Varun Dhawan: ದೇಹದ ಹತೋಟಿ ಕಳಕೊಂಡಿದ್ರು ವರುಣ್‌ ಧವನ್‌, ಏನಿದು ವೆಸ್ಟಿಬ್ಯುಲಾರ್‌ ಹೈಪೋಫಂಕ್ಷನ್?

ವರುಣ್‌ ಧವನ್‌ ಇತ್ತೀಚೆಗೆ ವೆಸ್ಟಿಬ್ಯುಲಾರ್‌ ಹೈಪೋಫಂಕ್ಷನ್‌ ಎನ್ನುವ ಸಮಸ್ಯೆಯಿಂದ ಬಳಲಿದ್ದರು. ಒಳಕಿವಿಯಲ್ಲಿರುವ ವೆಸ್ಟಿಬ್ಯುಲಾರ್‌ ವ್ಯವಸ್ಥೆ ಹದಗೆಟ್ಟಾಗ ದೇಹದ ಮೇಲೆ ನಿಯಂತ್ರಣ, ಸಮತೋಲನ ತಪ್ಪಿಹೋಗುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು, ತಲೆ ತಿರುಗುವುದು ಪ್ರಮುಖ ಲಕ್ಷಣ.
 

Actor Vrun Dhawan reveals health problem about vestibular hypofunction

ಬಾಲಿವುಡ್‌ ನಟ ವರುಣ್‌ ಧವನ್‌ ಗೆ ಉಂಟಾಗಿದ್ದ ಆರೋಗ್ಯ ಸಮಸ್ಯೆ ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಕೆಲವು ದಿನಗಳ ಹಿಂದೆ ತಾವು ಅನುಭವಿಸಿದ ಅನಾರೋಗ್ಯದ ಬಗ್ಗೆ ವರುಣ್‌ ಧವನ್‌ ಹಂಚಿಕೊಂಡಿದ್ದು, ವೆಸ್ಟಿಬ್ಯುಲಾರ್‌ ಹೈಪೋಫಂಕ್ಷನ್‌ ಎನ್ನುವ ಒಳಕಿವಿಯಲ್ಲಾದ ಸಮಸ್ಯೆಯಿಂದ ದೇಹದ ಹತೋಟಿ ಹೇಗೆ ತಪ್ಪಿತು, ಅದರಿಂದ ಏನೆಲ್ಲ ಸಮಸ್ಯೆ ಉಂಟಾಗಿತ್ತು ಎನ್ನುವುದನ್ನು ತಿಳಿಸಿದ್ದಾರೆ. ನಟಿ ಸಮಂತಾ ಸಹ ಇತ್ತೀಚೆಗಷ್ಟೇ ಮೈಯೊಸಿಟಿಸ್‌ ಎನ್ನುವ ತೊಂದರೆಯ ಬಗ್ಗೆ ಹೇಳಿಕೊಂಡಿದ್ದರು. ಇದೀಗ ವರುಣ್‌ ಧವನ್‌ ದೇಹದ ಸಮತೋಲನವನ್ನು ಹದಗೆಡಿಸಿದ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. “ಇತ್ತೀಚೆಗೆ ನಾನು ಶಟ್‌ ಡೌನ್‌ ಆಗಿದ್ದೆ. ದೇಹದ ಸಮತೋಲನ ತಪ್ಪಿಹೋಗಿತ್ತು. ಅದು “ಜುಗ್‌ ಜುಗ್‌ ಜಿಯೋʼ ಸಿನಿಮಾದ ಚಿತ್ರೀಕರಣದ ಸಂದರ್ಭ. ಅದೊಂದು ಸವಾಲಿನ ಸಮಯ ಎದುರಾಗಿತ್ತುʼ ಎಂದು ಹೇಳಿಕೊಂಡಿದ್ದಾರೆ. “ನಾವೆಲ್ಲರೂ ಈ ರೇಸ್‌ ನಲ್ಲಿ ಕೇವಲ ಓಡುತ್ತಿದ್ದೇವೆ. ಯಾರೊಬ್ಬರೂ ಯಾಕೆಂದು ಕೇಳುವುದಿಲ್ಲ. ನನಗೆ ಅನಿಸುವಂತೆ ಯಾವುದೋ ಮಹತ್ತರ ಉದ್ದೇಶಕ್ಕೆ ನಾವಿಲ್ಲಿ ಇದ್ದೇವೆ. ನಾನು ನನ್ನನ್ನು ಗುರುತಿಸಲು ಯತ್ನಿಸುತ್ತಿರುವೆ. ಹಾಗೆಯೇ, ಜನ ಸಹ ಅವರನ್ನು ಗುರುತಿಸಿಕೊಳ್ಳಲು ಯತ್ನಿಸುತ್ತಾರೆʼ ಎನ್ನುವಂತಹ ಅರ್ಥವತ್ತಾದ ಮಾತುಗಳನ್ನು ಆಡಿದ್ದಾರೆ. ವೆಸ್ಟಿಬ್ಯುಲಾರ್‌ ಹೈಪೋಫಂಕ್ಷನ್‌ ಎನ್ನುವ ಸಮಸ್ಯೆ ಯಾವಾಗ ಉಂಟಾಗುತ್ತದೆಯೆಂದರೆ, ಒಳಕಿವಿಯಲ್ಲಿರುವ ಸಮತೋಲನ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತದೆ. ಇದೊಂದು ಸಾಮಾನ್ಯ ಹಾಗೆಯೇ ಗಾಬರಿಪಡಿಸುವ ಸಮಸ್ಯೆ ಎಂದರೆ ತಪ್ಪಿಲ್ಲ.

