ಲೋ ಬಿಪಿಯಂತೆಯೇ ಸೈಲೆಂಟ್ ಕಿಲ್ಲರ್ ಕಾಯಿಲೆಗಳಿವು, ಎಚ್ಚರವಿರಲಿ
ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ವರ್ಷಗಳಲ್ಲಿ ಎಲ್ಲರಲ್ಲೂ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಕಾಯಿಲೆಗಳಿಗಿಂತ ಸಣ್ಣಪುಟ್ಟ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಅಂಥಾ ಸೈಲೆಂಟ್ ಕಿಲ್ಲರ್ ಕಾಯಿಲೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಹಿಂದೊಂದು ಕಾಲವಿತ್ತು. ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಹೆಲ್ದೀಯಾಗಿರುತ್ತಿದ್ದರು. ಔಷಧಿಯಿಲ್ಲದ ಮಾರಕ ರೋಗ ಬಂದರಷ್ಟೇ ಜನರು ಸಾವನ್ನಪ್ಪುತ್ತಿದ್ದರು. ಆದರೆ ಈಗ ಸಾಯೋಕೆ ಮಾರಕ ಕಾಯಿಲೆಗಳೇ ಬರಬೇಕೆಂದೇನಿಲ್ಲ. ಕೆಲ ದಿನಗಳ ಹಿಂದೆ ನಟ ವಿಜಯ್ ರಾಘವೇಂದ್ರ ಅವರ ಪತ್ನಿಯವರು ಮೃತಪಟ್ಟಂತೆ ಲೋಬಿಪಿ, ಹೃದಯಾಘಾತ ಹೀಗೆ ನಾನಾ ಕಾರಣಗಳಿಂದ ಜನರು ದಿಢೀರ್ ಆಗಿ ಸಾವನ್ನಪ್ಪುತ್ತಾರೆ.
ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ವರ್ಷಗಳಲ್ಲಿ ಎಲ್ಲರಲ್ಲೂ ಆರೋಗ್ಯ ಸಮಸ್ಯೆ (Health problem) ಹೆಚ್ಚಾಗ್ತಿದೆ. ದೊಡ್ಡ ದೊಡ್ಡ ಕಾಯಿಲೆ (Disease)ಗಳಿಗಿಂತ ಸಣ್ಣಪುಟ್ಟ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅನೇಕ ರೋಗಗಳು ಅವರನ್ನು ಆವರಿಸಿಕೊಳ್ಳುತ್ತಿವೆ. ಸೈಲೆಂಟ್ ಕಿಲ್ಲರ್ ಆಗಿರುವ ಲೋ ಬಿಪಿಯಿಂದ ಸ್ಪಂದನಾ ಮೃತಪಟ್ಟರು (Death) ಎಂದು ಹೇಳಲಾಗ್ತಿದೆ. ಇಂಥಾ ಅನೇಕ ರೋಗಗಳಿವೆ. ಇವು ಸೈಲೆಂಟ್ ಕಿಲ್ಲರ್‌ಗಳಾಗಿದ್ದು,ಗಮನ ಹರಿಸದಿದ್ದರೆ ಒಮ್ಮೆಗೇ ತೀವ್ರವಾಗಬಹುದು ಮತ್ತು ಕೆಲವೊಮ್ಮೆ ಹಠಾತ್ ಸಾವಿಗೆ ಕಾರಣವಾಗಬಹುದು. ಅಂಥಾ ಕಾಯಿಲೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಅಧಿಕ; ಯಾಕೆ ಹೀಗೆ?
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡವು (Low blood pressure) ಇತರ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುವ ಅತ್ಯಂತ ಅಪಾಯಕಾರಿ ಆರೋಗ್ಯ ಪರಿಸ್ಥಿತಿಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ ವಿಶ್ವಾದ್ಯಂತ 30-79 ವರ್ಷ ವಯಸ್ಸಿನ 1.28 ಶತಕೋಟಿ ವಯಸ್ಕರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಹೊಂದಿದ್ದಾರೆ. ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದು ಪರಿಗಣಿಸಲು ಕಾರಣ ಅದು ಯಾವುದೇ ನಿರ್ದಿಷ್ಟ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತದೆ. ಆ ಹಾನಿಯ ನಂತರವೇ ಜನರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ಇದು ಹೃದಯ (Heart) ಮತ್ತು ಅಪಧಮನಿಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಗಂಭೀರ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಮಧುಮೇಹ
ಯಾವುದೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದ ಕಾಯಿಲೆಗಳಲ್ಲಿ ಮಧುಮೇಹ (Diabetes) ಕೂಡಾ ಒಂದು. ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆಯ ಮಟ್ಟಗಳು ಎರಡು ವಿಧಗಳಾಗಿರಬಹುದು, ಟೈಪ್ 1 ಮತ್ತು ಟೈಪ್ 2. ಟೈಪ್ 1 ಡಯಾಬಿಟಿಸ್‌ನಲ್ಲಿ ಮೇದೋಜ್ಜೀರಕ ಗ್ರಂಥಿಯು ಕಡಿಮೆ ಅಥವಾ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ, ಆದರೆ ಟೈಪ್ 2 ಮಧುಮೇಹವು ದೇಹವು ರಕ್ತದಲ್ಲಿನ ಸಕ್ಕರೆಯನ್ನು ಸಂಸ್ಕರಿಸುವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ವ್ಯಕ್ತಿಗಳು ಸಾಮಾನ್ಯವಾಗಿ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗವು ಮುಂದುವರೆದಾಗ ಮಾತ್ರ, ಇದು ಆಯಾಸ, ತೂಕ ನಷ್ಟ, ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆಗೆ ಕಾರಣವಾಗುತ್ತದೆ. ಇದು ಕೆಲವೊಮ್ಮೆ ದಿಢೀರ್ ಆರೋಗ್ಯ ಹದಗೆಡಲು ಸಹ ಕಾರಣವಾಗುತ್ತದೆ.
