Asianet Suvarna News Asianet Suvarna News

Bad Breath Remedies: ಬಾಯಿ ವಾಸನೆಯಿಂದ ಪಾರಾಗೋಕೆ ಮನೆಯಲ್ಲೇ ಇವೆ ಮದ್ದು

ಬೆಳಗಿನ ಜಾವ ಎದ್ದ ಕೂಡಲೆ ಹೆಚ್ಚಿನ ಜನರು ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ ಕಾರಣ ಇಷ್ಟೇ ಬೆಳಗಿನ ಸಮಯದಲ್ಲಿ ಬಾಯಿಂದ ಹೊರಹೊಮ್ಮುವ ದುರ್ವಾಸನೆಯಿಂದ ಇತರರಿಗೆ ಕಿರಿಕಿರಿ ಆಗಬಾರದು ಎಂದು. ನಾವು ರಾತ್ರಿ ಇಡೀ ಮಲಗಿರುವಾಗ ಬ್ಯಾಕ್ಟೀರಿಯಾಗಳು ನಮ್ಮ ಬಾಯಿಯಲ್ಲಿ ತಮ್ಮ ಕೆಲಸ ಮುಂದುವರೆಸುತ್ತವೆ, ಈ ಕಾರಣದಿಂದಾಗಿ ಬೆಳಗ್ಗೆ ಎದ್ದು ಯಾರೊಂದಿಗಾದರೂ ಮಾತನಾಡಲು ಬಾಯಿ ತೆರೆದಾಗ ಬಾಯಿಯಿಂದ ದುರ್ಗಂಧ ಹೊರಹೊಮ್ಮುತ್ತದೆ.

Easy home remedies for fresh breath
Author
Bangalore, First Published Feb 6, 2022, 5:40 PM IST

ಇದು ಪ್ರತಿಯೊಬ್ಬರೂ ಎದುರಿಸುವ ಸಾಮಾನ್ಯ ಸಮಸ್ಯೆ (Problem). ಆದರೆ ಪರಿಸ್ಥಿತಿ ಬಿಗಡಾಯಿಸುವುದು (Critical) ಯಾವಾಗ ಗೊತ್ತಾ,‌ ಈ ಸಮಸ್ಯೆ ಇನ್ನೂ ಮುಂದುವರೆದು ನೀವು ಯಾವುದೋ ಮೀಟಿಂಗ್ನಲ್ಲಿ (Meeting) ಪಾಲ್ಗೊಳ್ಳುತ್ತಿರುವಾಗ, ಸ್ನೇಹಿತರೊಂದಿಗೆ ಅಥವಾ ಇನ್ನು ಯಾವುದೇ ವ್ಯಕ್ತಿಯೊಂದಿಗೆ ಮಾತನಾಡುವಾಗ ವಾಸನೆ ಹೊರಹೊಮ್ಮುತ್ತಿದೆ ಅಂದಾಗ‌. ಇದು ನಿಮ್ಮನ್ನು ಆತಂಕಕ್ಕೆ ತಳ್ಳುತ್ತದೆ ಮತ್ತು ಮಾತನಾಡಲು ಹಿಂಜರಿಯುವಂತೆ ಮಾಡುತ್ತದೆ. ಆದರೆ ಈ ಸಮಸ್ಯೆಗೆ ಸುಲಭ ಪರಿಹಾರವಿದೆ.

ನಿಮ್ಮ ಮನೆಯಲ್ಲಿ ನಿತ್ಯ ಬಳಸುವ ಕೆಲವು ಸಾಮಾಗ್ರಿಗಳಿಂದ ಬಾಯಿ ವಾಸನೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಅವು ಯಾವುವು ಎಂದು ನೋಡೋಣ.