ನಿಮಗೆ ಗೊತ್ತಿರಬಹುದು. ತಲೆಸುತ್ತುವ (Dizziness) ಸಮಸ್ಯೆ ಕಂಡುಬಂದಾಗ ವೈದ್ಯರಲ್ಲಿಗೆ ಹೋದರೆ ಅವರು ಹಲವು ಪರೀಕ್ಷೆಗಳನ್ನು (Tests) ನಡೆಸುತ್ತಾರೆ. ಹಾಗೆಯೇ ನುರಿತ ವೈದ್ಯರಾದರೆ ಕಿವಿಯ (Ear) ಪರೀಕ್ಷೆಯನ್ನೂ ಆರಂಭದಲ್ಲೇ ಮಾಡುತ್ತಾರೆ. ಏಕೆಂದರೆ, ತಲೆಸುತ್ತುವುದು ಸಾಮಾನ್ಯವಾಗಿ ಬಿಪಿ, ಆಸಿಡಿಟಿ ಅಥವಾ ಕಿವಿಯ ಸಮಸ್ಯೆಯಿಂದ ಆರಂಭವಾಗುತ್ತದೆ. ಆರಂಭದಲ್ಲೇ ಇದನ್ನು ಗುರುತಿಸಿದರೆ ಬಹಳ ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು. ವೆಸ್ಟಿಬ್ಯುಲಾರ್ ವ್ಯವಸ್ಥೆ (Vestibular System) ಮಿದುಳಿನೊಂದಿಗೆ (Brain) ಕೇಂದ್ರೀಕೃತ ಮಾದರಿಯಲ್ಲಿ ಕೆಲಸ ಮಾಡುತ್ತದೆ. ದೇಹದ ಭಂಗಿಯ ಸಮತೋಲನ (Balance), ಕಣ್ಣುಗಳು ಮತ್ತು ಮಾಂಸಖಂಡಗಳನ್ನು ಹತೋಟಿಯಲ್ಲಿ ಇರಿಸುತ್ತದೆ. ಒಂದೊಮ್ಮೆ ಇದರಲ್ಲಿ ಸಮಸ್ಯೆ ಉಂಟಾದರೆ ಮಿದುಳಿಗೆ ಸಂದೇಶ ರವಾನಿಸುತ್ತದೆ. ಆಗ ತಲೆಸುತ್ತುವುದು ಹಾಗೂ ವಾಕರಿಕೆ ಉಂಟಾಗುತ್ತದೆ. 

ತಲೆಸ್ನಾನ ಆದ ಕೂಡ್ಲೇ ಸಿಕ್ಕಾಪಟ್ಟೆ ತಲೆನೋವಾ ? ಕಾರಣವೇನು ತಿಳ್ಕೊಳ್ಳಿ

ಏನಿದು ಸಮಸ್ಯೆ?
ವೆಸ್ಟಿಬ್ಯುಲಾರ್‌ ನ್ಯೂರೋನಿಟಿಸ್‌ ಎನ್ನುವುದು ಬ್ಯಾಕ್ಟೀರಿಯಾದಿಂದ (Bacteria) ಉಂಟಾಗುವ ಸೋಂಕು (Infection). ಇದನ್ನು ವೆಸ್ಟಿಬ್ಯುಲಾರ್‌ ಲ್ಯಾಬಿರಿಂಥಿಟಿಸ್‌ ಎಂದೂ ಕರೆಯಲಾಗುತ್ತದೆ. ಒಳಕಿವಿಯ ನರವ್ಯವಸ್ಥೆಯನ್ನು (Nerves) ಸಂಪೂರ್ಣವಾಗಿ ಹಾನಿ ಮಾಡುತ್ತದೆ. ಈ ಸಮಸ್ಯೆ ತಲೆಯ ಒಂದು ಬದಿ ಅಥವಾ ಎರಡೂ ಬದಿಗಳಲ್ಲಿ ಕಂಡುಬರಬಹುದು. ಇದಕ್ಕೆ ಬೇರೆ ಬೇರೆ ರೀತಿಯ ಕಾರಣಗಳಿವೆ. ಆಟೋಇಮ್ಯೂನ್‌ ರಿಯಾಕ್ಷನ್‌ ಅಥವಾ ವಂಶವಾಹಿ ಅಂಶದಿಂದಲೂ ಈ ಸಮಸ್ಯೆ ಉಂಟಾಗುತ್ತದೆ ಎಂದೂ ತಜ್ಞರು ಹೇಳುತ್ತಾರೆ.

