ಮನಸ್ಸು ಸರಿ ಇಲ್ಲ. ನಿದ್ದೆ ಬರೋ ಹಂಗಾಗುತ್ತೆ. ಥೂ ಈ ಕೆಲಸ ಯಾಕಾದ್ರೂ ಇದ್ಯೋ, ಯಾರೂ ಬೇಡ, ನಾನೊಬ್ಳೇ ಸುಮ್ನೇ ಕೂತಿದ್ರೆ ಸಾಕು.. ದಪ್ಪ ಹೊದಿಕೆಯಡಿ ಗಾಢ ನಿದ್ದೆಯಲ್ಲಿರುವಾಗ ಅಲರಾಂ ಹೊಡ್ಕೊಳಕ್ಕೆ ಶುರು ಮಾಡುತ್ತೆ. ಮುಚ್ಚಿದ ಕಣ್ಣು ಓಪನ್‌ ಮಾಡೋದೇ ಫಸ್ಟ್‌ ಪ್ರಾಬ್ಲೆಮ್‌. ತೆರೆಯಲಾರದೇ ಕಣ್ಣು ತೆರೆಯುತ್ತಾ ಅಲಾರಾಂ ಅನ್ನು ಸ್ನೂಝ್‌ಗೆ ಹಾಕಿ ಮತ್ತೆ ಬೆಡ್‌ಶೀಟ್‌ ಮೇಲಕ್ಕೆಳೆದುಕೊಳ್ಳೋದು.

ಹೀಗೆಲ್ಲ ಆಗ್ತಿದ್ರೆ ನಿಮಗೂ ವಿಂಟರ್‌ ಬ್ಲೂಸ್‌ ಅಂಟಿಕೊಂಡಿಕೊಂಡಿದೆ ಅಂತರ್ಥ. ಇದು ಚಳಿಗಾಲದಲ್ಲಿ ನಮ್ಮ ನಿಮ್ಮೆಲ್ಲರ ದಿನಚರಿ. ಈ ಒಂದು ಸಣ್ಣ ತಪ್ಪು ಇಡೀ ದಿನದ ಮೇಲೆ ಮಾಡುವ ಪರಿಣಾಮಗಳನ್ನು ಊಹಿಸಿ.

- ಅಲರಾಂ ಮತ್ತೊಮ್ಮೆ ಮಗದೊಮ್ಮೆ ಸ್ನೂಝ್‌ ಮೋಡ್‌ಗೆ ಹೋಗಿ ಕೊನೆಗೊಮ್ಮೆ ಎದ್ದಾಗ ಗಡಿಬಿಡಿ. ಮಾಡಬೇಕಾದ ಕೆಲಸಗಳೆಲ್ಲ ಕಣ್ಮುಂದೆ ಮರವಣಿಗೆ ಹೊರಡುತ್ತವೆ. ತಲೆ ಕೆಟ್ಟು ಕೆರ ಹಿಡಿದಂಗಾಗುತ್ತದೆ. ಯಾವ ಕೆಲಸ ಫಸ್ಟ್‌ ಮಾಡೋದು, ಯಾವ್ದು ಬಿಡೋದು ಅಂತ ಗೊತ್ತಾಗದೇ ಮತ್ತೊಂದಷ್ಟು ಟೈಮ್‌ ಕಳೆದುಹೋಗುತ್ತೆ. ಟೆನ್ಶನ್‌, ಫ್ರಸ್ಪ್ರೇಶನ್‌ಗಳು ಕೆಲಸ ಯಾವ್ದೂ ನೆಟ್ಟಗಾಗದಂತೆ ತಡೆಯುತ್ತವೆ.


- ಇನ್ನೊಂದು ಪ್ರಾಬ್ಲೆಂ ಅಂದರೆ ನಮ್ಮ ಮೂಡ್‌. ಬೆಳಕಾಗೋದು ಲೇಟು. ರಾತ್ರಿಯಾಗೋದು ಬೇಗ. ಒಂಥರಾ ಲೋನ್ಲೀ ಫೀಲ್‌ ಕೊಡುವ ಹಗಲು. ಇಡೀ ದಿನ ಮಂಕು ಮಂಕು ಹವೆ, ಯಾವ ಕೆಲಸದ ಮೇಲೂ ಉತ್ಸಾಹ ಇರಲ್ಲ. ಬೇಸರ ಸಣ್ಣಗೆ ಶುರುವಾಗಿ ನಮಗೇ ಗೊತ್ತಾಗದ ಹಾಗೆ ಮನಸ್ಸಿಡೀ ಆವರಿಸಿಬಿಡುತ್ತೆ.
ಇದೆಲ್ಲ  ವಿಂಟರ್‌ ಬ್ಲೂಸ್‌ ಪರಿಣಾಮ. ಈ ಟೈಮ್‌ನಲ್ಲಿ ಕಂಡುಬರುವ ಮಾನಸಿಕ ಸಮಸ್ಯೆಗಳನ್ನು ಶಾರ್ಟ್‌ಫಾರ್ಮ್‌ನಲ್ಲಿ ‘ಸ್ಯಾಡ್‌’  ಅಂತ ಕರೀತಾರೆ. ಅಂದರೆ ಸೀಸನಲ್‌ ಅಫೆಕ್ಟಿವ್‌ ಸಿಂಡ್ರೋಮ್‌ ಅಂತ. ಈ ಸಮಸ್ಯೆಗೆಲ್ಲ ಕಾರಣ ಮಂದ ಬೆಳಕು. ಅರ್ಥಾತ್‌ ಸೂರ್ಯ ಭಗವಾನನ ಅಬ್ಸೆನ್ಸು. ಇದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ.

ಗ್ಯಾಸ್ಟ್ರಿಕ್ ಅಂತ ನೆಗ್ಲೆಕ್ಟ್ ಮಾಡ್ಬೇಡಿ, ಅದು ಹಾರ್ಟ್ ಅಟ್ಯಾಕ್ ಆಗಿರಬಹುದು! ...

ಸ್ಯಾಡ್‌ ಮೂಡ್‌ನಿಂದ ಫ್ರೆಶ್‌ ಮೂಡ್‌ನೆಡೆಗೆ
- ಹಿಂದಿನ ದಿನ ರಾತ್ರಿ ಮಲಗುವ ಮೊದಲೇ ಒಂದು ವಿಷ್ಯ ನಿರ್ಧಾರ ಮಾಡಿ. ಬೆಳಗ್ಗೆ ಎಷ್ಟು ಹೊತ್ತಿಗೆ ಏಳಬೇಕು, ತನಗೆ ಎಷ್ಟು ಹೊತ್ತಿಗೆ ಏಳೋದು ಸಾಧ್ಯ ಅಂತ ಯೋಚಿಸಿ. ಎಷ್ಟೋ ಜನ ಅಲರಾಂ ಸ್ನೂಜ್‌ಗೆ ಹಾಕೋತೀನಿ ಅನ್ನೋದನ್ನು ಮೊದಲೇ ನಿರ್ಧರಿಸಿ ಅಲರಾಂ ಅರ್ಧಗಂಟೆ ಮೊದಲೇ ಇಡ್ತಾರೆ. ಆಮೇಲೆ 1 ಗಂಟೆ ಲೇಟಾಗಿ ಏಳ್ತಾರೆ. ಈ ಸ್ನೂಜ್‌ ಆಪ್ಶನ್‌ ಅನ್ನೇ ಮರೆತುಬಿಡಿ. ಗೋರ್‌ ಗೋಪಾಲ್‌ ದಾಸ್‌ ಹೇಳೋ ಪ್ರಕಾರ, ನಮ್ಮ ದಿನದ ಆರಂಭ ಮನಸ್ಸಿನ ಜೊತೆಗಿನ ಸೋಲಿನಿಂದ ಆರಂಭವಾಗಬಾರದು. ಹಾಗಾದರೆ ಇಡೀ ದಿನ ಸೋಲುತ್ತಲೇ ಇರಬೇಕಾಗುತ್ತೆ. ಹಾಗಾಗಿ ಸ್ನೂಜ್‌ ಆಪ್ಶನ್‌ ಅನ್ನೇ ಮರೆತುಬಿಡಿ. ಬೆಳಗ್ಗೆ ಇನ್‌ಟೈಮ್‌ಗೆ ಏಳೋದನ್ನು ಸ್ಟ್ರಿಕ್ಟ್ ಆಗಿ ಫಾಲೋ ಮಾಡಿ.

