ದಿನವೂ ಐಸ್ ಕ್ರೀಮ್ ತಿನ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ!
ಬೇಸಿಗೆಯ (Summer) ಬಿಸಿಲ ಧಗೆಗೆ ಯಾರಿಗಾದರೂ ಐಸ್ ಕ್ರೀಂ (Ice Cream) ನೋಡಿದ ತಕ್ಷಣ ತಿನ್ನಬೇಕು ಎನಿಸುತ್ತದೆ. ತಂಪು ನೀಡಿವುದರ ಜೊತೆಗೆ ಅದರ ಸಿಹಿಯಿಂದ (Sweet) ಮನಸ್ಸಿಗೂ ಖುಷಿ (Happy) ಹಾಗೂ ಸಮಾಧಾನ ನೀಡುತ್ತದೆ. ಒಂದು ತಿಂದ ಮೇಲೆ ಮತ್ತೊಂದು ಬೇಕಂದು ಅನಿಸುತ್ತದೆ. ಐಸ್ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆಯೋ (Benefits) ಅಷ್ಟೇ ಅಪಾಯವೂ ಇದೆ. ಪದೇ ಪದೇ ಐಸ್ ಕ್ರೀಂ ತಿನ್ನುವುದರಿಂದ ಏನೆಲ್ಲಾ ಪ್ರಭಾವಬೀರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಅತಿಯಾಗಿ ಐಸ್ ಕ್ರೀಂ ತಿನ್ನುವುದರಿಂದ ಮನುಷ್ಯನ ಆರೋಗ್ಯದ (Human Health) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇದರಲ್ಲಿ ಕೊಬ್ಬಿನ (Fat) ಪ್ರಮಾಣ ಹೆಚ್ಚಿದ್ದು, ಕ್ಯಾಲರಿ (Calorie), ಸೋಡಿಯಂ (Sodium), ಸಕ್ಕರೆ (Suagr) ಹಾಗೂ ಡೈರಿ ಕಾಂಪೊನೆAಟ್ (Dairy Components) ಹೆಚ್ಚಿದೆ. ಅದೇ ಅತಿಯಾಗಿ ಸೇವಿಸಿದಲ್ಲಿ ಅಧಿಕ ತೂಕ (Weight Gain), ಹೃದಯ (Heart), ರಕ್ತನಾಳದ ಕಾಯಿಲೆ (Blood), ವ್ಯಸನ, ಆಲಸ್ಯ (Sluggish), ಉಬ್ಬುವುದು ಹೀಗೆ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮೊದಲು ಇದರಿಂದಾಗುವ ಅಪಾಯದ ಮುನ್ಸೂಚನೆಯ ಬಗ್ಗೆಯೂ ತಿಳಿಯುವುದು ಒಳ್ಳೆಯದು. ಹೇಗೆ ಸೇವಿಸಬೇಕು, ಎಷ್ಟು ಸೇವಿಸಬೇಕು ಎಂಬುದೂ ಖುದ್ದು ಡಿಸೈಡ್ ಮಾಡಬೇಕಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಐಸ್‌ಕ್ರೀಂ ತಿಂದಾಗ ತಲೆನೋವಾಗುತ್ತಾ ? ಕಾರಣವೇನು ತಿಳ್ಕೊಳ್ಳಿ
ಐಸ್ ಕ್ರೀಂನಲ್ಲಿ ಮೂರು ವಿಧಗಳಿವೆ.
1.ಸಾಫ್ಟ್ ಸರ್ವ್ ಐಸ್ ಕ್ರೀಂ (Soft Serve Ice Cream): ಇದರಲ್ಲಿ ಫ್ಯಾಟ್ (Fat) ಪ್ರಮಾಣ ಕಡಿಮೆ ಇರುತ್ತದೆ. ಸಾಫ್ಟಿಯಂತಹ (Softy) ಐಸ್ ಕ್ರೀಂ ಇದಾಗಿದ್ದು, ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯೇ (Air) ತುಂಬಿದ್ದು, 6 ಡಿಗ್ರಿ ಸೆಲ್ಸಿಯಸ್‌ನಷ್ಟು ಹೊಂದಿರುತ್ತದೆ.
