Asianet Suvarna News Asianet Suvarna News

ನಿಮ್ಮಲ್ಲೂ ಇರಬಹುದಾದ ಗುಪ್ತ ಖಿನ್ನತೆಯ ಲಕ್ಷಣಗಳು ಇವು!

ಇಲ್ಲಿ ಎಂಟು ಲಕ್ಷಣಗಳನ್ನು ನೀಡಲಾಗಿದೆ. ಇವು ಗುಪ್ತ ಖಿನ್ನತೆ ಅಥವಾ ನಮ್ಮಲ್ಲೂ ಅಡಿಗರಬಹುದಾದ, ಮುಂದೆ ದೊಡ್ಡದಾಗಿ ಪರಿಣಮಿಸಬಹುದಾದ ಖಿನ್ನತೆಯ ಈಗಿನ ಲಕ್ಷಣಗಳು. ಹೀಗೆ ಇವೆಲ್ಲ ನಿಮ್ಮಲ್ಲಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ...

Secret depression may appear in all know about it
Author
Bengaluru, First Published Feb 21, 2021, 3:15 PM IST

ಖಿನ್ನತೆ ಇಂದು ನೂರಕ್ಕೆ ಐದು ಜನರಿಗೆ ಸಾಮಾನ್ಯ ಎನ್ನುವಂತಾಗಿದೆ. ಕೆಲವರಲ್ಲಿ ಇದು ಗುಣಪಡಿಸಬಹುದು, ಕೆಲವರಲ್ಲಿ ಆಗೋಲ್ಲ. ಕಂಟ್ರೋಲ್‌ನಲ್ಲಂತೂ ಇಡಬಹುದು. ಸದಾ ದುಃಖ, ಬೇಜಾರು, ಕೊರಗು, ತನ್ನನ್ನು ಯಾರೂ ಗಮನಿಸೋಲ್ಲ ಎಂಬ ಆಕ್ರೋಶ ಹಾಗೂ ಮಾತನಾಡಿಸದಿರಲಿ ಎಂಬ ಅಂತರ ಕಾಪಾಡಿಕೊಳ್ಳುವಿಕೆ, ಯಾವುದರಲ್ಲೂ ಉತ್ಸಾಹವೇ ಇಲ್ಲ, ಇವೇ ಮುಂತಾದ ಗುಣಗಳು ಎಲ್ಲರಲ್ಲೂ ಸ್ವಲ್ಪ ಸ್ವಲ್ಪ ಇದ್ದೇ ಇರುತ್ತವಾದರೂ ಖಿನ್ನತೆಗೆ ಒಳಗಾದವರಲ್ಲಿ ಹೆಚ್ಚಿರುತ್ತವೆ. ಇಲ್ಲಿ ಎಂಟು ಲಕ್ಷಣಗಳನ್ನು ನೀಡಲಾಗಿದೆ. ಇವು ಗುಪ್ತ ಖಿನ್ನತೆ ಅಥವಾ ನಮ್ಮಲ್ಲೂ ಅಡಿಗರಬಹುದಾದ, ಮುಂದೆ ದೊಡ್ಡದಾಗಿ ಪರಿಣಮಿಸಬಹುದಾದ ಖಿನ್ನತೆಯ ಈಗಿನ ಲಕ್ಷಣಗಳು. ಹೀಗೆ ಇವೆಲ್ಲ ನಿಮ್ಮಲ್ಲಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ...

ಫಿಲಾಸಫಿಕಲ್ ಚಿಂತನೆಗಳು
ಈ ಲೋಕ ಯಾಕೆ, ಈ ಜೀವನದ ಅರ್ಥ ಏನು, ಇದಕ್ಕೆಲ್ಲ ಏನಾದರೂ ಮೌಲ್ಯ ಇದೆಯಾ, ಸಂಬಂಧಗಳಿಗೆ ಏನು ಅರ್ಥ, ನಾವು ಬದುಕಿ ಯಾರಿಗಾದರೂ ಫಲವೇನು- ಮುಂತಾದ ಚಿಂತನೆಗಳು ಇವರಲ್ಲಿ ಸದಾ ಬರುತ್ತಾ ಇರುತ್ತವೆ. ದುಃಖ ಬಂದಾಗ ಸದಾ ಇದು ನನಗೇ ಯಾಕೆ ಆಗುತ್ತದೆ ಅಂದುಕೊಳ್ಳುತ್ತಾರೆ. ಇವರು ಮಾತಾಡುವ ಪದಗಳು ಗೊಂದಲಮಯ ಹಾಗೂ ಅಮೂರ್ತವಾಗಿರುತ್ತವೆ. ಕೆಲವೊಮ್ಮೆ ಅರ್ಥವೇ ಆಗುವುದಿಲ್ಲ. ಇವರ ಚಿಂತನೆಗಳೂ ಸ್ಪಷ್ಟವಾಗಿರುವುದಿಲ್ಲ. ನಿಮ್ಮ ಚಿಂತನೆಗಳನ್ನು ನೀವು ಸ್ಪಷ್ಟವಾಗಿ, ಸರಿಯಾದ ಶಬ್ದಗಳಲ್ಲಿ ಹೇಳಲು ಸಾಧ್ಯವಾದರೆ ನಿಮಗೆ ಖಿನ್ನತೆ ಕಾಡದು.

