ಹಾಲು ಆರೋಗ್ಯಕ್ಕೆ ಒಳ್ಳೇದು ನಿಜ, ಆದ್ರೆ ಈ ಸಮಸ್ಯೆಯಿರುವವರು ಕುಡಿಲೇಬಾರ್ದು !
ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದೆ. ಹಾಗಾಗಿ ಹಾಲು (Milk) ಆರೋಗ್ಯ (Health)ಕ್ಕೆ ಬಹಳ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದ್ರೆ ಕೆಲವರು ಹಾಲಿನಿಂದ ದೂರವಿರಬೇಕು. ಯಾರು ಹಾಲು ಕುಡಿಯಬಾರದು, ಯಾಕೆ ಕುಡಿಯಬಾರದು ಎಂಬುದನ್ನು ನಾವು ಹೇಳ್ತೇವೆ.
ಹಾಲು (Milk) ಆರೋಗ್ಯ (Health) ಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ತಿಳಿದಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯಬೇಕೆಂದು ವೈದ್ಯರು (Doctors) ಸಲಹೆ ನೀಡ್ತಾರೆ. ಹಾಲು ರೋಗ (Disease) ದಿಂದ ನಮ್ಮನ್ನು ದೂರವಿಡುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ (Calcium), ಪ್ರೊಟೀನ್, ಮೆಗ್ನೀಸಿಯಮ್, ವಿಟಮಿನ್ ಎ, ಡಿ, ಇ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದೆ.
ನಿಯಮಿತವಾಗಿ ಹಾಲಿನ ಸೇವನೆ ಮೂಳೆ (Bone) ಗಳು ಮತ್ತು ಹಲ್ಲು (Tooth) ಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಕೆಲವೊಂದು ಬಾರಿ ಆರೋಗ್ಯದ ಗುಣವಿರುವ ಪದಾರ್ಥದಲ್ಲೂ ವಿಷವಿರುತ್ತದೆ. ಅಂದ್ರೆ ಎಲ್ಲರೂ ಹಾಲು ಕುಡಿಯುವುದು ಒಳ್ಳೆಯದಲ್ಲ. ಆಯುರ್ವೇದ (Ayurveda) ವೈದ್ಯರ ಪ್ರಕಾರ, ಕೆಲವು ದೈಹಿಕ ಸಮಸ್ಯೆಗಳ ಸಂದರ್ಭದಲ್ಲಿ ಹಾಲು ಕುಡಿಯದಿರುವುದು ಒಳ್ಳೆಯದು. ಯಾರು, ಯಾವಾಗ ಹಾಲು ಕುಡಿಯಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ಯಾರು ಹಾಲು ಕುಡಿಯಬಾರದು ?: ಹಾಲಿನಲ್ಲಿ ಅಷ್ಟೆಲ್ಲ ಪೌಷ್ಠಿಕಾಂಶವಿದೆ ಎನ್ನುವ ನೀವೇ ಹಾಲು ಕುಡಿಯಬೇಡಿ ಎನ್ನುತ್ತೀರಲ್ಲ ಎನ್ನಬೇಡಿ. ಹಾಲು ಕೆಲವೊಮ್ಮೆ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಕೆಮ್ಮು (Cough), ನೆಗಡಿ (Cold), ಚರ್ಮ (Skin) ಸಂಬಂಧಿ ಸಮಸ್ಯೆ, ತುರಿಕೆ, ತೂಕ ಹೆಚ್ಚಾಗುವುದು, ಮೂಗು, ಕಿವಿ, ಗಂಟಲಿನಲ್ಲಿ ತುರಿಕೆ ಇರುವವರಿಗೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಇವರು ಹಾಲು ಸೇವಿಸಬಾರದು.
ಈ ಸಮಸ್ಯೆಗಳಿಂದ ಬಳಲುತ್ತಿರುವವರು ಬೇಸಿಗೆಯಲ್ಲಿ ರಾತ್ರಿ (Night) ಮಲಗುವಾಗ ಮಾತ್ರ ಹಾಲನ್ನು ಕುಡಿಯಬಹುದು. ಉಳಿದ ಸಮಯದಲ್ಲಿ ರಾತ್ರಿ ಹಾಲನ್ನು ತ್ಯಜಿಸಬೇಕು. ಒಣ ಕೆಮ್ಮು ಇದ್ದರೆ ಹಾಲು ಕುಡಿಯಬಹುದು. ಕಫದಿಂದ ಕೂಡಿದ ಕೆಮ್ಮಿದ್ದರೆ ಹಾಲು ಕುಡಿಯಬಾರದು. ನೀವು ತಿನ್ನುವ ಆಹಾರ ಹಾಗೂ ಹಾಲು ಎರಡಕ್ಕೂ ಸಂಬಂಧವಿದೆ. ರಾತ್ರಿ ತಡವಾಗಿ ಆಹಾರ ಸೇವನೆ ಮಾಡಿದ್ದರೆ ತಕ್ಷಣ ಮಲಗಲು ಹೋಗ್ತಿದ್ದರೆ ಆಗ ಹಾಲನ್ನು ಕುಡಿಯಬಾರದು. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.
