ಮಲೇಷ್ಯಾದಲ್ಲಿ ಮಾತನಾಡಿದ ಸದ್ಗುರು, ಜಗತ್ತಿನಾದ್ಯಂತ ಮಣ್ಣಿನ ಫಲವತ್ತತೆ ನಾಶವಾಗುತ್ತಿದ್ದು, ಭವಿಷ್ಯದಲ್ಲಿ ಆಹಾರ ಉತ್ಪಾದನೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದ್ದಾರೆ. ‘ಭೂಮಿಯ ಮೇಲೆ ಇನ್ನು ಕೇವಲ 60 ಬೆಳೆಗಳನ್ನು ಮಾತ್ರ ತೆಗೆಯಬಹುದು’ ಎಂಬ ಶಾಕಿಂಗ್ ಸತ್ಯ ಹೇಳಿದ್ದಾರೆ! ಏನಿದು ಆತಂಕ ಕುಟ್ಟಿಸುವ ಸುದ್ದಿ?!
ಈಶಾ ಯೋಗ ಸೆಟಂರ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಮಲೇಷ್ಯಾದಲ್ಲಿ ಜಗತ್ತಿಗೆ ಶಾಕಿಂಗ್ ಸತ್ಯ ಹೇಳಿದ್ದಾರೆ! ಏನಿದು..!?
ಮಲೇಷ್ಯಾದ ಕೌಲಾಲಂಪುರ್ನಲ್ಲಿ ಕಳೆದ ವಾರ (ಅ. 7) ನಡೆದ ‘ಪ್ರಜ್ಞಾಪೂರ್ವಕ ಜಗತ್ತಿನ ನಿರ್ಮಾಣ’ (Building a Conscious World) ಕಾರ್ಯಕ್ರಮದಲ್ಲಿ ಸದ್ಗುರು ಮಾತನಾಡಿದರು. ಜಗತ್ತಿನಾದ್ಯಂತ ಮಣ್ಣಿನ ಫಲವತ್ತತೆ ವೇಗವಾಗಿ ಹಾಳಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮತ್ತು ಭದ್ರತೆಗೆ ಎದುರಾಗುವ ಸವಾಲುಗಳ ಬಗ್ಗೆ ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು, "ಈ ಭೂಮಿಯ ಮೇಲೆ ಇನ್ನು ಕೇವಲ 60 ಬಾರಿ ಮಾತ್ರ ಬೆಳೆ ತೆಗೆಯಬಹುದು ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳಿದೆ. ಅಂದರೆ, ಇದು ಸರಿಸುಮಾರು 40 ರಿಂದ 45 ವರ್ಷಗಳಿಗೆ ಸಮ. ಆ ನಂತರ, ಆಹಾರ ಉತ್ಪಾದನೆ ಮಾಡುವುದು ತುಂಬಾನೇ ಕಷ್ಟವಾಗಲಿದೆ," ಎಂದು ಎಚ್ಚರಿಸಿದರು.
ಇನ್ನೂ ಹುಟ್ಟದಿರುವ ಮಕ್ಕಳ ಊಟವನ್ನು ಕಸಿದು ತಿನ್ನುತ್ತಿದ್ದೇವೆ!
"ಸದ್ಯ ನಾವು ಇನ್ನೂ ಹುಟ್ಟದಿರುವ ಮಕ್ಕಳ ಊಟವನ್ನು ಕಸಿದು ತಿನ್ನುತ್ತಿದ್ದೇವೆ. ಇದನ್ನೊಮ್ಮೆ ಅರ್ಥಮಾಡಿಕೊಳ್ಳಿ. ನಾವು ನಮ್ಮ ಊಟವನ್ನಾಗಲಿ ಅಥವಾ ನಮ್ಮ ಮಕ್ಕಳ ಊಟವನ್ನಾಗಲಿ ತಿನ್ನುತ್ತಿಲ್ಲ. ಬದಲಾಗಿ, ಇನ್ನು ಹುಟ್ಟಬೇಕಿರುವ ಮಗುವಿಗೆ ಸೇರಿರುವ ಆಹಾರವನ್ನು ನಾವು ಈಗಲೇ ಮುಗಿಸುತ್ತಿದ್ದೇವೆ. ಇದು ಒಳ್ಳೆಯದಲ್ಲ. ದಯವಿಟ್ಟು ಎಚ್ಚೆತ್ತುಕೊಳ್ಳಿ," ಎಂದರು.

