ಕಿಡ್ನಿ ಹಾನಿ ತಪ್ಪಿಸಲು ಕೆಲವು diet ಸೂತ್ರಗಳು
ಕಿಡ್ನಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ. ಆದರೆ, ನಿರ್ದಿಷ್ಟ ಕೆಲವು ಡಯೆಟ್ ಅನುಸರಿಸುವ ಮೂಲಕ ಅದನ್ನು ತಡೆಗಟ್ಟಬಹುದು ಎನ್ನುವುದನ್ನು ಹೊಸ ಅಧ್ಯಯನವೊಂದು ಹೇಳಿದೆ. ಈ ವಿಧಾನವನ್ನು ಚಿಕಿತ್ಸಾ ರೂಪದಲ್ಲಿಯೂ ದೊರೆಯುವಂತೆ ಮಾಡಿದರೆ ಕಿಡ್ನಿ ಸಮಸ್ಯೆಯನ್ನು ದೂರವಿಡಲು ಸೂಕ್ತವಾದ ಮಾರ್ಗ ದೊರೆತಂತಾಗುತ್ತದೆ.
ಯಾವುದೇ ಆರೋಗ್ಯ (Health) ಸಮಸ್ಯೆಗಾದರೂ ನಮ್ಮ ನಾಟಿ ವೈದ್ಯರು ಒಂದಿಷ್ಟು ಆಹಾರದಲ್ಲಿ ಕಟ್ಟುನಿಟ್ಟಿನ ಪಥ್ಯಗಳನ್ನು ತಿಳಿಸುತ್ತಾರೆ. ಅವರು ಕೊಡುವ ಔಷಧಗಳಿಗೆ ನಾವು ಸೇವಿಸುವ ಕೆಲವು ಆಹಾರಗಳು ವಿರೋಧ ನೀಡುವ ಹಿನ್ನೆಲೆಯಲ್ಲಿ ಅಂತಹ ಆಹಾರಗಳನ್ನು ಆ ಸಮಯದಲ್ಲಿ ಸೇವಿಸುವುದನ್ನು ನಿಷೇಧಿಸುತ್ತಾರೆ. ಅಲ್ಲದೆ, ಕೆಲವು ಆಹಾರಗಳಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವೂ ಉಂಟಾಗಬಹುದು. ಹೀಗಾಗಿ, ಅವುಗಳನ್ನು ಸೇವಿಸದೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ನಮ್ಮ ಆಯುರ್ವೇದವೂ ಆಹಾರದ ಪಥ್ಯಕ್ಕೆ, ಆಹಾರ ಪದ್ಧತಿಗೆ ಅತ್ಯಂತ ಮಹತ್ವ ನೀಡಿದೆ. ಇದೀಗ, ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡವೂ ಸಹ ಆಹಾರ ಪದ್ಧತಿಯ ಮಹತ್ವದ ಕುರಿತು ಬೆಳಕು ಚೆಲ್ಲಿದೆ.
ತೀವ್ರ ಕಿಡ್ನಿ (Acute Kidney) ಸಮಸ್ಯೆಯನ್ನು (Damage) ತಡೆಗಟ್ಟಲು ನಿರ್ದಿಷ್ಟ ನಾಲ್ಕು ರೀತಿಯ ಆಹಾರ ಪದ್ಧತಿಗಳು (Food System) ಸಹಕಾರಿಯಾಗಿವೆ ಎಂದು ಹೇಳಿದೆ. “ಟ್ರಾನ್ಸಲೇಷನಲ್ ರಿಸರ್ಚ್ (Translational Research)’ ಎನ್ನುವ ನಿಯತಕಾಲಿಕದಲ್ಲಿ ಈ ಕುರಿತ ಸಂಶೋಧನಾ ಪ್ರಬಂಧ ಪ್ರಕಟವಾಗಿದ್ದು, ಅವರ ಪ್ರಕಾರ, ಈ ನಾಲ್ಕು ಡಯೆಟ್ (Diet)ಗಳಿಂದ ಕಿಡ್ನಿಗೆ ತೀವ್ರವಾಗಿ ಹಾನಿಯಾಗುವುದನ್ನು ತಪ್ಪಿಸಬಹುದು.
