ವ್ಹೀಲ್‌ಚೇರ್ ಜೊತೆ ಭಂಗಿ ಜಂಪ್ : ವಿಶೇಷ ಚೇತನ ಯುವಕನ ಸಾಹಸ ವೈರಲ್

ವಿಶೇಷ ಚೇತನ ಯುವಕನೊಬ್ಬ ಭಂಗಿ ಜಂಪ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಾಹಸವನ್ನು ಭಾರತದ ಅತ್ಯಂತ ಎತ್ತರದ ಭಂಗಿ ಜಂಪ್ ಸ್ಥಳದಲ್ಲಿ ಮಾಡಲಾಗಿದೆ. 

Viral Video Wheelchair bound Differently abled man does bungee jump

ಸಾಹಸವನ್ನು ಇಷ್ಟಪಡುವ ಅನೇಕರ ಇಷ್ಟದ ಸಾಹಸಗಳಲ್ಲಿ ಭಂಗಿ ಜಂಪ್ ಕೂಡ ಒಂದು, ಕೈ ಕಾಲು ಸರಿ ಇದ್ದವರೇ ಈ ಸಾಹಸ ಮಾಡಲು ಹೆದರುತ್ತಾರೆ. ಬಹಳ ಎತ್ತರದಿಂದ ನಿಮ್ಮ ಸೊಂಟಕ್ಕೆ ಹಗ್ಗ ಕಟ್ಟಿ ಕೆಳಕ್ಕೆ ತಳ್ಳಿ ಬಿಡುವ ಈ ಭಂಗಿ ಜಂಪನ್ನು ನೋಡುವುದಕ್ಕೂ ಅನೇಕರು ಭಯ ಪಡುತ್ತಾರೆ. ಹೀಗಿರುವಾಗ ವಿಶೇಷ ಚೇತನ ವ್ಯಕ್ತಿಯೊಬ್ಬರು ಈ ಸಾಹಸ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.  ಈ ವೀಡಿಯೋವನ್ನು  ಹಿಮಾಲಯನ್ ಭಂಗಿ ಎಂಬ ಇನ್ಸ್ಟಾಗ್ರಾಮ್‌ನಿಂದ ಪೋಸ್ಟ್ ಮಾಡಲಾಗಿದೆ. 

ತಮ್ಮಗಿರುವ ನ್ಯೂನತೆಯನ್ನು ಮರೆತು ಗಟ್ಟಿ ಮನಸ್ಸು ಮಾಡಿದ ವಿಶೇಷ ಚೇಥನ ಹುಡುಗನೋರ್ವ ಈ ಭಂಗಿ ಜಂಪ್ ಸಾಹಸ ಮಾಡುವ ಮೂಲಕ ಸಾಮಾನ್ಯರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಈ ಭಂಗಿ ಜಂಪ್ ಸಾಹಸನ್ನು ವಿಕಲಚೇತನರು ಮಾಡುವುದಕ್ಕೆ ಯಾರು ಪ್ರೋತ್ಸಾಹಿಸುವುದಿಲ್ಲ, ಆದರೂ ಮಾಡುವ ಮನಸ್ಸಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಈ ಯುವಕ ತೋರಿಸಿಕೊಟ್ಟಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ  ಯುವಕ ಕುಳಿತಿರುವ ವ್ಹೀಲ್‌ಚೇರ್‌ಗೆ ಸುರಕ್ಷತಾ ಬೆಲ್ಟ್‌ಗಳನ್ನು ಕಟ್ಟಿದ ಮೇಲ್ವಿಚಾರಕರು ಅವರಿಗೆ ಅಲ್ ದಿ ಬೆಸ್ಟ್ ಹೇಳಿ ಮೇಲಿನಿಂದ ಕೆಳಗೆ ತಳ್ಳಿ ಬಿಡುತ್ತಾರೆ. ಮೈ ರೋಮಾಂಚನ ಗೊಳಿಸುವ ಈ ವೀಡಿಯೋ ಒಂದು ಕ್ಷಣ ನೋಡುಗರನ್ನು ದಂಗುಬಡಿಸುತ್ತದೆ. 

ಅಸಾಧ್ಯವನ್ನು ಸಾಧ್ಯವಾಗಿಸುವ ಭಾರತದ ಒಂದೇ ಒಂದು ಭಂಗಿ ಜಂಪ್ ಸಂಸ್ಥೆ ನಮ್ಮದಾಗಿದ್ದು, ವ್ಹೀಲ್ಚೇರ್‌ ಬಳಸುತ್ತಿದ್ದ, ಪ್ಯಾರಾಲಿಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಭಾರತದ ಅತ್ಯಂತ ಎತ್ತರದ ಭಂಗಿ ಜಂಪ್‌ ಸಾಹಸ ಮಾಡಿದ್ದಾರೆ 117 ಮೀಟರ್ ಎತ್ತರದಿಂದ ಹಾರಿ ಅವರು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ ಎಂದು ಈ ವೀಡಿಯೋ ಶೇರ್ ಮಾಡಿ ಈ ಹಿಮಾಲಯನ್ ಭಂಗಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದೆ.  ಈ ವೀಡಿಯೋಗೆ ಅನೇಕರು ಅಚ್ಚರಿಯ ಜೊತೆ ಗಾಬರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೆಲವರು ವ್ಹೀಲ್‌ಚೇರ್‌ನಲ್ಲಿರುವವರು ಈ ಸಾಹಸ ಮಾಡಿದ್ದಕ್ಕೆ ಆತಂಕ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಆ ಯುವಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ದೇವರು ಎರಡು ಕಾಲು ಕೊಟ್ಟಿದ್ದರು ಈ ಸಾಹಸ ಮಾಡಲು ಸಾಧ್ಯವಿಲ್ಲ ಮಾಡುವುದು ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವ್ಹೀಲ್‌ ಚೇರ್ ಕೂಡ ಆತನನ್ನು ಸ್ಟಾಪ್ ಮಾಡಲಿಲ್ಲ, ಅವನು ಬಹಳ ಧೈರ್ಯವಂತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಈ ಸಾಹಸ ಮಾಡಿರುವುದಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕೈ ಕಾಲು ಸರಿ ಇದ್ದವರೇ ಈ ಸಾಹಸ ಮಾಡಲು ಹೆದರುತ್ತಿರುವಾಗ ಕಾಲು ಸರಿ ಇಲ್ಲದಿದ್ದರೂ ಈ ಸಾಹಸ ಮಾಡಿರುವ  ಯುವಕನ ಧೈರ್ಯಕ್ಕೊಂದು ಸೆಲ್ಯೂಟ್.

 

Latest Videos
Follow Us:
Download App:
  • android
  • ios