Samantha ಆರೋಗ್ಯದಲ್ಲಿ ಏರುಪೇರು; ತುರ್ತು ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್?
ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ. ಆಯುರ್ವದೇ ವರ್ಕ್ ಆಗದ ಕಾರಣ ದಕ್ಷಿಣ ಕೊರಿಯಾಗೆ ಪ್ರಯಾಣ ಮಾಡಿದ ನಟಿ...
ತೆಲುಗು ಚಿತ್ರರಂಗ ಕ್ಯೂಟಿ, ಬಾಲಿವುಡ್ ಊ ಅಂಟಾವಾ ನಟಿ ಸಮಂತಾ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮತ್ತು ಕಾಯಿಲೆ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದರು. ನಾಲ್ಕೈದು ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡು ಬಂದಿದೆ ಹೀಗಾಗಿ ತುರ್ತು ಚಿಕಿತ್ಸೆಗೆಂದು ದಕ್ಷಿಣ ಕೊರಿಯಾಗೆ ಪ್ರಯಾಣ ಮಾಡುತ್ತಾರಂತೆ. ಹೈದರಾಬಾದ್‌ನಲ್ಲಿ ತೆಗೆದುಕೊಳ್ಳುತ್ತಿರುವ ಆಯುರ್ವೇದ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ ಎನ್ನಲಾಗಿದೆ.
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಶೀಘ್ರದಲ್ಲಿ ಸಮಂತಾ ದಕ್ಷಿಣ ಕೊರಿಯಾಗೆ ಪ್ರಯಾಣ ಮಾಲಿದ್ದು ಒಂದು ತಿಂಗಳು ವಾಸವಿರುತ್ತಾರೆ ಎನ್ನಲಾಗಿದೆ. ಕೊರಿಯಾದಲ್ಲಿ ನೀಡಲಾಗುವ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗು ಸಾಧ್ಯತೆಗಳಿದೆ. ಚಿಕಿತ್ಸೆ ನಂತರ ವಿಜಯ್ ದೇವರಕೊಂಡ ಮತ್ತು ಖುಷಿ ಜೊತೆ ಸಿನಿಮಾ ಮಾಡಲಿದ್ದಾರೆ.
ಏನಿದು Myositis?
ಮೈಯೋಸಿಟಿಸ್ ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದೆ. ಆದರೆ ಇದು ಒಂದೇ ರೋಗವಲ್ಲ, ಆದರೆ ಅನೇಕ ರೋಗಗಳ ಗುಂಪು. ಇದು ದೇಹವನ್ನು (Body) ನಿಧಾನವಾಗಿ ಒಡೆಯುತ್ತದೆ ಮತ್ತು ದೊಡ್ಡ ಸಮಸ್ಯೆ ಎಂದರೆ ವೈದ್ಯರು ಇದಕ್ಕೆ ಯಾವುದೇ ನಿರ್ಧಿಷ್ಟ ಚಿಕಿತ್ಸೆಯನ್ನು ಹೊಂದಿಲ್ಲ. ಮೈಯೋಸಿಟಿಸ್, ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಸ್ನಾಯುಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ. ಸ್ನಾಯುಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ಬಹು ಪರಿಸ್ಥಿತಿಗಳಿಂದ ಈ ರೋಗವು ಉಂಟಾಗಬಹುದು. ಇದರ ಮುಖ್ಯ ಲಕ್ಷಣಗಳು ಸ್ನಾಯು ನೋವು ಮತ್ತು ದೌರ್ಬಲ್ಯ, ಇದು ಕಾಲಾನಂತರದಲ್ಲಿ ಪರಿಸ್ಥಿತಿ ಕೆಡುಕಾಗುತ್ತಾ ಹೋಗುತ್ತದೆ. ಈ ಲಕ್ಷಣಗಳನ್ನು ಹೊಂದಿದವರು ಸಾಕಷ್ಟು ಮುಗ್ಗರಿಸಬಹುದು ಅಥವಾ ಬೀಳಬಹುದು ಅಥವಾ ನಡೆದಾಡಿದ ನಂತರವೂ ಸುಸ್ತಾಗಬಹುದು.
