Asianet Suvarna News Asianet Suvarna News

ಆಯುರ್ವೇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ನಿಜವಲ್ಲ !

ಆಯುರ್ವೇದ (Ayurveda)ಪುರಾತನ ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ. ಇದು ಸುಮಾರು 5000 ವರ್ಷಗಳಷ್ಟು ಹಳೆಯದು ಮತ್ತು ಪರಿಣಾಮಕಾರಿ ಚಿಕಿತ್ಸೆಗಳು (Treatment), ನೈಸರ್ಗಿಕ ಔಷಧಿಗಳ ಪದ್ಧತಿಯನ್ನು ಹೊಂದಿದೆ.  ಆದರೆ ಆರ್ಯುವೇದಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳು ನಿಜವಲ್ಲ. ಅದೇನೆಂದು ತಿಳಿಯೋಣ.

Myths About Ayurveda That Are Just Not True Vin
Author
Bengaluru, First Published Jun 26, 2022, 11:29 AM IST

ಆರೋಗ್ಯ (Health)ಕ್ಕಾಗಿ ಪ್ರಾಚೀನ ಔಷಧೀಯ ಪದ್ಧತಿ ಆಯುರ್ವೇದ (Ayurveda)ದಲ್ಲಿ ಜನರ ನಂಬಿಕೆ ಇಂದಿಗೂ ಮುಂದುವರೆದಿದೆ. ಆಯುರ್ವೇದದ ಉದ್ದೇಶವು ರೋಗ (Disease)ವನ್ನು ತಡೆಗಟ್ಟುವುದು ಮತ್ತು ಮನಸ್ಸು, ಆತ್ಮ ಮತ್ತು ದೇಹದ (Body) ನಡುವೆ ಸಮತೋಲನವನ್ನು ಸಾಧಿಸುವುದಾಗಿದೆ. ಆದರೆ ಆರ್ಯುವೇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ನಿಜವೇನಲ್ಲ. ಹಾಗಿದ್ರೆ ಆರ್ಯುವೇದಕ್ಕೆ ಸಂಬಂಧಿಸಿದ ಯಾವ ವಿಷಯ ನಿಜ, ಯಾವುದು ನಿಜವಲ್ಲ ಎಂಬುದನ್ನು ತಿಳಿಯೋಣ.

ಮಿಥ್ಯ 1 - ಆಯುರ್ವೇದವು ಹಳೆಯ ವ್ಯವಸ್ಥೆಯಾಗಿದೆ: ಅನೇಕ ಜನರು ಆಯುರ್ವೇದವನ್ನು ವೈಜ್ಞಾನಿಕ ಸತ್ಯಗಳ ಮೇಲೆ ಅವಲಂಬಿಸದೆ ಔಷಧದ ವಿಲಕ್ಷಣ' ವ್ಯವಸ್ಥೆ ಎಂದು ಭಾವಿಸುತ್ತಾರೆ. ಆದರೆ, ಆಯುರ್ವೇದವು ನಮ್ಮ ದೇಶದಲ್ಲಿ 5000 ವರ್ಷಗಳಿಗಿಂತಲೂ ಹೆಚ್ಚು ಕಾಲ ಅಸ್ತಿತ್ವದಲ್ಲಿದೆ ಮತ್ತು ಅದರ ಪರಿಣಾಮಕಾರಿತ್ವದಿಂದಾಗಿ ಇಂದಿಗೂ ಆಚರಣೆಯಲ್ಲಿದೆ. ಇದು ಉತ್ತಮವಾದ ದಾಖಲಿತ ವೈದ್ಯಕೀಯ ರೂಪವಾಗಿದೆ ಮತ್ತು ಪ್ರಾಚೀನ ಕಾಲದಲ್ಲಿ ಪ್ರಾಯೋಗಿಕ ಪ್ರಯೋಗಗಳು ಮತ್ತು ಸಂಶೋಧನೆಗಳನ್ನು ವ್ಯಾಪಕವಾಗಿ ನಡೆಸಲಾಯಿತು. ಇದನ್ನು ಸಾವಿರಾರು ವರ್ಷಗಳಿಂದ ಪರಿಷ್ಕರಿಸಲಾಯಿತು. ಆಹಾರಗಳು, ಗಿಡಮೂಲಿಕೆಗಳು ಮತ್ತು ಖನಿಜಗಳ ಬಗ್ಗೆ ವಿವರವಾದ ಸಂಗತಿಗಳನ್ನು ವಿವರವಾಗಿ ದಾಖಲಿಸುತ್ತವೆ. ಇತ್ತೀಚಿನ ದಶಕಗಳಲ್ಲಿ, ಸಮಗ್ರ ಜೀವನಶೈಲಿ ಮತ್ತು ಆರೋಗ್ಯಕರ ಆಹಾರದ ಪ್ರಾಮುಖ್ಯತೆಯ ಹೆಚ್ಚಿದ ಸಾಕ್ಷಾತ್ಕಾರದೊಂದಿಗೆ, ಆಯುರ್ವೇದವು ಪುನರುಜ್ಜೀವನವನ್ನು ಕಂಡಿದೆ ಮತ್ತು ದೂರದಿಂದಲೂ ಅಂಗೀಕರಿಸಲ್ಪಟ್ಟಿದೆ.

ಬೇಸಿಗೆಯಲ್ಲಿ ಅರಿಶಿನವನ್ನು ಮುಖಕ್ಕೆ ಹಚ್ಚಬಹುದೇ?

ಮಿಥ್ಯ 2-ಆಯುರ್ವೇದ ಸೈನ್ಸ್ ಅಲ್ಲವೆಂಬ ಅಭಿಪ್ರಾಯ: ಸಾಕಷ್ಟು ಮಂದಿ ಆಯುರ್ವೇದವು ರಿಯಲ್ ಸೈನ್ಸ್ ಅಲ್ಲ ಎಂದು ಹೇಳುತ್ತಾರೆ. ಇದು ಕೇವಲ ಲಾಜಿಕ್​ಗಳನ್ನು ಮಾತ್ರ ಹೊಂದಿದೆ ಎಂದು ಹೇಳುತ್ತಾರೆ. ಯಾರಾದರೂ ಆಯುರ್ವೇದ ಔಷಧದಿಂದ ಗುಣಮುಖರಾಗಿದ್ದರೆ, ಅವರು ಇತರರಿಗೆ ಅದೇ ರೀತಿ ಪ್ರಯತ್ನಿಸಲು ಸಲಹೆ ನೀಡುತ್ತಾರೆ. ಆದರೆ ಸತ್ಯವೆಂದರೆ ನಿರ್ದಿಷ್ಟ ಕಾಯಿಲೆಗಳಿಗೆ, ಆಯುರ್ವೇದ ಚಿಕಿತ್ಸೆಯು ‘ಪ್ರಕೃತಿ’ಯನ್ನು ಆಧರಿಸಿದೆ, ಅಂದರೆ ವ್ಯಕ್ತಿಯ ದೇಹದ ಸಂವಿಧಾನವನ್ನು ಆಧರಿಸಿದೆ. ಹೀಗಾಗಿ, ಬೇರೆಯವರು ಸೂಚಿಸಿದ ಆಯುರ್ವೇದ ಔಷಧವನ್ನು ಕುರುಡಾಗಿ ಸೇವಿಸುವುದು ಅಥವಾ ಇಂಟರ್ನೆಟ್ ಹುಡುಕಾಟದ ಆಧಾರದ ಮೇಲೆ ಮನೆಮದ್ದುಗಳನ್ನು ಆರಿಸಿಕೊಳ್ಳುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ಬದಲಾಗಿ, ನೀವು ನೋಂದಾಯಿತ ಆಯುರ್ವೇದ ವೈದ್ಯರನ್ನು ಭೇಟಿ ಮಾಡಬೇಕು

ಮಿಥ್ಯ 3-ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ: ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಲು ವೈದ್ಯರ ಪ್ರಿಸ್ಕ್ರಿಪ್ಷನ್ ಬೇಡ ಎಂದು ಕೆಲವರು ಹೇಳುತ್ತಾರೆ. ಆದರೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಪ್ರಿಸ್ಕ್ರಿಪ್ಷನ್ ಅಗತ್ಯವಿದೆ. ಇಲ್ಲವಾದರೆ ಅದನ್ನು ಸುರಕ್ಷಿತ ಎಂದು ಪರಿಗಣಿಸಲಾಗುವುದಿಲ್ಲ. ಔಷಧಗಳು ವಿಷವಾಗಿಯೂ ಪರಿಣಮಿಸಬಹುದು.

ಆಯುರ್ವೇದದ ಪ್ರಕಾರ ಈ ದಿಕ್ಕಿಗೆ ತಲೆ ಮಾಡಿ ಮಲಗಿದ್ರೆ ಆರೋಗ್ಯ ಚೆನ್ನಾಗಿರುತ್ತಂತೆ

ಮಿಥ್ಯ 4: ಆಯುರ್ವೇದ ಪದ್ಧತಿ ತುಂಬಾ ನಿಧಾನ: ಆಯುರ್ವೇದ ಔಷಧವು ಕೆಲಸ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಈ ರೀತಿ ಆರ್ಯುವೇದ ನಿಧಾನವಾಗಿ ದೇಹದಲ್ಲಿ ತನ್ನ ಕೆಲಸ ಆರಂಭಿಸುವುದರಿಂದ ಸಾಕಷ್ಟು ಪ್ರಯೋಜನಗಳು ಸಹ ಇವೆ ಎಂಬುದು ಹಲವರಿಗೆ ತಿಳಿದಿಲ್ಲ. ಈ ರೀತಿಯ ಚಿಕಿತ್ಸಾ ಪದ್ಧತಿಯಿಂದ ಯಾವುದೇ ರೋಗವನ್ನು ಸುಲಭವಾಗಿ ತಡೆಗಟ್ಟಲು ಸಾಧ್ಯವಾಗುತ್ತದೆ.  ಮಾತ್ರವಲ್ಲ ಆಯುರ್ವೇದವು ಕೇವಲ ರೋಗದ ಲಕ್ಷಣಗಳನ್ನು ಕಡಿಮೆಮಾಡುವುದಷ್ಟೇ ಅಲ್ಲದೆ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ.

ಮಿಥ್ಯ 5-ಔಷಧಿಗಳ ಅಗತ್ಯವಿಲ್ಲ ಅನ್ನೋದು ತಪ್ಪು: ಆಯುರ್ವೇದಲ್ಲಿ ಗಿಡಮೂಲಿಕೆ, ಪೇಸ್ಟ್‌ಗಳನ್ನು ಬಿಟ್ಟು ಮೆಡಿಸಿನ್‌ಗಳನ್ನು ಬಳಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಕೆಲವು ರೋಗಗಳನ್ನು ಆಹಾರ ಬದಲಾವಣೆಯಿಂದಲೂ ಗುಣಪಡಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಔಷಧಿಯ ಅಗತ್ಯವಿಲ್ಲವೆಂದೇನಿಲ್ಲ, ಸಾಕಷ್ಟು ರೋಗಗಳಲ್ಲಿ ಔಷಧಿಯನ್ನು ಕೂಡಾ ನೀಡಿ ಕಾಯಿಲೆಯನ್ನು ಗುಣಪಡಿಸಲಾಗುತ್ತದೆ. 

Follow Us:
Download App:
  • android
  • ios