ಬಕ್ಕ ತಲೆ ಆಗದಿರಲು ಪುರುಷರು ಈ ಆಹಾರ ಕ್ರಮಗಳನ್ನು ಅನುಸರಿಸಿ
First Published Feb 19, 2021, 11:32 AM IST
ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದು ಹೆಣ್ಣಾಗಿರಲಿ ಅಥವಾ ಗಂಡು, ಯಾರಿಗಾದರೂ ದಟ್ಟವಾದ ಸುಂದರ ಕೂದಲು ಬೇಕೆನ್ನುವ ಅಸೆ ಇದ್ದೇ ಇರುತ್ತದೆ. ಆದರೆ ಈ ಕೂದಲನ್ನು ಪೋಷಣೆ ಮಾಡುವುದೇ ಒಂದು ಕಷ್ಟದ ಕೆಲಸ. ಯಾಕೆಂದರೆ ಜನರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅದು ಬಕ್ಕ ತಲೆ ಸಮಸ್ಯೆ. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಹೆಲ್ತೀ ಫುಡ್ ತಿನ್ನೋದೊಳ್ಳೆಯದು. ಹೇಗೆ?

ಪುರುಷರಲ್ಲಿ ಅಂಡ್ರೋಜನ್ ಹಾರ್ಮೋನ್ ಕೂದಲ ಬೆಳವಣಿಗೆಯನ್ನು ಕಂಟ್ರೋಲ್ ಮಾಡುತ್ತದೆ. ಈ ಹಾರ್ಮೋನ್ ಲೆವೆಲ್ ಸರಿಯಾಗಿ ಇರದಿದ್ದರೆ ಪುರುಷರಲ್ಲಿ ಬಕ್ಕ ತಲೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನ ಮೇಲ್ ಪ್ಯಾಟರ್ನ್ ಬಾಲ್ಡ್‌ನೆಸ್ ಎನ್ನುತ್ತಾರೆ.

ಈ ಸಮಸ್ಯೆ ನಿವಾರಣೆಗೆ ಸಮಸ್ಯೆ ಎದುರಾದ ಬಳಿಕ ಜನರು ವೈದ್ಯರ ಬಳಿ ಹೋಗುತ್ತಾರೆ ಅಥವಾ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಾರೆ. ಆದರೆ ಆಹಾರಕ್ರಮದಲ್ಲಿ ಸರಿಯಾದ ಡಯಟ್ ಪಾಲಿಸಿದರೆ ಕೂದಲಿನ ಸಮಸ್ಯೆ ಕಾಡುವುದೇ ಇಲ್ಲ. ಹಾಗಾದರೆ ಬಕ್ಕ ತಲೆ ಸಮಸ್ಯೆ ನಿವಾರಣೆಗೆ ಆಹಾರ ಕ್ರಮದಲ್ಲಿ ಯಾವ ಆಹಾರ ಸೇರಿಸಬೇಕು?