WebMD ಪ್ರಕಾರ, ಡರ್ಮಾಟೋಮೈಯೋಸಿಟಿಸ್, ಪಾಲಿಮೈಯೋಸಿಟಿಸ್ ಮತ್ತು ಇನ್ಕ್ಲೂಷನ್ ಬಾಡಿ ಮೈಯೋಸಿಟಿಸ್‌ನಂತಹ ಉರಿಯೂತದ ಪರಿಸ್ಥಿತಿಗಳು ತೀವ್ರವಾದ ಮೈಯೋಸಿಟಿಸ್‌ಗೆ ಕಾರಣವಾಗಬಹುದು. ಲೂಪಸ್, ಸ್ಕ್ಲೀರೋಡರ್ಮಾ ಮತ್ತು ರುಮಟಾಯ್ಡ್ ಸಂಧಿವಾತ ಸಹ ಈ ಸ್ಥಿತಿಯನ್ನು ಉಂಟುಮಾಡಬಹುದು. ಕೆಲವು ಔಷಧಿಗಳು ಮತ್ತು ತೀವ್ರವಾದ ದೈಹಿಕ ಗಾಯಗಳ (Injury) ಜೊತೆಗೆ ವೈರಲ್ ಸೋಂಕುಗಳು (Virus) ಸಹ ಈ ಸ್ಥಿತಿಗೆ ಕಾರಣವಾಗಬಹುದು.
ಅನಾರೋಗ್ಯದ ನಡುವೆಯೂ ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡಿದ ಸಮಂತಾ; ವಿಡಿಯೋ ವೈರಲ್
ಮೈಯೋಸಿಟಿಸ್ನ ಲಕ್ಷಣಗಳು ಯಾವುವು ?
ಮೈಯೋಸಿಟಿಸ್‌ನ ಲಕ್ಷಣಗಳು ಅದರ ಪ್ರಕಾರವನ್ನು ಅವಲಂಬಿಸಿರುತ್ತದೆ. ಆದರೆ ಇದು ಒಂದು ಸ್ನಾಯುವಿನಿಂದ ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ಇತರ ಸ್ನಾಯುಗಳು ಮತ್ತು ಅಂಗಗಳ (Organ) ಮೇಲೆ ಪರಿಣಾಮ ಬೀರುತ್ತದೆ. ನಂತರ ಕಣ್ಣು ಮತ್ತು ಹೃದಯ ಸ್ನಾಯುಗಳು ದುರ್ಬಲಗೊಳ್ಳಬಹುದು. ಜ್ವರ, ಹಠಾತ್ ತೂಕ ನಷ್ಟ (Weight loss), ಆಯಾಸ, ದೌರ್ಬಲ್ಯ, ಸ್ನಾಯು ನೋವು, ದದ್ದು ತಿನ್ನಲು, ಉಸಿರಾಡಲು ತೊಂದರೆ ಕಾಣಿಸಿಕೊಳ್ಳಬಹುದು.
ಮೈಯೋಸಿಟಿಸ್ ಕಾಯಿಲೆಗೆ ಕಾರಣವೇನು ?
ಡಾ.ಬಿರೇನ್ ನಾಡಕರ್ಣಿ ಈ ಅಸ್ವಸ್ಥತೆಯನ್ನು ಇಡಿಯೋಪಥಿಕ್ ಎಂದು ವಿವರಿಸಿದ್ದಾರೆ. ಏಕೆಂದರೆ ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಇದು ಸ್ವಯಂ ನಿರೋಧಕ ಕಾಯಿಲೆಯಾಗಿರುವುದರಿಂದ, ಪ್ರತಿರಕ್ಷಣಾ ವ್ಯವಸ್ಥೆಯು ತಪ್ಪಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ದೇಹದಲ್ಲಿ ಸೋಂಕು ಇಲ್ಲದಿದ್ದರೂ ಅದರೊಂದಿಗೆ ಹೋರಾಡುತ್ತಲೇ ಇರುತ್ತಾನೆ. ಇದರಿಂದಾಗಿ ಈ ದದ್ದು, ನೋವು ಮತ್ತು ದೌರ್ಬಲ್ಯ ಬರುತ್ತದೆ.