ವಿಶ್ವ ಕ್ಷಯ ರೋಗ ದಿನ: ಟಿಬಿ ಎಂದರೇನು ?ಅದೆಷ್ಟು ಅಪಾಯಕಾರಿ ಗೊತ್ತಾ?
ಜಗತ್ತಿನಾದ್ಯಂತ ಕೊರೋನಾ ವೈರಸ್ (Corona Virus) ಹರಡುವಿಕೆ ಭೀತಿ ಹುಟ್ಟಿಸಿದೆ. ಕಣ್ಣಿಗೆ ಕಾಣದ ಅಣು ಗಾತ್ರದ ವೈರಸ್‌ವೊಂದು ಅದೆಷ್ಟೋ ಜನರ ಸಾವಿಗೆ ಕಾರಣವಾಗಿದೆ. ಅದೇ ರೀತಿ ಒಂದು ಕಾಲದಲ್ಲಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಸಾಂಕ್ರಾಮಿಕ ಕಾಯಿಲೆ (Disese) ಕ್ಷಯ ರೋಗ (Tuberculosis). ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಪ್ರತಿವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನ (World Tuberculosis Day)ವನ್ನು ಆಚರಿಸಲಾಗುತ್ತದೆ. ಕ್ಷಯ ರೋಗ ಒಂದು ಕಾಲದಲ್ಲಿ ಭೀತಿ ಹುಟ್ಟಿಸಿದ್ದ ಸಾಂಕ್ರಾಮಿಕ ಕಾಯಿಲೆ (Disease). ಡಾ.ರಾಬರ್ಟ್ ಕೋಚ್ ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು1882ರಲ್ಲಿ ಕಂಡುಹಿಡಿದರು. ಈ ಆವಿಷ್ಕಾರವನ್ನು ನೆನಪಿಸಲು ಮಾರ್ಚ್ 24ನ್ನು ವಿಶ್ವ ಕ್ಷಯ ದಿನವೆಂದು ಆಚರಿಸಲಾಗುತ್ತದೆ. ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಬ್ಯಾಕ್ಟೀರಿಯಾ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಷಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.
ವಿಶ್ವ ಕ್ಷಯ ದಿನಾಚರಣೆ 2022ರ ಸಂದೇಶ ಟಿಬಿಯನ್ನು ಅಂತ್ಯಗೊಳಿಸಿ ಮತ್ತು ಜೀವವನ್ನು ಉಳಿಸಿ ಎಂಬುದಾಗಿದೆ.
ಕ್ಷಯ ರೋಗ ಎಂದರೇನು ?
ಕ್ಷಯ ರೋಗ ಅಥವಾ ಟ್ಯುಬರ್ ಕ್ಯುಲೋಸಿಸ್ ಎಂದು ಕರೆಸಿಕೊಳ್ಳುವ ಈ ಮಾರಕ ರೋಗವು ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇವತ್ತಿನ ದಿನಗಳಲ್ಲಿ ಕೊರೋನಾ ವೈರಸ್ (Corona Virus) ಎಷ್ಟು ಮಾರಕವಾಗಿದೆಯೋ ಹಾಗೆಯೇ ಹಿಂದೆ ಕ್ಷಯ ರೋಗ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿತ್ತು. ಆದರೆ ಇದು ವೈರಸ್‌ನಿಂದ ಉಂಟಾಗುವ ಕಾಯಿಲೆಯಲ್ಲ. ಮೈಕೊ ಬ್ಯಾಕ್ಟಿರೀಯಾ ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟಿರೀಯಾ (Bacteria)ದಿಂದ ಉಂಟಾಗುತ್ತದೆ. ಈ ಬ್ಯಾಕ್ಟಿರೀಯಾಗಳು ದೇಹದೊಳಗೆ ಸೇರಿಕೊಂಡು ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ.
ಕೊರೋನಾ ಬಂದ್ಮೇಲೆ ಯಾಕೆ ಎಲ್ರೂ ಇಷ್ಟು ಬದಲಾದ್ರು ? ನೀವೂ ಹೀಗೆ ಆಗಿದ್ದೀರಾ ?
ಕ್ಷಯ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ರೋಗಿ ಕೆಮ್ಮಿದಾಗ ಕಫದಲ್ಲಿರುವ ರೋಗಾಣುಗಳೊಂದಿಗೆ ಇದು ಇನ್ನೊಬ್ಬರಿಗೆ ಹರಡುತ್ತದೆ. ಕ್ಷಯ ರೋಗವಿರುವ ವ್ಯಕ್ತಿಯಿಂದ ಒಂದು ವರ್ಷದಲ್ಲಿ ಕಡಿಮೆಯೆಂದರೆ 10 ಜನರಿಗೆ ಸೋಂಕು ತಗುಲಬಹುದು.
ಕ್ಷಯರೋಗಗಳ ಲಕ್ಷಣಗಳು
ಕ್ಷಯರೋಗವನ್ನು ಕೆಲವು ರೋಗಲಕ್ಷಣಗಳ ಮೂಲಕ ಕಂಡುಹಿಡಿಯಬಹುದು ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು. ಹಾಗಿದ್ದರೆ ಮೊದಲಿಗೆ ಕ್ಷಯ ರೋಗಗಳ ಲಕ್ಷಣಗಳೇನು ಎಂಬುದನ್ನು ತಿಳಿಯೋಣ.
1. ಜ್ವರ, ಹಸಿವು ನಷ್ಟ ಮತ್ತು ತೂಕದ ನಷ್ಟವು ಕ್ಷಯ ರೋಗದ ಪ್ರಮುಖ ಲಕ್ಷಣವಾಗಿದೆ.
2. ಕೆಮ್ಮು, ಕಫದಲ್ಲಿ ರಕ್ತ, ಅಶಕ್ತತೆ ಕಾಣಿಸಿಕೊಳ್ಳುತ್ತದೆ.
3. ಸಂಜೆಯ ವೇಳೆ ಮಾತ್ರ ಕಾಣಿಸಿಕೊಳ್ಳುವ ಅತಿಯಾದ ಜ್ವರ
4. ರಾತ್ರಿ ಬೆವರುವಿಕೆ ಮತ್ತು ಎದೆ ನೋವು ಕಂಡು ಬರುತ್ತದೆ
5. ಟಿಬಿಯು ಕಿಬ್ಬೊಟ್ಟೆಯ ನೋವು, ಜಂಟಿ ನೋವು ನಿರಂತರ ತಲೆನೋವುಗಳಿಗೆ ಕಾರಣವಾಗಬಹುದು.
ಜಾಗತಿಕವಾಗಿ ಕ್ಷಯರೋಗಕ್ಕೆ ದಿನಕ್ಕೆ 3000 ಮಂದಿ ಬಲಿಯಾಗುತ್ತಿದ್ದಾರೆ ಮತ್ತು 30 ಸಾವಿರ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬುದಾಗಿ ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ.
ಭೂಮಿಯಲ್ಲಿ ಸೊಳ್ಳೆಗಳೇ ಇಲ್ಲವೆಂದಾದರೆ ಏನಾಗುತ್ತೆ? ವಿಜ್ಞಾನಿಗಳು ಕೊಟ್ಟ ಅಚ್ಚರಿಯ ಉತ್ತರ!
ಕ್ಷಯರೋಗಕ್ಕೆ ಚಿಕಿತ್ಸೆಯೇನು ?
ಆರಂಭದಲ್ಲಿ ಪತ್ತೆಹಚ್ಚಿದಾಗ ಕ್ಷಯರೋಗವನ್ನು ಪರಿಗಣಿಸಬಹುದು. ರೋಗವನ್ನು ಚಿಕಿತ್ಸೆ ಮಾಡುವಾಗ ಟಿಬಿಯ ತಳಿ ಸಹ ಮುಖ್ಯವಾಗಿದೆ. ಸುಪ್ತ ಟಿಬಿಗೆ ಚಿಕಿತ್ಸೆಯು ಪ್ರತಿಜೀವಕಗಳನ್ನು ತೆಗೆದುಕೊಳ್ಳುತ್ತದೆ. ಸಕ್ರಿಯ ಟಿಬಿ ಸಂದರ್ಭದಲ್ಲಿ, ಪೀಡಿತವುಗಳು ಸುಮಾರು ಒಂಭತ್ತು ತಿಂಗಳ ಅವಧಿಗೆ ಹಲವಾರು ಔಷಧಿಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡಬಹುದು. ಆದಾಗ್ಯೂ, ಟಿಬಿ ಔಷಧ-ನಿರೋಧಕ ಸ್ಟ್ರೈನ್ ಹೊಂದಿರುವ ರೋಗಿಗಳಿಗೆ ಚಿಕಿತ್ಸೆಯು ಹೆಚ್ಚು ಸಂಕೀರ್ಣವಾಗುತ್ತದೆ.
ಇವತ್ತಿನ ದಿನಗಳಲ್ಲಿ ಕ್ಷಯ ರೋಗಕ್ಕೆ ಪರಿಣಾಮಕಾರಿ ಔಷಧಗಳಿವೆ. ಸರಕಾರ ಈ ಔಷಧಿಯನ್ನು ಉಚಿತವಾಗಿ ಸಹ ನೀಡುತ್ತದೆ. ಹಲವು ತಿಂಗಳುಗಳ ಕಾಲ ನಿರಂತರವಾಗಿ ವೈದ್ಯರ ಸಲಹೆಯಂತೆ ಔಷಧಿಯನ್ನು ತೆಗೆದುಕೊಳ್ಳಬೇಕು. ರೋಗ ಲಕ್ಷಣಗಳು ಕಡಿಮೆಯಾದ ಕೂಡಲೇ ಔಷಧ ಸೇವನೆಯನ್ನು ನಿಲ್ಲಿಸಬಾರದು. ಹಾಗೆ ನಿಲ್ಲಿಸಿದರೆ ಕ್ಷಯ ರೋಗ ಔಷಧ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡ ಕ್ಷಯವಾಗಿ ರೂಪಾಂತರ ಹೊಂದುತ್ತದೆ. ಇದು ಇನ್ನಷ್ಟು ಅಪಾಯಕಾರಿಯಾಗಿದೆ.