"ಪ್ರತಿಯೊಂದು ದೇಶದಲ್ಲೂ ನೀತಿ-ನಿಯಮಗಳು ಬದಲಾಗಬೇಕು ಅನ್ನೋದು ಬಹಳ ಮುಖ್ಯವಾದ ವಿಚಾರ. ಆಯಾ ದೇಶದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಗುರಿಯೊಂದಿಗೆ ಹೊಸ ನೀತಿಗಳು ರೂಪುಗೊಳ್ಳಬೇಕು. ಮಣ್ಣಿನ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಜನಸಾಮಾನ್ಯರು ಸರ್ಕಾರ ಮತ್ತು ನೀತಿ ನಿರೂಪಕರನ್ನು ನಿರಂತರವಾಗಿ ಒತ್ತಾಯಿಸಬೇಕು."
"ಸುಮಾರು 4 ವರ್ಷಗಳ ಹಿಂದೆ ನಾವು ಮಲೇಷ್ಯಾಕ್ಕಾಗಿ ರೂಪಿಸಿದ ಮಣ್ಣಿನ ಫಲವತ್ತತೆ ನೀತಿಯನ್ನು ನಿಮಗೆ ನೀಡುತ್ತಿದ್ದೇವೆ. ದಯವಿಟ್ಟು ಇದನ್ನು ನಿಮ್ಮ ಪ್ರಧಾನಿ, ಕೃಷಿ ಸಚಿವರು ಮತ್ತು ಪರಿಸರ ಸಚಿವರಿಗೆ ತಲುಪಿಸಿ."
ವಿಶ್ವದ 192 ದೇಶಗಳಿಗೆ ಮಣ್ಣಿನ ಫಲವತ್ತತೆ ನೀತಿಗಳನ್ನು ರೂಪಿಸಲು ನಮಗೆ 2 ರಿಂದ 2.5 ವರ್ಷಗಳೇ ಬೇಕಾಯಿತು
"ಇದೇ ರೀತಿ ವಿಶ್ವದ 192 ದೇಶಗಳಿಗೆ ಮಣ್ಣಿನ ಫಲವತ್ತತೆ ನೀತಿಗಳನ್ನು ರೂಪಿಸಲು ನಮಗೆ 2 ರಿಂದ 2.5 ವರ್ಷಗಳೇ ಬೇಕಾಯಿತು. ಪ್ರತಿಯೊಂದು ದೇಶದ ಭೌಗೋಳಿಕ ಲಕ್ಷಣ, ಮಣ್ಣಿನ ಗುಣ, ಆರ್ಥಿಕ ಪರಿಸ್ಥಿತಿ ಮತ್ತು ಕೃಷಿ ಪದ್ಧತಿಗಳಿಗೆ ತಕ್ಕಂತೆ ಈ ನೀತಿಗಳನ್ನು ನಾವು ಸಿದ್ಧಪಡಿಸಿದ್ದೇವೆ. ಇವುಗಳನ್ನು ಈಗಾಗಲೇ 72 ರಿಂದ 74 ದೇಶಗಳು ಸಂಪೂರ್ಣವಾಗಿ ಅಥವಾ ಭಾಗಶಃ ಒಪ್ಪಿಕೊಂಡಿವೆ," ಎಂದು ಅವರು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಪ್ರಮುಖ ಕಂಪನಿಗಳ ಸಿಇಒಗಳು, ಸಂಸ್ಥಾಪಕರು, ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


