ಯಾವ ಆಹಾರ ತಿನ್ಬೇಕು, ಯಾವುದನ್ನು ತಿನ್ಬಾರದು ಎಂಬ ದೊಡ್ಡ ಪ್ರಶ್ನೆ ಈಗ ಜನರನ್ನು ಕಾಡ್ತಿದೆ. ಮಧ್ಯೆ ವೈದ್ಯರೊಬ್ಬರು ಪೌಷ್ಟಿಕತಜ್ಞರ ಸ್ಕ್ಯಾಮ್ ಹೊರ ಹಾಕಿದ್ದಾರೆ. ಮೊಟ್ಟೆ ಹಳದಿ ಭಾಗ ಹೃದಯಾಘಾತ ಹೆಚ್ಚಿಸುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ತರಕಾರಿ, ಹಣ್ಣು, ಮೊಟ್ಟೆ (egg) ಎಲ್ಲವನ್ನು ಸೂಪರ್ ಫುಡ್ ಅಂತ ನಂಬಲಾಗಿದೆ. ಹಿಂದೆ ಇವೆಲ್ಲವನ್ನು ಜನರು ಇಷ್ಟಪಟ್ಟು ತಿಂತಾ ಇದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿರುವ ಅನಿರೀಕ್ಷಿತ ಸಾವು, ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ತಿರುವ ಕಾಯಿಲೆ, ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಪೌಷ್ಠಿಕ ತಜ್ಞರಾಗಿ ನೀಡ್ತಿರುವ ಸಲಹೆಗಳು ಎಲ್ಲರನ್ನೂ ಭಯಗೊಳಿಸ್ತಿದೆ. ಯಾವ ಆಹಾರ ತಿನ್ನಬೇಕು, ಯಾವ್ದು ಬೇಡ ಎನ್ನುವ ಭಯ ಜನರನ್ನು ಕಾಡ್ತಿದೆ. ಮೊಟ್ಟೆಯ ಹಳದಿ ಹಾಗೂ ಬಿಳಿ ಎರಡೂ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಂಬಿಕೆ ಈ ಹಿಂದೆ ಇತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಪೌಷ್ಠಿಕ ತಜ್ಞರು ವಿಲನ್ ರೀತಿ ನೋಡ್ತಿದ್ದಾರೆ. ಮೊಟ್ಟೆ ಹಳದಿ ಭಾಗ ಕೊಲೆಸ್ಟ್ರಾಲ್ ಏರಿಸಿ, ಹೃದಯಾಘಾತದ ಅಪಾಯ ಹೆಚ್ಚಿಸುತ್ತ ಎಂಬ ಹೇಳಿಕೆ ನೀಡ್ತಿದ್ದಾರೆ. ಇದೇ ಕಾರಣಕ್ಕೆ ಜನರು ಮೊಟ್ಟೆಯ ಬಿಳಿ ಭಾಗವನ್ನು ತಿಂದು, ಹಳದಿ ಲೋಳೆಯನ್ನು ಎಸೆಯುತ್ತಿದ್ದಾರೆ. ಮೊಟ್ಟೆ ಹಳದಿ ಭಾಗದ ಬಗ್ಗೆ ಹರಡಿರುವ ಸುದ್ದಿ ಎಷ್ಟು ಸತ್ಯ ಎಂಬುದನ್ನು ಫೋರ್ಟಿಸ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಒಬ್ಬರು ಬಹಿರಂಗಪಡಿಸಿದ್ದಾರೆ.

ಮೊಟ್ಟೆ ಹಳದಿ (Egg yolk) ಭಾಗ ಅಪಾಯಕಾರಿಯೇ? :

ಫೋರ್ಟಿಸ್ ವಸಂತ್ ಕುಂಜ್ನ ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟಾಲಜಿಸ್ಟ್ ಡಾ. ಶುಭಮ್ ವತ್ಸಾ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೊಟ್ಟೆಯ ಹಳದಿ ಲೋಳೆ ಹೃದಯದ ಆರೋಗ್ಯಕ್ಕೆ ಹಾನಿಕಾರಕ ಎಂಬ ದೀರ್ಘಕಾಲದ ನಂಬಿಕೆಯನ್ನು ಅವರು ಪ್ರಶ್ನಿಸಿದ್ದಾರೆ. ಮೊಟ್ಟೆಯ ಹಳದಿ ಭಾಗ ಹಾನಿಕಾರಕ ಎಂಬುದು ತಪ್ಪು ಕಲ್ಪನೆ ಎಂದಿದ್ದಾರೆ. ಸಾಮಾನ್ಯ ಆಹಾರವು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?