ಯಾಕೆ ಹೀಗಾಗುತ್ತದೆ?
•    ಒಳಕಿವಿಯ (Inner Ear) ರಚನೆ ಅಥವಾ ವ್ಯವಸ್ಥೆ ದುರ್ಬಲವಾದಾಗ
•    ಒಳಕಿವಿಯಲ್ಲಿ ಯಾವಾಗಲಾದರೂ ಗಾಯವಾಗಿದ್ದರೆ ಬಹಳ ವರ್ಷಗಳ ಬಳಿಕ ಸಮಸ್ಯೆ ಆಗಬಹುದು. 
•    ಕೆಲವು ಔಷಧಗಳಿಂದ ರಿಯಾಕ್ಷನ್‌ (Reaction) ಆಗಬಹುದು.
•    ಅತಿಯಾದ ಆತಂಕ (Anxiety) ಮತ್ತು ಒತ್ತಡ (Stress)
•    ರಕ್ತ ಹೆಪ್ಪುಗಟ್ಟಿದ್ದಾಗಲೂ (Blood Clot) ಉಂಟಾಗುತ್ತದೆ. 
•    ಗಡ್ಡೆ (Tumor)
•    ಮಿದುಳಿಗೆ ಪೆಟ್ಟು
•    ಕಿವಿ ಸೋರುವ (Discharge) ಸಮಸ್ಯೆ
•    ವಯಸ್ಸಾದಂತೆ ಸಾಮಾನ್ಯ

ದುರಹಂಕಾರಿ ಆಗಿದ್ದೆ, ಆಡಿಯನ್ಸ್‌ ಮಾತು ಕೇಳದೆ ತಪ್ಪು ಮಾಡಿದೆ: ವರುಣ್ ಧವನ್ ಬೇಸರ

ಲಕ್ಷಣಗಳು ಹೀಗಿರುತ್ವೆ
•    ತೀವ್ರವಾಗಿ ತಲೆ ಸುತ್ತುವುದು (Vertigo)
•    ಮಲಗಿದಾಗಲೂ ತಲೆ ಸುತ್ತು
•    ವಾಕರಿಕೆ (Nausea)
•    ದೇಹದ ಮೇಲೆ ಹತೋಟಿ ತಪ್ಪುವುದು
•    ನಡೆಯಲು ಕಷ್ಟವಾಗುವುದು
•    ಶ್ರವಣ (Hearing) ಸಮಸ್ಯೆ 
•    ದೃಷ್ಟಿ ಮಂದವಾಗುವುದು
•    ಕಿವಿಯ ನಾಳಗಳಲ್ಲಿ ಕ್ಯಾಲ್ಸಿಯಂ ಹೆಪ್ಪುಗಟ್ಟುವಿಕೆ
•    ಬೆವರು ಬರುವುದು

ಕೋವಿಡ್‌ ಬಳಿಕ…
ಕೋವಿಡ್‌ ಸಾಂಕ್ರಾಮಿಕದ ಬಳಿಕ ಬಹಳಷ್ಟು ಯುವ ಜನರಲ್ಲಿ ಈ ಸಮಸ್ಯೆ ಕಂಡುಬಂದಿರುವುದಾಗಿ ಗುರುತಿಸಲಾಗಿದೆ. ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ. ರೋಗಿಯ ಸ್ಥಿತಿಯನ್ನು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ಬಳಿಕವೂ ಕಾಳಜಿ ಅಗತ್ಯ. ಆರೋಗ್ಯಕರ ಆಹಾರ (Healthy Food), ವ್ಯಾಯಾಮ (Exercise), ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಸುಲಭವಾಗಿ ಗೆಲ್ಲಬಹುದು. ಶಬ್ದ (Sound) ಮಾಲಿನ್ಯದಿಂದ ದೂರವಿರಬೇಕು, ಮದ್ಯಪಾನ, ವಾಹನ ಚಾಲನೆ (Drive) ಮಾಡಬಾರದು.


 

Latest Videos
Follow Us:
Download App:
  • android
  • ios