ್ರತಿ ದಿನ ಈ ಹಣ್ಣು ತಿನ್ನಿ ಸಾಕು

ರಕ್ತ ಹೆಪ್ಪುಗಟ್ಟುವಿಕೆಯಿಂದಾಗುವ ಸಮಸ್ಯೆಗಳೇನು? : ರಕ್ತ ಹೆಪ್ಪುಗಟ್ಟುವಿಕೆಗೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ (Treatment) ಯ ಅಗತ್ಯವಿರುತ್ತದೆ. ಸೂಕ್ತ ಚಿಕಿತ್ಸೆ ಸಿಗದೆ ಹೋದ್ರೆ ಅದು ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ. ರಕ್ತ ಹೆಪ್ಪುಗಟ್ಟುವಿಕೆಯಿಂದ ನಾಳಗಳು ಒಡೆಯುವ ಸಾಧ್ಯತೆಯಿರುತ್ತದೆ. ಒಂದೇ ಸ್ಥಳದಲ್ಲಿ ರಕ್ತ ಶೇಖರಣೆಯಾಗಿ, ರಕ್ತ ಸಂಚಾರ ಸರಿಯಾಗಿ ಆಗೋದಿಲ್ಲ. ಇದ್ರಿಂದ ಹೃದಯ, ಮೆದುಳು, ಶ್ವಾಸಕೋಶಗಳು ಮತ್ತು ಇತರ ಪ್ರಮುಖ ಅಂಗಗಳಿಗೆ ರಕ್ತ ಪೂರೈಕೆ ನಿಲ್ಲುತ್ತದೆ. ಆಗ ಈ ಅಂಗಗಳು ಕೆಲಸ ನಿಲ್ಲಿಸುತ್ತವೆ. ಇದ್ರಿಂದ ಸಾವು ಸಂಭವಿಸುತ್ತದೆ. ಸೋಫಾ ಮೇಲೆ ನೀವು ಚಕ್ಕಲಪಟ್ಟೆ ಹಾಕಿ ಗಂಟೆಗಟ್ಟಲೆ ಕುಳಿತ್ರೆ ಮಾತ್ರವಲ್ಲ, ನೀವು ಟಿವಿ ನೋಡ್ತಾ ಅಥವಾ ಕೆಲಸ ಮಾಡ್ತಾ, ಅನಾರೋಗ್ಯಕರ ಆಹಾರ ಸೇವನೆ ಮಾಡ್ತಾ ಒಂದೇ ಜಾಗದಲ್ಲಿ ಕುಳಿತುಕೊಳ್ಳೋದು ಕೂಡ ಅಪಾಯ. ಹಿಂದೆ ಈ ಬಗ್ಗೆ ನಡೆದ ಅಧ್ಯಯನದಲ್ಲಿ ಒಂದೇ ಕಡೆ ತುಂಬಾ ಸಮಯ ಕುಳಿತ್ರೆ ಬೊಜ್ಜು ನಿಮ್ಮನ್ನು ಕಾಡುತ್ತದೆ ಎಂದು ಹೇಳಲಾಗಿತ್ತು. ಅಲ್ಲದೆ ಇದು ಕೂಡ ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿತ್ತು.

Health Tips: ಬ್ಲಡ್ ಶುಗರ್ ಲೆವೆಲ್‌ ಕಡಿಮೆಯಾದ್ರೆ ಏನು ಮಾಡೋದು?

ರಕ್ತ ಹೆಪ್ಪುಗಟ್ಟುವ ಅಪಾಯ ಯಾರಿಗೆ ಹೆಚ್ಚು ಗೊತ್ತಾ? : ಸೋಫಾ ಮೇಲೆ ಚಕ್ಕಲಪಟ್ಟೆ ಹಾಕಿ ಕುಳಿತುಕೊಂಡ್ರೆ ರಕ್ತ ಹೆಪ್ಪುಗಟ್ಟುವ ಅಪಾಯ ಎಲ್ಲರಿಗೂ ಇದೆ ಎಂದಲ್ಲ. ಆದ್ರೆ ಕೆಲವರು ಯಾವುದೇ ಕಾರಣಕ್ಕೂ ತುಂಬಾ ಸಮಯ ಸೋಫಾ ಮೇಲೆ ಈ ಭಂಗಿಯಲ್ಲಿ ಕುಳಿತುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಮುಖ್ಯವಾಗಿ ಕ್ರೋನ್ಸ್ ಕಾಯಿಲೆಯಿಂದ ಬಳುತ್ತಿರುವವರು, ಗರ್ಭಿಣಿಯರು,  ರುಮಟಾಯ್ಡ್ ಸಂಧಿವಾತ, ಈಗಾಗಲೇ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿರುವವರು, ಧೂಮಪಾನಿಗಳು, ಅಧಿಕ ತೂಕ ಇರುವವರು, ಶಸ್ತ್ರಚಿಕಿತ್ಸೆಗೆ ಒಳಗಾಗಿ, ಈಗಷ್ಟೆ ಆಸ್ಪತ್ರೆಯಿಂದ ಮನೆಗೆ ಬಂದವರು ಚಕ್ಕಲಪಟ್ಟೆಹಾಕಿ ಸೋಫಾ ಮೇಲೆ ಕುಳಿತುಕೊಳ್ಳಬಾರದು ಎನ್ನುತ್ತಾರೆ ತಜ್ಞರು.  
 

Latest Videos
Follow Us:
Download App:
  • android
  • ios