ಹಸು (Cow )ವಿನ ಹಾಲನ್ನು ಅನೇಕಾನೇಕ ವರ್ಷಗಳಿಂದ ಸೇವಿಸುತ್ತ ಬರಲಾಗಿದೆ. ಹಸುವಿನ ಹಾಲು ಶ್ರೇಷ್ಠ ಎನ್ನಲಾಗುತ್ತದೆ. ದೇಹದಲ್ಲಿ ಉಷ್ಣತೆ ಸಮಸ್ಯೆ ಎದುರಿಸುವವರು, ಹೊಟ್ಟೆಯಲ್ಲಿ ಉರಿ ಇರುವವರು, ಹೆಚ್ಚು ದೈಹಿಕ ಕೆಲಸ ಮಾಡುವವರು ಹಾಲು ಸೇವಿಸಬೇಕು. ಹೊಟ್ಟೆ (Stomach) ಯಲ್ಲಿ ಉರಿ ಉರಿಯ ಅನುಭವವಾಗ್ತಿದ್ದರೆ ಹಾಲು ಕುಡಿಯುವುದು ಉತ್ತಮ.
ದಿನಕ್ಕೆರಡು ಬಿಯರ್ ಕುಡಿಯೋದು ಮೆದುಳಿಗೆಷ್ಟು ಡೇಂಜರ್ ಗೊತ್ತಾ ?
ಹಾಲು ಕುಡಿಯಲು ಸರಿಯಾದ ಸಮಯ ಯಾವುದು? : ಹಸಿವಾದಾಗ ಹಾಲು ಕುಡಿಯಬಹುದು. ಏಕೆಂದರೆ ಹಾಲು ಸಂಪೂರ್ಣ ಆಹಾರ (Food) ವಾಗಿದೆ. ಆಹಾರವನ್ನು ಸೇವಿಸಿದ ನಂತರ ಹಾಲು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಹಾಲು ಸರಿಯಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣವಾಗದೇ ಇದ್ದಾಗ ಅಜೀರ್ಣ (Indigestion ) ಸಮಸ್ಯೆ ಶುರುವಾಗುತ್ತದೆ. ಜೊತೆಗೆ ನೆಗಡಿ, ಕೆಮ್ಮು, ಭೇದಿ, ವಾಂತಿ, ಜ್ವರ ಬರುತ್ತದೆ. ಜೀರ್ಣವಾಗದ ವಸ್ತುಗಳನ್ನು ಹೊರ ಹಾಕಲು ದೇಹವು ಬೇರೆ ಬೇರೆ ಮಾರ್ಗವನ್ನು ಹುಡುಕುತ್ತದೆ.
ಕೆಲವರಿಗೆ ಹಾಲು ಜೀರ್ಣವಾಗುವುದಿಲ್ಲ. ಅಂತವರು ಹಾಲಿಗೆ ಸ್ವಲ್ಪ ಒಣ ಶುಂಠಿ ಪುಡಿಯನ್ನು ಸೇರಿಸಿ ಕುದಿಸಿ ನಂತರ ಕುಡಿಯಬೇಕು. ಆಹಾರದ ಜೊತೆಗೆ ಎಂದೂ ಹಾಲು ಸೇವನೆ ಮಾಡಬೇಡಿ. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹುಳಿ, ಖಾರ ಪದಾರ್ಥಗಳನ್ನು ಹಾಲಿನೊಂದಿಗೆ ಎಂದಿಗೂ ಸೇವಿಸಬಾರದು.
ವಿಶ್ವ ಕ್ಷಯ ರೋಗ ದಿನ: ಟಿಬಿ ಎಂದರೇನು ?ಅದೆಷ್ಟು ಅಪಾಯಕಾರಿ ಗೊತ್ತಾ?
ಬೇಸಿಗೆ ವೇಳೆ ಮ್ಯಾಂಗೋ ಮಿಲ್ಕ್ ಶೇಕ್ ಸೇವನೆ ಮಾಡ್ತಾರೆ. ಹಾಲಿನೊಂದಿಗೆ ಮಾವಿನ ಹಣ್ಣು ಸೇವನೆ ಒಳ್ಳೆಯದಲ್ಲ. ಮಾವು ಹುಳಿಯಾಗಿರುತ್ತದೆ. ಇದನ್ನು ಹಾಲಿನೊಂದಿಗೆ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಹಾಗೆಯೇ ಸ್ಟ್ರಾಬೆರಿ ಶೇಕ್ ತೆಗೆದುಕೊಳ್ಳುವುದನ್ನು ಸಹ ತಪ್ಪಿಸಬೇಕು. ಹಾಲಿನೊಂದಿಗೆ ಯಾವುದೇ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು.