ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಅಧಿಕ; ಯಾಕೆ ಹೀಗೆ?

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಸೋಮವಾರದಂದೇ ಹೃದಯಾಘಾತದಿಂದ ಹೆಚ್ಚಿನ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಂಶೋಧನೆಯೊಂದು ಹೇಳಿದೆ. ಅದಕ್ಕೇನು ಕಾರಣ ಅನ್ನೋ ಮಾಹಿತಿ ಇಲ್ಲಿದೆ.

Why are serious heart attacks more likely on a Monday Vin

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು-ವೃದ್ಧರು ಅನ್ನೋ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರೂ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಸಂಶೋಧನೆಯೊಂದರ ವರದಿ ಹೇಳುವ ಪ್ರಕಾರ, ಸೋಮವಾರದಂದು ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ. ಬ್ರಿಟಿಷ್​ ಹಾರ್ಟ್​ ಫೌಂಡೇಶನ್ ಸಂಸ್ಥೆ ಬಿಡುಗಡೆ ಮಾಡಿರುವ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ ಹೆಚ್ಚಿನ ಹೃದಯಾಘಾತಗಳು ಇತರ ದಿನಗಳಿಗಿಂತ ಸೋಮವಾರವೇ ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಹೀಗಾಗಿ ಸೋಮವಾರವನ್ನು ಬ್ಲೂ ಮಂಡೇ ಅಥವಾ ನೀಲಿ ಸೋಮವಾರ ವಿದ್ಯಮಾನ ಎಂದು ಕರೆಯಲಾಗುತ್ತದೆ. ಆದರೆ 

ವಾರದ ಇತರ ದಿನಗಳಿಗಿಂತ ಸೋಮವಾರ ಶೇಕಡಾ 13% ರಷ್ಟು ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಹೃದಯರಕ್ತನಾಳದ ಸಮಸ್ಯೆಗಳು ಹೆಚ್ಚಾಗುವುದು ಕೂಡ ಬೆಳಿಗ್ಗೆ 6 ರಿಂದ 10 ರ ನಡುವೆ, ಮುಖ್ಯವಾಗಿ ವ್ಯಕ್ತಿಯು ಎಚ್ಚರವಾದಾಗ ರಕ್ತದಲ್ಲಿನ ಕಾರ್ಟಿಸೋಲ್ ಮತ್ತು ಇತರ ಹಾರ್ಮೋನುಗಳು ಹೆಚ್ಚಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಇದಕ್ಕೆ ಕಾರಣವೇನು?

ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನರಲ್ಲಿ ಹೆಚ್ಚಾಗಿದ್ಯಾ ಹಾರ್ಟ್‌ಅಟ್ಯಾಕ್‌?

ಸೋಮವಾರ ಹೃದಯಾಘಾತದ ಪ್ರಮಾಣ ಹೆಚ್ಚು ಯಾಕೆ?
ಆರೋಗ್ಯ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ, ಹಾರ್ಮೋನ್ ಮಟ್ಟಗಳು ಸಿರ್ಕಾಡಿಯನ್ ಲಯದ ಮೇಲೆ ಪರಿಣಾಮ ಬೀರುತ್ತವೆ, ಇವೆಲ್ಲವೂ ಹೃದಯಾಘಾತ (Heartattack) ಅಥವಾ ಹೃದಯರಕ್ತನಾಳದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಸೋಮವಾರವೇ ಹಾರ್ಟ್‌ಅಟ್ಯಾಕ್ ಆಗುವುದು ಹೆಚ್ಚು ಯಾಕೆ ಎಂಬ ಪ್ರಶ್ನೆಗೆ ತಜ್ಞರು ಹೇಳುವುದಿಷ್ಟು. ಸಾಮಾನ್ಯವಾಗಿ ಸೋಮವಾರ ವಾರದ ಮೊದಲ ದಿನವಾಗಿರುತ್ತದೆ. ಹೀಗಾಗಿ ಸಹಜವಾಗಿಯೇ ಕೆಲಸದ ಬಗ್ಗೆ ಹೆಚ್ಚಿನ ಒತ್ತಡ (Pressure) ಮತ್ತು ಆತಂಕವಿರುತ್ತದೆ. 

ವಿಶೇಷವಾಗಿ ಉದ್ಯೋಗದಲ್ಲಿ ಈ ರೀತಿಯ ಹೆಚ್ಚಿದ ಒತ್ತಡದ ಮಟ್ಟವು ಹೃದ್ರೋಗದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ (Study) ಉಲ್ಲೇಖಿಸಿದೆ. ಆದ್ದರಿಂದ, ಹೆಚ್ಚಿನ ಒತ್ತಡವು ಸೋಮವಾರದಂದು ಮಾರಣಾಂತಿಕ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಇದಕ್ಕೆ ನಿರ್ಧಿಷ್ಟ ಕಾರಣಗಳೇನು (Causes) ಎಂಬುದನ್ನು ಸಹ ವರದಿಯಲ್ಲಿ ತಿಳಿಸಲಾಗಿದೆ. 

ಜಿಮ್‌ನಲ್ಲಿ ಹಾರ್ಟ್‌ಅಟ್ಯಾಕ್‌ನಿಂದ ಯುವಕ ಸಾವು; ವರ್ಕೌಟ್​​​ ಮಾಡುವಾಗ್ಲೇ ಯಾಕೆ ಹೀಗಾಗುತ್ತೆ?

ದಿನಚರಿಯಲ್ಲಿ ಬದಲಾವಣೆ: ವಾರಾಂತ್ಯಗಳು ಜನರಿಗೆ ಕೆಲಸದಿಂದ ಬಿಡುವು ನೀಡಿ ಸರಿಯಾದ ಆಹಾರ, ನಿದ್ದೆ (Sleep), ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಆದರೆ ಇದು ಯಾವತ್ತಿನ ದಿನಚರಿಗಿಂತಲೂ ವಿಭಿನ್ನವಾಗಿದೆ. ಮಾತ್ರವಲ್ಲ ಕೆಲವರು ವೀಕೆಂಡ್‌ಗಳಲ್ಲಿ ಅತಿಯಾಗಿ ಡ್ರಿಂಕ್ಸ್ ಮಾಡುವುದು, ನಿದ್ದೆಗೆಟ್ಟು ಮೂವಿ ನೋಡುವುದನ್ನು ಮಾಡುತ್ತಾರೆ. ಇಂಥಾ ಬದಲಾವಣೆ​ಗಳು ಹೃದಯರಕ್ತನಾಳದ ಆರೋಗ್ಯವನ್ನು ಹಾನಿಗೊಳಿಸಬಹುದು. ಹೀಗಾಗಿ ಮತ್ತೆ ಆ ವ್ಯಕ್ತಿ ಸೋಮವಾರದಂದು ತಮ್ಮ ದಿನಚರಿಗಳನ್ನು ಪುನರಾಂಭಿಸಿದಾಗ, ಆಹಾರ ಪದ್ಧತಿ ಅಥವಾ ದೈಹಿಕ ಚಟುವಟಿಕೆ (Exercise)ಯಲ್ಲಿನ ಹಠಾತ್ ಬದಲಾವಣೆಗಳು ಹೃದಯವನ್ನು ಆಯಾಸಗೊಳಿಸಬಹುದು ಮತ್ತು ವ್ಯಕ್ತಿಗಳಲ್ಲಿ ಹೃದಯಾಘಾತವನ್ನು ಪ್ರಚೋದಿಸಬಹುದು ಎಂದು ಸಂಶೋಧನೆ ಹೇಳಿದೆ.

ತಡವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು: ಕೆಲಸ, ಟಾರ್ಗೆಟ್, ಪ್ರಮೋಶನ್‌ ಎಂಬ ಒತ್ತಡದಲ್ಲಿ ಜನರು ಆರೋಗ್ಯದತ್ತ (Health) ಗಮನ ಕೊಡುವುದನ್ನೇ ಮರೆತು ಬಿಟ್ಟಿದ್ದಾರೆ. ರೋಗಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷಿಸಿ ಬಿಡುತ್ತಾರೆ. ಇದು ದಿಢೀರ್ ಆಗಿ ಆರೋಗ್ಯ ಕೈ ಕೊಡಲು ಕಾರಣವಾಗುತ್ತದೆ. ಚಿಕಿತ್ಸೆ ಪಡೆಯಲು ಹೋದರೂ ಇದು ತುಂಬಾ ತಡವಾಗಿ ಬಿಟ್ಟಿರುತ್ತದೆ. ಹೀಗಾಗಿ ಪ್ರಾಣ ಹೋಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

ವಿಟಮಿನ್ ಡಿ, ವಯಸ್ಸಾದವರಲ್ಲಿ ಹೃದಯಾಘಾತ ತಡೆಯಬಹುದು; ಅಧ್ಯಯನದಿಂದ ಮಾಹಿತಿ

ಸಾಮಾಜಿಕ ವರ್ತನೆಯಲ್ಲಿ ಬದಲಾವಣೆ: ಸಾಮಾಜಿಕ ಜೆಟ್ ಲ್ಯಾಗ್ ಪರಿಕಲ್ಪನೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಇದು ದೇಹದ ಜೈವಿಕ ಗಡಿಯಾರವಾಗಿದ್ದು, ನಿದ್ರೆ ಮತ್ತು ದೇಹದ (Body) ನಡುವಿನ ತಪ್ಪಾದ ಸಂಯೋಜನೆಯ ಬಗ್ಗೆ ತಿಳಿಸುತ್ತದೆ. ಜನರು ವಾರಾಂತ್ಯದಲ್ಲಿ ತಮ್ಮ ನಿದ್ರೆಯ ಸಮಯ, ಆಹಾರದ ಮಿತಿಯನ್ನು ಬದಲಾಯಿಸಿದಾಗ ಇದು ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಹೃದಯರಕ್ತನಾಳದ ಆರೋಗ್ಯದ ಮೇಲೂ ಇದು ಋಣಾತ್ಮಕ ಪರಿಣಾಮ ಬೀರಬಹುದು. ಇದು ಹೃದಯಾಘಾತದಂಥಹಾ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಸೋಮವಾರ ಬೆಳಗ್ಗಿನ ಗದ್ದಲದ ಪರಿಣಾಮ: ವಾರಾಂತ್ಯದಲ್ಲಿ ನೆಮ್ಮದಿಯಾಗಿರುವ ಮಂದಿಗೆ ಮಂಡೇ ಶುರುವಾದಾಗ ತಲೆನೋವು ಬಂದುಬಿಡುತ್ತದೆ. ಮುಂಜಾನೆಯ ಟ್ರಾಫಿಕ್, ಆಫೀಸ್‌ ಕೆಲಸ ಮನಸ್ಸಿಗೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಹೆಚ್ಚಿನ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯದ ಮಾನ್ಯತೆ ಹೃದಯರಕ್ತನಾಳದ ಘಟನೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

Latest Videos
Follow Us:
Download App:
  • android
  • ios