ಮಹಿಳೆಯನ್ನೂ ಬಲಿ ಪಡಿತಿದೆ ಹೃದಯಾಘಾತ! ಹೃದ್ರೋಗದ ಈ ಲಕ್ಷಣ ನಿರ್ಲಕ್ಷಿಸಬೇಡಿ
ಪರಿಧಮನಿಯ ಕಾಯಿಲೆ
ಹೃದ್ರೋಗಗಳು ಜೀವಕ್ಕೆ ಅಪಾಯಕಾರಿ. ಪರಿಧಮನಿಯ ಕಾಯಿಲೆಯು ಅವುಗಳಲ್ಲಿ ಒಂದು. ಇದರಲ್ಲಿ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕವನ್ನು ಪೂರೈಸುವ ಪರಿಧಮನಿಯ ಅಪಧಮನಿಗಳು ಕಿರಿದಾಗುತ್ತವೆ, ಇದು ಎದೆ ನೋವು (ಆಂಜಿನಾ) ಅಥವಾ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಸರಿಯಾದ ತಪಾಸಣೆ ಮತ್ತು ಹೃದಯ-ಆರೋಗ್ಯಕರ ಜೀವನಶೈಲಿ ಇಲ್ಲದೆ, ಪರಿಧಮನಿಯ ಕಾಯಿಲೆಯನ್ನು ತಡೆಗಟ್ಟುವುದು ಅಸಾಧ್ಯ. ನೀವು ಅಧಿಕ BP ಅಥವಾ ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ, ನಿಯಮಿತ ತಪಾಸಣೆಗಳೊಂದಿಗೆ ಅದನ್ನು ನಿರ್ವಹಿಸಿ. ಆರೋಗ್ಯಕರ ಆಹಾರ, ಹೆಚ್ಚು ವ್ಯಾಯಾಮ ಮಾಡಿ ಧೂಮಪಾನ, ಮದ್ಯಪಾನ ಮತ್ತು ಇತರ ಅನಾರೋಗ್ಯಕರ ಚಟುವಟಿಕೆಗಳನ್ನು ತಪ್ಪಿಸುವಂತಹ ಜೀವನಶೈಲಿಯ ಅಗತ್ಯ ಬದಲಾವಣೆಗಳನ್ನು ಮಾಡಿ.
ಸ್ಲೀಪ್ ಅಪ್ನಿಯ
ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಒಂದು ತೀವ್ರವಾದ ಸಮಸ್ಯೆಯಾಗಿದ್ದು, ಜನರು ನಿದ್ದೆ (Sleep) ಮಾಡುವಾಗ ಜೋರಾಗಿ ಉಸಿರಾಡುತ್ತಾರೆ. ಇದು ಹಗಲಿನಲ್ಲಿ ವಿಪರೀತ ಆಯಾಸ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತೀವ್ರ ನಿದ್ರಾ ಉಸಿರುಕಟ್ಟುವಿಕೆ ಹೊಂದಿರುವ ರೋಗಿಗಳು ನಿದ್ರೆಯ ಸಮಯದಲ್ಲಿ ಹಠಾತ್ ಸಾವುಗಳು ಮತ್ತು ಪಾರ್ಶ್ವವಾಯುವಿಗೆ ಹೆಚ್ಚು ಗುರಿಯಾಗುತ್ತಾರೆ. ಹೀಗಾಗಿಯೇ ಇದನ್ನು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ. ತೂಕವನ್ನು (Weight) ಕಳೆದುಕೊಳ್ಳುವುದು, ಚೆನ್ನಾಗಿ ತಿನ್ನುವುದು, ಧೂಮಪಾನವನ್ನು ತ್ಯಜಿಸುವುದು ಮತ್ತು ಮೂಗಿನ ಅಲರ್ಜಿಗಳಿಗೆ ಸರಿಯಾದ ಚಿಕಿತ್ಸೆ (Treatment)ಯನ್ನು ಪಡೆಯುವುದು ಈ ಸ್ಥಿತಿಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.