ಪ್ರೇಮಿಗಳ ದಿನ ಆಚರಿಸಿಕೊಂಡವರಿಗೆ ಅಪ್ಪುಗೆಯಲ್ಲಿರೋ ಸುಖ ಅನುಭವಕ್ಕೆ ಬಂದಿರುತ್ತೆ. 2020ರಲ್ಲಿ ಕೊರೋನಾ ಕಾರಣಕ್ಕೆ ನಾವು ಮಿಸ್ ಮಾಡಿಕೊಂಡಿರೋ ವಿಷಯಗಳಲ್ಲಿ ಈ ಅಪ್ಪುಗೆಯೂ ಸೇರಿದೆ.ನಾವು ದುಃಖದಲ್ಲಿರೋವಾಗ ಅಥವಾ ನಮ್ಮ ಪ್ರೀತಿಪಾತ್ರರು ಸಂಕಷ್ಟ ಎದುರಿಸುತ್ತಿರೋವಾಗ ಒಂದೇಒಂದು ಅಪ್ಪುಗೆ ಸಾವಿರ ಸಾಂತ್ವನದ ಮಾತುಗಳನ್ನು ಹೇಳಬಲ್ಲದು.

ಎಷ್ಟೋ ದಿನಗಳ ಬಳಿಕ ಸಂಗಾತಿ, ಸ್ನೇಹಿತರು ಅಥವಾ ಪ್ರೀತಿಪಾತ್ರರನ್ನು ಭೇಟಿಯಾದಾಗ ಒಮ್ಮೆ ಅವರನ್ನು ತಬ್ಬಿ ಹಿಡಿದಾಗಲೇ ಮನಸ್ಸಿಗೆ ಖುಷಿ,ನೆಮ್ಮದಿ. ರಚ್ಚೆ ಹಿಡಿದು ಅಳುತ್ತಿರೋ ಕಂದಮ್ಮ ಕೂಡ ಅಮ್ಮ ಅಪ್ಪಿಕೊಂಡ ತಕ್ಷಣ ಸುಮ್ಮನಾಗಿ ಬಿಡುತ್ತೆ. ಪ್ರೀತಿ, ಅಕ್ಕರೆ, ಕಾಳಜಿ ತೋರ್ಪಡಿಸಲು ಪದಗಳೇ ಬೇಕಾಗಿಲ್ಲ,ಬರೀ ಅಪ್ಪುಗೆ ಸಾಕು.

ಕ್ಯಾನ್ಸರ್‌ ರೋಗಿಗಳು ತಿನ್ನಲೇಬೇಕಾದ ಹಣ್ಣುಗಳಿವು!

ಅಪ್ಪುಗೆ ಕಸಿದ ಕೊರೋನಾ

ಕೊರೋನೋತ್ತರ ಜಗತ್ತಿನಲ್ಲಿ ಒಂದೇ ಸೂರಿನಡಿಯಿದ್ರೂ ಮನೆಮಂದಿ ಒಬ್ಬರನ್ನೊಬ್ಬರು ಮುಟ್ಟಲಾಗದ, ಅಪ್ಪಿಕೊಳ್ಳಲಾಗದ ಸ್ಥಿತಿ. ಈ ದುಸ್ತರ ಸಮಯದಲ್ಲಿ ನಿಜಕ್ಕೂಅಪ್ಪುಗೆಯ ಅಗತ್ಯವಿತ್ತು.ಕೆನಡಾದ ಮಹಿಳೆಯೊಬ್ಬರು ಕ್ವಾರಂಟೈನ್ ಅವಧಿಯಲ್ಲಿ ಅಮ್ಮನ್ನ ಅಪ್ಪುಗೆಯನ್ನು ಅದೆಷ್ಟು ಮಿಸ್ ಮಾಡಿಕೊಂಡ್ರೂ ಅಂದ್ರೆ ʼಹಗ್ ಗ್ಲೌʼ ಸಿದ್ಥಪಡಿಸಿ ಅದನ್ನು ಧರಿಸಿ ಅಮ್ಮನನ್ನು ತಬ್ಬಿಕೊಂಡು ಖುಷಿಪಟ್ರು.

