ಇಷ್ಟೊಂದು ಹೈಟ್ ಬೇಕಿತ್ತಾ ? 3 ಇಂಚು ಎತ್ತರವಾಗಲು 1.2 ಕೋಟಿ ಖರ್ಚು !
ಅಂದವನ್ನು ಹೆಚ್ಚಿಸಿಕೊಳ್ಳಲು ಆಗಾಗ ಜನರು ವಿಶೇಷವಾಗಿ ಮಹಿಳೆಯರು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ನೋಡುತ್ತೇವೆ. ಆದರೆ ಅಮೆರಿಕದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ 3 ಇಂಚು ಎತ್ತರವನ್ನು ಹೆಚ್ಚಿಸಿಕೊಳ್ಳಲು ಬರೋಬ್ಬರಿ 1.2 ಕೋಟಿ ರು. ನೀಡಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಅದೂ 68ರ ಇಳಿ ವಯಸ್ಸಿನಲ್ಲಿ
ಒಬ್ಬ ವ್ಯಕ್ತಿ ಮೂರು ಇಂಚು ಉದ್ದ (Height)ವಾಗಲು 130,000 ಪೌಂಡ್‌ಗಳನ್ನು ಅಂದರೆ ಭಾರತೀಯ 1.2 ಕೋಟಿ ರೂ. ಖರ್ಚು ಮಾಡಿದ್ದಾನೆ ಅಂದ್ರೆ ನೀವ್ ನಂಬ್ತೀರಾ ? ಅಂದವನ್ನು ಹೆಚ್ಚಿಸಿಕೊಳ್ಳಲು ಆಗಾಗ ಜನರು ವಿಶೇಷವಾಗಿ ಮಹಿಳೆಯರು (Woman) ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ (Operation) ಒಳಗಾಗುವುದನ್ನು ನೋಡುತ್ತೇವೆ. ಆದರೆ ಅಮೆರಿಕದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ 3 ಇಂಚು ಎತ್ತರವನ್ನು ಹೆಚ್ಚಿಸಿಕೊಳ್ಳಲು ಬರೋಬ್ಬರಿ 1.2 ಕೋಟಿ ರು. ನೀಡಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಅದೂ 68ರ ಇಳಿ ವಯಸ್ಸಿನಲ್ಲಿ.
ನಂಬಲು ಕಷ್ಟವಾದರೂ ಇದು ನಿಜ. ರಾಯ್ ಕಾನ್ ಎಂಬಾತ ಕಾಲು (Leg) ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಖರ್ಚು ಮಾಡಿದ್ದಾನೆ. 5.6 ಅಡಿ ಎತ್ತರವಿದ್ದ ರಾಯ್ ಕಾನ್, ತಮ್ಮ ಎತ್ತರದಿಂದ ಸಂತುಷ್ಟರಾಗಿರಲಿಲ್ಲ. ಹೀಗಾಗಿ ತಮ್ಮ ತೊಡೆಯ ಮೂಳೆ (Bone)ಗಳನ್ನು ಮುರಿಸಿ ಅದರಲ್ಲಿ ಲೋಹದ ಮೊಳೆಗಳನ್ನು ಸೇರಿಸಿ ಎತ್ತರ ಹೆಚ್ಚಿಸುವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅಯ್ಯೋ ನೋವು ಅಂದ್ರೂ ಬಿಡ್ಲಿಲ್ಲ, ಅನಸ್ತೇಶಿಯಾ ಬಳಸದೆ 23 ಮಹಿಳೆಯರಿಗೆ ಸರ್ಜರಿ !
3 ಇಂಚು ಎತ್ತರವಾಗಲು 1.2 ಕೋಟಿ ರೂ. ಸರ್ಜರಿ !
ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ 68 ವರ್ಷ ವಯಸ್ಸಿನವರು ಈಗ 5 ಅಡಿ ಒಂಬತ್ತು ಇಂಚಿನಷ್ಟು ಉದ್ದವಾಗಿದ್ದಾರೆ. ಕಾಲುಗಳನ್ನು ಉದ್ದವಾಗಿಸುವುದರಲ್ಲಿ ಪರಿಣತಿ ಹೊಂದಿರುವ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಕೆವಿನ್ ದೇಬಿಪರ್ಶದ್ ಇದನ್ನು ನಡೆಸಿದರು. ದೇಬಿಪರ್ಶದ್ ಲಾಸ್ ವೇಗಾಸ್‌ನಲ್ಲಿ ತಮ್ಮ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ ಮತ್ತು ಅವರ ಕ್ಲೈಂಟ್‌ಗಳಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಮೆಟಾದ ಕೆಲಸಗಾರರು ಸೇರಿದ್ದಾರೆ. ತಮ್ಮ ಅನುಭವದ ಬಗ್ಗೆ ಮಾತನಾಡುತ್ತಾ, ಕಾನ್ ಹೇಳಿದರು, 'ಎತ್ತರ ನನ್ನ ಪಾಲಿಗೆ ಪ್ರಮುಖ ಸಮಸ್ಯೆಯಾಗಿರಲಿಲ್ಲ. ಇದು ಚಿಕ್ಕ ವಯಸ್ಸಿನಿಂದಲೂ ನಾನು ಯಾವಾಗಲೂ ತಿಳಿದಿರುವ ವಿಷಯವಾಗಿದೆ. ಆದರೆ ವಯಸ್ಸಾದಂತೆ ನನಗೆ ಉದ್ದವಾಗುವ ಆಸೆಯಾಯಿತು. ಈಗ ಆ ಕನಸು ಈಡೇರಿದೆ' ಎಂದಿದ್ದಾರೆ
'ನನ್ನ ಉದ್ದದ ಬಗ್ಗೆ ನಾನು ಹೆಚ್ಚು ಚಿಂತಿಸುತ್ತಿರಲ್ಲಿಲ್ಲ. ಆದರೆ ನನ್ನ ಹೆಂಡತಿ ನನಗಿಂತ ಹೆಚ್ಚು ಚಿಂತಿಸುತ್ತಿದ್ದಳು. ಹೀಗಿದ್ದರೂ ಅವಳು ನನ್ನನ್ನು ಇಷ್ಟಪಟ್ಟಳು. ಹೀಗಾಗಿ ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಅದು ನನಗಾಗಿ, ಬೇರೆ ಯಾರಿಗೂ ಅಲ್ಲ' ಎಂದು ಕಾನ್ ತಿಳಿಸಿದರು. ಶಸ್ತ್ರಚಿಕಿತ್ಸೆಯ ಅವಧಿಯು ತುಂಬಾ ಉದ್ದವಾಗಿರಲಿಲ್ಲ, ಆದರೆ ಚೇತರಿಕೆಯ ಪ್ರಕ್ರಿಯೆಯು ತಿಂಗಳುಗಳನ್ನು ತೆಗೆದುಕೊಂಡಿತು ಎಂದು ಮಾಹಿತಿ ನೀಡಿದ್ದಾರೆ.
Lower Back Pain: ಚಿಂತೆ ಬಿಡಿ, ಸರ್ಜರಿ ಇಲ್ದೆನೂ ಕಡಿಮೆ ಮಾಡ್ಕೋಬೋದು
ವಿಶ್ವದ ಅತೀ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ
ಟರ್ಕಿಶ್ ಏರ್‌ಲೈನ್ಸ್, ವಿಶ್ವದ ಅತೀ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಗಿನ್ನಿಸ್ ವಿಶ್ವ ದಾಖಲೆ ಮಾಡಿರುವ 7 ಅಡಿ ಎತ್ತರದ ರುಮೆಯ್ಸಾ ಗೆಲ್ಗಿ ಅವರಿಗೆ ಆರಾಮದಾಯಕವಾಗಿ ಪ್ರಯಾಣ ಮಾಡಲು ಈ ಟರ್ಕಿಶ್ ಏರ್‌ಲೈನ್ಸ್ ವಿಶೇಷ ವ್ಯವಸ್ಥೆ ಕಲ್ಪಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ರುಮೆಯ್ಸಾ ಗೆಲ್ಗಿ, 2014ರಲ್ಲಿ ವಿಶ್ವದ ಅತೀ ಎತ್ತರದ ಹದಿಹರೆಯದ ಹುಡುಗಿ ಎಂದು ಗಿನ್ನಿಸ್ ವಿಶ್ವ ದಾಖಲೆ (Guniess world record) ನಿರ್ಮಿಸಿದ್ದಾರೆ. ಇವರ ಬೆರಳುಗಳ ಉದ್ದ 4.40 ಇಂಚು, ಬೆನ್ನಿನ ಉದ್ದ 23.58 ಇಂಚು ಇರುವ ಕಾರಣ ಸ್ಥಳಾವಕಾಶದ ಕೊರತೆಯಿಂದ ಅವರು ಇಲ್ಲಿಯವರೆಗೂ ವಿಮಾನದಲ್ಲಿ (Flight) ಪ್ರಯಾಣಿಸಲು ಸಾಧ್ಯವಾಗಿರಲ್ಲಿಲ್ಲ.
ವಿಮಾನದಲ್ಲಿ 6 ಆಸನಗಳನ್ನು ತೆಗೆದು ವಿಶೇಷ ಆಸನವನ್ನು ಇವರಿಗಾಗಿ ಕಲ್ಪಿಸಲಾಗಿತ್ತು. ಟರ್ಕಿಯ ವಿಮಾನಯಾನ ಸಂಸ್ಥೆ ಆಕೆಯ ಎತ್ತರದ ಚೌಕಟ್ಟಿಗೆ ಸರಿಹೊಂದಿಸಲು ಸ್ಟ್ರೆಚರ್ ಮಾಡಲು ಮೊದಲ ಆರು ಆಸನಗಳನ್ನು ತೆಗೆದುಹಾಕಿದ ನಂತರ ವಿಶ್ವದ ಅತಿ ಎತ್ತರದ ಮಹಿಳೆ (Worlds Tallest Woman) ತನ್ನ ಜೀವನದಲ್ಲಿ ಮೊದಲ ಬಾರಿಗೆ ಫ್ಲೈಟ್ ಏರಿದರು.