ಸ್ಮಾರ್ಟ್ ಫೋನನ್ನು ಟಾಯ್ಲೆಟ್ ಗೆ ತೆಗೆದುಕೊಂಡು ಹೋಗ್ಬೇಡಿ! ...

ನೆಪ ಹೇಳುವುದು
ಇವರು ನೆಪ ಹೇಳುವುದರಲ್ಲಿ ಸಿದ್ಧಹಸ್ತರು. ತಮ್ಮ ಬೇಜಾರು ಅಥವಾ ಬಯಕೆಗಳನ್ನು ಬಚ್ಚಿಟ್ಟುಕೊಳ್ಳಲು ಭಯಂಕರವಾದ ಕತೆಗಳನ್ನು ಕಟ್ಟುತ್ತಾರೆ. ತಮ್ಮ ಎಮೋಷನಲ್ ಸ್ಥಿತಿಗತಿಯಿಂದ ಬೇರೆ ಯಾರೂ ವಿಲಿತವಾಗದಂತೆ ಇವರ ಪ್ಲಾನು ಹೀಗೆ.

Secret depression may appear in all know about it

ಸಾಕಷ್ಟು ಪ್ರತಿಕ್ರಿಯೆಯ ಕೊರತೆ
ಎದುರಿನವರ ಮಾತಿಗೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ತಮ್ಮ ಸುತ್ತಲಿನ ವಾಸ್ತವವನ್ನು ಇತರರಂತಲ್ಲದೆ ಭಿನ್ನ ರೀತಿಯಲ್ಲೇ ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲರ ಮಾತಿಗೂ ಹೂಂಗುಟ್ಟುತ್ತಾರೆ, ಸೈ ಎನ್ನುತ್ತಾರೆ ಅಥವಾ ಭಿನ್ನ ಅಭಿಪ್ರಾಯಗಳಿದ್ದರೆ ಅದನ್ನು ವ್ಯಕ್ತಪಡಿಸುವುದೇ ಇಲ್ಲ. ಅವಮಾನಗಳನ್ನು ಎದುರಿಸಲು ನಿರಾಕರಿಸುತ್ತಾರೆ. ಕೆಲವೊಮ್ಮೆ ಅತ್ಯಂತ ಆತ್ಮೀಯರು ತೀರಿಕೊಂಡಾಗಲೂ ಅದರಿಂದ ಆಗುವ ನೋವಿ ಯಾತನೆಯನ್ನು ಫೀಲ್ ಮಾಡದೇ ಇರಬಹುದು.

ಬಕ್ಕ ತಲೆ ಆಗದಿರಲು ಪುರುಷರು ಈ ಆಹಾರ ಕ್ರಮಗಳನ್ನು ಅನುಸರಿಸಿ ...

ಮನೋದೈಹಿಕ ಕಾಯಿಲೆಗಳು
ಮನೋದೈಹಿಕ ಕಾಯಿಲೆಗಳೆಂದರೆ ಮನಸ್ಸಿನಲ್ಲಿ ಹುಟ್ಟಿ ದೇಹಕ್ಕೆ ವರ್ಗಾವಣೆಯಾಗುವ ಯಾತನೆಗಳು. ಇವರು ಹೃದಯ ಕಾಯಿಲೆ, ಕಿಡ್ನಿ ಸಮಸ್ಯೆ, ಡಯಾಬಿಟಿಸ್‌ನಿಂದ ಹಿಡಿದು ಕೈಕಾಲು ಮೂಗು ಕಿವಿ ಕಣ್ಣು ಹೀಗೆ ಎಲ್ಲೆಲ್ಲಿ ತಮ್ಮ ಅಂಗ ಇದೆಯೋ ಅದಕ್ಕೆಲ್ಲ ಒಂದು ರೋಗವನ್ನು ಮನಸ್ಸಿನಲ್ಲಿ ಮೊದಲೇ ಅಂಟಿಸಿಕೊಂಡು ಅದರ ಯಾತನೆಯನ್ನು ನಿಜಕ್ಕೂ ಅನುಭವಿಸಬಲ್ಲರು. ಡಿಟೇಲಾಗಿ ಚೆಕ್ ಮಾಡಿದರೆ ಇವರಿಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ಇದೆ ಎಂದು ಕಲ್ಪಿಸಿಕೊಂಡ ಯಾತನೆಯೇ ಒತ್ತಡಕ್ಕೂ ಇನ್ನಷ್ಟು ಖಿನ್ನತೆಗೂ ಕಾರಣವಾಗಿ, ಮತ್ತಷ್ಟು ದೈಹಿಕ ಹಿಂಸೆ ಸೃಷ್ಟಿಸುವುದಂತೂ ನಿಜ.

