ನಿಮಗೆ ಗೊತ್ತಿರ್ಲಿ..ಲವಂಗ ಸೇವನೆಯಿಂದ ಆರೋಗ್ಯಕ್ಕೆ ತೊಂದ್ರೆ ಕೂಡಾ ಇದೆ

ಅತಿಯಾದರೆ ಅಮೃತವೂ ವಿಷ ಎಂಬ ಮಾತೇ ಇದೆಯಲ್ಲ. ಯಾವುದೇ ವಸ್ತುವನ್ನು ಅತಿಯಾಗಿ ಸೇವಿಸುವುದು ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ. ಇದು ಅದರ ಪ್ರಯೋಜನಗಳನ್ನು ಕಸಿದುಕೊಳ್ಳುತ್ತದೆ ಮತ್ತು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಅಂತೆಯೇ, ಲವಂಗ (Clove)ವನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಅದೇ ಪರಿಣಾಮ ಉಂಟಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ.

Most Important Information You Should Know About Clove Vin

ಬಹಳ ವರ್ಷಗಳಿಂದಲೂ ಲವಂಗ (Clove) ತನ್ನ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಕೆಮ್ಮಿಗೆ, ಹೊಟ್ಟೆಯ ಸಮಸ್ಯೆಗೆ, ವಾಂತಿ ಮತ್ತು ಭೇಧಿ ನಿವಾರಣೆಗೆ ಲವಂಗದ ಪ್ರಭಾವದಿಂದ ಅತ್ಯಂತ ಸರಳವಾಗಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಸಾಧಾರಣವಾಗಿ ಲವಂಗವನ್ನು ಗಿಡಮೂಲಿಕೆಯ ರೂಪದಲ್ಲಿ ಮಾರಾಟ ಮಾಡುತ್ತಾರೆ. ಲವಂಗ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೂ ಸಕಾರಾತ್ಮಕ ಹಾಗು ಕೆಲವು ಅಡ್ಡ ಪರಿಣಾಮ (Side Effects)ಗಳನ್ನು ಬೀರುವಂತಹ ಕಾರಣಗಳಿಂದ ಲವಂಗದ ಬಳಕೆಯಲ್ಲಿ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ.

ಲವಂಗವು ಆಹಾರ (Food) ಮತ್ತು ಪಾನೀಯಗಳಲ್ಲಿ ಬಳಸುವ ಒಂದು ಸುವಾಸನೆಯುಕ್ತ ಮಸಾಲೆ ಪದಾರ್ಥವಾಗಿದೆ. ಟೂತ್‌ಪೇಸ್ಟ್, ಸಾಬೂನುಗಳು ಮತ್ತು ಸೌಂದರ್ಯವರ್ಧಕ (Beauty Products)ಗಳಂತಹ ಇತರ ಉತ್ಪನ್ನಗಳಲ್ಲಿ ಸುವಾಸನೆ ಅಥವಾ ಸುಗಂಧವಾಗಿ ಇದನ್ನು ಬಳಸಲಾಗುತ್ತದೆ. ಆಹಾರ ಉತ್ಪನ್ನವಾಗಿ ಬಳಸಿದಾಗ, ಲವಂಗವು ಆರೋಗ್ಯ (Health) ಪ್ರಯೋಜನಗಳನ್ನು ಅಥವಾ ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿಲ್ಲ. ಔಷಧೀಯ ಉತ್ಪನ್ನವಾಗಿ ಬಳಸಿದಾಗ, ಲವಂಗವು ದೇಹದ ಮೇಲೆ ಅಪೇಕ್ಷಿತ ಮತ್ತು ಅನಗತ್ಯ ಪರಿಣಾಮಗಳನ್ನು ಉಂಟುಮಾಡಬಹುದು. 

Astro remedies: ಲವಂಗದಿಂದ ಹಣದ ಹರಿವು ಹೆಚ್ಚಿಸಲು ಹೀಗ್ಮಾಡಿ..

ಲವಂಗವನ್ನು ಪರ್ಯಾಯ ಔಷಧದಲ್ಲಿ ಅಕಾಲಿಕ ಸ್ಖಲನದ ಚಿಕಿತ್ಸೆಯಲ್ಲಿ ಸಂಭಾವ್ಯ ಪರಿಣಾಮಕಾರಿ ಸಹಾಯಕವಾಗಿ ಬಳಸಲಾಗುತ್ತದೆ. ಹಲ್ಲು ನೋವು, ಬಾಯಿಯ ಶಸ್ತ್ರಚಿಕಿತ್ಸೆ, ಗಂಟಲಿನ ಕಿರಿಕಿರಿ, ಕೆಮ್ಮು, ಹೊಟ್ಟೆ, ವಾಂತಿ, ಅತಿಸಾರ ಮೊದಲಾದ ಸಮಸ್ಯೆಗಳಿಗೆ ಲವಂಗವನ್ನು ಪರಿಣಾಮಕಾರಿಯಾಗಿ ಬಳಸಬಹುದು. ಲವಂಗವನ್ನು ಹೆಚ್ಚಾಗಿ ಗಿಡಮೂಲಿಕೆಗಳ ಪೂರಕವಾಗಿ ಮಾರಾಟ ಮಾಡಲಾಗುತ್ತದೆ.

ಅನೇಕ ಗಿಡಮೂಲಿಕೆಗಳ ಸಂಯುಕ್ತಗಳಿಗೆ ಯಾವುದೇ ನಿಯಂತ್ರಿತ ಉತ್ಪಾದನಾ ಮಾನದಂಡಗಳಿಲ್ಲ ಮತ್ತು ಕೆಲವು ಮಾರುಕಟ್ಟೆಯ ಪೂರಕಗಳು ವಿಷಕಾರಿ ಲೋಹಗಳು ಅಥವಾ ಇತರ ಔಷಧಿಗಳೊಂದಿಗೆ ಕಲುಷಿತಗೊಂಡಿವೆ ಎಂದು ಕಂಡುಬಂದಿದೆ. ಹಾಗಿದ್ರೆ ಅಹಾರದಲ್ಲಿ ಅಧಿಕ ಲವಂಗ ಸೇವನೆಯಿಂದ ಏನೆಲ್ಲಾ ತೊಂದರೆಗಳಿವೆ ಎಂಬುದನ್ನು ತಿಳಿಯೋಣ.

Bad Breath Remedies: ಬಾಯಿ ವಾಸನೆಯಿಂದ ಪಾರಾಗೋಕೆ ಮನೆಯಲ್ಲೇ ಇವೆ ಮದ್ದು

ಅಧಿಕ ರಕ್ತಸ್ರಾವ: ಲವಂಗವು ಯುಜೆನಾಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ವೈದ್ಯರು ಸೂಚಿಸಿದಕ್ಕಿಂತ ಹೆಚ್ಚು ಲವಂಗದ ಎಣ್ಣೆಯನ್ನು ಸೇವಿಸುವುದದು ರಕ್ತಸ್ರಾವದ ಅಸ್ವಸ್ಥತೆ ಅಥವಾ ಕರುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆ: ಮಧುಮೇಹ ಇರುವವರಿಗೆ ಲವಂಗವು ಪರಿಣಾಮಕಾರಿಯಾಗಿದೆ. ಏಕೆಂದರೆ ಇದು ಹೆಚ್ಚಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ, ಅದು ಇನ್ಸುಲಿನ್ ಮಟ್ಟವನ್ನು ಅಡ್ಡಿಪಡಿಸುತ್ತದೆ. ಮತ್ತು ಇನ್ಸುಲಿನ್ ಮಟ್ಟ ಅತಿಯಾಗಿ ಇಳಿಯುವಂತೆ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರ ಕನಿಷ್ಠ ಎರಡು ವಾರಗಳವರೆಗೆ ಲವಂಗವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುತ್ತದೆ.

ಅಲರ್ಜಿಯ ಸಮಸ್ಯೆ: ಲವಂಗ ಸೇವನೆ ಕೆಲವರ ದೇಹಕ್ಕೆ ಅಲರ್ಜಿಯನ್ನುಂಟು ಮಾಡುತ್ತದೆ. ಉಸಿರಾಡಲು ಕಷ್ಟವಾಗುವುದು, ಮುಖ, ತುಟಿಗಳು, ನಾಲಿಗೆ ಅಥವಾ ಗಂಟಲಿನ ಊತ ಕಂಡು ಬಂದರೆ  ತುರ್ತು ವೈದ್ಯಕೀಯ ಸಹಾಯವನ್ನು ಪಡೆಯಿರಿ. 

ಲ್ಯಾಕ್ಟಿಕ್ ಆಸಿಡೋಸಿಸ್: ಲವಂಗ ಸೇವನೆಯಿಂದ ಸ್ನಾಯು ನೋವು ಅಥವಾ ದೌರ್ಬಲ್ಯ, ತೋಳುಗಳು ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಶೀತದ ಭಾವನೆ, ಉಸಿರಾಟದ ತೊಂದರೆ, ಹೊಟ್ಟೆ ನೋವು, ವಾಂತಿಯೊಂದಿಗೆ ವಾಕರಿಕೆ, ವೇಗದ ಅಥವಾ ಅಸಮ ಹೃದಯ ಬಡಿತ, ತಲೆತಿರುಗುವಿಕೆ, ಅಥವಾ ತುಂಬಾ ದುರ್ಬಲ ಅಥವಾ ದಣಿದ ಭಾವನೆ ಉಂಟಾಗುತ್ತದೆ. 

ಪಿತ್ತಜನಕಾಂಗದ ತೊಂದರೆಗಳು: ವಾಕರಿಕೆ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ತುರಿಕೆ, ದಣಿದ ಭಾವನೆ, ಹಸಿವಿನ ಕೊರತೆ, ಗಾಢ ಮೂತ್ರ, ಮಣ್ಣಿನ ಬಣ್ಣದ ಮಲ, ಕಾಮಾಲೆ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗೆಲ್ಲಾ ಆದಾಗ ಲವಂಗಯುಕ್ತ ಆಹಾರ ಸೇವಿಸುವುದನ್ನು ತಕ್ಷನ ನಿಲ್ಲಿಸಿ, ವೈದ್ಯರನ್ನು ಸಂಪರ್ಕಿಸಿ.

ಯಾವುದೇ ವೈದ್ಯಕೀಯ ಸ್ಥಿತಿಗೆ ಚಿಕಿತ್ಸೆ ನೀಡಲು ಲವಂಗ ಪರಿಣಾಮಕಾರಿಯಾಗಿದೆಯೇ ಎಂಬುದು ಖಚಿತವಾಗಿಲ್ಲ. ಈ ಉತ್ಪನ್ನದ ಔಷಧೀಯ ಬಳಕೆಯನ್ನು FDA ಯಿಂದ ಅನುಮೋದಿಸಲಾಗಿಲ್ಲ. ಹೀಗಾಗಿ ನಿಮ್ಮ ವೈದ್ಯರು ನಿಮಗೆ ಸೂಚಿಸಿದ ಔಷಧಿಗಳ ಬದಲಿಗೆ ಲವಂಗವನ್ನು ಬಳಸಬಾರದು.

Latest Videos
Follow Us:
Download App:
  • android
  • ios