Fibromyalgia ಕಾಯಿಲೆಯಿಂದ ಬಳಲ್ತಿರೋ ನಟಿ ಪೂನಂ ಕೌರ್, ಹಾಗಂದ್ರೇನು ?
ಸೆಲಬ್ರಿಟಿಗಳು ವಿಚಿತ್ರ ಕಾಯಿಲೆಗಳಿಂದ ಬಳಲುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ, ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಆ ನಂತರ ವರುಣ್ ಧವನ್‌ಗೆ ವೆಸ್ಟಿಬ್ಯುಲಾರ್ ಕಾಯಿಲೆ ಇರೋದು ವರದಿಯಾಗಿತ್ತು. ಆ ಬಳಿಕ ಈಗ ನಟಿ ಪೂನಂ ಕೌರ್ ವಿಚಿತ್ರ ಕಾಯೊಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚಿಗಷ್ಟೆ ಟಾಲಿವುಡ್ ಸ್ಟಾರ್ ನಟಿ ಸಮಂತಾ Myositis ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಸಮಂತಾ ಅನಾರೋಗ್ಯದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ (Treatment) ಸಮಂತಾ ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಮಂತಾ ಆನಾರೋಗ್ಯದ ಬೆನ್ನಲ್ಲೇ ಮತ್ತೋರ್ವ ನಟಿ ಪೂನಂ ಕೌರ್ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ಹೇಳಿದ್ದಾರೆ. ಪೂನಂ ಕೌರ್ Fibromyalgia ಎನ್ನುವ ಅಪರೂಪದ ಕಾಯಿಲೆ (Disease)ಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಒಂದು ಕಾಲದ ಸ್ಟಾರ್ ನಟಿ ಪೂನಂ ಅನಾರೋಗ್ಯತದ ವಿಚಾರ ಅಭಿಮಾನಿಗಳಲ್ಲಿ ಆತಂಕ (Anxiety) ಮೂಡಿಸಿದೆ.
ಫೈಬ್ರೊಮ್ಯಾಲ್ಗಿಯಾ ಎಂದರೇನು ?
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಪೂನಂ ಕೌರ್ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇದು ಫೈಬ್ರೊಮ್ಯಾಲ್ಗಿಯಾವಾಗಿದ್ದು, ಭಾರತದಲ್ಲಿ ವರ್ಷಕ್ಕೆ 10 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗುತ್ತಾರೆ. ಈ ರೋಗವು ದೇಹ (Body)ದಲ್ಲಿ ಮೃದುತ್ವ ಮತ್ತು ಸ್ನಾಯುಗಳಲ್ಲಿ ವ್ಯಾಪಕವಾದ ನೋವುಗಳನ್ನು ಉಂಟುಮಾಡುತ್ತದೆ. ಈ ರೋಗದ ದುಷ್ಪರಿಣಾಮಗಳು ನಿದ್ರಾಹೀನತೆ, ಆಯಾಸ, ಜ್ಞಾಪಕ ಶಕ್ತಿ ನಷ್ಟ ಮತ್ತು ಇತರ ದುರ್ಬಲಗೊಳಿಸುವ ವಸ್ತುಗಳು. ದೈಹಿಕ ಆಘಾತ, ಶಸ್ತ್ರಚಿಕಿತ್ಸೆ (Operation), ಸೋಂಕು ಅಥವಾ ಗಮನಾರ್ಹ ಮಾನಸಿಕ ಒತ್ತಡ (Mental pressure)ದಂತಹ ಘಟನೆಯ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಪ್ರಾರಂಭವಾಗುತ್ತವೆ. ಇತರ ಸಂದರ್ಭಗಳಲ್ಲಿ, ಯಾವುದೇ ಪ್ರಚೋದಕ ಘಟನೆಗಳಿಲ್ಲದೆ ರೋಗಲಕ್ಷಣಗಳು (Symptoms) ಕ್ರಮೇಣವಾಗಿ ಸಂಗ್ರಹಗೊಳ್ಳುತ್ತವೆ.
Samantha ಆರೋಗ್ಯದಲ್ಲಿ ಏರುಪೇರು; ತುರ್ತು ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್?