ಕಿಡ್ನಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಹಾಗೂ ಅವು ಅಪಾಯಕಾರಿಯೂ ಹೌದು. ವಯಸ್ಸಾಗುತ್ತಿದ್ದಂತೆ ಕಿಡ್ನಿ ಸಮಸ್ಯೆಯೂ ಹೆಚ್ಚುತ್ತದೆ. ಅದು ದೀರ್ಘ ಕಾಲದ ಆಸ್ಪತ್ರೆವಾಸ ಹಾಗೂ ಕೊನೆಗೆ ಸಾವಿಗೂ ಕಾರಣವಾಗಬಲ್ಲದು. ಇತ್ತೀಚಿನ ದಿನಗಳಲ್ಲಿ ಕಿಡ್ನಿಯ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಸಮಸ್ಯೆ ಕಂಡುಬಂದಾಗ ಚಿಕಿತ್ಸೆ ನೀಡುವುದನ್ನು ಹೊರತುಪಡಿಸಿ ಇದಕ್ಕಾಗಿ ಯಾವುದೇ ಥೆರಪಿ (Therapy) ಹಾಗೂ ತಡೆಗಟ್ಟುವ ವಿಧಾನಗಳು ಇಲ್ಲದಿರುವುದು ಇನ್ನಷ್ಟು ಯೋಚನೆ ಮಾಡುವ ಸಂಗತಿ. ಆದರೂ ಪೌಷ್ಟಿಕ (Nutrition) ಹಾಗೂ ಕೆಲವು ನಿರ್ದಿಷ್ಟ ಆಹಾರ ಪದ್ಧತಿಯಿಂದ ಕಿಡ್ನಿ ಸಮಸ್ಯೆಯನ್ನು ತಡೆಗಟ್ಟಬಹುದು ಎನ್ನುವುದು ಅಧ್ಯಯನದಿಂದ (Study) ಬಹಿರಂಗವಾಗಿದೆ.
ಪೌಷ್ಟಿಕ ಹಾಗೂ ನಿರ್ದಿಷ್ಟ ಡಯೆಟ್ ನಿಂದ ಯಾವುದೇ ಅಂಗಾಂಗಕ್ಕೆ ರಕ್ತಪೂರೈಕೆಯಲ್ಲಿ ಕೊರತೆಯುಂಟಾಗುವುದಿಲ್ಲ. ಸೋಂಕು, ಔಷಧದ ಅಡ್ಡ ಪರಿಣಾಮಗಳ ಪ್ರಭಾವದಿಂದ ಅಂಗಾಂಗಗಳು ಹೆಚ್ಚು ಹಾನಿಗೆ ಒಳಗಾಗುವುದಿಲ್ಲ.
ಕೊಬ್ಬು ಕರಗಬೇಕಾ? ಈ ಮೂರು ವಸ್ತುಗಳನ್ನು ತಿಂದು ನೋಡಿ!
ಹಾಗಿದ್ರೆ ಆ ಆಹಾರ ಪದ್ಧತಿ ಯಾವ್ದು?