2. ಫ್ರೋಜನ್ ಕಸ್ಟರ್ಡ್ (Frozen Custard): ಕಸ್ಟರ್ಡ್ ಹೆಪ್ಪುಗಟ್ಟಿದ ಐಸ್ ಕ್ರೀಮ್ ಇದಾಗಿದ್ದು, ಹಲವು ಟೇಸ್ಟ್ಗಳಲ್ಲಿ (Taste) ಲಭ್ಯವಿರುತ್ತದೆ. ಫ್ಯಾಮಿಲಿ ಪ್ಯಾಕ್(Family Pack) ಈ ವಿಧಾನಕ್ಕೆ ಸೇರಿದ ಐಸ್ ಕ್ರೀಮ್ ಆಗಿದ್ದು ರುಚಿಕರವಾಗಿರುತ್ತದೆ. ಏಕೆಂದರೆ ಇದರಲ್ಲಿ ಮೊಟ್ಟೆಯ (Egg) ಹಳದಿ ಲೋಳೆಯನ್ನು ಹೊಂದಿರುತ್ತದೆ ಮತ್ತು ಇದು ಕೆನೆ ಸ್ವಭಾವದಂತೆ ಕಾಣುತ್ತದೆ. ಇದು ಸಾಮಾನ್ಯ ಐಸ್ ಕ್ರೀಮ್‌ಗಿಂತ ದಪ್ಪವಾಗಿರುತ್ತದೆ(Thick). ಅಲ್ಲದೆ ಇದು ಕಡಿಮೆ ಗಾಳಿ ಹೊಂದಿರುತ್ತದೆ.
3. ಫ್ರೋಜನ್ ಯೊಗರ್ಟ್( Frogen Yogurt): ಇತ್ತೀಚಿನ ದಿನಗಳಲ್ಲಿ ಈ ಐಸ್ ಕ್ರೀಂ ಹೆಚ್ಚು ಜನಪ್ರಿಯವಾಗುತ್ತಿದೆ. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತಿದೆ. ಏಕೆಂದರೆ ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇದ್ದು ಶುಗರ್ ಕಂಟೆAಟ್ ಸಹ ಕಡಿಮೆ ಇರುತ್ತದೆ.
ಐಸ್‌ಕ್ರೀಂ ಎಂದುಕೊಂಡು ಹುಳಿ ಕ್ರೀಂ ತಿಂದ ಮಗು, ಮುಖ ಹೇಗೆ ಮಾಡಿಕೊಳ್ತು ನೋಡಿ !
ಐಸ್ ಕ್ರೀಮ್‌ನಲ್ಲಿ ಇದನ್ನೆಲ್ಲಾ ಬಳಸಲಾಗುತ್ತದೆ.
ಐಸ್ ಕ್ರೀಮ್ ಸೇವನೆಯಿಂದ ಮನಸ್ಸಿಗೆ ಖುಷಿ, ಆಹ್ಲಾದ ನೀಡುತ್ತದೆ ಎಂದಾದರೆ ಅದಕ್ಕೆ ಏನೆಲ್ಲಾ ಸಾಮಗ್ರಿಗಳನ್ನು (Ingredients) ಹಾಕಿರುತ್ತಾರೆ ಎಂಬುದು ತಿಳಿಯುವುದು ಅಷ್ಟೇ ಮುಖ್ಯ. ಈ ಸಾಮಾಗ್ರಿಗಳೇ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಐಸ್ ಕ್ರೀಮ್‌ನಲ್ಲಿ ಬಳಸುವ ಪದಾರ್ಥಗಳು ಇವೇ ನೋಡಿ.
1. ಕೊಬ್ಬು ಮತ್ತು ಸಕ್ಕರೆ
ಐಸ್ ಕ್ರೀಮ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು (Fat) ಹಾಗೂ ಸಕ್ಕರೆ (Sugar) ಅಂಶ ಇರುತ್ತದೆ. ಅದರಲ್ಲೂ ಹಾಲಿನ ಅಂಶದಲ್ಲಿ ಕೊಬ್ಬಿನಾಂಶ ಹೆಚ್ಚು. ಈ ರೀತಿಯ ಡೈರಿ ಪ್ರಾಡಕ್ಟ್ಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂತಹ (Saturated Fat) ಕೊಲೆಸ್ಟ್ರಾಲ್ (Cholesterol) ಹೆಚ್ಚು ಕಂಡುಬರುತ್ತದೆ. ಹಾಗಾಗಿ ಹೆಚ್ಚಿನ ರಕ್ತದೊತ್ತಡ (Blood Pressure) ಇರುವವರು ಐಸ್ ಕ್ರೀಮ್ ಸೇವಿಸುವುದು ಒಳ್ಳೆಯದಲ್ಲ. ಈ ಕೊಲೆಸ್ಟಾçಲ್ ಅಪದಮನಿಯಲ್ಲಿ ಸಂಗ್ರಹವಾಗುವುದು ಮತ್ತು ಗಟ್ಟಿಯಾಗಿಸುವ ಅಪಧಮನಿಗಳು ಅಧಿಕ ರಕ್ತದೊತ್ತಡ, ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯುವಿಗೆ (Stroke) ಕಾರಣವಾಗುತ್ತದೆ.
