Asianet Suvarna News Asianet Suvarna News

Urine Infectionಗೆ ಸೋಂಕೋಂದೇ ಕಾರಣವಲ್ಲ, ಬೇರೆ ಬೇರೆ ಕಾರಣಗಳಿಂದ ಕಾಡಬಹುದು ಅನಾರೋಗ್ಯ

ಉರಿಮೂತ್ರ ಎಂದರೆ ಸಾಮಾನ್ಯವಾಗಿ ನಾವೆಲ್ಲ ಮೂತ್ರನಾಳ ಅಥವಾ ಮೂತ್ರಕೋಶಕ್ಕೆ ಸಂಬಂಧಿಸಿದ ಸೋಂಕು ಎಂದು ಸಾಮಾನ್ಯೀಕರಿಸಿ ಬಿಡುತ್ತೇವೆ. ಆದರೆ, ಉರಿಮೂತ್ರ ಕೇವಲ ಅದರೊಂದರಿಂದಲೇ ಉಂಟಾಗುವುದಿಲ್ಲ. ಹಲವಾರು ಕಾರಣಗಳಿರಬಹುದು. 
 

Reasons for urinary tract infection causes symtoms and solution
Author
Bangalore, First Published Aug 15, 2022, 5:38 PM IST

ಮೂತ್ರ ವಿಸರ್ಜಿಸುವಾಗ ಬಿಟ್ಟೂಬಿಡದೆ ನೋವು ಕಾಡಿಸಿ ಕೆಲವೊಮ್ಮೆ ಹೈರಾಣಾಗುವಂತೆ ಮಾಡಿಬಿಡುತ್ತದೆ. ಮೂತ್ರ ವಿಸರ್ಜಿಸುವ ಸಮಯದಲ್ಲಿ ನೋವು, ಉರಿ, ಮೂತ್ರ ಸ್ವಲ್ಪ ಸ್ವಲ್ಪವೇ ಬರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇದನ್ನೇ ನಾವು ಉರಿಮೂತ್ರ ಎನ್ನುತ್ತೇವೆ. ಉರಿಮೂತ್ರ ಅತ್ಯಂತ ಸಾಮಾನ್ಯ ಸಮಸ್ಯೆ. ಕೆಲವು ಸ್ತ್ರೀರೋಗ ತಜ್ಞರ ಪ್ರಕಾರ, ಶೇಕಡ ೩೦ರಷ್ಟು ಮಹಿಳೆಯರು ಈ ಸಮಸ್ಯೆಯ ನಿವಾರಣೆಗಾಗಿ ವೈದ್ಯರನ್ನು ಭೇಟಿಯಾಗುತ್ತಾರೆ. ಉರಿಮೂತ್ರಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯವಾಗಿ ಮೂತ್ರನಾಳದಲ್ಲಿ ಉಂಟಾಗುವ ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತದೆ. ಆದರೆ, ಇದರ ಹೊರತಾಗಿಯೂ ಹಲವಾರು ಕಾರಣಗಳಿರಬಹುದು, ಕೇವಲ ಮೂತ್ರನಾಳದ ಸೋಂಕೊಂದೇ ಇದಕ್ಕೆ ಕಾರಣವಾಗಿರದೆ ಇರಬಹುದು. ಹಲವು ಬೇರೆ ಬೇರೆ ಅಂಗಾಂಗಗಳ ಸೋಂಕಿನಿಂದಲೂ ಉರಿಮೂತ್ರ ಉಂಟಾಗುತ್ತದೆ. ಕೆಲವು ಬಾರಿ ಇದು ಯಾವುದಾದರೂ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಹೀಗಾಗಿ, ಪದೇ ಪದೆ ಉರಿಮೂತ್ರ ಉಂಟಾಗುತ್ತಿದ್ದರೆ ಆ ಸಮಯದಲ್ಲಿ ಏನೋ ಒಂದು ಚಿಕಿತ್ಸೆ ಮಾಡಿ ಮರೆತುಬಿಡಬೇಡಿ. ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ಕೆಳಗಿನ ಹಲವಾರು ಕಾರಣಗಳಿಂದ ಉರಿಮೂತ್ರ ಉಂಟಾಗಬಹುದು, ಚೆಕ್‌ ಮಾಡಿಕೊಳ್ಳಿ.

