Asianet Suvarna News Asianet Suvarna News

ಇನ್ಮುಂದೆ ದೇಶದಲ್ಲೇ ಔಷಧಗಳ ಮೂಲ ಪದಾರ್ಥ, MRI ಮಷಿನ್ ಉತ್ಪಾದನೆಯೂ ಆಗುತ್ತೆ!

ಭಾರತದ ಫಾರ್ಮಾ ಕಂಪೆನಿಗಳು ವಿದೇಶಗಳಲ್ಲೂ ಸಾಕಷ್ಟು ಹೆಸರು ಮಾಡಿರಬಹುದು, ಇಲ್ಲಿನ ಔಷಧಗಳು ಬೃಹತ್ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗಿರಬಹುದು. ಆದರೆ, ಆ ಔಷಧಗಳಿಗೆ ಬೇಕಾಗುವ ಮೂಲಪದಾರ್ಥಗಳು ಮಾತ್ರ ದೇಶದಲ್ಲಿ ಸಿದ್ಧವಾಗುತ್ತಿಲ್ಲ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ 22 ರೀತಿಯ ಸಕ್ರಿಯ ಮೂಲಪದಾರ್ಥಗಳ ಉತ್ಪಾದನೆಗೆ ಸಹಾಯಧನ ಯೋಜನೆ ಪ್ರಕಟಿಸಿದೆ.
 

PLI scheme for pharma compony lead to self reliant India in medicine
Author
First Published Feb 22, 2023, 6:31 PM IST

ಭಾರತ ಈಗಾಗಲೇ ಔಷಧ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಕೋವಿಡ್ ಸಮಯದಲ್ಲಿ ದೇಶದೊಳಗಿನ ಬೇಡಿಕೆಯನ್ನೂ ಪೂರೈಸಿದ್ದಲ್ಲದೆ ಇತರ ಹಲವು ದೇಶಗಳಿಗೆ ಲಸಿಕೆ ಪೂರೈಕೆ ಮಾಡಿದ್ದುದು ಭಾರತದ ಸಾಧನೆ. ಇದೀಗ, ಔಷಧ ವಲಯಕ್ಕೆ ಇನ್ನಷ್ಟು ಉತ್ತೇಜನ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಫಾರ್ಮಾ ಕಂಪೆನಿಗಳಿಗೆ ಉತ್ತೇಜಕ ಕ್ರಮ ಘೋಷಿಸಿದೆ. ಔಷಧ ಕಂಪೆನಿಗಳಿಗೆ ಉತ್ಪಾದನೆ ಆಧಾರಿತ ಸಹಾಯಧನ (ಪಿಎಲ್ಐ) ಯೋಜನೆಯನ್ನು ಪ್ರಕಟಿಸಿದೆ. ಪಿಎಲ್ಐ ಯೋಜನೆ ಬಗ್ಗೆ ನಿಮಗೆ ಗೊತ್ತಿರಬಹುದು, ಈ ಯೋಜನೆಯಿಂದಾಗಿ ಭಾರತ ಈಗ ಸೆಮಿಕಂಡಕ್ಟರ್ ಸೇರಿದಂತೆ ಹಲವು ವಲಯಗಳಲ್ಲಿ ಅಪಾರ ಸಾಧನೆ ಮಾಡಿದೆ. ಈ ಸಹಾಯಧನದೊಂದಿಗೆ ಹಲವು ಕಂಪೆನಿಗಳು ಉತ್ಪಾದನೆ ಹೆಚ್ಚಿಸುವತ್ತ ಗಮನ ನೀಡಿವೆ. ಇದೀಗ, ಫಾರ್ಮಾ ವಲಯಕ್ಕೆ ನೀಡಿರುವ ಉತ್ತೇಜನದಿಂದಾಗಿ 22 ಸಕ್ರಿಯ ಔಷಧ ಮೂಲಪದಾರ್ಥಗಳನ್ನು ಉತ್ಪಾದಿಸಲು ನೆರವಾಗಲಿದೆ. ಜೀವರಕ್ಷಕ ಔಷಧಗಳ ಉತ್ಪಾದನೆಗೆ ನೆರವಾಗುವಂತಹ ಸಕ್ರಿಯ ಔಷಧ ಮೂಲಪದಾರ್ಥಗಳು ದೇಶದಲ್ಲೇ ಸೃಷ್ಟಿಯಾದರೆ ಎಷ್ಟು ಉತ್ತಮ ಎನ್ನುವ ಕಲ್ಪನೆ ಸಾಕಷ್ಟು ಜನರಿಗೆ ಇರಲಿಕ್ಕಿಲ್ಲ. ಜೀವರಕ್ಷಕ ಔಷಧಗಳನ್ನು ಉತ್ಪಾದನೆ ಮಾಡುವಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ವದ್ದು. ಬರೀ ಔಷಧಗಳಷ್ಟೇ ಅಲ್ಲ, ಸಿಟಿ ಸ್ಕ್ಯಾನ್, ಎಂಆರ್ಐನಂತಹ ಮಷಿನ್ ಗಳ ಉತ್ಪಾದನೆಗೂ ಸಹಾಯಧನದ ನೆರವನ್ನು ನೀಡಲಾಗುತ್ತಿದೆ ಎನ್ನುವುದು ಗಮನಾರ್ಹ. 