ಒಂದು ಅಧ್ಯಯನದ ಪ್ರಕಾರ ಐಸ್ ಕ್ರೀಮ್‌ನಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೀರ್ಘ ಕಾಲದ ತೂಕ ಹೆಚ್ಚಳಕ್ಕೆ (Weight Gain) ಕಾರಣವಾಗುತ್ತದೆ. ಹಾಗಾಗಿ ಕಡಿಮೆ ಶುಗರ್ ಕಂಟೆಂಟ್ ಇರುವ ಐಸ್ ಕ್ರೀಮ್ ಸೇವನೆಯಿಂದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.
2. ಡೈರಿ ಕಂಟೆAಟ್
ಐಸ್ ಕ್ರೀಮ್‌ನಲ್ಲಿ ಬಹು ಮಮುಖ್ಯವಾದ ಅಂಶವೆAದರೆ ಅದು ಡೈರಿ ಪ್ರಾಡಕ್ಟ್ (Dairy Product). ಇದರಲ್ಲಿ ಹಸುವಿನ ಹಾಲನ್ನು (Cow Milk) ಉಪಯೋಗಿಸಲಾಗುತ್ತದೆ. ಇದರಿಂದ ಕೆಲವರಿಗೆ ಕಣ್ಣಿನಲ್ಲಿ ಕಿರಿಕಿರಿ (Eye Irritation), ಅಜೀರ್ಣ (Allergy), ಊತ, ಆಲಸ್ಯದಂತಹ (Slanginess) ಸಮಸ್ಯೆಗಲು ಕಾಣಿಸಿಕೊಳ್ಳಯತ್ತವೆ. ಹಾಗಾಗಿ ಈ ರೀತಿಯ ಅಲರ್ಜಿ ಸಮಸ್ಯೆ ಇರುವವರು ಇದರಿಂದ ದೂರ ಉಳಿಯುವುದು ಒಳ್ಳೆಯದು.
ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಮ್.. ಹೊಸ ತಿನಿಸು ಬಿಡುಗಡೆ ಮಾಡಿದ ಮ್ಯಾಕ್‌ಡೊನಾಲ್ಡ್
ಅತಿಯಾಗಿ ಐಸ್ ಕ್ರೀಮ್ ಸೇವಿಸಿದರೆ ಏನಾಗುತ್ತದೆ
ಬದುಕಿನ ಎಲ್ಲಾ ವಿಷಯದಲ್ಲಿ ಮಿತವಾಗಿದ್ದರೆ ಉತ್ತಮ ಜೀವನ ಸಾಗಿಸಬಹುದು. ಅದರಲ್ಲೂ ಆಹಾರ ಸೇವನೆಯು ಮುಖ್ಯ. ಆರೋಗ್ಯದಲ್ಲಿ ಒಂಚೂರು ಹೆಚ್ಚುಕಮ್ಮಿಯಾದರೂ ತೊಂದರೆ ಕಟ್ಟಿಟ್ಟಬುತ್ತಿ. ಹಾಗೆಯೇ ಐಸ್ ಕ್ರೀಮ್ ಚೆನ್ನಾಗಿದೆ ಎಂದು ದಿನದಲ್ಲಿ ಮೂರು ಬಾರಿ ಅಥವಾ, ಪ್ರತೀ ದಿನ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅಪಾಯವನ್ನು ನಾವೇ ತಂದುಕೊAಡAತೆ ಲೆಕ್ಕ. ಎಷ್ಟೇ ರುಚಿಯಾಗಿದರು, ಮತ್ತಷ್ಟು ತಿನ್ನು ಎಂದು ನಾಲಿಗೆ ಪ್ರಚೋದಿಸಿದರೂ ಹಿಡಿತ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಅತಿಯಾಗಿ ಯಸ್ ಕ್ರೀಮ್ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಇಲ್ಲಿವೆ.
