Period Health Tips : ಪಿರಿಯಡ್ ಪ್ರತಿ ತಿಂಗಳು ಆಗುವಂತಹ ದೈಹಿಕ ಕ್ರಿಯೆ. ಇದು ದೇಹ – ಮನಸ್ಸಿನ ಜೊತೆ ಆಳವಾದ ಸಂಬಂಧ ಹೊಂದಿದೆ. ಮೊದಲ ಮುಟ್ಟು, ದೀರ್ಘಾವಧಿಯಲ್ಲಿ ಮಹಿಳೆಯರ ಆರೋಗ್ಯವನ್ನು ನಿರ್ಧರಿಸುತ್ತದೆ. 

ಮನೆಯಲ್ಲಿರುವ ಮಗಳಿಗೆ ವರ್ಷ ಏಳಾಗ್ತಿದ್ದಂತೆ ಅಮ್ಮನ ಟೆನ್ಷನ್ ಜಾಸ್ತಿಯಾಗುತ್ತೆ. ಮಗಳ ಮೊದಲ ಪಿರಿಯಡ್ (period) ಭಯ ಶುರುವಾಗುತ್ತೆ. ಮೊದಲ ಮುಟ್ಟು ಪ್ರತಿಯೊಬ್ಬ ಹುಡುಗಿ ಜೀವನದಲ್ಲಿ ಹೊಸ ಅಧ್ಯಾಯದ ಆರಂಭ. ಪ್ರತಿ ಮಹಿಳೆ ಪ್ರತಿ ತಿಂಗಳು ಪಿರಿಯಡ್ ಚಕ್ರಕ್ಕೆ ಒಳಗಾಗ್ತಾಳೆ, ಒಳಗಾಗಬೇಕು. ಮೊದಲ ಪಿರಿಯಡ್ ಯಾವಾಗ ಆಗ್ಬೇಕು ಎಂಬ ಪ್ರಶ್ನೆ ಬಂದಾಗ, ಇದು ಅತಿ ಬೇಗ ಬಂದ್ರೂ ಒಳ್ಳೆಯದಲ್ಲ, ಅತಿ ಲೇಟಾಗಿ ಬಂದ್ರೂ ಉತ್ತಮವಲ್ಲ. ನಿಮ್ಮ ಮೊದಲ ಪಿರಿಯಡ್ ನಿಮ್ಮ ದೈಹಿಕ ಬೆಳವಣಿಗೆಯನ್ನು ಮಾತ್ರ ಸೂಚಿಸೋದಿಲ್ಲ, ಆರೋಗ್ಯದ ಬಗ್ಗೆ ಅನೇಕ ವಿಷ್ಯಗಳನ್ನು ಹೇಳುತ್ತೆ. ನಿಮ್ಮ ಆರೋಗ್ಯ ಈಗ ಹೇಗಿದೆ ಅನ್ನೋದು ನಿಮಗೆ ಯಾವಾಗ ಮೊದಲ ಬಾರಿ ಪಿರಿಯಡ್ ಆಗಿತ್ತು ಎಂಬುದಕ್ಕೆ ಕನೆಕ್ಟ್ ಆಗುತ್ತೆ.

ಮೊದಲ ಪಿರಿಯಡ್ ಯಾವಾಗ ಆದ್ರೆ ಉತ್ತಮ? : ಆಹಾರ, ಹಾರ್ಮೋನ್ ಸೇರಿದಂತೆ ಅನೇಕ ಅಂಶಗಳು ಮೊದಲ ಪಿರಿಯಡ್ ಜೊತೆ ಥಳುಕು ಹಾಕಿಕೊಂಡಿವೆ. ಸಾಮಾನ್ಯವಾಗಿ 11 ರಿಂದ 15 ವರ್ಷದ ಒಳಗೆ ಪಿರಿಯಡ್ ಕಾಣಿಸಿಕೊಳ್ಳುತ್ತದೆ. ಕೆಲ ಮಕ್ಕಳು 11 ವರ್ಷಕ್ಕೆ ಪಿಡಿಯಡ್ ಆದ್ರೆ ಇನ್ನು ಕೆಲವರು 15 ವರ್ಷಕ್ಕೆ ಮೊದಲ ಬಾರಿ ಮುಟ್ಟಾಗ್ತಾರೆ. ತಜ್ಞರ ಪ್ರಕಾರ ಇದು ಪಿರಿಯಡ್ ಗೆ ಉತ್ತಮ ಟೈಂ.

ಹಸಿ ನೂಡಲ್ಸ್ ತಿಂದು 13 ವರ್ಷದ ಬಾಲಕ ಸಾವು, ಇದು ತುಂಬಾ ಡೇಂಜರ್ ಅಂತೆ!