1) ಫಾಸ್ಟ್ ಮಿಮಿಕಿಂಗ್ ಡಯೆಟ್ (Fast Mimicking Diet) (ಎಫ್ ಎಂಡಿ). ಇದನ್ನು ಮಾಕ್ ಫಾಸ್ಟಿಂಗ್ ಎಂದೂ ಕರೆಯಲಾಗುತ್ತದೆ. 2) ಕೆಟೊಜೆನಿಕ್ (Ketogenic) ಡಯೆಟ್- ಇದರಲ್ಲಿ ಅಧಿಕ ಪ್ರಮಾಣದ ಕೊಬ್ಬನ್ನು ಮಾತ್ರ ಸೇವನೆ ಮಾಡಲಾಗುತ್ತದೆ, ಕಾರ್ಬೋಹೈಡ್ರೇಟ್ ಪ್ರಮಾಣ ಅತಿ ಕಡಿಮೆ ಇರುತ್ತದೆ. 3) ಅಮಿನೋ ಆಸಿಡ್ (Amino Acid) ಗಳ ಸರಪಣಿಯಲ್ಲಿರುವ ವಿವಿಧ ಅಂಶಗಳ ಸೇವನೆಯನ್ನು ಕಡಿತಗೊಳಿಸುವುದು (ಲ್ಯೂಸಿನ್, ಐಸೋಲ್ಯೂಸಿನ್, ವಲೈನ್ ಅಂಶಗಳು). 4 ಮತ್ತು 5) ಎರಡು ರೀತಿಯ ಡಯೆಟ್ ಸಲ್ಫರ್ ಭರಿತ ಅಮಿನೋ ಆಸಿಡ್ ಮೆಥಿಯೋನೈನ್ ಮತ್ತು ಸಿಸ್ಟೈನ್ ಗಳ ನಿರ್ಬಂಧ. 6) ಕ್ಯಾಲರಿ ನಿರ್ಬಂಧಿಸುವ ಆಹಾರ ಪದ್ಧತಿ.
ಬೆಳಗ್ಗೆ ತಿಂಡಿ ಹಿತವಾಗಿದ್ದರೆ, ದಿನವಿಡೀ ಫ್ರೆಶ್ ಆಗಿರ್ಬೋದು
ಈ ಆರು ಆಹಾರ ಪದ್ಧತಿಗಳಲ್ಲಿ ಒಂದು, ನಾಲ್ಕು, ಐದು ಹಾಗೂ ಆರನೆಯ ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಕಿಡ್ನಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. ಈ ಆಹಾರ ಪದ್ಧತಿಗಳು ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸುವ ಕುರಿತು ಈಗಾಗಲೇ ಅಧ್ಯಯನಗಳು ನಡೆದಿವೆ. ಈ ಎಲ್ಲ ಡಯೆಟ್ ವಿಧಾನಗಳನ್ನು ಔಷಧದ ರೂಪದಲ್ಲಿಯೂ ಕಾಣಬಹುದು. ಕಿಡ್ನಿ ಹಾನಿಯಾಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಇವು ಚಿಕಿತ್ಸಾ ರೂಪದಲ್ಲಿ ದೊರೆತರೆ ರೋಗಿಗಳಿಗೆ ಹೊಸ ಥೆರಪಿಯೊಂದು ಲಭ್ಯವಾದಂತೆ ಆಗುತ್ತದೆ.
“ಕಿಡ್ನಿ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನ ಲಭ್ಯವಿಲ್ಲದಿರುವ ಸಮಸ್ಯೆಯನ್ನು ಈ ಕೆಲವು ಡಯೆಟ್ ವಿಧಾನಗಳ ಮೂಲಕ ನಾವು ಎದುರಿಸಬಹುದು. ನಂಬಲಸಾಧ್ಯವಾದ ಧನಾತ್ಮಕ ಪರಿಣಾಮಗಳು ಇವುಗಳಿಂದ ಕಂಡುಬಂದಿದೆʼ ಎಂದಿದ್ದಾರೆ ಯೂನಿವರ್ಸಿಟಿ ಹಾಸ್ಪಿಟಲ್ ಕೊಲೊನ್ ನ ಹಿರಿಯ ಫಿಸಿಷಿಯನ್ ಡಾ.ರೋಮನ್ ಅಲ್ರಿಚ್ ಮುಲ್ಲರ್ (Roman Ulrich Muller).