ಇಂಗ್ಲೆಂಡ್ನ ಅಂಥೋನಿ ಕೌವಿನ್ ಕ್ವಾರಂಟೈನ್ನಲ್ಲಿರೋ ಅಜ್ಜಿಯನ್ನು ತಬ್ಬಿಕೊಳ್ಳಲು ʼಕಡ್ಲ ಕರ್ಟೈನ್ʼ ಎಂಬ ಉಡುಗೆ ಸಿದ್ಧಪಡಿಸಿದ್ದರು. ಭಾರತದ ಉದ್ಯಮಿ ಆನಂದ್ ಮಹೀಂದ್ರ ಶೋವರ್ ಕರ್ಟೈನ್ ಭವಿಷ್ಯದಲ್ಲಿ ಬದುಕು ಬದಲಾಯಿಸೋ ಅನ್ವೇಷಣೆಯಾಗಲಿದೆ ಎಂದು ಟ್ವೀಟ್ ಮಾಡೋ ಮೂಲಕ ಹೊಸ ಉದ್ಯಮ ಸಾಧ್ಯತೆಯೊಂದನ್ನು ತೆರೆದಿಟ್ಟಿದ್ದರು. ಇತ್ತೀಚೆಗೆ ಸ್ವಿಜರ್ಲೆಂಡ್ ಸರ್ಕಾರ 10 ವರ್ಷದೊಳಗಿನ ಮಕ್ಕಳು ತಮ್ಮ ಅಜ್ಜ-ಅಜ್ಜಿಯನ್ನು ತಬ್ಬಿಕೊಳ್ಳೋದ್ರಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ. 

ಅಪ್ಪುಗೆ ಆರೋಗ್ಯಕರ
ಭಯ, ಆತಂಕ, ಉದ್ವೇಗವನ್ನು ಒಂದು ಅಪ್ಪುಗೆ ಕಡಿಮೆ ಮಾಡಬಲ್ಲದು. ಇದು ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಸಂಗತಿಯೇ ಆಗಿದೆ. ಅನೇಕ ವೈಜ್ಞಾನಿಕ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿದ್ದು,ಭಯಕ್ಕೆ ಅಪ್ಪುಗೆ ಅತ್ಯುತ್ತಮ ಮದ್ದು ಎಂದಿವೆ. ನಮ್ಮನ್ನು ತುಂಬಾ ಆರೈಕೆ ಮಾಡೋರು, ಕಾಳಜಿ ತೋರುವಂಥವರ ಒಂದೇ ಒಂದು ಸ್ಪರ್ಶದಿಂದ ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತೆ.

ಇದು ನಮ್ಮ ನೋವು, ಭಯ, ಆತಂಕವನ್ನು ತಗ್ಗಿಸಿ ಅನುಭೂತಿ ಹುಟ್ಟಿಸುತ್ತೆ. ಹೀಗಾಗಿ ಅಪ್ಪುಗೆಯಿಂದ ದೇಹದಲ್ಲಿ ಈ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಒತ್ತಡ, ಆತಂಕವನ್ನು ದೂರಗೊಳಿಸುತ್ತೆ ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ.

ಕ್ಲಿಯರ್, ಸುಂದರ ಮುಖಕ್ಕಾಗಿ ಎಗ್ ವೈಟ್ ಟ್ರೈ ಮಾಡಿ

ಸ್ಪರ್ಶದಲ್ಲಿದೆ ಮಾನಸಿಕ ವ್ಯಾಧಿಗೆ ಮದ್ದು

ಪ್ರೀತಿ ಪಾತ್ರರ ಸ್ಪರ್ಶಕ್ಕೆ ಅಗಾಧ ಶಕ್ತಿಯಿದೆ. ಹುಟ್ಟಿನಿಂದಲೇ ಮನುಷ್ಯನಿಗೆ ಸ್ಪರ್ಶದ ಅನುಭೂತಿಯ ಪರಿಚಯವಾಗುತ್ತೆ. ಪುಟ್ಟ ಕಂದಮ್ಮನಿಗೆ ಅಮ್ಮನ ಅಪ್ಪುಗೆಯೇ ಜಗತ್ತು. ನೋವು, ಭಯ, ಆತಂಕ ಎಲ್ಲವೂ ಅಮ್ಮನ ಅಪ್ಪುಗೆಯಲ್ಲಿ ನೀರಾಗಿ ಬಿಡುತ್ತೆ. ಅದೇ ರೀತಿ ಬೆಳೆದು ದೊಡ್ಡವರಾದ ಮೇಲೂ ಕೆಲವೊಮ್ಮೆ ನಮ್ಮ ಪ್ರೀತಿಪಾತ್ರರ ಅಪ್ಪುಗೆಗಾಗಿ ಮನಸ್ಸು ಹಂಬಲಿಸುತ್ತೆ.