ಲವಂಗ (Cloves)

ಲವಂಗ ಬಳಸುವುದರಿಂದ ಹಲವಾರು ಉಪಯೋಗಗಳಿವೆ. ಬಾಯಿಯಲ್ಲಿ ತುಂಬಿಕೊಂಡಿರುವ ಕೀಟಾಣುಗಳಿಂದ (Bacteria) ಮುಕ್ತಿ ಪಡೆಯಬೇಕು ಎಂದರೆ ಲವಂಗ ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಆಂಟಿ ಬ್ಯಾಕ್ಟೀರಿಯಲ್ (Antibacterial) ಗುಣ ಲವಂಗದಲ್ಲಿ ಇರುವ ಕಾರಣ ಇದು ಹಲವಾರು ರೋಗಾಣುಗಳನ್ನು ನಾಶ ಮಾಡುತ್ತದೆ. ಜೊತೆಗೆ ಬಾಯಿಗೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡುತ್ತದೆ. ಉದಾಹರಣೆಗೆ ಹಲ್ಲಿನಲ್ಲಿ ರಕ್ತಸ್ರಾವವಾಗುವುದು, ಆಗಾಗ ಹಲ್ಲು ನೋವು ಕಾಣಿಸಿಕೊಳ್ಳುವುದು- ಹೀಗೆ ಇನ್ನು ಕೆಲವು ಹಲ್ಲಿನ (Dental) ಸಮಸ್ಯೆಯನ್ನು ಲವಂಗ ನಿವಾರಣೆ ಮಾಡುತ್ತದೆ.

ನೀರು (Water)

ಹೆಚ್ಚು ನೀರು ಕುಡಿದಷ್ಟು ಆರೋಗ್ಯ ಸುಧಾರಿಸುತ್ತಾ ಹೋಗುತ್ತದೆ ಎಂಬ ವಿಷಯ ನಿಮಗೆ ಗೊತ್ತಿರುತ್ತದೆ. ಆದರೆ, ನೀರನ್ನು ಕಡಿಮೆ ಕುಡಿದರೆ ಏನಾಗಬಹುದು ಅಂದರೆ ಇಂತಹ ಸಮಸ್ಯೆಗಳು ಎದುರಾಗುತ್ತವೆ. ದೇಹಕ್ಕೆ ಸಾಕಾಗುವಷ್ಟು ನೀರನ್ನು ಕುಡಿಯದೆ ಇದ್ದಾಗ ಹೀಗೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಶೇಖರಣೆಯಾಗುತ್ತದೆ. ಇದರಿಂದಾಗಿ ಬಾಯಿಯ ದುರ್ವಾಸನೆ ಹೊರಹೊಮ್ಮುತ್ತದೆ. ಇದಕ್ಕಾಗಿ ನೀವು ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

ಇದು ಬರಿ ಮಾಸ್ಕ್ ಅಲ್ಲ, ಕೋಸ್ಕ್! ಇದರ ವಿಶೇಷತೆ ಬಗ್ಗೆ ತಿಳಿಯಿರಿ

ಜೇನುತುಪ್ಪ ಹಾಗೂ ದಾಲ್ಚಿನ್ನಿ (Honey and Cinnamon)

ಜೇನುತುಪ್ಪ ಹಾಗೂ ದಾಲ್ಚಿನ್ನಿಯನ್ನು ಮಿಶ್ರಣ ಮಾಡಿ ಬಳಸುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಯಾಕೆಂದರೆ ಎರಡರಲ್ಲಿ ಬ್ಯಾಕ್ಟೀರಿಯಾಗಳನ್ನು ವಿರೋಧಿಸುವ ಶಕ್ತಿ ಹೆಚ್ಚಿರುತ್ತದೆ. ಹಾಗಾಗಿ ಇವು ಬ್ಯಾಕ್ಟೀರಿಯಾಗಳನ್ನು ಬಾಯಲ್ಲಿ ಹೆಚ್ಚು ಬೆಳೆಯದಂತೆ ನೋಡಿಕೊಳ್ಳುತ್ತದೆ. ಇದಿಷ್ಟೇ ಅಲ್ಲದೆ ಹಲ್ಲಿನ ವಸಡನ್ನು ಬಲಪಡಿಸುವ ಶಕ್ತಿ ಜೇನುತುಪ್ಪ ಹಾಗೂ ದಾಲ್ಚಿನ್ನಿಗೆ ಇದೆ. ಎರಡು ಪದಾರ್ಥಗಳ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಬದಲಿಗೆ ಉಪಯೋಗವೇ ಹೆಚ್ಚು. ಅಲ್ಲಿನ ಕೆಲವು ಸಮಸ್ಯೆಗಳನ್ನು ಕೂಡ ಇವು ಯಶಸ್ವಿಯಾಗಿ ಬಗೆಹರಿಸುತ್ತದೆ.