ವೈದ್ಯರ ಪ್ರಕಾರ, ಆರೋಗ್ಯವಂತ ವಯಸ್ಕರು ಪ್ರತಿದಿನ 3 ಮೊಟ್ಟೆಗಳನ್ನು ತಿನ್ನಬಹುದು. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುವುದಿಲ್ಲ. ಮಾನವನ ಯಕೃತ್ತು ದೇಹದ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ಮೊಟ್ಟೆಯ ಹಳದಿ ಭಾಗದಿಂದ ಬರುವ ಕೊಲೆಸ್ಟ್ರಾಲ್ ರಕ್ತದ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯ ಎಷ್ಟು ಹೆಚ್ಚಾಗುತ್ತದೆ ಎಂಬ ಬಗ್ಗೆ ಈಗಾಗಲೇ ಮಹತ್ವದ ಅಧ್ಯಯನ ನಡೆದಿದೆ. 150,000 ಜನರ ಪರೀಕ್ಷೆ ಮಾಡಲಾಗಿದೆ. ಅವರು ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುತ್ತಿದ್ದರು. ಮೊಟ್ಟೆ ಹಳದಿ ಭಾಗ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುವುದಿಲ್ಲ ಎಂಬುದು ಈ ಅಧ್ಯಯನದಿಂದ ಪತ್ತೆಯಾಗಿದೆ ಎಂದು ಶುಭಮ್ ಹೇಳಿದ್ದಾರೆ.

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ

ವೈದ್ಯರ ಪ್ರಕಾರ, ಮೊಟ್ಟೆಯ ಹಳದಿ ಲೋಳೆ ಉತ್ತಮ HDL ಕೊಲೆಸ್ಟ್ರಾಲ್ ಸುಧಾರಿಸುತ್ತದೆ. ಲುಟೀನ್, ಕೋಲೀನ್ ಮತ್ತು ಹೃದಯ, ಯಕೃತ್ತು ಮತ್ತು ಮೆದುಳನ್ನು ಬೆಂಬಲಿಸುವ ಅಗತ್ಯ ಜೀವಸತ್ವಗಳಂತಹ ಪ್ರಯೋಜನಕಾರಿ ಅಂಶಗಳನ್ನುಇದು ಹೊಂದಿದೆ. ನಿಜವಾದ ಸಮಸ್ಯೆ ಎಂದರೆ ಮೊಟ್ಟೆಗಳನ್ನು ತಯಾರಿಸುವ ಅನಾರೋಗ್ಯಕರ ವಿಧಾನ. ಉದಾಹರಣೆಗೆ ಜನರು ಮೊಟ್ಟೆಯ ಜೊತೆ ಹೆಚ್ಚು ಬೆಣ್ಣೆ, ಕೆನೆ ಅಥವಾ ಎಣ್ಣೆಯನ್ನು ಸೇರಿಸಿ ಬೇಯಿಸಿ ತಿನ್ನುತ್ತಾರೆ. ಅವರು ತಯಾರಿಸುವ ವಿಧಾನ ಆರೋಗ್ಯವನ್ನು ಹಾಳು ಮಾಡುತ್ತದೆ. ನೀವು ಸರಿಯಾದ ವಿಧಾನದಲ್ಲಿ ಮೊಟ್ಟೆ ಸೇವನೆ ಮಾಡಬೇಕು. ಮಧುಮೇಹವಿಲ್ಲದ ವಯಸ್ಕರು ದಿನಕ್ಕೆ ಮೂರು ಸಂಪೂರ್ಣ ಮೊಟ್ಟೆಗಳನ್ನು ಸುರಕ್ಷಿತವಾಗಿ ತಿನ್ನಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಮೊಟ್ಟೆ ಹಳದಿ ಭಾಗ ಅನಾರೋಗ್ಯಕರ ಎಂಬುದು ಪೌಷ್ಟಿಕ ತಜ್ಞರ ದೊಡ್ಡ ಸ್ಕ್ಯಾಮ್ ಎಂದು ವೈದ್ಯರು ಹೇಳಿದ್ದಾರೆ.