Asianet Suvarna News Asianet Suvarna News

Astro remedies: ಲವಂಗದಿಂದ ಹಣದ ಹರಿವು ಹೆಚ್ಚಿಸಲು ಹೀಗ್ಮಾಡಿ..

ಅಡುಗೆ ಮನೆಯಲ್ಲಿ ಅಡುಗೆಗೆ ಸ್ವಾದ ನೀಡುವ ಲವಂಗ ಉತ್ತಮ ಮನೆಮದ್ದು ಕೂಡಾ ಹೌದಾಗಿದೆ. ಅಷ್ಟೇ ಅತ್ಯುತ್ತಮವಾಗಿ ಜ್ಯೋತಿಷ್ಯದಲ್ಲಿ ಪರಿಹಾರವಾಗಿ ಲವಂಗ ಕೆಲಸ ಮಾಡುತ್ತದೆ. ನಿಮ್ಮ ಸಾಕಷ್ಟು ಸಮಸ್ಯೆಗಳಿಗೆ ಲವಂಗದಿಂದ ಪರಿಹಾರ ಕಾಣಬಹುದು. 

Do these remedies with cloves all the problems will go away skr
Author
Bangalore, First Published Mar 15, 2022, 3:33 PM IST

ಹಲ್ಲು ನೋವು ಬಂದಾಗ ಲವಂಗ(clove)ವನ್ನು ಬಾಯಿಗೆ ಹಾಕಿಕೊಂಡು ನಿರಾಳವಾಗುತ್ತೇವೆ. ಡಿಟಾಕ್ಸ್ ಡ್ರಿಂಕ್ಸ್(detox drinks) ಎಂದು ಲವಂಗ ನೀರನ್ನು ಕುಡಿದು ದೇಹದಿಂದ ಕಲ್ಮಶ ಹೊರ ಹಾಕಿದ ಖುಷಿ ಅನುಭವಿಸುತ್ತೇವೆ.  ಬಾಯಿ ದುರಾವಸೆನೆಗೆ, ಕೆಮ್ಮಿನ ಕಷಾಯಕ್ಕೆ ಲವಂಗ ಬಳಸುತ್ತೇವೆ. ಎಲ್ಲ ರುಚಿಕಟ್ಟಾದ ಅಡುಗೆಗಳಿಗೆ ಲವಂಗ ಬಳಸಿ ಬಾಯಿ ಚಪ್ಪರಿಸುತ್ತೇವೆ. ನೋಡಲು ಛೋಟುದ್ದ ಇರುವ ಲವಂಗದ ಬಹುಮುಖಿ ವ್ಯಕ್ತಿತ್ವ ನೋಡಿದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ನೆನಪಾಗುತ್ತದೆ. ಇಷ್ಟಕ್ಕೂ ಈ ಲವಂಗ ಕೇವಲ ಆರೋಗ್ಯ, ಅಡುಗೆಮನೆಗೆ ಸೀಮಿತವಾಗಿಲ್ಲ. ಜ್ಯೋತಿಷ್ಯ(Astrology)ದಲ್ಲೂ ಇದರ ಮಹತ್ವ ದೊಡ್ಡದಿದೆ.

ಲವಂಗದ ಬಳಕೆಯಿಂದ ಬದುಕಿನ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. 

ಹಣವಿದ್ದೂ ಕೈಗೆ ಸಿಗದಿದ್ದರೆ(trapped money)
ನಿಮ್ಮ ಹಣ ಎಲ್ಲೋ ಸಿಲುಕಿದ್ದರೆ, ನಿಮ್ಮದೇ ಹಣ ಪಡೆಯಲು ಸಮಸ್ಯೆಯಾಗುತ್ತಿದ್ದರೆ, ಆಗ ಲವಂಗದಿಂದ ಹಣವನ್ನು ನಿಮ್ಮದಾಗಿಸಿಕೊಳ್ಳಿ. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ, 11 ಅಥವಾ 21 ಲವಂಗಗಳನ್ನು ಕರ್ಪೂರ(camphor)ದ ಜೊತೆ ಸೇರಿಸಿ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆಯ ರಾತ್ರಿ(full moon night) ಸುಟ್ಟು ಹಾಕಬೇಕು. ನಂತರ ಲಕ್ಷ್ಮೀ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಿಲುಕಿರುವ ಹಣ ಕೈಗೆ ಬರುತ್ತದೆ. ಹಣ ಕೈ ಸೇರಲು ಇರುವ ಅಡಚಣೆಗಳು ತೊಲಗುತ್ತವೆ. 