ಆರಂಭಿಕ ಪಿರಿಯಡ್ : ಈಗಿನ ಮಕ್ಕಳಲ್ಲಿ ಆರಂಭಿಕ ಪಿರಿಯಡ್ ಹೆಚ್ಚಾಗ್ತಿದೆ. 8 ರಿಂದ 10 ವರ್ಷದೊಳಗಿನ ಮಕ್ಕಳು ಮುಟ್ಟಾಗ್ತಿದ್ದಾರೆ. ಆರಂಭಿಕ ಮುಟ್ಟು ಅಂದ್ರೆ ಸಮಯಕ್ಕಿಂತ ಮೊದಲೇ ದೇಹದಲ್ಲಿ ಹಾರ್ಮೋನ್ ಬದಲಾವಣೆ. ಇದು ಆನುವಂಶಿಕ, ಆಹಾರ ಮತ್ತು ಲೈಫ್ ಸ್ಟೈಲ್ ಅವಲಂಭಿಸಿರುತ್ತದೆ.

ತಡವಾದ ಪಿರಿಯಡ್ : 16 ವರ್ಷದಿಂದ 18 ವರ್ಷದ ಒಳಗೆ ಆಗುವ ಪಿರಿಯಡನ್ನು ತಡವಾದ ಪಿರಿಯಡ್ ಪಟ್ಟಿಗೆ ಸೇರಿಸಲಾಗುತ್ತೆ. ಮುಟ್ಟು ಲೇಟಾಗಲು ಕೆಲವೊಮ್ಮೆ ಹಾರ್ಮೋನುಗಳ ಅಸಮತೋಲನ ಕಾರಣವಾಗುತ್ತದೆ. ಪೋಷಣೆಯ ಕೊರತೆ ಅಥವಾ ಯಾವುದಾದ್ರೂ ಕಾಯಿಲೆ ಮಗುವಿಗಿದ್ರೆ ಆಗ್ಲೂ ಪಿರಿಯಡ್ ತಡವಾಗುತ್ತದೆ.

ಆರಂಭಿಕ ಹಾಗೂ ತಡವಾದ ಮುಟ್ಟಿನಿಂದ ಆಗುವ ಆರೋಗ್ಯ ಸಮಸ್ಯೆ : ಮೊದಲೇ ಹೇಳಿದಂತೆ ಸಮಯಕ್ಕೆ ಮೊದಲು ಅಥವಾ ನಂತ್ರ ಬರುವ ಮುಟ್ಟು ಮುಂದೆ ಮಹಿಳೆಯರಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಪಿರಿಯಡ್ಸ್ ತಡವಾಗಿ ಬಂದ ಹುಡುಗಿಯರ ಮೂಳೆಯಲ್ಲಿ ಬಲ ಕಡಿಮೆ. ಅತಿ ಬೇಗ ಅಥವಾ ತಡವಾಗಿ ಪಿರಿಯಡ್ ಆರಂಭವಾದ್ರೆ ಹಾರ್ಮೋನ್ (hormone) ಏರಿಳಿತ ಹೆಚ್ಚಿರುತ್ತದೆ. ಇದು ಮುಂದೆ ಅನಿಯಮಿತ ಮುಟ್ಟಿಗೆ ಕಾರಣವಾಗುತ್ತದೆ. ಗರ್ಭಧಾರಣೆ (pregnancy)ಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಇಷ್ಟೇ ಅಲ್ಲ ಇದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಆತಂಕ ಮತ್ತು ಮನಸ್ಥಿತಿಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಬೇವು ಮತ್ತು ಅರಿಶಿನ ತಿಂದ್ರೆ ಇಷ್ಟೆಲ್ಲಾ ಇದೆ ಲಾಭ, ಸದ್ಗುರು ಮಾತಿನ ಹಿಂದಿದೆ 8 ಕಾರಣ

ಬೇಗ ಅಥವಾ ತಡವಾಗಿ ಮುಟ್ಟಾದ್ರೆ ಆರೋಗ್ಯ ರಕ್ಷಣೆ ಹೇಗೆ? :

• ಉತ್ತಮ, ಪೋಷಕಾಂಶ ಇರುವ ಆಹಾರ ಸೇವನೆ ಮುಖ್ಯ. ಇಂಥ ಮಕ್ಕಳು ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

• ದೈಹಿಕ ವ್ಯಾಯಾಮ ಅಗತ್ಯ. ನಿಯಮಿತವಾಗಿ ವ್ಯಾಯಾಮ ಹಾಗೂ ಯೋಗ ಮಾಡುವುದರಿಂದ ಹಾರ್ಮೋನ್ ಬ್ಯಾಲೆನ್ಸ್ ಮಾಡ್ಬಹುದು.

• 15 ವರ್ಷದ ನಂತ್ರವೂ ಮಗಳಿಗೆ ಪಿರಿಯಡ್ಸ್ ಆಗಿಲ್ಲವೆಂದ್ರೆ ವೈದ್ಯರನ್ನು ಸಂಪರ್ಕಿಸಿ, ಹಾರ್ಮೋನ್ ಪರೀಕ್ಷೆ ಮಾಡಿಸಿ. ಅತಿ ಬೇಗ ಪಿರಿಯಡ್ ಗೆ ಒಳಗಾದ ಮಕ್ಕಳು ಕೂಡ ಈ ಪರೀಕ್ಷೆ ಮಾಡಿಸಿಕೊಳ್ಳಬೇಕು.

• ಪಿರಿಯಡ್ ಬಗ್ಗೆ ಗೊಂದಲವಿದ್ರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆಯಬೇಕು.