ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಮ್.. ಹೊಸ ತಿನಿಸು ಬಿಡುಗಡೆ ಮಾಡಿದ ಮ್ಯಾಕ್‌ಡೊನಾಲ್ಡ್
- ಚೀನಾದಲ್ಲಿ ಸಿಗಲಿದೆ ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಮ್
- ಮ್ಯಾಕ್‌ಡೊನಾಲ್ಡ್‌ನಿಂದ ಬಿಡುಗಡೆಯಾದ ಹೊಸ ತಿನಿಸು
ಕಳೆದ ವರ್ಷದಲ್ಲಿ ನಾವು ಅಸಹ್ಯದಿಂದ ತಲೆ ಕೆರೆದುಕೊಳ್ಳುವಂತೆ ಮಾಡುವ ಸಾಕಷ್ಟು ವಿಲಕ್ಷಣ ಆಹಾರ ಸಂಯೋಜನೆಗಳಿಗೆ ಸಾಕ್ಷಿಯಾಗಿದ್ದೇವೆ. ವಿಲಕ್ಷಣ ಸಮ್ಮಿಲನದ ತಿನಿಸುಗಳನ್ನು ತಯಾರಿಸುವ ಈ ಕ್ಷೇತ್ರಕ್ಕೆ ಈಗ ಮೆಕ್‌ಡೊನಾಲ್ಡ್ಸ್ ಕೂಡ ಪ್ರವೇಶಿಸಿದಂತಿದೆ. ಚೀನಾದಲ್ಲಿರುವ ಮೆಕ್‌ಡೊನಾಲ್ಡ್ಸ್ ಹೊಸದಾದ ಸೀಮಿತ ಆವೃತ್ತಿಯ ಮೆಕ್‌ಫ್ಲರಿ ಎಂಬ ತಿನಿಸನ್ನು ಬಿಡುಗಡೆ ಮಾಡಿದೆ. ಇದು ಕೊತ್ತಂಬರಿ ಸೊಪ್ಪಿನ ಜೊತೆಗೆ ಐಸ್‌ಕ್ರೀಂ ಅನ್ನು ಮಿಶ್ರಣ ಮಾಡುತ್ತದೆ. ಮ್ಯಾಕ್‌ಡೊನಾಲ್ಡ್ ಕೊತ್ತಂಬರಿ ಸೊಪ್ಪಿನ ತುಂಡಿನೊಂದಿಗೆ ಸಂಡೇ ಫಾಸ್ಟ್ ಫುಡ್ ಚೈನ್‌ನ ಕ್ಲಾಸಿಕ್ ವೆನಿಲ್ಲಾ ಸಾಫ್ಟ್ ನ್ನು ಸರ್ವ್ ಮಾಡುತ್ತಿದೆ. ಹಸಿರು ನಿಂಬೆ ಮತ್ತು ಕೊತ್ತಂಬರಿ ಸಾಸ್‌ನ್ನು ಈ ಐಸ್‌ಕ್ರೀಮ್‌ನ ಮೇಲೆ ಚಿಮುಕಿಸಲಾಗುತ್ತದೆ. ಫೆಬ್ರವರಿ 21 ರಂದು ಈ ಹೊಸ ತಿನಿಸು ಲಾಂಚ್ ಆಗಿದ್ದು ಫೆಬ್ರವರಿ 25 ರವರೆಗೆ ಇರಲಿದೆ ಎಂದು news.com.au ವರದಿ ಮಾಡಿದೆ.
ಕೊತ್ತಂಬರಿ ಇಷ್ಟಪಡುವವರು, 'ಕೊತ್ತಂಬರಿ ಗ್ಯಾಂಗ್, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ, ಸಿಹಿ ಮತ್ತು ತಾಜಾ ಕೊತ್ತಂಬರಿ ಸಂಡೇ ಬಂದಿದೆ' ಎಂದು ಕ್ಸಿಯಾಹೊಂಗ್‌ಶು ಹೇಳಿಕೆಯಲ್ಲಿ ಮೆಕ್‌ಡೊನಾಲ್ಡ್ಸ್ ಚೀನಾ ಹೇಳಿದೆ. ಟ್ವಿಟ್ಟರ್ (Twitter) ಬಳಕೆದಾರರಾದ @ZhugeEX ಎಂಬುವವರು ಹೊಸ ಮೆಕ್‌ಡೊನಾಲ್ಡ್ ಐಟಂನ ಪ್ರಚಾರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ ಅವರು 'ಮೆಕ್‌ಡೊನಾಲ್ಡ್ಸ್ ಚೀನಾ ಇಂದು ಸಿಲಾಂಟ್ರೋ ಸಂಡೇ ವಿಶೇಷ ಮೆನು ಐಟಂ (Cilantro Sundae special menu) ಅನ್ನು ಬಿಡುಗಡೆ ಮಾಡಿದೆ ಇದು ಆಸಕ್ತಿದಾಯಕವಾಗಿದೆ' ಎಂದು ಬರೆದಿದ್ದಾರೆ. ಈ ಹೊಸ ಆಹಾರ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
Health Tips: ತೆಳ್ಳಗಾಗಬೇಕಾ? ಕೊತ್ತಂಬರಿ ನೀರೇಕೆ ಟ್ರೈ ಮಾಡ್ಬಾರ್ದು?
ಈ ಫೋಟೋಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಸಂಡೇಯ ರುಚಿ ನೋಡುವ ಆಸಕ್ತಿಯನ್ನು ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅಸಹ್ಯ ವ್ಯಕ್ತಪಡಿಸಿದ್ದಾರೆ. 'ನಾನು ಗ್ರಹದ ಇನ್ನೊಂದು ಬದಿಯಲ್ಲಿ ವಾಸಿಸುತ್ತಿದ್ದೇನೆ ಎಂದು ನನಗೆ ಖುಷಿಯಾಗಿದೆ. ಆ ವಿಷಯ ನನ್ನಿಂದ ಸಾಧ್ಯವಾದಷ್ಟು ದೂರವಿರಲು ನಾನು ಬಯಸುತ್ತೇನೆ' ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಸಿಹಿ ತಿನಿಸಿನ ಬೆಲೆ 6.6 ಯುವಾನ್ ಆಗಿದ್ದು, ಭಾರತದ ರೂಪಾಯಿಗೆ ಹೋಲಿಸಿದರೆ 77 ರುಪಾಯಿ 99 ಪೈಸೆ ಆಗಲಿದೆ. ಅಲ್ಲದೇ ಇದು ಕೇವಲ ಶುಕ್ರವಾರದವರೆಗೆ ಮಾತ್ರ ಲಭ್ಯವಿರಲಿದೆ.
ರೆಸ್ಟೋರೆಂಟ್‌ಗಳಲ್ಲಿ ನಾರ್ತ್ ಇಂಡಿಯನ್ ಹಾಗೂ ಸೌತ್ ಇಂಡಿಯನ್ ಥಾಲಿ ಮಾಮೂಲು. ಇದೇ ಮಾದರಿ ಈಗ ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಹೊಸ ಟ್ರೆಂಡ್ ಆಗಿ ಆರಂಭವಾಗಿದೆ. ಎಲ್ಲ ಬಗೆಯ ಆಹಾರಕ್ಕೂ(Food) ಒಂದಷ್ಟು ಜನ ಫ್ಯಾನ್ಸ್ ಇರುತ್ತಾರೆ. ಕೆಲವರು ಚಿಕನ್ ಥಾಲಿ, ಇನ್ನೂ ಕೆಲವರು ಫಿಶ್ ಥಾಲಿ, ಇನ್ನೂ ಕೆಲವರು ಪ್ಯೂರ್ ವೆಜ್ ಥಾಲಿಗೆ ಫಿದಾ.ಗ್ರಾಹಕರ ಅಭಿರುಚಿಗಳನ್ನು ಅರಿತುಕೊಂಡು ರೆಸ್ಟೋರೆಂಟ್ ಮಾಲೀಕರು ಅವರ ನೆಚ್ಚಿನ ಆಹಾರವನ್ನು ಒಂದೇ ಥಾಲಿಗೆ ಸೇರಿಸಿ ಸರ್ವ್ ಮಾಡೋ ಪ್ರಯತ್ನ ಮಾಡುತ್ತಾರೆ. ಆಹಾರಕ್ಕೆ ಸಂಬಂಧಿಸಿ ಇದಾಯಿತು, ಹಾಗಾದರೆ ಐಸ್‌ಕ್ರೀಂ ಪ್ರಿಯರೇನು ಮಾಡೋದು
Food Trend: ವೈರಲ್ ಆಗ್ತಿದೆ ಮೊಮೋಸ್ ಐಸ್‌ಕ್ರೀಂ ರೋಲ್
ಇದಕ್ಕಾಗಿಯೇ ಮಂಗಳೂರಿನ ಐಡಿಯಲ್ ಐಸ್‌ಕ್ರೀಂ ಮಾಲೀಕತ್ವದ ಪಬ್ಬಾಸ್(Pabbas) ಐಡಿಯಲ್ ಕೆಫೆಯಲ್ಲಿ 'ಐಸ್‌ಕ್ರೀಂ ಥಾಲಿ'ಯನ್ನು ನೀಡುತ್ತಿದೆ. ಇಲ್ಲಿ ಗ್ರಾಹಕರು ಒಂದೇ ಥಾಲಿಯಲ್ಲಿ ಹಲವು ಬಗೆ ಐಸ್‌ಕ್ರೀಂ(Ice cream) ತಿನ್ನಬಹುದು. ಬಣ್ಣ, ರುಚಿ ಕಣ್ಮನ ತಣಿಸುವ ಸ್ವಾದದಿಂದ ಇದು ಎಲ್ಲರನ್ನು ಸೆಳೆಯುತ್ತಿದೆ.