ಚಳಿಗಾಲ: ಇವನ್ನು ಮಹಿಳೆಯರು ಬ್ಯಾಗಲ್ಲಿಟ್ಟುಕೊಳ್ಳಬೇಕು! ...

- ಮುಂಜಾವದ ಫ್ರೆಶ್‌ ಗಾಳಿ, ದೇಹದ ಮೇಲೆ ಕಡಿಮೆ ಪ್ರಮಾಣದಲ್ಲಾದರೂ ಬೀಳುವ ಸೂರ್ಯನ ಕಿರಣಗಳು ನಿಮ್ಮ ಮನಸ್ಸಿಗೆ ನೀಡುವ ಫೀಲ್‌ ಇದೆಯಲ್ಲಾ..ಅದು ಕೊಡೋ ಎಜರ್ನಿ ಇಡೀ ದಿನ ನಿಮ್ಮ ಮನಸ್ಸು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬಲ್ಲದು. ಬೆಳಗ್ಗೆದ್ದು ಹೊರಗಿನ ಹವೆಯಲ್ಲಿ ಓಡಾಡಿ. ಪಾರ್ಕ್‌ನಲ್ಲಿ ಎರಡು ರೌಂಡ್‌ ಓಡಿ. ಬ್ರಿಸ್ಕ್‌ ವಾಕ್‌ ಮಾಡಿ.

- ಯೋಗ ಮನಸ್ಸಿನ ಮಂಕನ್ನು ದೂರಮಾಡಲು ಅತ್ಯುತ್ತಮ. ಸೂರ್ಯ ನಮಸ್ಕಾರ, ದೀರ್ಘದಂಡ ನಮಸ್ಕಾರ, ಒಂದಿಷ್ಟು ಆಸನಗಳು ನಿಮ್ಮ ಬಾಡಿ ಮತ್ತು ಮೈಂಡ್‌ಗೆ ಚೈತನ್ಯ ಅನ್ನೋ ಎನರ್ಜಿಯನ್ನು ಧಾರೆ ಎರೆಯುತ್ತವೆ. ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತೆ. ಹೃದಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಹಾಗೆ ಮಾಡುತ್ತೆ. ಯೋಗದ ಜೊತೆಗೇ ಮಾಡುವ ಪ್ರಾಣಾಯಾಮ ಬರೀ ಉಸಿರಾಟದ ಎಕ್ಸರ್‌ಸೈಸ್‌ ಅಂತ ಅಂದ್ಕೊಂಡರೆ ಅದು ತಪ್ಪು. ಪ್ರಾಣಾಯಾಮ ಉಸಿರಿನ ಸರಾಗತೆಯ ಮೂಲಕ ಮಾನಸಿಕ ಆನಂದ ವೃದ್ಧಿಗೆ ಬೆಸ್ಟ್‌.

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ನೆಲಗಡಲೆಯನ್ನು ಏಕೆ ತಿನ್ನಬೇಕು? ...

ಇದರ ಜೊತೆಗೆ ಆಹಾರದಲ್ಲೂ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಿ. ಕಾರ್ಬೊಹೈಡ್ರೇಟ್‌ಗಿಂತ ಪ್ರೊಟೀನ್‌ ಅಂಶ ಹೆಚ್ಚಿರುವ ತರಕಾರಿ, ಹಣ್ಣು ಇತ್ಯಾದಿ ಸೇವಿಸಿ. ಮನೆಯಲ್ಲಿ ಹಗಲು ಸಾಕಷ್ಟು ಬೆಳಕು ಇರೋ ಥರ ನೋಡ್ಕೊಳ್ಳಿ.