ಅಪ್ಪುಗೆ ಒತ್ತಡವನ್ನು ದೂರಗೊಳಿಸಿ ಭದ್ರತೆಯ ಭಾವನೆಯನ್ನು ಮೂಡಿಸುತ್ತೆ. ದುಃಖದಲ್ಲಿರೋವಾಗ ಪ್ರೀತಿಪಾತ್ರರ ಅಪ್ಪುಗೆ ಅದೆಷ್ಟು ಧೈರ್ಯ, ನೆಮ್ಮದಿ ಒದಗಿಸುತ್ತೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಭಾವನಾತ್ಮಕವಾಗಿ ನಾವು ಒಬ್ಬ ವ್ಯಕ್ತಿಗೆ ಹತ್ತಿರವಾಗಲು ಸ್ಪರ್ಶ ಕೂಡ ಅಗತ್ಯ. 

ಹೀಗೆ ಅಪ್ಪಿಕೊಂಡ್ರೆ ಅಪಾಯವಿಲ್ಲ

ಕೊರೋನೋತ್ತರ ಬದುಕಿನಲ್ಲಿ ಅಪ್ಪುಗೆ, ಹ್ಯಾಂಡ್ಶೇಕ್, ಹೈಫೈ ಎಲ್ಲವೂ ದೂರವಾಗಿವೆ. ಈಗೇನಿದ್ರೂ ನಮಸ್ತೆ, ಹಾಯಿ, ಹಲೋಗಷ್ಟೇ ಜಾಗ. ಆದ್ರೂ ಈ ಸಮಯದಲ್ಲೂ ನೀವು ಯಾರನ್ನಾದ್ರೂ ಅಪ್ಪಿಕೊಳ್ಳಲೇಬೇಕು ಅನ್ನಿಸಿದ್ರೆ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಆ ಬಳಿಕ ತಬ್ಬಿಕೊಳ್ಳಬಹುದು.

-ಅಪ್ಪಿಕೊಳ್ಳುವಾಗ ಮಾಸ್ಕ್ ಧರಿಸಲು ಮರೆಯಬೇಡಿ.
-ಅಪ್ಪಿಕೊಂಡಿರೋವಾಗ ಮಾತು, ಕೆಮ್ಮು ಬೇಡ.
-ತಬ್ಬಿಕೊಂಡಿರೋವಾಗ ಕಣ್ಣೀರು ಅದೆಷ್ಟೇ ಒತ್ತರಿಸಿಕೊಂಡು ಬಂದ್ರೂ ಕೆಳಗೆ ಬೀಳದಂತೆ ಅಣೆಕಟ್ಟು ಕಟ್ಟಿ. ಕಣ್ಣೀರು, ಮೂಗಿನಿಂದ ಕೆಳಗಿಳಿಯೋ ನೀರು ಎರಡೂ ವೈರಸ್ ಹರಡಬಲ್ಲವು, ಎಚ್ಚರ.
-ನಿಮ್ಮ ಮುಖ ಮತ್ತು ಮಾಸ್ಕ್ ನೀವು ತಬ್ಬಿಕೊಂಡಿರೋ ವ್ಯಕ್ತಿಯ ದೇಹ ಅಥವಾ ಬಟ್ಟೆಗೆ ತಾಕದಂತೆ ಎಚ್ಚರ ವಹಿಸಿ.

ಹೊಟ್ಟೆ ಉಬ್ಬರದ ಜೊತೆ ಈ ರೀತಿ ಆಗುತ್ತಿದ್ದರೆ, ಇರಲಿ ಎಚ್ಚರ

-ಅಪ್ಪಿಕೊಂಡಾಗ ನಿಮ್ಮಿಬ್ಬರ ಮುಖ ವಿರುದ್ಧ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.
-ಅಪ್ಪುಗೆಯಿಂದ ಹಿಂದೆ ಸರಿಯೋ ಸಮಯದಲ್ಲಿ ಪರಸ್ಪರ ಉಸಿರು ತಾಕದಂತೆ ನೋಡಿಕೊಳ್ಳಿ.
-ಅಪ್ಪಿಕೊಂಡ ಬಳಿಕ ನಿಮ್ಮ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ವಾಷ್ ಬಳಸಿ ಚೆನ್ನಾಗಿ ತೊಳೆದುಕೊಳ್ಳಿ.
-ಮಕ್ಕಳು ನಿಮ್ಮ ಮೊಣಕಾಲು ಅಥವಾ ಸೊಂಟದ ಸುತ್ತ ತಮ್ಮ ಕೈಗಳನ್ನು ಬಳಸಿ ಅಪ್ಪಿಕೊಳ್ಳುವಂತೆ ಸೂಚಿಸಿ.
-ಶೀತ, ಕೆಮ್ಮು ಅಥವಾ ಕೊರೋನಾದ ಇತರ ಲಕ್ಷಣಗಳನ್ನು ಹೊಂದಿರೋ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಅಪ್ಪಿಕೊಳ್ಳಬೇಡಿ.