ಸಂದರ್ಶನ ಪಾಸಾಗಲು(To pass the interview)
ಯಾವುದೋ ಸಂದರ್ಶನಕ್ಕೆ ಹೊರಟಿದ್ದರೆ ಅಥವಾ ಯಾವುದೋ ಹೂಡಿಕೆ ಸಂಬಂಧ ಮಾತುಕತೆಗೆ ಹೊರಟಿದ್ದರೆ ಆಗ ಲವಂಗದ ಈ ಪರಿಹಾರ ಮಾಡಿ ಹೊರಡಿ. ಇದರಿಂದ ಹೋದ ಕೆಲಸ ಖಂಡಿತಾ ಕೈಗೂಡುತ್ತದೆ. ಮನೆಯಿಂದ ಹೊರ ಹೋಗುವಾಗ ಬಾಯಲ್ಲಿ ಲವಂಗ ಇಟ್ಟುಕೊಳ್ಳಿ. ಅಗಿದು ಉಳಿದುದನ್ನು ಹೋದ ಕಚೇರಿಯ ಸ್ಥಳದಲ್ಲಿ ಉಗಿಯಿರಿ. ನಿಮ್ಮ ಮನೆದೇವರಲ್ಲಿ ಕೆಲಸದಲ್ಲಿ ಯಶಸ್ಸು ಕೊಡಲು ಬೇಡಿಕೊಳ್ಳಿ. ಇದರಿಂದ ಸಂದರ್ಶನದಲ್ಲಿ ಖಂಡಿತಾ ಯಶಸ್ಸು ಸಿಗುತ್ತದೆ. 

Holi 2022: ಹೋಳಿ ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಗೌರವ ಹೆಚ್ಚುತ್ತೆ?

ಕಷ್ಟ ಪಟ್ಟಿದ್ದರ ಫಲ ಸಿಗದಿದ್ದರೆ..
ಬಹಳಷ್ಟು ಸಾರಿ ಕಷ್ಟ ಪಟ್ಟು ದುಡಿದರೂ(hard work) ಅದಕ್ಕೆ ತಕ್ಕದಾದ ಫಲ ಸಿಗುತ್ತಿಲ್ಲ ಎನಿಸುತ್ತದೆ. ಅಂಥ ಸಂದರ್ಭದಲ್ಲಿ ಮಂಗಳವಾರದ ದಿನ ಆಂಜನೇಯ ವಿಗ್ರಹದ ಎದಿರು ಮಲ್ಲಿಗೆ ಎಣ್ಣೆಯ ದೀಪ ಹಚ್ಚಿ. ಆ ದೀಪಕ್ಕೆ ಎರಡು ಲವಂಗಗಳನ್ನು ಹಾಕಿ. ನಂತರ ದೇವರೆದುರು ಕೂತು ಹನುಮಾನ್ ಚಾಲೀಸಾ ಹೇಳಿ ಆರತಿ ಬೆಳಗಿ. ಆಂಜನೇಯ(Hanumanji)ನಲ್ಲಿ ಭಕ್ತಿಯಿಂದ ನಿಮ್ಮ ಕೆಲಸದ ಯಶಸ್ಸಿಗಾಗಿ ಬೇಡಿಕೊಳ್ಳಿ. ಇದನ್ನು ನಿರಂತರ 21 ಮಂಗಳವಾರದ ಕಾಲ ಮಾಡಿ. ನಿಮ್ಮ ದುಡಿಮೆಗೆ ತಕ್ಕ ಫಲ ದೊರೆತೇ ದೊರೆಯುತ್ತದೆ. 

ಹಣ ಸೆಳೆಯಲು
ಲಕ್ಷ್ಮೀದೇವಿಯನ್ನ ಮೆಚ್ಚಿಸಲು, ಮನೆಯಲ್ಲಿ ಸಂತೋಷ, ಸಮೃದ್ಧಿ ತುಂಬಿರುವಂತೆ ನೋಡಿಕೊಳ್ಳಲು ಅಮ್ಮನಿಗೆ ಪ್ರತಿದಿನ ಗುಲಾಬಿ ಹೂಗಳ(rose flowers) ಜೊತೆಗೆ ಎರಡು ಲವಂಗಗಳನ್ನು ನೀಡಿ. ಪ್ರತಿ ದಿನ ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಶುಕ್ರವಾರದಂದು ಹೀಗೆ ಮಾಡಿ. 

Gemology: ಸಿಂಹ, ಮೇಷ ರಾಶಿಗೆ ಮಂಗಳಕರ ಮಾಣಿಕ್ಯ, ಆದರೆ ಈ ರಾಶಿಯವರು ಮಾತ್ರ ಧರಿಸಲೇಬಾರದು!

ನಕಾರಾತ್ಮಕತೆ ತೆಗೆಯಲು
ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆಯಲು ಶನಿವಾರ ಎಣ್ಣೆ ದೀಪದೊಂದಿಗೆ ನಾಲ್ಕು ಲವಂಗವನ್ನು ಸುಟ್ಟು ಹಾಕಿ. ಇದನ್ನು ಮನೆಯ ಕತ್ತಲ ಮೂಲೆಯಲ್ಲಿರಿಸಿ. ಇದರಿಂದ ಮನೆಯ ನಕಾರಾತ್ಮಕ ಶಕ್ತಿ(negative energy) ನಿಧಾನವಾಗಿ ತೊಲಗುತ್ತವೆ. ಎಲ್ಲ ಕೆಲಸಗಳು ಆಗತೊಡಗಿ ಮನೆಯಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ ನೋಡಿ.
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios