ಐಸ್‌ಕ್ರೀಂ ಎಂದುಕೊಂಡು ಹುಳಿ ಕ್ರೀಂ ತಿಂದ ಮಗು, ಮುಖ ಹೇಗೆ ಮಾಡಿಕೊಳ್ತು ನೋಡಿ !
ಮಕ್ಕಳು (Children) ಏನು ಮಾಡಿದರೂ ನೋಡಲು ಚೆಂದ. ಹೀಗಾಗಿಯೇ ಇತ್ತೀಚಿಗಂತೂ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮುದ್ದುಮಕ್ಕಳ ಚಟುವಟಿಕೆಗಳು ಹೆಚ್ಚೆಚ್ಚು ವೈರಲ್ (Viral) ಆಗುತ್ತಿವೆ. ಸದ್ಯ ಇಂಥಹದ್ದೇ ವೀಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಮಗು ಐಸ್‌ಕ್ರೀಂ ಎಂದು ಹುಳಿ ಕ್ರೀಂನ್ನು ತಿಂದು ಬಿಡುತ್ತದೆ. ಮಗುವಿನ ಎಕ್ಸ್‌ಪ್ರೆಶನ್ ಹೇಗಿತ್ತು. ನೀವೇ ನೋಡಿ.
ಐಸ್ ಕ್ರೀಂ (Ice Cream) ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದು ಬೇಸಿಗೆಯೇ ಇರಲಿ, ಚಳಿಗಾಲವೇ ಇರಲಿ ಅಥವಾ ಮಳೆ ಜೋರಾಗಿ ಬರುತ್ತಿರಲಿ, ಯಾವುದೇ ಸಮಯದಲ್ಲಿ ಐಸ್ ಕ್ರೀಂ ತಿನ್ನಲು ರೆಡಿಯಾಗಿರುತ್ತಾರೆ. ಅದರಲ್ಲೂ ಮಕ್ಕಳಂತೂ (Children) ಐಸ್‌ಕ್ರೀಂ ಎಂದರೆ ಸಾಕು ಊಟ, ತಿಂಡಿ ಬಿಟ್ಟು ಐಸ್‌ಕ್ರೀಂ ತಿನ್ನುತ್ತಾ ಕೂರಲು ರೆಡಿಯಾಗಿರುತ್ತಾರೆ. ಆದರೆ ಅತಿಯಾಗಿ ಐಸ್‌ಕ್ರೀಂ ತಿನ್ನುವುದರಿಂದ ಮಕ್ಕಳ ಆರೋಗ್ಯ (Health) ಹದಗೆಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಹೆಚ್ಚಿನ ಪೋಷಕರು ಮಕ್ಕಳಿಗೆ ಐಸ್‌ಕ್ರೀಂ ರುಚಿ ತೋರಿಸುವುದಿಲ್ಲ. ಮಕ್ಕಳನ್ನು ಐಸ್‌ಕ್ರೀಂನಿಂದ ದೂರವಿಡುತ್ತಾರೆ. ಆದರೆ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಸ್ವತಃ ಮಗುವೇ ಐಸ್‌ಕ್ರೀಂನ್ನು ನಿರಾಕರಿಸುವುದನ್ನು ಕಾಣಬಹುದು.
ಮಕ್ಕಳು ಏನು ಮಾಡಿದರೂ ನೋಡಲು ಚೆಂದ. ಮಕ್ಕಳು ನಕ್ಕರೂ, ಅತ್ತರೂ, ತೊದಲು ಮಾತನಾಡಿದರೂ, ಡ್ಯಾನ್ಸ್ ಮಾಡಿದರೂ, ಹಾಡಿದರೂ ನೋಡಲು ಖುಷಿಯಾಗುತ್ತದೆ. ಇತ್ತೀಚಿಗಂತೂ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮುದ್ದುಮಕ್ಕಳ ಚಟುವಟಿಕೆಗಳು ಹೆಚ್ಚೆಚ್ಚು ವೈರಲ್ (Viral) ಆಗುತ್ತಿವೆ. ಮಕ್ಕಳು ಆಟ ಆಡುವುದು, ಮಾತನಾಡುವುದು, ನಗುವುದು, ಅಳುವುದು ಎಲ್ಲಾ ವಿಚಾರಗಳು ಹೆಚ್ಚು ವೈರಲ್ ಆಗುತ್ತವೆ. ಜನರು ಸಹ ಮುದ್ದು ಮಕ್ಕಳ ಕ್ಯೂಟ್ ಕ್ಯೂಟ್ ವೀಡಿಯೋ (Video)ಗಳನ್ನು ನೋಡಲು ಇಷ್ಟಪಡುತ್ತಾರೆ.
ಅದರಲ್ಲೂ ಮಕ್ಕಳ ಎಕ್ಸ್‌ಪ್ರೆಶನ್‌ಗಳನ್ನು ನೋಡಲು ಇನ್ನೂ ಚೆನ್ನಾಗಿರುತ್ತದೆ. ಹಾಗೆಯೇ ಇನ್‌ಸ್ಟಾಗ್ರಾಂ ಪೇಜ್‌ವೊಂದು ಶೇರ್ ಮಾಡಿಕೊಂಡಿರುವ ಮುದ್ದು ಮಗುವಿನ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರಲ್ಲಿ ಮಗುವಿನ ಮುಖದಲ್ಲಿ ಭಾವನೆಗಳ ಬದಲಾವಣೆ ಜನರನ್ನು ಹೆಚ್ಚು ಸೆಳೆದಿದೆ.
ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಐಸ್‌ಕ್ರೀಂ ತಿಂದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿರುವ ವೀಡಿಯೋವೊಂದರಲ್ಲಿ ಮಗು ತನ್ನ ಪೋಷಕರೊಂದಿಗೆ ರೆಸ್ಟೋರೆಂಟ್‌ನಲ್ಲಿ ಕುಳಿತಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿ ತಾಯಿ ಮಗುವಿಗೆ ಐಸ್‌ಕ್ರೀಂ ಬೇಕೆ ಎಂದು ಕೇಳುತ್ತಾಳೆ. ಮಗು ಯಾ ಎಂದು ಖುಷಿಯಿಂದ ಉತ್ತರಿಸುತ್ತದೆ. ತಾಯಿ ತಕ್ಷಣ ಕ್ರೀಂನ್ನು ಸ್ಪೂನ್‌ನಲ್ಲಿ ಮಗುವಿನ ಬಾಯಿಗಿಡುತ್ತಾಳೆ. ಆದರೆ ಕ್ರೀಮ್‌ನ್ನು ಸವಿದು ಅದು ಹುಳಿಯಾಗಿರುವುದನ್ನು ತಿಳಿದು ಮುಖ ಸಿಂಡರಿಸುತ್ತದೆ. ತಕ್ಷಣ ಸಮೀಪದಲ್ಲಿರುವ ತಟ್ಟೆಗೆ ಅದನ್ನು ಉಗುಳುತ್ತದೆ.
ಮಹಿಳೆಯ ತಟ್ಟೆಯಲ್ಲಿದ್ದುದು ಸೋರ್ ಕ್ರೀಮ್ ಅಗಿತ್ತು. ಆದರೆ ಮಗು ಇದನ್ನು ತಿಳಿಯದೆ ಐಸ್‌ಕ್ರೀಂ ಎಂದು ಅದರ ರುಚಿ ನೋಡಲು ಮುಂದಾಗಿದೆ. ಮಗುವಿನ ಮುಖದ ಭಾವನೆ ಶೀಘ್ರ ಬದಲಾಗುವುದನ್ನು ಗಮನಿಸಿದ ನೆಟ್ಟಿಗರು ನಕ್ಕೂ ನಕ್ಕು ಸುಸ್ತಾಗಿದ್ದಾರೆ. ಐಸ್‌ಕ್ರೀಂ ಎಂದು ಇಷ್ಟಪಟ್ಟು ತಿನ್ನುವ ಮಗು ಅದು ಹುಳಿ ಹುಳಿಯಾಗಿರುವುದನ್ನು ತಿಳಿದು ತಕ್ಷಣ ಮುಖ ಸಿಂಡರಿಸುತ್ತದೆ.
ಎಲ್ಲೆಡೆ ವೈರಲ್ ಆಗಿರುವ ಪುಟ್ಟ ಮಗುವಿನ ಈ ವೀಡಿಯೋವನ್ನು @lbaby.lov3 ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಮುದ್ದು ಮಗು ಕ್ರೀಂ ಸವಿಯುವ ವೀಡಿಯೋ 305k ವೀಕ್ಷಣೆಗಳು, 4473 ಲೈಕ್ಸ್‌ಗಳು ಮತ್ತು 110 ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಹಲವರು ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
Health Tips: ನಿಮ್ಮ ಮಗುವಿಗೆ ಹಸಿವಾಗೋದಿಲ್ವೇ? ಈ ವಿಧಾನಗಳನ್ನು ಪಾಲಿಸಿ
ಕೆಲವೊಬ್ಬರು ಮಗು ಇನ್ನೆಂದೂ ಐಸ್‌ಕ್ರೀಂ ಕೇಳುವುದೇ ಇಲ್ಲವೇನೋ ಎಂದಿದ್ದಾರೆ. ಇನ್ನು ಕೆಲವರು ಅಮ್ಮನ ಮಾತನ್ನು ಕೇಳದ ಮಾತು ಹುಳಿ ಕ್ರೀಂ ತಿಂದಿತು ಪಾಪ ಎಂದಿದ್ದಾರೆ. ಇನ್ನೂ ಕೆಲ ವೀಕ್ಷಕರು ಮಕ್ಕಳಿಗೆ ಹೀಗೆಲ್ಲಾ ಮಾಡುವುದು ತಪ್ಪು ಎಂದು ಕಮೆಂಟಿಸಿದ್ದಾರೆ. ಅದೇನೆ ಇರ್ಲಿ ಪುಟ್ಟ ಮಗು ಐಸ್‌ಕ್ರೀಂ ಎಂದು ಆಸೆಪಟ್ಟು ತಿಂದು ಅದು ಹುಳಿಯಾಗಿರುವುದನ್ನು ನೋಡಿ ನಿರಾಶೆಗೊಂಡಿರುವುದಂತೂ ನಿಜ.