ಚಿಕಿತ್ಸೆಯೇ ಇಲ್ಲದ ಕಾಯಿಲೆ ಫೈಬ್ರೊಮ್ಯಾಲ್ಗಿಯಾ
ಸಮಂತಾ ಎದುರಿಸಿದ ಕಾಯಿಲೆ ಮೈಯೋಸಿಟಿಸ್‌ನಂತೆ, ಫೈಬ್ರೊಮ್ಯಾಲ್ಗಿಯಾ ಕೂಡ ಗುಣಪಡಿಸಲಾಗದ ಕಾಯಿಲೆಯಾಗಿದೆ. ಆದರೆ ಹಿಂದಿನ ಕಾಯಿಲೆಗಿಂತ ಹೆಚ್ಚು ಸುರಕ್ಷಿತ (Safe)ವಾದ ಸ್ಥಿತಿಯಾಗಿದೆ. ಮೈಯೋಸಿಟಿಸ್ ಸ್ನಾಯುಗಳ ಚಲನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಹಾಗೆಯೇ, ಇಲ್ಲಿ ಫೈಬ್ರೊಮ್ಯಾಲ್ಗಿಯದಲ್ಲಿ, ಸ್ನಾಯುಗಳಲ್ಲಿನ ನೋವಿನ ಸಂವೇದನೆಗಳು ಹೆಚ್ಚಾಗುತ್ತವೆ ಮತ್ತು ಮೆಮೊರಿ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತವೆ. ಆದರೆ ಈ ಆದರೆ ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಲಭ್ಯವಿಲ್ಲ. ಪೂನಂ ಅವರ ಆರೋಗ್ಯ ಸ್ಥಿತಿಯು ಈಗ ಅಪಾಯದ ಮಟ್ಟದಲ್ಲಿಲ್ಲ ಎಂದು ಹೇಳಲಾಗುತ್ತದೆ ಆದರೆ ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಅವರು ಸಾಕಷ್ಟು ಜೀವನಶೈಲಿ (Lifestyle)ಯನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಲಾಗಿದೆ.
ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಪೂನಂ ಕಪೂರ್
ಇತ್ತೀಚೆಗಷ್ಟೇ ಪೂನಂ ಅವರು ಕಾಂಗ್ರೆಸ್ ಪಕ್ಷದ ಬಹರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಕೈ ಕೈ ಹಿಡಿದುಕೊಂಡು ನಡೆಯುತ್ತಿರುವುದು ಕಂಡುಬಂದಿತ್ತು. ಮಿಸ್ ಆಂಧ್ರಪ್ರದೇಶ ಕಿರೀಟವನ್ನು ಪಡೆದ ನಂತರ, ಪೂನಂ 2006 ರಲ್ಲಿ ಎಸ್‌ವಿ ಕೃಷ್ಣಾ ರೆಡ್ಡಿ ಅವರ ಮಾಯಾಜಲಂ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಪೂನಂ ಕಪೂರ್ ನಟಿಸಿದ್ದಾರೆ.
Varun Dhawan: ದೇಹದ ಹತೋಟಿ ಕಳಕೊಂಡಿದ್ರು ವರುಣ್ ಧವನ್, ಏನಿದು ವೆಸ್ಟಿಬ್ಯುಲಾರ್ ಹೈಪೋಫಂಕ್ಷನ್?
ಆಂಗ್ಲ ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಪೂನಂ ನವೆಂಬರ್ 12 ರಂದು ದೆಹಲಿಯಲ್ಲಿ ಬ್ರಹ್ಮಾಕುಮಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಬೆನ್ನುನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಿದ ನಂತರ, ನವೆಂಬರ್ 18 ರಲ್ಲಿ ಅವರಿಗೆ Fibromyalgia ಇರುವುದು ಬೆಳಕಿಗೆ ಬಂದಿದೆ. ಪೂನಂ ಆಯುರ್ವೇದ ಚಿಕಿತ್ಸೆ ಮಾಡುತ್ತಿದ್ದಾರೆ ಎನ್ನುವ ಮಾತಿ ತಿಳಿದುಬಂದಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದು ಸದ್ಯ ಮುಂಬೈನ ತನ್ನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ.