ಅಪರೂಪದ ಪಾರ್ಟಿ, ಯಾವತ್ತೂ ಒಂದ್ಸಲ ಡ್ರಿಂಕ್, 28ರ ಯುವಕನ ಲಿವರ್ ವರದಿಗೆ ವೈದ್ಯರೇ ದಂಗು, ಆರೋಗ್ಯ ಎಲ್ಲವೂ ಉತ್ತಮವಾಗಿದೆ. ವಯಸ್ಸೂ ಆಗಿಲ್ಲ ಎಂದೆಲ್ಲಾ ಯೋಚಿಸಿ ಅಲ್ಲೊಂದು ಇಲ್ಲೊಂದು ಪಾರ್ಟಿ ಮಾಡಿದವರು ಈ ಯುವಕನ ಸ್ಕ್ಯಾನ್ ರಿಪೋರ್ಟ್ ನೋಡಿ.
ವಡೋದರ (ಜ.03) ನಾವು ಕುಡುಕರಲ್ಲ, ಅಲ್ಪ ಸ್ವಲ್ಪ ಕುಡಿಯೋರು ಎಂದು ಗಜ ಗಾಂಭೀರ್ಯದಿಂದ ಓಡಾಡುವ ಮಂದಿ 28ರ ಯುವಕನ ಲಿವರ್ ಸ್ಕ್ಯಾನ್ ರಿಪೋರ್ಟ್ ಒಂದು ಬಾರಿ ಕಣ್ಣಾಡಿಸಿ. ನಾವು ದಿನಾ ಕುಡಿಯಲ್ಲ, ಯಾವತ್ತೂ ಒಂದು ದಿನ, ಅದು ಪಾರ್ಟಿ, ಗೆಳೆಯರು ಸಿಕ್ಕಾಗ ಮಾತ್ರ, ಅದು ಹೆಚ್ಚಿಲ್ಲ. ಇನ್ನು ಸೈಡ್ಸ್, ನಾನ್ ವೆಚ್, ಫುಡ್, ನೀರು ಎಲ್ಲಾ ಸರಿಯಾಗಿ ತಗೋತೇವೆ. ಹೀಗಾಗಿ ಆರೋಗ್ಯದ ಬಗ್ಗೆ, ಲಿವರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ ಎಂದುಕೊಂಡರೆ ತಪ್ಪು. ಇದೀಗ ವೈದ್ಯರೊಬ್ಬರು 28 ವರ್ಷದ ಯುವಕ ಲಿವರ್ ವರದಿ ಬಹರಿಂಗಪಡಿಸಿದ್ದಾರೆ.
ಅಲ್ಟ್ರೌಸೌಂಡ್ ಸ್ಕ್ಯಾನಿಂಗ್‌ನಲ್ಲಿ ಅಚ್ಚರಿ
28ರ ಹರೆಯದ ಯುವಕ ಫಿಟ್ ಆಗಿದ್ದಾನೆ. ವಡೋದರದ ವೈದ್ಯ ಹರ್ಷ ವ್ಯಾಸ್ ಈ ಯುವಕನ ವರದಿ ಬಹಿರಂಗಪಡಿಸಿದ್ದಾರೆ. ಈ ವರದಿ ಕುರಿತು ವಿವರಣೆ ನೀಡಿದ ವೈದ್ಯರು, ಎಲ್ಲರ ಆರೋಗ್ಯ ಒಂದೇ ರೀತಿ ಇರಲ್ಲ. ಕೆಲವರಿಗೆ ಒಂದು ತೊಟ್ಟು ಮದ್ಯ ದೇಹ ಸೇರಿದರೆ ಆಪತ್ತು ಎಂದಿದ್ದಾರೆ. ಏಕಾಏಕಿ ತೀವ್ರ ಅನಾರೋಗ್ಯಕ್ಕೀಡಾದ 28ರ ಹರೆಯದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಲ್ಟ್ರೌಸೌಂಡ್ ವರದಿಗೆ ಯುವಕ ಬೆಚ್ಚಿ ಬಿದ್ದಿದ್ದಾನೆ. ಈತನ ಲಿವರ್ ಸಂಪೂರ್ಣ ಡ್ಯಾಮೇಜ್ ಆಗಿದೆ. ಅಂದರೆ ಸರಿಪಡಿಸಲು, ಅಥವಾ ಸುಧಾರಿಸಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದೆ. ಲಿವರ್ ಡ್ಯಾಮೇಜ್‌ನಿಂದ ಹಲವು ಆರೋಗ್ಯ ಸಮಸ್ಯೆಗಳು ಯುವಕನಿಗೆ ಕಾಡಿದೆ.
ಈ ವರದಿ ಮುಂದಿಟ್ಟು ಎಚ್ಚರಿಕೆ ನೀಡಿದ ಡಾ. ಹರ್ಷ
ಡಾ.ಹರ್ಷ ವ್ಯಾಸ್ ಈ ವರದಿ ವಿವರಣೆ ನೀಡಿದ್ದಾರೆ. ಎಲ್ಲರ ದೇಹ, ಸಾಮರ್ಥ್ಯ, ರೋಗ ನಿರೋಧಕ ಶಕ್ತಿ ಭಿನ್ನ. ಕೆಲವರು ಪ್ರತಿ ದಿನ ಕುಡಿಯುತ್ತಾರೆ, ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಪ್ರಯತ್ನಿಸಬಾರದು. ಮದ್ಯವ್ಯಸನಿಗಳಾಗಬಾರದು. ಮದ್ಯಸೇವನೆ ಆರೋಗ್ಯಕ್ಕೆ ಯಾವುದೇ ಕಾರಣಕ್ಕೂ ಉತ್ತಮವಲ್ಲ ಎಂದಿದ್ದಾರೆ. 28ರ ಯುವಕನ ಹಲವು ಬಾರಿ 3 ತಿಂಗಳು, ನಾಲ್ಕು ತಿಂಗಳಿಗೊಮ್ಮೆ ಪಾರ್ಟಿ ಮಾಡಿದ ಉದಾಹರಣೆಯೂ ಇದೆ. ಆತನಿಗೆ ಮದ್ಯ ಬೇಕೇ ಎಂದಲ್ಲ. ಎಲ್ಲರು ಜೊತೆ ಸೇರಿದಾಗ, ಮದುವೆ ಸೇರಿದಂತೆ ಇತರ ಪಾರ್ಟಿಗಳಲ್ಲಿ ಒಂದಷ್ಟು ಕುಡಿಯುತ್ತಿದ್ದ. ಆದರೆ ಈತನ ಲಿವರ್ ಡ್ಯಾಮೇಜ್ ಈಗ ಸರಿಪಡಿಸಲು ಆಗದ ಮಟ್ಟಿಗೆ ಹೋಗಿದೆ ಎಂದು ಹರ್ಷ ವ್ಯಾಸ್ ಹೇಳಿದ್ದಾರೆ.
ನನ್ನ ಮಗ ಬೇಗ ಹುಷಾರಾಗುತ್ತಾನಲ್ಲ ಡಾಕ್ಟರ್?
28ರ ಯುವಕ ಆಸ್ಪತ್ರೆ ದಾಖಲಾದಾಗ ಆತನ ಜೊತೆ ತಾಯಿ ಆಸ್ಪತ್ರೆಯಲ್ಲಿದ್ದರು. ಈ ವೇಳೆ ವೈದ್ಯರ ಪ್ರತಿ ಬಾರಿ ನನ್ನ ಮಗ ಬೇಗ ಹುಷಾರಾಗುತ್ತಾನಲ್ಲ ಎಂದು ಕೇಳುತ್ತಿದ್ದರು ಎಂದು ಹರ್ಷ ವ್ಯಾಸ್ ಹೇಳಿದ್ದಾರೆ. ಆದರೆ ಯುವಕನಿಗೆ ಈ ಕುರಿತು ನಾನು ಹೇಳಿದ್ದೆ. ಲಿವರ್ ಪರಿಸ್ಥಿತಿ ಹೇಗಿದೆ ಅನ್ನೋ ಮಾಹಿತಿಯನ್ನು ನೀಡಿದ್ದೆ. ಇನ್ನು ಯುವಕ ಸಂಪೂರ್ಣ ಮದ್ಯ ತ್ಯಜಿಸಿ ಪೌಷ್ಠಿಕ ಆಹಾರ, ವ್ಯಾಯಾಮ ಸೇರಿದಂತೆ ಉತ್ತಮ ಅಭ್ಯಾಸ ಬೆಳೆಸಿಕೊಂಡರೂ ಲಿವರ್ ಸಮಸ್ಯೆಯಿಂದ ಹೊರಬರುವುದು ಕಷ್ಟ ಸಾಧ್ಯ ಎಂದಿದ್ದಾರೆ.
ಒಮ್ಮೆ ಕುಡಿದರೂ ಚೆಕ್ ಮಾಡಿ ಲಿವರ್
ಒಮ್ಮೆ ಕುಡಿದಿದ್ದೇವೆ, ಕಳೆದ ನ್ಯೂ ಇಯರ್ ಕುಡಿದ ಬಳಿಕ ಈಗಲೇ ಎಂದು ಹೇಳುವ ಮಂದಿ ಕೂಡ ಆರೋಗ್ಯ ತಪಾಸಣೆ ಮಾಡಿ. ನಿಮ್ಮ ಆರೋಗ್ಯದ ಮೇಲೆ ಮದ್ಯ ಯಾವ ರೀತಿ ಸಮಸ್ಯೆ ತಂದಿದೆ ಅನ್ನೋದು ಸ್ಪಷ್ಟವಾಗಲಿದೆ. ಬಳಿಕ ನಿವೇ ನಿರ್ಧರಿಸಿ ಎಂದು ವೈದ್ಯ ಹರ್ಷ ವ್ಯಾಸ್ ಹೇಳಿದ್ದಾರೆ.