•    ಮೊದಲನೆಯದಾಗಿ, ಮೂತ್ರನಾಳದ (Urinary Tract Infection) ಸೋಂಕು ಇದಕ್ಕೆ ಸಾಮಾನ್ಯ ಕಾರಣ. ಮಹಿಳೆಯರಲ್ಲಿ (Woman) ಈ ಸಮಸ್ಯೆ ಹೆಚ್ಚು. ಮೂತ್ರನಾಳದ ಮೂಲಕ ಬ್ಯಾಕ್ಟೀರಿಯಾ (Bacteria) ಮೂತ್ರಕೋಶ ಪ್ರವೇಶಿಸಿದಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಮೂತ್ರಕೋಶ (Bladder) ಪ್ರವೇಶಿಸುವ ಬ್ಯಾಕ್ಟೀರಿಯಾ ಅತಿ ವೇಗವಾಗಿ ವೃದ್ಧಿಯಾಗುತ್ತದೆ. ಹೀಗಾಗಿ, ನೋವಿನ ತೀವ್ರತೆ ಅಧಿಕವಾಗುತ್ತದೆ. ಆ ಸಮಯದಲ್ಲಿ ಮೂತ್ರದ ಬಣ್ಣ ಬದಲಾಗುವುದು, ಹೆಚ್ಚು ವಾಸನೆಯಿಂದ (Smell) ಕೂಡಿರುವುದು ಸಾಮಾನ್ಯ. ಇದಕ್ಕೆ ತಜ್ಞರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು.

ಯುಟಿಐ ಲಕ್ಷಣಗಳಿವು…. ಇಗ್ನೋರ್ ಮಾಡದೆ ಔಷಧಿ ಸೇವಿಸಿ

•    ಲೈಂಗಿಕ ಕ್ರಿಯೆಯಿಂದ ಸೋಂಕು (Sexually Transmitted Infection)
ಉರಿಮೂತ್ರ ಉಂಟಾಯಿತು ಎಂದರೆ ಕೇವಲ ಯುಟಿಐ (ಯೂರಿನರಿ ಟ್ರ್ಯಾಕ್ಟ್‌ ಇನ್‌ ಫೆಕ್ಷನ್) ಎಂದು ಪರಿಗಣಿಸುವಂತಿಲ್ಲ. ಅದು ಲೈಂಗಿಕ ಕ್ರಿಯೆಯ ಮೂಲಕ ಹರಡುವ ಸೋಂಕೂ (ಎಸ್‌ ಟಿಐ-STI) ಆಗಿರಬಹುದು. ಇದನ್ನು ಯುಟಿಐ ಎಂದು ಪರಿಗಣಿಸಿ ಸ್ವಯಂ ವೈದ್ಯರಾಗಬಾರದು. ಏಕೆಂದರೆ, ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು. ಈ ಸಮಯದಲ್ಲಿ ಜನನಾಂಗದಲ್ಲಿ ತುರಿಕೆ, ಉರಿ, ಸ್ರಾವವಾಗುವುದು, ಜನನಾಂಗದಲ್ಲಿ ಗಾಯವಾಗುವುದು ಕಂಡುಬರುತ್ತದೆ.

•    ಸಿಸ್ಟೈಟಿಸ್‌ (Cystitis)
ಮೂತ್ರಕೋಶದಲ್ಲಿ ಕಂಡುಬರುವ ಸಮಸ್ಯೆ ಇದು. ಬ್ಯಾಕ್ಟೀರಿಯಾ ಸೋಂಕಿನಿಂದ ಇದು ಉಂಟಾಗುತ್ತದೆ. ಇದರಿಂದಲೂ ಮೂತ್ರ (Urine) ವಿಸರ್ಜಿಸುವ ಸಮಯದಲ್ಲಿ ಅತಿಯಾಗಿ ನೋವಾಗುತ್ತದೆ. ಸೂಕ್ತ ಔಷಧಗಳು ಮತ್ತು ಚಿಕಿತ್ಸೆ ಮೂಲಕ ಸಿಸ್ಟೈಟಿಸ್‌ ಅನ್ನು ನಿವಾರಣೆ ಮಾಡಿಕೊಳ್ಳಬಹುದು.