ಉಪ್ಪುನೀರು (Salt water)

ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿಕೊಂಡು ಬಾಯಿ ಮುಕ್ಕಳಿಸುವುದರಿಂದ (Gargle) ಬಾಯಿಂದ ಹೊರ ಹೊಮ್ಮುವ ದುರ್ವಾಸನೆಯನ್ನು ಖಂಡಿತವಾಗಿಯೂ ನಿವಾರಣೆ ಮಾಡಿಕೊಳ್ಳಬಹುದು. ಬರೀ ಬಾಯಿ ವಾಸನೆ ಅಷ್ಟೇ ಅಲ್ಲ, ನಿಮಗೆ ಸ್ವಲ್ಪ ಗಂಟಲಿನಲ್ಲಿ ಕಿರಿಕಿರಿ ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತದೆ ಎಂದಾಗ ಬೆಚ್ಚಗಿನ ಉಪ್ಪು ನೀರನ್ನು ಗಂಟಲಿನ ಭಾಗದಲ್ಲಿ ಹಾಕಿ ಮುಕ್ಕಳಿಸುವುದರಿಂದ ಈ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. 

Dementia: ಮರೆವಿನ ಸಮಸ್ಯೆಯಿಂದ ದೂರವಿರಲು ಈ ಬದಲಾವಣೆ ಅಗತ್ಯ

ದಾಲ್ಚಿನ್ನಿಯ ತೊಗಟೆ (Cinnamon bark)

ಇದನ್ನಂತೂ ನೀವು ಪ್ರತಿನಿತ್ಯ ಅಡುಗೆ ಮಾಡಲು ಬಳಸುತ್ತೀರ. ಮಸಾಲೆಯುಕ್ತ ಪದಾರ್ಥಗಳಿಗೆ ದಾಲ್ಚಿನ್ನಿ ಬಳಸಿದರೆ ರುಚಿ ಹೆಚ್ಚುವುದು. ಅಷ್ಟೇ ಅಲ್ಲ, ಇದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ. ದುರ್ಗಂಧ ಬೀರುವ ರೋಗಾಣುಗಳನ್ನು ದಾಲ್ಚಿನ್ನಿ ಸಂಪೂರ್ಣ ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಬಹಳ ಸರಳ ಕೆಲಸ ಮಾಡಬೇಕು. ದಾಲ್ಚಿನ್ನಿಯ ಸಣ್ಣ ತುಂಡೊಂದನ್ನು ಬಾಯಿಯಲ್ಲಿ ಸ್ವಲ್ಪ ಸಮಯದ ಕಾಲ ಇಟ್ಟುಕೊಳ್ಳಿ, ನಂತರ ಇದನ್ನು ಉಗಿಯಿರಿ. ಅಷ್ಟೇ, ಅಲ್ಲಿಗೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.

ನೀವು ಪ್ರತಿನಿತ್ಯ ಬಳಸುವ ಅಡುಗೆ ಪದಾರ್ಥಗಳಿಂದ ಬಾಯಿ ವಾಸನೆಯಂತಹ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ಇನ್ನು ಮುಂದೆ ನೀವು ಇತರರೊಂದಿಗೆ ಮಾತನಾಡುವಾಗ ಹಿಂಜರಿಯುವ ಅವಶ್ಯಕತೆ ಇರುವುದಿಲ್ಲ.

 

Follow Us:
Download App:
  • android
  • ios