Health Tips : ಕೊಲೆಸ್ಟ್ರಾಲ್ ಹೆಚ್ಚಾಗ್ತಿದ್ರೆ ಆಹಾರದಲ್ಲಿ ಈ ಎಣ್ಣೆ ಬಳಸಿ

ಹೈ ಕೊಲೆಸ್ಟ್ರಾಲ್ ಈಗಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಮ್ಮ ಜೀವನ ಶೈಲಿಯೇ ನಮಗೆ ಮುಳುವಾಗ್ತಿದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಾವೇನು ಮಾಡ್ಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಕೊಲೆಸ್ಟ್ರಾಲ್ ನಿಯಂತ್ರಿಸಲು ಸೂಕ್ತ ಎಣ್ಣೆ ಬಳಕೆ ಕೂಡ ಮುಖ್ಯವಾಗುತ್ತದೆ.

How To Use Olive Oil To Lower Cholesterol

ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ಒಂದು ಒಳ್ಳೆಯದು ಕೊಲೆಸ್ಟ್ರಾಲ್ ಆದ್ರೆ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ಈ ಎರಡೂ ಕೊಲೆಸ್ಟ್ರಾಲ್ ಸಮತೋಲದಲ್ಲಿರಬೇಕು.  ಅಧಿಕ ಸ್ಯಾಚುರೇಟೆಡ್ ಆಹಾರ ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ತುಂಬಾ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ಮೂಕ ಕೊಲೆಗಾರ ಎಂದೇ ಕರೆಯಲಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. 

ನಮ್ಮ ದೇಹದ ಎಲ್ಲ ಜೀವಕೋಶದಲ್ಲಿ ಕೊಲೆಸ್ಟ್ರಾಲ್ (Cholesterol) ಇರುತ್ತದೆ.  ಇದು ಆಹಾರ (Food) ವನ್ನು ಜೀರ್ಣಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಹಾರ್ಮೋನು (Hormone) ಗಳ ಉತ್ಪಾದನೆ ಹಾಗೂ ವಿಟಮಿನ್ ಡಿ ಉತ್ಪಾದನೆಗೆ ಕೊಲೆಸ್ಟ್ರಾಲ್ ಮುಖ್ಯ. ಕೊಲೆಸ್ಟ್ರಾಲ್ ಮಟ್ಟ 130 ರಿಂದ 159 ಎಂಜಿ  ಆಗಿದ್ದರೆ ಅದನ್ನು ಗಡಿರೇಖೆ ಎಂದು ಪರಿಗಣಿಸಲಾಗುತ್ತದೆ. ಕೊಲೆಸ್ಟ್ರಾಲ್ ಮಟ್ಟ 160 ರಿಂದ 189 ಎಂಜಿ ಇದ್ದರೆ ಅದನ್ನು ಅಪಾಯಕಾರಿ ಎನ್ನಲಾಗುತ್ತದೆ. 190 ಕ್ಕಿಂತ ಹೆಚ್ಚಿದ್ದರೆ ಅದನ್ನು ಬಹಳ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.

ಎಣ್ಣೆಯುಕ್ತ ಆಹಾರ ತಿನ್ನೋದನ್ನೇ ಬಿಟ್‌ ಬಿಟ್ಟಿದ್ದೀರಾ ? ಜಾಗ್ರತೆ, ಆರೋಗ್ಯ ಕೆಡುತ್ತೆ

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ಧೂಮಪಾನ (Smoking), ಅತಿಯಾದ ಮದ್ಯಪಾನ ಮತ್ತು ತಪ್ಪು ಆಹಾರ ಸೇವನೆ ಇದಕ್ಕೆ ಕಾರಣವಾಗುತ್ತದೆ. ಕೊಲೆಸ್ಟ್ರಾಲ್  ಕಡಿಮೆ ಮಾಡಲು ಆಹಾರ ಮತ್ತು ಜೀವನಶೈಲಿ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೋಗಲಾಡಿಸಲು ಆಲಿವ್ ಆಯಿಲ್ ಸೇವನೆ ಹೆಚ್ಚು ಪ್ರಯೋಜನಕಾರಿಯಾಗಿದೆ. 