1. ತೂಕ ಹೆಚ್ಚುತ್ತದೆ
ಮೊದಲೇ ದಪ್ಪಗಿರುವವರು ಐಸ್ ಕ್ರೀಮ್ ಅತಿಯಾಗಿ ಸೇವಿಸಿ ಇನ್ನಷ್ಟು ದಪ್ಪಗಾದರೆ (Over Fat) ಆರೋಗ್ಯ ಹದಗೆಡುತ್ತದೆ. ಅತೀಯಾಗಿ ತಿಂದು ತೂಕ ಹೆಚ್ಚಿಸಿಕೊಂಡರೆ (Weight Gain) ಅದನ್ನು ನಾರ್ಮಲ್‌ಗೆ ತರುವುದು ಬಹಳ ಕಷ್ಟ. ಏಕೆಂದರೆ ಇದರಲ್ಲಿ ಕೊಬ್ಬಿನಾಂಶ ಹೆಚ್ಚಿದ್ದು ದೇಹದಲ್ಲಿ ಬಹು ಬೇಗ ಸಂಗ್ರಹವಾಗುತ್ತದೆ. ಬಾಯಾರಿಕೆಯಾದಾಗ ಐಸ್ ಕ್ರೀಮ್ ಅನ್ನು ಮೇಲಿಂದ ಮೇಲೆ ತಿನ್ನುವುದರಿಂದ ದೈಹಿಕವವಾಗಿ (Physical) ಸಮಸ್ಯೆಗಳು ಹೆಚ್ಚು. ಹಾಗಾಗಿ ಕ್ರೀಮ್ ಹೆಚ್ಚಿರುವ (Cream), ಕೋಲ್ಡ್ (Cold), ಸಿಹಿ (Sweet) ಮತ್ತು ಶುಗರ್ (Sugar) ಪ್ರಮಾಣ ಹೆಚ್ಚಿರುವ ಐಸ್ ಸೇವಿಸುವುದು ನಿಯಂತ್ರಿಸುವುದು ಒಳ್ಳೆಯದು. ಐಸ್ ಕ್ರೀಮ್ ತಿನ್ನುವ ಹುಚ್ಚಿರುವವರು ನೀವಾಗಿದ್ದರೆ ಕ್ಯಾಲೋರಿ (Calorie) ಕಡಿಮೆ ಇರುವ ಐಸ್ ಕ್ರೀಮ್ ಸೇವಿಸುವುದು ಒಳ್ಳೆಯದು.
2. ಡಯಾಬಿಟಿಸ್
ಸಕ್ಕರೆ ಕಾಯಿಲೆ ಇರುವವರು ಐಸ್ ಕ್ರೀಮ್ ಅವಾಯ್ಡ್ ಮಾಡುವುದು ಒಳ್ಳೆಯದು. ನೀವು ಯುವಕರಾಗಿದ್ದು ಸಕ್ಕರೆ ಕಾಯಿಲೆ (Diabetes) ಇಲ್ಲದಿದ್ದರೂ ಐಸ್ ಕ್ರೀಮ್ ಅತಿಯಾಗಿ ಸೇವಿಸುತ್ತಿದ್ದರೆ ಡಯಾಬಿಟಿಸ್ ಬರುವ ಸಂಭವವಿರುತ್ತದೆ. ದಿನ ನಿತ್ಯ ಐಸ್ ಕ್ರೀಮ್ ಸೇವಿಸುವವರು ನೀವಾಗಿದ್ದರೆ, ಅದರಲ್ಲಿ ಹಾಕಿರುವ ಸಕ್ಕರೆ ಅಂಶದಿAದ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳಬಹುದು. ಏಕೆಂದರೆ ಐಸ್ ಕ್ರೀಮ್‌ನಲ್ಲು ಹೈ ಫ್ರಕ್ಟೋಸ್ ಕಾರ್ನ್ ಸಿರಪ್ (High fructose corn syrup) ಅನ್ನು ಬಳಸಲಾಗುತ್ತದೆ. ಇದು ಸಕ್ಕರೆ ಕಾಯಿಲೆಗೆ ಅಪಾಯಕಾರಿ ಅಂಶ.
3. ಹಾರ್ಟ್ ಅಟ್ಯಾಕ್
ಪ್ರತೀ ದಿನ ಐಸ್ ಕ್ರೀಮ್ ಸೇವಿಸುವುದರಿಂದ ಹೃದಯದೊತ್ತಡ ಹೆಚ್ಚುತ್ತದಲ್ಲದೆ ಹೃದಯಾಘಾತಕ್ಕೆ (Heart Attack) ಕಾರಣವಾಗುತ್ತದೆ. ಐಸ್ ಕ್ರೀಮಮ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬಿನಾಂಶ ಹೆಚ್ಚಿದ್ದು, ರಕ್ತದಲ್ಲಿನ ಲಿಪಿಡ್ (Lipid) ಅಂಶಕ್ಕೆ ಭಾರೀ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೂ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದು ಕೇವಲ ವೃದ್ಧರಿಗಷ್ಟೇ ಅಲ್ಲದೆ ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತದೆ.
4. ಊದುವುದು
ಮೇಲೆ ಹೇಳಿರುವಂತೆ ಐಸ್ ಕ್ರೀಮ್‌ನಲ್ಲಿ ಗಾಳಿಯೂ ಇರುತ್ತದೆ. ಸಾಫ್ಟಿಯಂತಹ ಐಸ್ ಕ್ರೀಮ್‌ಗಳ ಸೇವನೆಯಿಂದ ಹೊಟ್ಟೆಯಲ್ಲಿ ಗಾಳಿ ಶೇಖರಣೆಯಾಗುತ್ತದೆ. ಕೆಲವರಿಗೆ ಜೀರ್ಣವಾಗಲು ಸಮಯ ಹಿಡಿಯುತ್ತದೆ ಕೂಡ.
Food Tips: ಈ ಮೂರು ಆಹಾರ ಸೇವಿಸಿದ ನಂತರ ನೀರು ಕುಡಿಯಲೇಬೇಡಿ !
5. ಅಜೀರ್ಣ
ಕೆಲ ಐಸ್ ಕ್ರೀಮ್‌ನಲ್ಲಿ ಸಿಂಥಟಿಕ್ ಸಕ್ಕರೆಯನ್ನು (Synthetic Sugars) ಹಾಕಲಾಗುತ್ತದೆ. ಈ ರೀತಿಯ ಐಸ್ ಕ್ರೀಮ್ ಸೇವಿಸುವುದರಿಂದ ಸುಲಭವಾಗಿ ಜೀರ್ಣವಾಗಲು (Digestion) ತೊಂದರೆ ಮಾಡುತ್ತದೆ ಹಾಗೂ ಅಜೀರ್ಣಕ್ಕೆ (Indigestion) ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಹಲವು ಕೆಮಿಕಲ್‌ಗಳನ್ನು (Chemical) ಹಾಕಲಾಗುತ್ತದೆ ಹಾಗೂ ಹೊಟ್ಟೆಯ ಬಹುತೇಕ ಸಮಸ್ಯೆಗೆ ಕಾರಣವಾಗುತ್ತದೆ.
6.ಬೆಲ್ಲಿಯಲ್ಲಿ ಕೊಬ್ಬು
ಬಹುತೇಕ ಜನರು ದೇಹದ ಫಿಟ್ನೆಸ್ ಕಾಯ್ದುಕೊಂಡಿದ್ದರು ಬೆಲ್ಲಿಯಲ್ಲಿ ಬೊಜ್ಜು (Belly Fat) ತುಂಬಿಕೊAಡಿರುತ್ತಾರೆ. ಇದಕ್ಕೆ ಕಾರಣ ಅತಿಯಾಗಿ ಐಸ್ ಕ್ರೀಮ್ ಸೇವಿಸುವುದು. ಇವು ದೇಹದ ವಿನ್ಯಾಸಕ್ಕಿಂತ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಐಸ್ ಕ್ರೀಮ್‌ನಲ್ಲಿ ಡೈರಿ ಪ್ರಾಡಕ್ಟ್ (Dairy Product), ಸಕ್ಕರೆ (Sugar), ಕೆಮಿಕಲ್‌ಗಳನ್ನು (Chemical) ಹೆಚ್ಚಾಗಿರುತ್ತವೆ. ಹೀಗಿರುವಾಗ ಅತಿಯಾಗಿ ಐಸ್ ಕ್ರೀಮ್ ಸೇವಿಸಿದರೆ ಬೆಲ್ಲಿಯಲ್ಲಿ ಬೊಜ್ಜು ಶೇಖರಣೆಯಾಗುತ್ತದೆ.
7. ಅಷ್ಟೇ ಅಲ್ಲದೆ ಅತಿಯಾಗಿ ಐಸ್ ಕ್ರೀಮ್ ಸೇವಿಸುವುದು ಅಲರ್ಜಿ, ಕಿಡ್ನಿ, ಕ್ಯಾನ್ಸರ್ (Cancer), ಗಂಟಲು ಸಮಸ್ಯೆ (Throat Problem), ಕಣ್ಣಿನಲ್ಲಿ ಇರಿಟೇಷನ್ (Eye Irritation) ಹಾಗೂ ಆಲಸ್ಯ ಹೀಗೆ ಹಲವು ಸಮಸ್ಯೆಗೆ ಕಾರಣವಾಗಬಹುದು.