ಆಮದು ಅಪಾರ
ಔಷಧ (Medicine) ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿ (Self Reliant) ಮಾಡುವುದು ಕೇಂದ್ರ ಸರ್ಕಾರದ ಗುರಿ. ಹಲವು ವಲಯಗಳಲ್ಲಿ ಭಾರತ ವಿದೇಶಗಳ ಮೇಲೆ ಅದೆಷ್ಟು ಆಧರಿತವಾಗಿದೆ ಎಂದರೆ ಅಚ್ಚರಿಯಾಗುತ್ತದೆ. ಬೃಹತ್ ಪ್ರಮಾಣದಲ್ಲಿ ಔಷಧಗಳನ್ನು ಉತ್ಪಾದನೆ ಮಾಡಿದರೂ ಸಕ್ರಿಯ ಮೂಲಪದಾರ್ಥಗಳಿಗಾಗಿ (Active Ingredients) ಭಾರತ ಒನ್ಸ್ ಅಗೇನ್ ನಿರ್ಭರವಾಗಿದ್ದು ವಿದೇಶಗಳ ಮೇಲೆ. ಶೇ. 85ರಷ್ಟು ಸಕ್ರಿಯ ಮೂಲಪದಾರ್ಥಗಳನ್ನು ಭಾರತ ವಿದೇಶಗಳಿಂದ (Foreign) ತರಿಸಿಕೊಳ್ಳುತ್ತದೆ. ಮೆಡಿಕಲ್ (Medical) ಸಲಕರಣೆಗಳ ಬಗ್ಗೆಯಂತೂ ಹೇಳುವುದೇ ಬೇಡ. ನಮ್ಮಲ್ಲಿ ಅತ್ಯಾಧುನಿಕ ಮಷಿನ್ (Machine) ಗಳ ಉತ್ಪಾದನೆ ಅತಿ ಕಡಿಮೆ. ಶೇ.80ರಷ್ಟು ಮಷಿನ್ ಗಳು ಆಮದಾಗುತ್ತವೆ. 
ಇದು ಎಷ್ಟು ಬೃಹತ್ ಪ್ರಮಾಣದ ಮಾರುಕಟ್ಟೆ (Market) ಎನ್ನುವುದು ಅಂದಾಜಿಸಿ.

Gold Loan : ಉಳಿದ್ದಕ್ಕಿಂತ ಚಿನ್ನದ ಮೇಲೆ ಸಾಲ ಪಡೆಯೋದು ಯಾಕೆ ಬೆಸ್ಟ್?

ಪ್ರತಿ ವರ್ಷ ಭಾರತ ಔಷಧ ವಲಯಕ್ಕೆ ಬೇಕಾಗುವ ಸುಮಾರು 35 ಸಾವಿರ ಕೋಟಿ ರೂಪಾಯಿ ಮೌಲ್ಯದ ಮೂಲಪದಾರ್ಥಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಚೀನಾ (China) ವಿರುದ್ಧ ನಾವೆಷ್ಟೇ ಕಿಡಿ ಕಾರಿದರೂ ಈ ವಿಚಾರದಲ್ಲಿ ನಾವು ನಂಬಿರುವುದು ಚೀನಾವನ್ನೇ ಎನ್ನುವುದು ಕಿರಿಕಿರಿಯನ್ನು ಉಂಟುಮಾಡುವ ಸತ್ಯ. ಔಷಧಗಳ ಮೂಲಪದಾರ್ಥಗಳ ಉತ್ಪಾದನೆಯಲ್ಲಿ ಚೀನಾ ಡಾಮಿನಂಟ್. ಇವು ಸಣ್ಣದೊಂದು ಪೇನ್ ಕಿಲ್ಲರ್ (Pain Killer) ಮಾತ್ರೆಗಳ ತಯಾರಿಕಗೂ ಅತ್ಯಗತ್ಯ ಎಂದರೆ ಇವುಗಳ ಮಹತ್ವವನ್ನು ಊಹಿಸಬಹುದು.

ಆತ್ಮನಿರ್ಭರ ಅಂದ್ರೆ ಇದೇ
ಆತ್ಮನಿರ್ಭರ ಎನ್ನುವ ಸ್ಲೋಗನ್ನನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ಸಚಿವರು ಪದೇ ಪದೆ ಹೇಳುವುದು ಇದೇ ಕಾರಣಕ್ಕೆ. ಇಂತಹ ಸೋರಿಕೆಯಾಗುವ ಹಣ ಭಾರತದಲ್ಲೇ ಉಳಿತಾಯವಾದರೆ ಅದೆಷ್ಟು ಲಾಭವಲ್ಲವೇ? ಹೀಗಾಗಿ, ಫಾರ್ಮಸ್ಯುಟಿಕಲ್ (Pharmaceutical) ಇಲಾಖೆ ಇದೀಗ ಪಿಎಲ್ಐ (PLI) ಯೋಜನೆ ಅಡಿ ಮೊದಲ ಹಂತದಲ್ಲಿ 166 ಕೋಟಿ ರೂಪಾಯಿ ನೆರವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿದ್ದ ಕಂಪೆನಿಗಳಿಗೆ ಇದು ಲಭ್ಯವಾಗಲಿದೆ. 

Personal Finance : ಹೆಚ್ಚು ಖರ್ಚು ಮಾಡೋ ಅಭ್ಯಾಸವಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಅಂದ ಹಾಗೆ, ಉತ್ಪಾದನೆ ಆಧಾರಿತ ಸಹಾಯಧನ ಯೋಜನೆಗೆ (Production Linked Incentive Scheme) ಕೇಂದ್ರ ಸರ್ಕಾರ ಈವರೆಗೆ ಮಾಡಿರುವ ವೆಚ್ಚ ಎಷ್ಟು ಗೊತ್ತೇ? ಬರೋಬ್ಬರಿ 15,000 ಕೋಟಿ ರೂಪಾಯಿ. ಆದರೆ, ಇದರಿಂದ ಮುಂದಿನ ದಿನಗಳಲ್ಲಿ ದೇಶಕ್ಕೆ ಲಾಭವೇ ಆಗಲಿದೆ. 

 

Follow Us:
Download App:
  • android
  • ios