Health Tips: ಕೊಲೆಸ್ಟ್ರಾಲ್ ಕಡಿಮೆ ಮಾಡ್ಬೇಕಾ? ವೆಜ್ ಡಯಟ್ ಶುರುಮಾಡಿ
ಕೊಲೆಸ್ಟ್ರಾಲ್ ಹೆಚ್ಚಲು ನಾವೇನು ತಿನ್ನುತ್ತಿದ್ದೇವೆ ಅನ್ನೋದೇ ಮುಖ್ಯವಾಗುತ್ತೆ. ಆಹಾರ ತಪ್ಪಾಗಿದ್ರೆ ಕೊಲೆಸ್ಟ್ರಾಲ್ ಹೆಚ್ಚಾಗಿ ದಪ್ಪಾ ಆಗ್ತೇವೆ. ಬರೀ ದಪ್ಪವಾಗೋದು ಮಾತ್ರವಲ್ಲ ಬೇಗ ಸಾವು ಬರುವ ಅಪಾಯ ಇರೋದ್ರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಳ್ಳೋಕೆ ಏನ್ ಮಾಡ್ಬೇಕು ನೋಡಿ.
ಹೈ ಕೊಲೆಸ್ಟ್ರಾಲ್.. ಈಗಿನ ದಿನಗಳಲ್ಲಿ ಒಬ್ಬಿಬ್ಬರನ್ನಲ್ಲ ದೊಡ್ಡ ಸಮೂಹವನ್ನು ಕಾಡ್ತಿರುವ ಬಹುದೊಡ್ಡ ಸಮಸ್ಯೆ ಇದು. ಜಿಗುಟಾದ ವಸ್ತುಗಳು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದ್ರಿಂದ ಕೊಲೆಸ್ಟ್ರಾಲ್ ಸಮಸ್ಯೆ ಶುರುವಾಗುತ್ತದೆ. ಕೊಲೆಸ್ಟ್ರಾಲ್ ಏರಿಕೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಯಲ್ಲಿ ಏರಿಕೆಯಾಗುತ್ತದೆ. ಕೆಟ್ಟ ಜೀವನಶೈಲಿ ಹಾಗೂ ಆಹಾರ ಪದ್ಧತಿ ಕೊಲೆಸ್ಟ್ರಾಲ್ ಸ್ವಾಗತಕ್ಕೆ ಕಾರಣ.
ಕೊಲೆಸ್ಟ್ರಾಲ್ (Cholesterol) ನಿಂದ ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಸಾಯ್ತಿದ್ದಾರೆ ಅಂದ್ರೆ ಅದೆಷ್ಟು ಅಪಾಯಕಾರಿ ಅಂತಾ ನೀವು ಊಹಿಸಬಹುದು. ಈ ಮಾರಣಾಂತಿಕ ಸಮಸ್ಯೆಯಿಂದ ಹೊರಬರುವುದು ಬಹಳ ಮುಖ್ಯ. ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಅನೇಕ ಮನೆ ಮದ್ದುಗಳಿವೆ. ನಾವು ಸೇವನೆ ಮಾಡುವ ಆಹಾರ, ನಿಯಮಿತ ವ್ಯಾಯಾಮ (Exercise) ಇಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ತರಕಾರಿ, ಬೇಳೆ ಸೇರಿದಂತೆ ಸಸ್ಯಹಾರ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಹಿಡಿಯುವಲ್ಲಿ ದೊಡ್ಡ ಪಾತ್ರವಹಿಸುತ್ತವೆ.
ಅನೇಕ ಅಧ್ಯಯನದಲ್ಲೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಸ್ಯಹಾರ ಬೆಸ್ಟ್ ಎನ್ನಲಾಗಿದೆ. ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ (Study) ದಲ್ಲೂ ಇದ್ರ ಬಗ್ಗೆ ಹೇಳಲಾಗಿದೆ. ಸಂಶೋಧಕರು 1982 ಮತ್ತು 2022 ರ ನಡುವೆ ವಿವಿಧ ದೇಶಗಳ 2,372 ಜನರ ಮೇಲೆ ಅಧ್ಯಯನ ಮಾಡಿದ್ದಾರೆ. ಸಸ್ಯಾಹಾರ ಮತ್ತು ಸಸ್ಯಹಾರಿ ಡಯಟ್ ಮೂಲಕ ಒಟ್ಟು ಕೊಲೆಸ್ಟ್ರಾಲ್, ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಅಪೊಲಿಪೊಪ್ರೋಟೀನ್ ಬಿ ಅನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.
Health Tips : ಕೊಲೆಸ್ಟ್ರಾಲ್ ಹೆಚ್ಚಾಗ್ತಿದ್ರೆ ಆಹಾರದಲ್ಲಿ ಈ ಎಣ್ಣೆ ಬಳಸಿ
ಸಸ್ಯಹಾರದಿಂದ ಕೊಲೆಸ್ಟ್ರಾಲ್ ಕಡಿಮೆ ಆಗೋದು ಹೇಗೆ? : ಸಸ್ಯಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಹೇಗೆ ಕಡಿಮೆಯಾಗುತ್ತೆ ಎಂಬ ಪ್ರಶ್ನೆಗೂ ಸಂಶೋಧಕರು ಉತ್ತರ ಕಂಡು ಹಿಡಿದಿದ್ದಾರೆ. ಸಸ್ಯಹಾರದಲ್ಲಿ ಅಥೆರೋಜೆನಿಕ್ ಲಿಪೊಪ್ರೋಟೀನ್ ಇರುತ್ತದೆ. ಇದು ಅಪಧಮನಿಕಾಠಿಣ್ಯದ ಹೊರೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಿಂದಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹೃದಯರೋಗದ ಅಪಾಯ ಕಡಿಮೆ ಆಗುತ್ತದೆ. ಇಷ್ಟೆ ಅಲ್ಲ ಟಿಸಿ (TC), ಎಲ್ ಡಿಎಲ್ –ಸಿ ( LDL-C), TG, ಮತ್ತು ಅಪೊ ಬಿ (ApoB) ರಕ್ತದ ಮಟ್ಟಗಳ ಮೇಲೆ ಸಸ್ಯಾಹಾರ ಮತ್ತು ಸಸ್ಯಾಹಾರಿ ಡಯಟ್ ಪರಿಣಾಮವನ್ನು ಸಂಶೋಧಕರು ಪರಿಶೋಧಿಸಿದ್ದಾರೆ. ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಸಸ್ಯಹಾರಿಗಳಲ್ಲಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಮಟ್ಟ (ಎಲ್ ಡಿಎಲ್) ಶೇಕಡಾ 10ರಷ್ಟು ಕಡಿಮೆಯಿತ್ತು. ಒಟ್ಟೂ ಕೊಲೆಸ್ಟ್ರಾಲ್ ನಲ್ಲಿ ಶೇಕಡಾ 7ರಷ್ಟು ಇಳಿಕೆ ಕಂಡು ಬಂದಿತ್ತು. ಅಪೊಲಿಪೊಪ್ರೋಟೀನ್ ಬಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಸಸ್ಯಹಾರ ಸೇವನೆ ಮಾಡಿದ ಜನರಲ್ಲಿ ಅಪೊಲಿಪೊಪ್ರೋಟೀನ್ ಬಿ ಮಟ್ಟ ಶೇಕಡಾ 14 ರಷ್ಟು ಕಡಿಮೆಯಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.
Health Tips: ಈ ಮೂರು ಆಹಾರದಿಂದ ದೂರವಿದ್ರೆ ಹಾರ್ಟ್‌ಅಟ್ಯಾಕ್ ಆಗೋ ಛಾನ್ಸ್ ಕಡಿಮೆ
ಕೊಲೆಸ್ಟ್ರಾಲ್ ಕಡಿಮೆ ಮಾಡೋಕೆ ತಿನ್ನಿ ಈ ಆಹಾರ : ಸಸ್ಯಹಾರ ಮತ್ತು ಸಸ್ಯಹಾರಿ ಡಯಟ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಎಂದು ಸಂಶೋಧಕರು ಹೇಳಿದ್ದಾರೆ. ಹಂಗಂದ್ರೆ ಎಲ್ಲ ಆಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡ್ಬಹುದು ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೂ ಸಂಶೋಧಕರು ಉತ್ತರ ನೀಡಿದ್ದಾರೆ. ಫೈಬರ್ ನಿಂದ ಸಮೃದ್ಧವಾಗಿರುವ ಆಹಾರವನ್ನು ನಾವು ಸೇವಿಸಬೇಕಾಗುತ್ತದೆ. ಫೈಬರ್ ಜೀರ್ಣಾಂಗದಲ್ಲಿ ಕೊಲೆಸ್ಟ್ರಾಲ್ ತಡೆಯುತ್ತದೆ ಮತ್ತು ರಕ್ತಪರಿಚಲನೆಗೆ ಪ್ರವೇಶಿಸುವ ಮೊದಲು ಅವುಗಳನ್ನು ದೇಹದಿಂದ ಹೊರಹಾಕುತ್ತವೆ. ಕೊಲೆಸ್ಟ್ರಾಲ್ ಕಡಿಮೆ ಆಗ್ಬೇಕೆಂಧ್ರೆ ನೀವು ಓಟ್ಸ್, ಬಾರ್ಲಿ, ಧಾನ್ಯಗಳು, ಬೀನ್ಸ್, ಬದನೆಕಾಯಿ, ಬೆಂಡೆಕಾಯಿ, ಡ್ರೈ ಫ್ರೂಟ್ಸ್, ಸಸ್ಯಜನ್ಯ ಎಣ್ಣೆಗಳು, ಕಾಲೋಚಿತ ಹಣ್ಣುಗಳು ಮತ್ತು ಸೋಯಾ ಉತ್ಪನ್ನಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕಾಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರದಿಂದ ದೂರವಿರುವುದು ಕೂಡ ಮುಖ್ಯವಾಗುತ್ತದೆ.