•    ಮೂತ್ರಜನಕಾಂಗದ (Kidney) ಸೋಂಕು
ಮೂತ್ರ ವಿಸರ್ಜಿಸುವಾಗ ನೋವಿನ ಜತೆಗೆ ರಕ್ತವೂ (Blood) ಕಂಡುಬಂದರೆ ಸೋಂಕು ಮೂತ್ರಜನಕಾಂಗವನ್ನೂ ತಲುಪಿದೆ ಎಂದರ್ಥ. ಇದು ಹೆಚ್ಚಿನ ಸಮಸ್ಯೆ ತಂದೊಡ್ಡುತ್ತದೆ. ಉರಿಮೂತ್ರದ ಜತೆಗೆ ಜ್ವರ (Fever) ಬರುವುದು, ಹೊಟ್ಟೆಯ ಅಕ್ಕಪಕ್ಕದಲ್ಲಿ ನೋವು, ಚಳಿಯಾಗುವುದು ಕಂಡುಬರುತ್ತದೆ. ಸೂಕ್ತ ಔಷಧ ಪಡೆಯದಿದ್ದರೆ ಆಸ್ಪತ್ರೆಯಲ್ಲಿ ಅಡ್ಮಿಟ್‌ (Admit) ಆಗುವವರೆಗೂ ಸಮಸ್ಯೆ ಹೆಚ್ಚಾಗಬಹುದು. ಸೋಂಕು ಮೂತ್ರಜನಕಾಂಗದಿಂದ ರಕ್ತಕ್ಕೆ ಹರಡಿದರೆ ಸಮಸ್ಯೆ ಹೆಚ್ಚಾಗುತ್ತದೆ.

•    ಕಿಡ್ನಿ ಅಥವಾ ಮೂತ್ರಕೋಶದಲ್ಲಿ ಕಲ್ಲು (Stone)
ಮೂತ್ರದಲ್ಲಿರುವ ಮಿನರಲ್‌ ಗಳು ಒಂದೆಡೆ ಸೇರಿ ಗಟ್ಟಿಯಾದಾಗ ಕಲ್ಲು ರೂಪುಗೊಳ್ಳುತ್ತದೆ. ಈ ಕಲ್ಲುಗಳು ಕಿಡ್ನಿ ಹಾಗೂ ಮೂತ್ರಕೋಶ ಎರಡಲ್ಲೂ ಉಂಟಾಗಬಹುದು. ಮೂತ್ರಕೋಶದಲ್ಲಿ ಆಗುವ ಕಲ್ಲು ಮೂತ್ರಕೋಶದ ಅಂಚಿಗೆ ಬಂದರೆ ಹಾಗೂ ಕಿಡ್ನಿಯಲ್ಲಿ ಆಗುವ ಕಲ್ಲು ನಿರ್ದಿಷ್ಟ ಸ್ಥಳದಲ್ಲಿ ನಿಂತುಕೊಂಡರೆ ಮೂತ್ರ ಬ್ಲಾಕ್‌ ಆಗಿಬಿಡುತ್ತದೆ. ಆಗ ನೋವು ಆರಂಭವಾಗುತ್ತದೆ. ಇದರ ಬಗ್ಗೆ ಗಮನವಹಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ.

ಸೆಕ್ಸ್ ಬಳಿಕ ಮೂತ್ರವಿಸರ್ಜನೆ ಮಾಡಿದ್ರೆ ಪ್ರೆಗ್ನೆಂಟ್ ಆಗೋಲ್ವಾ?

•    ಜನನಾಂಗದಿಂದ ಸೋರಿಕೆ (Vaginal Discharge)
ಮಹಿಳೆಯರ ಜನನಾಂಗ ಡ್ರೈ ಆಗುವುದು ವಯಸ್ಸಾದಂತೆ ಸಾಮಾನ್ಯ. ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ತರಚಿದಂತೆ ಗಾಯವಾಗುತ್ತದೆ. ಅಲ್ಲಿಂದ ಮೂತ್ರ ಹರಿದುಬರುವಾಗ ನೋವು ಉಂಟಾಗುತ್ತದೆ. ಈ ಸಮಯದಲ್ಲಿ ಬಿಳಿಯಾದ, ಅಂಟಿನಂತಹ ಸೋರಿಕೆ ಕಂಡುಬರುತ್ತದೆ. ಮೆನೋಪಾಸ್‌ ಸಮಯದಲ್ಲಿ ಜನನಾಂಗದ ಒಳಭಾಗದ ಚರ್ಮ ತೆಳುವಾಗುತ್ತದೆ. ಹೀಗಾಗಿ, ಈ ಸಮಸ್ಯೆ ಉಂಟಾಗುತ್ತದೆ.   
 

Follow Us:
Download App:
  • android
  • ios