ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ. ಮೂರು ತಿಂಗಳ ನಂತ್ರ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium )ದಲ್ಲಿ ನಡೆದ ಕಾಲ್ತಳಿತ (Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ವಿರಾಟ್ ಕೊಹ್ಲಿ ಮೌನ ಮುರಿದಿದ್ದಾರೆ. ಜೂನ್ 4 ರಂದು ನಡೆದ ದುರ್ಘಟನೆಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿದ್ದಾರೆ. ಆಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದ ಕೊಹ್ಲಿ ಮೂರು ತಿಂಗಳ ನಂತ್ರ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಸಾವನ್ನಪ್ಪಿದವರ ಕುಟುಂಬಕ್ಕೆ ಧೈರ್ಯ ಹೇಳಿದ್ದಲ್ಲದೆ, ಮುಂದೆ ಎಲ್ಲರೂ ಎಚ್ಚರಿಕೆಯಿಂದ ಹೆಜ್ಜೆ ಇಡೋಣ ಎಂದಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಆರ್ ಸಿಬಿ, ಕೊಹ್ಲಿ ಹೇಳಿಕೆಯ ಪೋಸ್ಟ್ ಒಂದನ್ನು ಹಂಚಿಕೊಂಡಿದೆ.

ವಿರಾಟ್ ಕೊಹ್ಲಿ (Virat Kohli) ಹೇಳಿದ್ದೇನು? : 

ಜೀವನದಲ್ಲಿ ಕೆಲವೊಮ್ಮೆ ನಾವು ಎಂದಿಗೂ ಸಿದ್ಧರಿಲ್ಲದ ಕ್ಷಣಗಳು ಬರುತ್ತವೆ. ಜೂನ್ 4 ಅಂತಹ ಒಂದು ದಿನವಾಗಿತ್ತು. ನಮ್ಮ ಫ್ರಾಂಚೈಸಿಗೆ ಅತ್ಯಂತ ಸಂತೋಷದ ದಿನವಾಗಬೇಕಾಗಿದ್ದ ಆ ದಿನವು ದುರಂತ ಘಟನೆಯಾಗಿ ಮಾರ್ಪಟ್ಟಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಮತ್ತು ಗಾಯಗೊಂಡ ಅಭಿಮಾನಿಗಳಿಗೆ ನಾನು ಪ್ರಾರ್ಥಿಸುತ್ತೇನೆ. ನಿಮ್ಮ ನೋವು ಈಗ ನಮ್ಮ ಕಥೆಯ ಭಾಗವಾಗಿದೆ. ಹೆಚ್ಚು ಸೂಕ್ಷ್ಮ ಮತ್ತು ಜವಾಬ್ದಾರಿಯುತರಾಗಿ ನಾವೆಲ್ಲರೂ ಒಟ್ಟಾಗಿ ಮುಂದುವರೆಯೋಣ.

ಕೊಹ್ಲಿ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಮ್ಮ ನೋವು ನಮ್ಮ ಕಥೆಯ ಭಾಗ ಎಂಬುದನ್ನು ಬಳಕೆದಾರರು ಖಂಡಿಸಿದ್ದಾರೆ. ದುರ್ಘಟನೆ ಆಗಿರೋದು ಕೊಹ್ಲಿಯಿಂದ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

IPL 2026ಕ್ಕೂ ಮುನ್ನವೇ ಬಿಗ್ ಶಾಕ್, ರಾಜಸ್ತಾನ್ ರಾಯಲ್ಸ್ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್

ಪರಿಹಾರ ಘೋಷಣೆ ಮಾಡಿದ್ದ ಆರ್ ಸಿಬಿ : ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆರ್ ಸಿಬಿ ಈ ಹಿಂದೆಯೇ ಪರಿಹಾರ ಘೋಷಣೆ ಮಾಡಿದೆ. ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದೆ.

ಜೂನ್ 4 ರಂದು ನಡೆದಿದ್ದು ಏನು? : ಕಪ್ ನಮ್ದೆ ಕಪ್ ನಮ್ದೆ ಎನ್ನುತ್ತಲೇ 18 ವರ್ಷ ಕಳೆದಿದ್ದ ಆರ್ ಸಿಬಿ ತಂಡ ಕೊನೆಗೂ ಬೆಂಗಳೂರಿಗಿಗೆ ಕಪ್ ತಂದುಕೊಡುವಲ್ಲಿ ಯಶಸ್ವಿಯಾಗಿತ್ತು. ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿದ್ದ ಆರ್ ಸಿಬಿ ವಿಜಯೋತ್ಸವಕ್ಕೆ ಸಿದ್ಧವಾಗಿತ್ತು. ಜೂನ್ ನಾಲ್ಕರಂದು ನಡೆದ ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಮಂದಿ ಸಾವನ್ನಪ್ಪಿದ್ದರು. 33 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿತ್ತು.

ಸರಿಯಾದ ಅನುಮತಿ ಕೊರತೆ, ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಹೇಳಿಕೆ ಘಟನೆಗೆ ಕಾರಣ ಎನ್ನಲಾಗಿತ್ತು. ಪೊಲೀಸ್ ಸಂಖ್ಯೆ ಕಡಿಮೆ ಇತ್ತು ಎಂಬುದನ್ನು ಪೊಲೀಸ್ ಇಲಾಖೆ ಒಪ್ಪಿಕೊಂಡಿತ್ತು. ಅಲ್ಲದೆ ಘಟನೆಗೆ ಆರ್ ಸಿಬಿಯನ್ನು ಹೊಣೆ ಮಾಡಲಾಗಿತ್ತು. ಘಟನೆ ನಂತ್ರ ವಿರಾಟ್ ಕೊಹ್ಲಿ ಆಗ್ಲಿ ಇಲ್ಲ ಬೇರೆ ಆಟಗಾರರಾಗ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಒಂದು ತಿಂಗಳ ಹಿಂದೆ ಆರ್ ಸಿಬಿ ಟೀಂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಪರಿಹಾರ ಘೋಷಣೆ ಮಾಡಿತ್ತು. ಈಗ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಸ್ಥಾನ ರಾಯಲ್ಸ್‌ಮಾಲೀಕರಿಗೆ ನಟಿ ಶಿಲ್ಪಾ ಶೆಟ್ಟಿ ಗಂಡನಿಂದ ಬ್ಲ್ಯಾಕ್‌ಮೇಲ್‌, ಲಂಡನ್‌ ಕೋರ್ಟ್‌ನಲ್ಲಿ ಕೇಸ್‌!

ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಬರೀ ತಂಡಕ್ಕೆ ಮಾತ್ರವಲ್ಲ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕಪ್ಪು ಚುಕ್ಕೆಯಾಗಿದೆ. ಆ ಘಟನೆ ನಂತ್ರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯ ನಡೆದಿಲ್ಲ. 2025 ರ ಮಹಿಳಾ ಏಕದಿನ ವಿಶ್ವಕಪ್ನ ಪಂದ್ಯಗಳನ್ನು ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾ ಅಕಾಡೆಮಿಯಲ್ಲಿ ನಡೆಸಲು ನಿರ್ಧರಿಸಲಾಯಿತು.

Scroll to load tweet…