ಅಧಿಕ ಕೊಲೆಸ್ಟ್ರಾಲ್‌ ಗೆ ಆಲಿವ್ ಆಯಿಲ್ ಪ್ರಯೋಜನಕಾರಿ : ಆಲಿವ್ ಆಯಿಲ್ ವಿಟಮಿನ್ ಇ, ವಿಟಮಿನ್ ಎ ಮತ್ತು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಆಲಿವ್ ಆಯಿಲ್ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಗುಣಗಳು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಲಿವ್ ಆಯಿಲ್ ಉತ್ತಮ ಕೊಲೆಸ್ಟ್ರಾಲ್ ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಆಲಿವ್ ಎಣ್ಣೆಯಲ್ಲಿರುವ ಗುಣಲಕ್ಷಣಗಳು ಕೊಲೆಸ್ಟ್ರಾಲ್ ರೋಗಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಲಿವ್ ಆಯಿಲ್ ನಲ್ಲಿ ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ.  ಇದು ಅಧಿಕ ಕೊಲೆಸ್ಟ್ರಾಲ್ ನಿಂದ ಉಂಟಾಗುವ ಉರಿಯೂತದ ಸಮಸ್ಯೆಗೂ ಒಳ್ಳೆಯದು. 

Health Tips: ಶುಗರ್, ಕೊಲೆಸ್ಟ್ರಾಲ್ ಎಲ್ಲವನ್ನೂ ನಿಯಂತ್ರಣದಲ್ಲಿಡುತ್ತೆ ಓಟ್ಸ್ ನೀರು

ಆಲಿವ್ ಆಯಿಲ್ ಸೇವನೆ ಮಾಡೋದು ಹೇಗೆ? : ಆಲಿವ್ ಆಯಿಲನ್ನು  ಹಲವು ವಿಧಗಳಲ್ಲಿ ಸೇವಿಸಬಹುದು. ನೀವು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ ಅಗತ್ಯವಾಗಿ ಇದರ ಬಳಕೆ ಮಾಡಬೇಕು. ಆಲಿವ್ ಆಯಿಲನ್ನು ಸಲಾಡ್‌ಗೆ ಹಾಕಿ ಸೇವಿಸಬಹುದು. ಇದಲ್ಲದೆ ಆಲಿವ್ ಎಣ್ಣೆಯನ್ನು ಪಲ್ಯ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸುವ ಸಮಯದಲ್ಲಿ ಬಳಸಬಹುದು. ಆಲಿವ್ ಆಯಿಲ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎನ್ನುವ ಕಾರಣಕ್ಕೆ ಅಧಿಕ ಪ್ರಮಾಣದಲ್ಲಿ ಅದ್ರ ಸೇವನೆ ಸೂಕ್ತವಲ್ಲ. ನೀವು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಮಾತ್ರ ಅನೇಕ ಗಂಭೀರ ಸಮಸ್ಯೆಗಳಲ್ಲಿ ಪ್ರಯೋಜನ ಪಡೆಯಬಹುದು. 

ಆಲಿವ್ ಆಯಿಲ್ ಸೇವನೆಯ ಇತರ ಪ್ರಯೋಜನ : ಆಲಿಯ್ ಆಯಿಲ್ ತೂಕ ಇಳಿಕೆಗೆ ಸಹಕಾರಿಯಾಗಿದೆ. ಆಲಿವ್ ಆಯಿಲ್ ಮೊನೊಸಾಚುರೇಟೆಡ್ ಕೊಬ್ಬು, ಹೊಟ್ಟೆಯ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.  ತೂಕ ಕಡಿಮೆ ಮಾಡಲು ಬಯಸುವವರು ಪ್ರತಿದಿನ ಬೆಳಿಗ್ಗೆ ಒಂದರಿಂದ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇವಿಸಬೇಕು.

ಕ್ಯಾನ್ಸರ್ ಗೆ ಒಳ್ಳೆಯದು : ಆಲಿವ್ ಆಯಿಲ್ ನಲ್ಲಿರುವ ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.  ಈ ಎಲ್ಲ ಸಮಸ್ಯೆಗೆ ಆಲಿವ್ ಆಯಿಲ್ ಪರಿಹಾರ : ಮೂಳೆಗಳನ್ನು ಬಲಪಡಿಸಲು, ಊತವನ್ನು ಕಡಿಮೆ ಮಾಡಲು, ಮುಖದ ಸೌಂದರ್ಯ ಹೆಚ್ಚಿಸಲು ನೀವು ಆಲಿವ್ ಆಯಿಲ್ ಬಳಕೆ ಮಾಡಬಹುದು.
 

Latest Videos
Follow Us:
Download App:
  • android
  • ios