ನಾರ್ವೆಯ ಹೆರಾಲ್ಡ್ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದು, ಕಾಲುಗಳ ಸ್ವಾಧೀನವಿಲ್ಲದೆಯೂ ವ್ಹೀಲ್ ಚೇರ್ ಸಹಾಯದಿಂದ ಒಂದು ನಿಮಿಷದಲ್ಲಿ 25 ಫುಲ್ ಅಪ್ಸ್ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಅವರ ಈ ಸಾಧನೆ ಅನೇಕರಿಗೆ ಸ್ಪೂರ್ತಿಯಾಗಿದೆ.

ನಮ್ಮಲ್ಲೇ ಅನೇಕರು ಕೈ ಕಾಲುಗಳು ಸರಿ ಇದ್ದೂ ಆರೋಗ್ಯ ಚೆನ್ನಾಗಿದ್ದು, ದುಡಿದು ತಿನ್ನುವ ಯೋಗ್ಯತೆಗಳಿದ್ದರೂ ಕಷ್ಟ ಕಷ್ಟ ಅಂತ ಅಳುತ್ತಿರುತ್ತಾರೆ. ಮತ್ತೆ ಕೆಲವರು ಬೆಳಗ್ಗೆದ್ದು ಮಾಡುವ ವ್ಯಾಯಾಮಗಳಿಗೆ ನೂರು ಕಾರಣ ಹೇಳಿ ತಪ್ಪಿಸುತ್ತಾರೆ. ಹೀಗೆ ತಮಗಿರುವ ಸಣ್ಣಪುಟ್ಟ ಕಷ್ಟಗಳೇ ದೊಡ್ಡದೆಂದು ಅಳುತ್ತಾ ಕೂರುವವರು ಚಿಂತೆ ಮಾಡುವವರು ಈ ಸ್ಟೋರಿ ಓದಲೇ ಬೇಕು. ಇಲ್ಲೊಬ್ಬ ಯುವಕನನ್ನು ನೋಡಿ ಆತನಿಗೆ ಕಾಲುಗಳೇ ಸ್ವಾಧೀನವಿಲ್ಲ, ಯಾರ ಸಹಾಯವಿಲ್ಲದೇ ಆತ ಸ್ವತಃ ಎದ್ದು ನಿಲ್ಲಲಾರ ಹೀಗಿದ್ದರೂ ಆತನ ಸಾಧನೆ ಏನು ಕಡಿಮೆಯಾದಲ್ಲ. ಹಾಗಿದ್ದರೆ ಆತ ಏನು ಮಾಡಿದ ಅಂತ ಹೇಳ್ತಿವಿ ಮುಂದೆ ಓದಿ...

ಕಾಲಿನ ಸ್ವಾಧೀನವಿಲ್ಲದಿದ್ದರೂ ಯಾರೂ ಮಾಡದ ಸಾಧನೆ ಮಾಡಿದ ತರುಣ

ಫಿಟ್‌ನೆಸ್ ಇಷ್ಟಪಡುವ ಅನೇಕರಿಗೆ ಜಿಮ್‌ಗೆ ಹೋಗುವುದು ದಿನಚರಿಯ ಒಂದು ಭಾಗ ಆದರೆ ಅಲ್ಲಿ ಮಾಡುವ ಪುಲ್-ಅಪ್‌ಗಳು ದೇಹದ ಮೇಲ್ಭಾಗದ ಶಕ್ತಿಯನ್ನು ಪರೀಕ್ಷಿಸುವ ಅತ್ಯಂತ ಕಠಿಣ ವ್ಯಾಯಾಮಗಳಲ್ಲಿ ಒಂದಾಗಿದೆ. ಇದನ್ನು ಮಾಡುವುದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಇಡೀ ದೇಹದ ಭಾರವನ್ನು ಎರಡು ಕೈಗಳ ಶ್ರಮದಿಂದ ಮೇಲೆತ್ತುವುದು ಸುಲಭೆ ಕೆಲಸವೇನಲ್ಲ, ಕೈಕಾಲುಗಳು ಸರಿ ಇದ್ದವರೇ ಈ ಫುಲ್ ಅಪ್ ವ್ಯಾಯಾಮವನ್ನು ಮಾಡಲು ಹೆಣಗಾಡುತ್ತಾರೆ. ಆದರೆ ಈ ಯುವಕನಿಗೆ ಕಾಲುಗಳೇ ಸರಿ ಇಲ್ಲ. ಆದರೆ ಆತನ ಸಾಧನೆ ಮಾಡುವ ಆಸಕ್ತಿ ಏನು ಕಡಿಮೆಯಲ್ಲಿಲ್ಲ. ಕಾಲುಗಳಿಲ್ಲದಿದ್ದರೇನಂತೆ ವ್ಹೀಲ್ ಚೇರ್ ಇದೆಯಲ್ಲ ಎನ್ನುವ ಈತ ಆ ವ್ಹೀಲ್‌ಚೇರ್‌ನ್ನೇ ಸೊಂಟಕ್ಕೆ ಕಟ್ಟಿ ಒಂದೆರಡು ಬಾರಿ ಅಲ್ಲ ಒಂದೇ ಒಂದು ನಿಮಿಷದಲ್ಲಿ ಆತ 25 ಬಾರಿ ಫುಲ್ ಅಪ್ ಮಾಡುವ ಮೂಲಕ ಯಾರು ಮಾಡದ ಸಾಧನೆ ಮಾಡಿದ್ದಾನೆ. 

ವೀಲ್‌ಚೇರ್‌ನಲ್ಲಿ ಝೊಮ್ಯಾಟೊ ಡೆಲಿವರಿ ಏಜೆಂಟ್: ಸಲಾಂ ಅಂತಿದ್ದಾರೆ ನೆಟ್ಟಿಗರು!

ನಾರ್ವೆ ಮೂಲದ ಹೆರಾಲ್ಡ್ ಈ ಸಾಧಕ
ಅಂದಹಾಗೆ ಈ ಸಾಧಕನ ಹೆಸರು ಹೆರಾಲ್ಡ್‌. ನಾರ್ವೆ ಮೂಲದ ಈ ಯುವಕ ಸೆರೆಬ್ರಲ್ ಪಾಲ್ಸಿ ಎಂಬ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದಾನೆ. ಆದರೂ ಕೇವಲ ನಿಮಿಷದಲ್ಲಿ 25 ಬಾರಿ ಫುಲ್ ಅಪ್ ಮಾಡುವ ಮೂಲಕ ಧೃಡಸಂಕಲ್ಪದ ಮುಂದೆ ಯಾವುದೇ ಸಾಧನೆಗಳು ಅಸಾಧ್ಯವಲ್ಲ ಎಂದು ತೋರಿಸಿದ್ದಾನೆ. ಈ ಮೂಲಕ ಈ ಯುವಕ ವಿಶ್ವ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ. ವ್ಹೀಲ್‌ಚೇರ್‌ನಲ್ಲಿ ಅತೀ ಹೆಚ್ಚು ಬಾರಿ ಫುಲ್‌ ಅಪ್ ಮಾಡಿದ ಅದ್ಭುತ ಸಾಧನೆಗಾಗಿ ಇವರಿಗೆ ಗಿನ್ನೆಸ್ ಪ್ರಶಸ್ತಿ ನೀಡಿದೆ. 

ವ್ಹೀಲ್‌ಚೇರ್ ಜೊತೆ ಭಂಗಿ ಜಂಪ್ : ವಿಶೇಷ ಚೇತನ ಯುವಕನ ಸಾಹಸ ವೈರಲ್

ಹೆರಾಲ್ಡ್ ಸಾಧನೆಗೆ ಗಿನ್ನೆಸ್ ಸಂಸ್ಥೆಯವರಿಂದ ಪ್ರಶಂಸೆ
ಇಂಟರ್‌ನೆಟ್‌ ವಿಕ್ಕಿಂಗ್ ವ್ಹೀಲ್ಸ್ ಎಂದೇ ಫೇಮಸ್ ಆಗಿರುವ ಹೆರಾಲ್ಡ್ ಅವರು ದೈಹಿಕ ನ್ಯೂನ್ಯತೆಯ ನಡುವೆಯೂ ತಮ್ಮ ಅದ್ಭುತವಾದ ಫಿಟ್‌ನೆಸ್‌ನಿಂದ ಗಮನ ಸೆಳೆಯುತ್ತಿರುತ್ತಾರೆ. ಇವರ ಟ್ರಾವೆಲ್ ಲೈಫ್ ಹಾಗೂ ಫಿಟ್‌ನೆಸ್‌ ಅನೇಕರನ್ನು ಹುಬ್ಬೇರುವಂತೆ ಮಾಡಿದೆ. ಇತ್ತೀಚಿನ ವೀಡಿಯೋದಲ್ಲಿ ಹೆರಾಲ್ಡ್ ಅವರು ಅಥ್ಲೆಟಿಕ್ ಸಾಮರ್ಥ್ಯಕ್ಕೆ ತಮಗೆ ಸಿಕ್ಕ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದರ್ಶಿಸುತ್ತಿರುವ ದೃಶ್ಯವಿದೆ.

ಗಿನ್ನೆಸ್ ದಾಖಲೆ ಸಮಿತಿಯ ಸದಸ್ಯರ ತಂಡವು ಅವರ ಸಾಧನೆಯನ್ನು ಪರಿಶೀಲಿಸುತ್ತಿದ್ದಾಗಲೇ ಹೆರಾಲ್ಡ್‌ ನಿಖರವಾಗಿ ಒಂದು ನಿಮಿಷದೊಳಗೆ 25 ಪುಲ್‌ಗಳ ಅಪ್ ಮಾಡಿ ತೋರಿಸಿದರು. ಅದು ಅವರ ದೇಹದ ತೂಕದ ಜೊತೆ ವ್ಹೀಲ್‌ಚೇರ್‌ ತೂಕವನ್ನು ಹೊತ್ತುಕೊಂಡು ಮಾಡಿದ ಈ ಸಾಧನೆಗೆ ಈಗ ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ. ನೋಡಿದ್ರಲ್ಲ ಸಾಧನೆ ಮಾಡಬೇಕು ಎಂಬ ಹುಮ್ಮಸ್ಸು, ಇಚ್ಚಾಶಕ್ತಿ ಇವೆರಡು ಇದ್ರೆ ಯಾವುದೆ ಅಸಾಧ್ಯವಲ್ಲ ಎಂಬುದನ್ನು ಹೆರಾಲ್ಡ್ ಸಾಬೀತುಪಡಿಸಿದ್ದು, ಅನೇಕರಿಗೆ ಮಾದರಿಯಾಗಿದ್ದಾರೆ. ಜೀವನದಲ್ಲಿ ಸಣ್ಣಪುಟ್ಟ ಕಷ್ಟಗಳನ್ನೇ ದೊಡ್ಡದು ಎಂದು ಭಾವಿಸುತ್ತಾ ಚಿಂತೆಯಲ್ಲೇ ಕಾಲ ಕಳೆಯುವ ಅನೇಕರ ಪಾಲಿಗೆ ಈ ಹೆರಾಲ್ಡ್‌ನ ಸಾಧನೆ ಸ್ಪೂರ್ತಿಯಾಗಬಲ್ಲದು ಈ ಬಗ್ಗೆ ನೀವೆನಂತೀರಿ ಕಾಮೆಂಟ್ ಮಾಡಿ.

View post on Instagram

View post on Instagram