ಮೆಂಟಲ್ ಚ್ಯೂಯಿಂಗ್ ಗಮ್
ಇವರು ಯಾವುದೋ ಒಂದು ವಿಚಾರ ಅಥವಾ ಸಮಸ್ಯೆಯನ್ನು ಹಿಡಿದುಕೊಂಡು ಅದನ್ನೇ ಪದೇ ಪದೇ ಮತ್ತೆ ಮತ್ತೆ ಹೇಳುತ್ತಲೇ, ಅದಕ್ಕಾಗಿ ಪರಿಹಾರ ಹುಡುಕುತ್ತಲೇ ಇರುತ್ತಾರೆ. ಇಡೀ ಜೀವಮಾನ ಅದನ್ನೇ ಮಾಡುತ್ತಾರೆ. ಒಳಪ್ರಜ್ಞೆಯಲ್ಲಿ ನಿಜಕ್ಕೂ ಅವರಿಗೆ ಅದು ಪರಿಹಾರ ಆಗುವುದು ಬೇಕಾಗಿರುವುದಿಲ್ಲ ಅಥವಾ ಆ ಸಮಸ್ಯೆಯೇ ನಿಜಕ್ಕೂ ಇರುವುದಿಲ್ಲ. ನಿಮ್ಮ ಸಂಬಂಧಿಕರು ಮಿತ್ರರಲ್ಲಿ ಯಾರಾದರೂ ಒಂದೇ ಸಮಸ್ಯೆಯ ಬಗ್ಗೆ ಮತ್ತೆ ಮತ್ತೆ ಹೇಳುತ್ತಿದ್ದರೆ, ಅದನ್ನು ಸಾಲ್ವ್‌ ಮಾಡುವ ಬದಲು ಬರೀ ಮಾತಾಡುತ್ತ ಇದ್ದರೆ, ಅದು ಖಿನ್ನತೆ ಆರಂಭಿಕ ಹಂತ.

ಕೊಳಕುತನ
ಇವರು ತಮ್ಮ ಸುತ್ತಮುತ್ತಲನ್ನೂ ಮನೆಯನ್ನೂ ಕ್ಲೀನಾಗಿ ಇಟ್ಟುಕೊಳ್ಳುವುದಿಲ್ಲ. ಗಲೀಜಾಗಿರುವುದೇ ಇವರಿಗೆ ಪರಮ ಸುಖ ಅನಿಸುತ್ತದೆ. ಸ್ವಚ್ಛತೆಯ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ. 

ಅಪ್ಪುಗೆ ಆರೋಗ್ಯಕರ, ಆದ್ರೆ ಸದ್ಯಕ್ಕೆ ನಡುವೆ ಅಂತರವಿರಲಿ..! ...

ಕೆಲಸದಲ್ಲಿ ನಿರರ್ಥಕತೆ
ತಮ್ಮ ಕೆಲಸಗಳಲ್ಲಿ ಬರಬರುತ್ತ ಉತ್ಸಾಹ ಕಳೆದುಕೊಳ್ಳುತ್ತಾರೆ. ಉದ್ಯೋಗದಲ್ಲಿ ಉತ್ಪಾದಕತೆ, ಪ್ರಾಡಕ್ಟಿವಿಟಿ ತೋರಿಸಲು ಅಸಮರ್ಥರಾಗುತ್ತಾರೆ. ಮೊದಲು ಮಾಡುತ್ತಿದ್ದ ಕೆಲಸಗಳನ್ನು ಈಗ ಸರಿಯಾಗಿ ಮಾಡಲಾಗುವುದಿಲ್ಲ. ದೈನಂದಿನ ಕೆಲಸಗಳಲ್ಲಿ ಅರ್ಥವಿಲ್ಲ ಎಂದು ವಾದಿಸತೊಡಗುತ್ತಾರೆ. ಕೆಲವೊಮ್ಮೆ ಸಕ್ರಿಯರಲ್ಲದ ವ್ಯಕ್ತಿಗಳು ಇದ್ದಕ್ಕಿದ್ದಂತೆ ಚುರುಕಾಗಿ ಓಡಾಡತೊಡಗಿದರೆ ಅದೂ ಡೇಂಜರ್ ಸಿಗ್ನಲ್ಲೇ.

ಸಂತೋಷದ ಮುಖವಾಡ
ಇವರು ತಮ್ಮ ಬೇಜಾರು ದುಃಖ ಬಚ್ಚಿಟ್ಟುಕೊಳ್ಳಲು ಸಂತೋಷದ ಮುಖವಾಡದ ಮೊರೆ ಹೋಗುತ್ತಾರೆ. ಹೀಗಾಗಿ ತುಂಬಾ ಸಂತೋಷವಾಗಿದ್ದೇನೆ ಎಂದು ತೋರಿಸಿಕೊಳ್ಳುವವರಲ್ಲಿ ಡಿಪ್ರೆಶನ್ ಇರಬಹುದು ಎಂಬುದನ್ನು ಮರೆಯದಿರೋಣ.
 

Follow Us:
Download App:
  • android
  • ios